ವೇದಾಂತ್​ಗೆ ಹುಟ್ಟುಹಬ್ಬದ ಡಬಲ್​ ಧಮಾಕಾ: 'ಬರ್ಮ' ಪೋಸ್ಟರ್​ ರಿಲೀಸ್​ ಜೊತೆ ವಿಶೇಷ ವಿಡಿಯೋ ರಿಲೀಸ್​

Published : Jan 08, 2024, 04:03 PM IST
ವೇದಾಂತ್​ಗೆ ಹುಟ್ಟುಹಬ್ಬದ ಡಬಲ್​ ಧಮಾಕಾ: 'ಬರ್ಮ' ಪೋಸ್ಟರ್​ ರಿಲೀಸ್​ ಜೊತೆ ವಿಶೇಷ ವಿಡಿಯೋ ರಿಲೀಸ್​

ಸಾರಾಂಶ

ಗಟ್ಟಿಮೇಳ ಸೀರಿಯಲ್​ನಲ್ಲಿ ವೇದಾಂತ್​  ಪಾತ್ರಧಾರಿಯಾಗಿರುವ ರಕ್ಷ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ಡಬಲ್​ ಧಮಾಕಾ ಆಗಿದೆ. ಏನದು?  

ಐದು ವರ್ಷ ಸತತ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದ ಗಟ್ಟಿಮೇಳ ಕೊನೆಗೂ ಅಂತ್ಯ ಕಂಡಿದೆ. ಆದರೆ ಈ ಸೀರಿಯಲ್​ ಪಾತ್ರಧಾರಿಯಾಗಿರುವ ವೇದಾಂತ್​ ಮಾತ್ರ ಜನರ ಮನಸ್ಸಿನಿಂದ ಮರೆಯಾಗಲಿಲ್ಲ. ಒಂದೆರಡು ತಿಂಗಳವರೆಗೆ ಅವರು ಸೀರಿಯಲ್​ನಲ್ಲಿ ಕಾಣಿಸದೇ ಇದ್ದ ಕಾರಣ ಹಾಗೂ ಅತ್ತ ಜೀ ಕುಟುಂಬ ಅವಾರ್ಡ್ಸ್​ನಲ್ಲಿಯೂ ಅವಾರ್ಡ್​ ಸ್ವೀಕರಿಸಲು ಬರದಿದ್ದ ಕಾರಣ, ನೊಂದುಕೊಂಡವರು ಅದೆಷ್ಟೋ ಮಂದಿ. ಆದರೆ ಗಟ್ಟಿಮೇಳದ ಕ್ಲೈಮ್ಯಾಕ್ಸ್​ನಲ್ಲಿ ಕೊನೆಗೂ ವೇದಾಂತ್​ ಕಾಣಿಸಿಕೊಂಡು ಅಭಿಮಾನಿಗಳನ್ನು ಖುಷಿ ಪಡಿಸಿದರು. ಇಂದು ಆ ವೇದಾಂತ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

ಅಂದಹಾಗೆ ವೇದಾಂತ್​ ಅವರ ನಿಜವಾದ ಹೆಸರು ರಕ್ಷ್‌. ಅವರು ರಕ್ಷ್​ ರಾಮ್‌ (Rakksh Raam) ಎಂದು ಹೆಸರು ಬದಲಿಸಿಕೊಂಡು ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ.  ಗಟ್ಟಿಮೇಳ ಮಾತ್ರವಲ್ಲದೇ 'ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕವೂ ಮಿಂಚಿದ್ದಾರೆ ರಕ್ಷ್‌. ಇದೀಗ ಇವರು ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರದ ಹೆಸರು ಬರ್ಮ. ಈ ಚಿತ್ರವನ್ನು ಚೇತನ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಕಮರ್ಷಿಯಲ್‌ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಚೇತನ್‌ ಕುಮಾರ್‌, ಬರ್ಮ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದರ ಶೂಟಿಂಗ್​  ಕಾರಣದಿಂದ ರಕ್ಷ್​ ಅವರು ತಿಂಗಳುಗಳವರೆಗೆ ಸೀರಿಯಲ್​  ಮತ್ತು ಅವಾರ್ಡ್​ ಫಂಕ್ಷನ್​ನಲ್ಲಿ ಕಾಣಿಸಿಕೊಂಡಿರಲಿಲ್ಲ.
 


ಇವರು ಗಟ್ಟಿಮೇಳದಲ್ಲಿ ನಡೆದು ಬಂದ ಹಾದಿಯನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಈ ಮೂಲಕ ವಿಶೇಷವಾಗಿ ಹುಟ್ಟುಹಬ್ಬದ ಶಭಾಶಯ ಕೋರಿದೆ. ಬರ್ಮ ನಯಾ ಲುಕ್ ಅನಾವರಣ ಮಾಡಿ, ಚಿತ್ರತಂಡ ಶುಭಾಶಯ ಕೋರಿದೆ‌. ಬರ್ಮ ಹೊಸ ಪೋಸ್ಟರ್  ಇದೀಗ ರಿಲೀಸ್​ ಆಗಿದ್ದು, ಇದರಲ್ಲಿ ರಕ್ಷ್​ ಅವರು,  ಕೈಯಲ್ಲಿ ಕೊಡಲಿ ಹಿಡಿದು, ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮಾಸ್ ಗೆಟಪ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬರ್ಮ ಚಿತ್ರವು ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾವಾಗಿದ್ದು, ಈ ಮೂಲಕ ಕಿರುತೆರೆ ನಟ ರಕ್ಷ್ ಪ್ಯಾನ್ ಇಂಡಿಯಾ ಸ್ಟಾರ್ ಎಮರ್ಜ್ ಆಗಿದ್ದಾರೆ.  

ರಕ್ಷ್‌ ರಾಮ್‌ ತಮ್ಮದೇ ನಿರ್ಮಾಣ ಸಂಸ್ಥೆ ಶ್ರೀ ಸಾಯಿ ಆಂಜನೇಯ  ಕಂಪನಿಯಡಿ ಬರ್ಮ ಸಿನಿಮಾಗೆ ಹಣ ಹೂಡಿದ್ದು, ಚಿತ್ರಕ್ಕೆ ಡೈರೆಕ್ಟರ್‌ ಚೇತನ್ ಕುಮಾರ್ ಆಕ್ಷನ್‌ ಕಟ್‌ ಹೇಳಿದ್ದಾರೆ. ‘ಬರ್ಮ’ ಸಿನಿಮಾದಲ್ಲಿ ಶಾವರ್ ಅಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇದೆ. ‘ಬರ್ಮ’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ  ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.  

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್ 'ದಿ ಡೆವಿಲ್' ನಾಯಕಿ ರಚನಾ ರೈ ಸಾಮಾನ್ಯರಲ್ಲ, ಸ್ಪೆಷಲ್ ಲೇಡಿ!
ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?