ಮನೆಬಾಗಿಲಿಗೆ ಯಾವುದೇ ಅಭಿಮಾನಿ ಬಂದರೂ ಹಾಗೇ ವಾಪಸ್ ಹೋಗಲು ಬಿಡುತ್ತಿರಲಿಲ್ಲವಂತೆ ವಿಷ್ಣುವರ್ಧನ್. ಅವರನ್ನು ಹೃತ್ಪೂರ್ವಕವಾಗಿ ಮಾತನಾಡಿಸಿ, ಅವರಿಗೆ ತಿನ್ನಲು, ಕುಡಿಯಲು ಏನಾದ್ರೂ ಕೊಟ್ಟು, ಪ್ರೀತಿಯಿಂದ ಕಳುಹಿಸಿಕೊಡುತ್ತಿದ್ದರು..
ನಟ, ಸಾಹಸಸಿಂಹ ಖ್ಯಾತಿಯ ಡಾ ವಿಷ್ಣುವರ್ಧನ್ ಅಭಿಮಾನಿಗೆ ಬರೆದಿದ್ದ ಪತ್ರವೊಂದು ಸದ್ಯ ಸೋಷಿಯಲ್ ಮೀಡಿಯಾ ಮೂಲಕ ಚರ್ಚೆಗೆ ಬಂದಿದೆ. ಕಾರಣ, ಅಂದು ದೂರದಲ್ಲಿದ್ದ ಜನರೊಂದಿಗೆ ಪರಸ್ಪರ ಕುಶಲೋಪರಿಗೆ, ದೂರದಲ್ಲಿದ್ದರವರಿಗೆ ಏನಾದರೂ ಸಂದೇಶ ಕಳಿಸುವುದಿದ್ದರೆ ಪತ್ರವೇ ಗತಿ ಎಂಬಂಥ ಕಾಲ. ದೂರವಾಣಿ ಆಗಷ್ಟೇ ಕಾಲಿಟ್ಟ ಕಾಲವದು. ಅದು ಶ್ರೀಮಂತರ ಮನೆಯ ಹಾಲ್‌ಅನ್ನು ಮಾತ್ರ ಅಲಂಕರಿಸುತ್ತಿತ್ತು. ಬಡಬಗ್ಗರು ಹಾಗೂ ಮಧ್ಯಮವರ್ಗದವರಿಗೆ ಟೆಲಿಗ್ರಾಂ ಕೂಡ ದುಬಾರಿಯೇ ಆಗಿತ್ತು. ಹೀಗಾಗಿ ಪತ್ರವು ಆಗಿನ ಕಾಲದ 'ಬಡವರ ಬಂಧು' ಎಂಬಂತಾಗಿತ್ತು.
ನಟ ವಿಷ್ಣುವರ್ಧನ್ ಅವರಿಗೆ ಅಭಿಮಾನಿಯೊಬ್ಬರು ಪತ್ರ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ವಿಷ್ಣು ಸ್ವತಃ ತಮ್ಮ ಕೈಬರಹದ ಮೂಲಕ ಪತ್ರವೊಂದನ್ನು ಪ್ರತ್ಯುತ್ತರವಾಗಿ ಬರೆದಿದ್ದರು. 'ಪ್ರೀತಿಯ ಅಭಿಮಾನಿಗೆ ನಿಮ್ಮ ವಿಷ್ಣುವರ್ಧನ್ ಮಾಡುವ ನಮಸ್ಕಾರಗಳು. ನಿಮ್ಮ ಪತ್ರವನ್ನು ಕಂಡು ತುಂಬಾ ಸಂತೋಷವಾಯಿತು. ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮ ಅಭಿಮಾನವೇ ನನಗೆ ಶ್ರೀರಕ್ಷೆ. ನಿಮ್ಮ ಅಪೇಕ್ಷೆಯ ಮೇರೆಗೆ ನನ್ನ ಭಾವ ಚಿತ್ರವನ್ನು ಕಳುಹಿಸುತ್ತಿದ್ದೇನೆ' ಎಂದು ಪ್ರೀತಿಯಿಂದ ಅಭಿಮಾನಿಗೆ ಪತ್ರ ಬರೆದು ತಮ್ಮ ಹಾಗೂ ಪತ್ನಿ ಭಾರತಿಯ ಫೋಟೋ ಕಳುಹಿಸಿದ್ದರು ನಟ ವಷ್ಣುವರ್ಧನ್.
undefined
ಡಾರ್ಲಿಂಗ್ ಪ್ರಭಾಸ್ ಯಾಕಿನ್ನೂ ಮದುವೆಯಾಗಿಲ್ಲ? ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಪಕ್ಕಾ ಉತ್ತರ!
ಮನೆಬಾಗಿಲಿಗೆ ಯಾವುದೇ ಅಭಿಮಾನಿ ಬಂದರೂ ಹಾಗೇ ವಾಪಸ್ ಹೋಗಲು ಬಿಡುತ್ತಿರಲಿಲ್ಲವಂತೆ ವಿಷ್ಣುವರ್ಧನ್. ಅವರನ್ನು ಹೃತ್ಪೂರ್ವಕವಾಗಿ ಮಾತನಾಡಿಸಿ, ಅವರಿಗೆ ತಿನ್ನಲು, ಕುಡಿಯಲು ಏನಾದ್ರೂ ಕೊಟ್ಟು, ಪ್ರೀತಿಯಿಂದ ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ. ಅಭಿಮಾನಿಗಳು ತಮ್ಮ ಅನ್ನದಾತರು ಎಂದು ಅರಿತಿದ್ದ ನಟ ವಿಷ್ಣುವರ್ಧನ್, ಸಮಯ ಬಂದರೆ ಅವರು ತಮಗಾಗಿ ಪ್ರಾಣವನ್ನು ಕೊಡಲೂ ಕೂಡ ಹಿಂದೆಮುಂದೆ ನೋಡುವುದಿಲ್ಲ ಎಂಬುದನ್ನು ಅರಿತಿದ್ದರು. ಅದಕ್ಕಾಗಿ ಅವರು ಬಹಿರಂಗವಾಗಿ ಎಲ್ಲೂ ಹೇಳಿಕೆ ಕೊಡದಿದ್ದರೂ, ಅಭಿಮಾನಿಗಳು ತಮ್ಮ ಪಾಲಿನ 'ದೇವರು' ಎಂದು ಅರ್ಥ ಮಾಡಿಕೊಂಡಿದ್ದರು.
ಬೆಂಗಳೂರಲ್ಲಿ ಕಿಟ್ಟಿ ಪಾರ್ಟೀಲಿ ಮಡದಿ ಬ್ಯುಸಿ ಇದ್ರೆ, ನೀರ್ನಳ್ಳಿ ರಾಮಕೃಷ್ಣ ಹಳ್ಳಿಗೆ ಹೋಗಿದ್ಯಾಕೆ?
ಅಂದಹಾಗೆ, ನಟ ವಿಷ್ಣುವರ್ಧನ್ ಅವರು ವಿವಿಧ ಭಾಷೆಗಳು ಸೇರಿದಂತೆ, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಚಿತ್ರಗಳಿದ್ದು, ಸುಮಾರು 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ವಂಶವೃಕ್ಷ ಸಿನಿಮಾದಿಂದ ಅವರ ವೃತ್ತಿಜೀವನ ಶೂರುವಾದರೂ ಮೊದಲು ಬಿಡುಗಡೆ ಕಂಡ ನಾಗರಹಾವು ಚಿತ್ರದ ಮೂಲಕ ನಟ ವಿಷ್ಣುವರ್ಧನ್ ಕನ್ನಡದ ಸ್ಟಾರ್ ನಟರಾಗಿ ಬೆಳೆದರು. ವೃತ್ತಿಜೀವನ ಹಾಗು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡ ನಟ ವಿಷ್ಣುವರ್ಧನ್, ತಮ್ಮ 59ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆದರೆ, ತಮ್ಮ ಸಿನಿಮಾಗಳು ಹಾಗೂ ಗ್ರೇಟ್ ವ್ಯಕ್ತಿತ್ವದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಅಜರಾಮರ ಸ್ಥಾನ ಪಡೆದಿದ್ದಾರೆ ನಟ ವಿಷ್ನುವರ್ಧನ್.
ಮಹಿಳೆಯರು ಯಾವುದೋ ಗ್ರಹದ ಜೀವಿಗಳು ಎಂದುಕೊಂಡಿದ್ದೆ; ವಿಜಯ್ ದೇವರಕೊಂಡ ಶಾಕಿಂಗ್ ಹೇಳಿಕೆ!