ಹಾಲಿವುಡ್‌ ರೇಂಜ್‌ನಲ್ಲಿ ಉಪ್ಪಿಯ UI ಟೀಸರ್, ಬಿಡುಗಡೆಯಾದ 1 ಗಂಟೆಯಲ್ಲಿ 3 ಲಕ್ಷ ವೀಕ್ಷಣೆ!

By Gowthami K  |  First Published Jan 8, 2024, 1:02 PM IST

ರಿಯಲ್‌ ಸ್ಟಾರ್‌ ಉಪೇಂದ್ರ  ಅವರ ಬಹು ನಿರೀಕ್ಷಿತ ಯು ಐ (UI) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದ 1 ಗಂಟೆಯಲ್ಲಿ 3 ಲಕ್ಷ ವೀಕ್ಷಣೆ ಪಡೆದಿದೆ. 


ಬೆಂಗಳೂರು (ಜ.8): ರಿಯಲ್‌ ಸ್ಟಾರ್‌ ಉಪೇಂದ್ರ  ಅವರ ಬಹು ನಿರೀಕ್ಷಿತ ಯು ಐ (UI) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಯುಐ ಉಪೇಂದ್ರ ನಿರ್ದೇಶನ ಮತ್ತು ನಟನೆಯ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನ್ ಲೈನ್ ನಲ್ಲಿ ಕಿಚ್ಚ ಸುದೀಪ್‌ ಟೀಸರ್ ಲಾಂಚ್ ಮಾಡಿದ್ದಾರೆ.

ಕೆಟ್ಟ ಸಿನೆಮಾ ಮಾಡಿ ಅವಮಾನಗೊಂಡ ಬಳಿಕ ಈ ಡೈರಕ್ಟರ್‌ ಕೊಟ್ಟ ಎಲ್ಲಾ ಚಿತ್ರ ಹಿಟ್‌, ಬರೋಬ್ಬರಿ 1487 ಕೋಟಿ ರೂ ಗಳಿಕೆ!

Tap to resize

Latest Videos

undefined

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿವರಾಜ್ ಕುಮಾರ್, ನಿರ್ಮಾಪಕ ಅಲ್ಲು ಅರವಿಂದ್, ಪ್ರಿಯಾಂಕಾ ಉಪೇಂದ್ರ ಭಾಗಿಯಾಗಿದ್ದರು. ಕೆ ಪಿ ಶ್ರೀಕಾಂತ್ ಹಾಗು ಮನೋಹರ್ ನಾಯ್ಡು ನಿರ್ಮಾಣದ ಈ ಪ್ಯಾನ್‌ ಇಂಡಿಯಾ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಲಹರಿ ಫಿಲ್ಸ್ಂ ನಲ್ಲಿ ಟೀಸರ್‌ ಹರಿಯ ಬಿಡಲಾಗಿದ್ದು, ಬಿಡುಗಡೆಯಾದ 1 ಗಂಟೆಯಲ್ಲಿ 3 ಲಕ್ಷ ವೀಕ್ಷಣೆ ಪಡೆದಿದೆ.

5 ಬಾರಿ ಮದುವೆಯಾದ ನಟಿಗೆ ಒಲಿಯದ ಗಂಡಂದಿರ ಪ್ರೀತಿ, ನಯಾಪೈಸೆ ಇಲ್ಲದೆ ಮ ...

ರಿಲೀಸ್ ಆಗಿರೋ ಟೀಸರ್ ನಲ್ಲಿ ಉಪ್ಪಿ ಕಲಿಯುಗದ ಕಥೆ ಹೇಳ್ತಿರೋ ರೀತಿ ಕಂಡುಬಂದಿದೆ. ಹಾಲಿವುಡ್‌ ರೇಂಜ್‌ನಲ್ಲಿ ಟೀಸರ್‌ ಮೂಡಿಬಂದಿದೆ. ಅದ್ಧೂರಿ ಮೇಕಿಂಗ್ ಇದೆ.  8 ವರ್ಷಗಳ ಬಳಿಕ ಉಪ್ಪಿ ಆಕ್ಷನ್‌ ಕಟ್‌ ಹೇಳಿದ್ದು,  ಭಾರೀ ನಿರೀಕ್ಷೆ ಹುಟ್ಟಿಸಿದೆ.

ಮೊದಲ ದೃಶ್ಯದಲ್ಲಿ ಎರಡು ವಿಭಿನ್ನ ಜೀವಿಗಳು ದೂರದೂರನ್ನು ನೋಡುವ ನೋಟವನ್ನು ತೋರಿಸಲಾಗಿದೆ. ಅವತಾರ್‌ ಸಿನಿಮಾದಲ್ಲಿ ಕಂಡಂತೆ ಕಾಣುತ್ತಿದೆ. ಉಪ್ಪಿ ಡೊಡ್ಡ ಕೊಂಬು ಇರುವ ಕುದುರೆ ಏರಿ ಬಂದಿದ್ದು, ರವಿ ಶಂಕರ್‌ ಹಾಗೂ ಸಾಧಕೋಕಿಲ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಎರಡು ಕಥೆ ಇರುವಂತೆ ತೋರುತ್ತಿದೆ. ಉಪ್ಪಿಗೆ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ.

click me!