'ನಾನು ನಟಿಸಿದ ಮೊದಲ ಸಿನಿಮಾ ಬಬ್ರುವಾಹನ. ಅದರಲ್ಲಿ ಡಾ ರಾಜ್‌ಕುಮಾರ್, ಬಿ ಸರೋಜಾದೇವಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಹುಣುಸೂರು ಕೃಷ್ಣಮೂರ್ತಿಗಳು, ಹೀಗೆ ಘಟಾನುಘಟಿ ನಟರು ಇದ್ದರು. ನನಗೆ ಅವರೆಲ್ಲರ ಜತೆ ನಟಿಸುವ ಸುಯೋಗ ಸಿಕ್ಕಿದ್ದು ಅದೃಷ್ಟ..
ಹಿರಿಯ ನಟ ರಾಮಕೃಷ್ಣ (Neernalli Ramakrishna) ಅವರ ಸಂದರ್ಶನವೊಂದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ಶಿರಸಿ ಸಮೀಪದ ನೀರ್ನಳ್ಳಿ ಗ್ರಾಮ ನಟ ರಾಮಕೃಷ್ಣ ಅವರ ಹುಟ್ಟೂರು ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಸದ್ಯ ಕೆಲಸವಿಲ್ಲದಿದ್ದರೆ ಹುಟ್ಟೂರಿನಲ್ಲಿ, ಕೆಲಸವಿದ್ದರೆ ಬೆಂಗಳೂರಿನಲ್ಲಿ ಹೀಗೆ ನಟ ರಾಮಕೃಷ್ಣ ಅವರು ಜೀವನ ನಡೆಸುತ್ತಿದ್ದಾರೆ. ಶಿರಸಿಯಿಂದ 4-5 ಕೀ.ಮೀ. ದೂರದ ನೀರ್ನಳ್ಳಿಯಲ್ಲಿ ತೋಟ ಮಾಡಿಕೊಂಡಿದ್ದು ಅದನ್ನು ನೋಡಿಕೊಳ್ಳುತ್ತ ನಟ ರಾಮಕೃಷ್ಣ ಹಾಯಾಗಿದ್ದಾರಂತೆ. ಬೆಂಗಳೂರಿನ ಮನೆಯ ಜವಾಬ್ದಾರಿ ನನ್ನ ಹೆಂಡತಿ ನೋಡಿಕೊಳ್ಳುತ್ತಾಳೆ. ಅಲ್ಲಿ ಫ್ರೆಂಡ್ಸ್, ಕಿಟ್ಟಿ ಪಾರ್ಟಿ ಅಂದ್ಕೊಂಡು ಅವ್ರು ಕಾಲ ಕಳೀತಾರೆ.
ನಟ ರಾಮಕೃಷ್ಣ ಅವರು ಸಂದರ್ಶನದಲ್ಲಿ 'ನನಗೆ ಕೆಲವಿದ್ದರೆ ನಾನು ಬೆಂಗಳೂರಿಗೆ ಹೋಗುತ್ತೇನೆ. ಇಲ್ಲ ಅಂದರೆ ಇಲ್ಲೇ ನನ್ನ ಹುಟ್ಟೂರಿನಲ್ಲಿ ಕಾಲ ಕಳೆಯುತ್ತೇನೆ. ಇಲ್ಲಿ ನಾನೇ ಮಾಡಿಕೊಂಡಿರುವ ತೋಟವಿದೆ, ಜಮೀನಿದೆ. ನಟನಾ ವೃತ್ತಿಯನ್ನು ಮಾಡುತ್ತಲೇ ಈ ತೋಟವನ್ನು ಕೂಡ ಮಾಡಿಕೊಳ್ಳುತ್ತ, ನೋಡಿಕೊಳ್ಳುತ್ತ ಬಂದೆ. ಈಗ ಇಲ್ಲಿ ಸಾಕಷ್ಟು ಬೆಳೆ ಬರುತ್ತಿದ್ದು ಅದೇ ನಮ್ಮನ್ನು ನೋಡಿಕೊಳ್ಳುತ್ತಿದೆ ಎಂದರೆ ಸತ್ಯಕ್ಕೆ ಹತ್ತಿರ ಎನ್ನಬಹುದು. ಯಾರಿಗೇ ಆದರೂ ಹುಟ್ಟೂರು ಎಂಬುದು ಸ್ವರ್ಗಕ್ಕೆ ಸಮಾನ. 'ಜನನೀ ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರಿಯಸಿ..' ಅಂತಾರಲ್ಲ ಹಾಗೆ. ನಮ್ಮೂರು ನಮಗೆ ಎಲ್ಲ ಜಾಗಕ್ಕಿಂತಲೂ ಶ್ರೇಷ್ಠ ಅನ್ನುವುದು ಸುಳ್ಳಲ್ಲ' ಎಂದಿದ್ದಾರೆ ನಟ ರಾಮಕೃಷ್ಣ.
undefined
ಮಹಿಳೆಯರು ಯಾವುದೋ ಗ್ರಹದ ಜೀವಿಗಳು ಎಂದುಕೊಂಡಿದ್ದೆ; ವಿಜಯ್ ದೇವರಕೊಂಡ ಶಾಕಿಂಗ್ ಹೇಳಿಕೆ!
ನಟ ರಾಮಕೃಷ್ಣ ಅವರು ಮಾತನಾಡುತ್ತ 'ನಾನು ನಟಿಸಿದ ಮೊದಲ ಸಿನಿಮಾ ಬಬ್ರುವಾಹನ. ಅದರಲ್ಲಿ ಡಾ ರಾಜ್‌ಕುಮಾರ್, ಬಿ ಸರೋಜಾದೇವಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಹುಣುಸೂರು ಕೃಷ್ಣಮೂರ್ತಿಗಳು, ಹೀಗೆ ಘಟಾನುಘಟಿ ನಟರು ಇದ್ದರು. ನನಗೆ ಅವರೆಲ್ಲರ ಜತೆ ನಟಿಸುವ ಸುಯೋಗ ಸಿಕ್ಕಿದ್ದು ಅದೃಷ್ಟ. ಅವೆಲ್ಲ ಒಂಥರಾ ಸ್ಮರಣೀಯ ಕ್ಷಣಗಳು ಎನ್ನಬೇಕು. ಡಾ ರಾಜ್‌ಕುಮಾರ ಜತೆ ನಾನು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ನಟರಾದ ವಿಷ್ಣುವರ್ಧನ್, ಅಂಬರೀಷ್, ಜೈಜಗದೀಶ್, ಶಂಕರ್‌ನಾಗ್, ಅನಂತ್‌ನಾಗ್ ಹೀಗೆ ನಾವೆಲ್ಲ ಹೆಚ್ಚುಕಡಿಮೆ ಒಂದೇ ವಯಸ್ಸಿನವರು. ಹೀಗಾಗಿ ನಮ್ಮಲ್ಲರಲ್ಲಿ ಸಲುಗೆ ಜಾಸ್ತಿ ಇತ್ತು.
ರಜನಿಕಾಂತ್ ಸೇಡು ತೀರಿಸಿಕೊಂಡಿದ್ದು ಕೂಡ ಸಖತ್ ಸ್ಟೈಲಿಶ್ ಆಗಿಯೇ ಅಂದ್ರೆ ನಂಬ್ಲೇಬೇಕು!
ವಿಷ್ಣುವರ್ಧನ್ ಜೊತೆಗಂತೂ ಹಾಸಿಗೆಯಲ್ಲಿ ಹೊರಳಾಡಿದ್ದು, ಸಿಗರೇಟ್ ಸೇದಿದ್ದು, ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಅಂಬರೀಷ್, ಶಂಕರ್‌ನಾಗ್ ಅವರೊಂದಿಗೆ ನಟಿಸಿದ್ದು, ಅನಂತ್‌ನಾಗ್ ಅವರೊಂದಿಗಿನ ಒಡನಾಟ, ಹೀಗೆ ಸಾಲು ಸಾಲು ನೆನಪುಗಳು ಆಗಾಗ ಮನದಲ್ಲಿ ಮೂಡಿ ರೋಮಾಂಚನ ಎನಿಸುತ್ತದೆ. ಅವರಲ್ಲಿ ಕೆಲವರು ಈಗ ನಮ್ಮೊಂದಿಗಿಲ್ಲ. ಇರುವವರನ್ನು ಕೂಡ ಮೊದಲಿನಂತೆ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಕಾರಣ, ವಯಸ್ಸು, ಮೊದಲಿನಂತೆ ಓಡಾಡಲು ಸಾಧ್ಯವಿಲ್ಲ' ಎಂದು ಹೇಳುತ್ತಾ ಸಾಕಷ್ಟು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ ನಟ ರಾಮಕೃಷ್ಣ.
ಡಾ. ರಾಜ್‌ಕುಮಾರ್ ಮಗಳು ಪೂರ್ಣಿಮಾ ಅನುಕರಿಸಿ 'ಬಜಾರಿ' ಪಾತ್ರ ಮಾಡಿದ್ರು ಮಂಜುಳಾ!