
'ರಾಮಾ ರಾಮಾ ರೇ' ಸಿನಿಮಾ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಹೃದಯ ಗೆದ್ದ ನಟ ಧರ್ಮಣ್ಣ ಕಡೂರು. ರಾಮಾ ರಾಮ ರೇ ಬಳಿಕ ಖ್ಯಾತಿ ಹೆಚ್ಚಿಸಿಕೊಂಡ ಧರ್ಮಣ್ಣ ಅನೇಕ ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ ಮಿಂಚಿದ್ದಾರೆ. ಸ್ಯಾಂಡಲ್ ವುಡ್‌ನ ಅನೇಕ ಸ್ಟಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡಿರುವ ಧರ್ಮಣ್ಣ ಅಭಿಮಾನಿಗಳನ್ನು ನಗಿಸಿದ್ದಾರೆ, ನಗಿಸುತ್ತಿದ್ದಾರೆ. ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಧರ್ಮಣ್ಣ ಅವರಿಗೆ ಈಗ 'ರಾಜಯೋಗ' ಬಂದಿದೆ. ಕಾಮಿಡಿ ಸ್ಟಾರ್ ಆಗಿದ್ದ ಧರ್ಮಣ್ಣ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಬಾರಿಗೆ ನಾಯಕನಾಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ನಟ ಧರ್ಮಣ್ಣ.
ಅಂದಹಾಗೆ ಧರ್ಮಣ್ಣ ಹೀರೋ ಆಗಿ ಎಂಟ್ರಿ ಕೊಡುತ್ತಿರುವ ಸಿನಿಮಾ 'ರಾಜಯೋಗ'. ಧರ್ಮಣ್ಣ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಚಿತ್ರಕ್ಕೆ ಲಿಂಗರಾಜು ಉಚ್ಚಂಗಿ ಅಕ್ಷನ್ ಕಟ್ ಹೇಳುತ್ತಿದ್ದಾರೆ. ಧಾರಾವಾಹಿ ಲೋಕದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಲಿಂಗರಾಜು ಇದೀಗ ಧರ್ಮಣ್ಣ ಅವರಿಗೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಧರ್ಮಣ್ಣ ಅವರಿಗೆ ನಾಯಕಿಯಾಗಿ ನಿರೀಕ್ಷೆ ಕಾಣಿಸಿಕೊಳ್ಳುತ್ತಿದ್ದಾರೆ.
ಹೀರೋನಾ ಸರಿಯಾಗಿ ಬೆಂಡೆತ್ತಿದ್ದಾರೆ; ಧರ್ಮಣ್ಣ ಕಡೂರು
ರಾಜಯೋಗ ಕಾಮಿಡಿ ಎಮೋಷನಲ್ ಸಿನಿಮಾವಾಗಿದೆ. ಕಥೆ ಕೇಳಿ ತುಂಬಾ ಇಷ್ಟಪಟ್ಟ ಧರ್ಮಣ್ಣ ಹೀರೋ ಆಗಿ ಅಭಿಮಾನಿಗಳ ಮುಂದೆ ಬರಲು ನಿರ್ಧರಿಸಿದ್ದಾರೆ. ಅಂದಹಾಗೆ ರಾಜಯೋಗ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಅಂದಹಾಗೆ ಈ ಸಿನಿಮಾದ ಕೆಲಸ ಈಗಾಗಲೇ 70 ರಷ್ಟು ಮುಕ್ತಾಯವಾಗಿದೆ ಎನ್ನಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ ರಾಜಯೋಗ. ಸದ್ಯ ರಾಜಯೋಗ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪೋಸ್ಟರ್ ನಲ್ಲಿ ಧರ್ಮಣ್ಣ ಮನೆಯ ಮೆಟ್ಟಿಲುಗಳ ಮೇಲೆ ಪುಸ್ತಕ ಓದುತ್ತಾ ಕುಳಿತಿದ್ದಾರೆ. ಹಿಂದೆ ನಾಯಕಿ ನಗುಬೀರುತ್ತಾ ಧರ್ಮಣ್ಣನನ್ನು ನೋಡುತ್ತಿದ್ದಾರೆ. ಈ ಫೋಸ್ಟರ್ ಗಮನ ಸೆಳೆಯುತ್ತಿದ್ದು ಸಿನಿಮಾ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
'ರಾಮಾ ರಾಮಾ ರೇ' ನಟ ಧರ್ಮಣ್ಣನ ಮನೆಗೆ ಬಂದಳು 'ಮಗಳು' ಮಹಾರಾಣಿ.!
ರಾಜಯೋಗ ಸಿನಿಮಾ ಶ್ರೀ ರಾಮನಾಥ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿದೆ. ಆರು ಜನ ಸ್ನೇಹಿತರು ಸೇರಿ ರಾಜಯೋಗ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಧರ್ಮಣ್ಣ ಸದ್ಯ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಗ್ರಾಮಾಯಣ, ಐಯ್ ಪ್ರಗ್ನೆಂಟ್, ಗಾಜರೂನು, ತ್ರಿಮಿದಮ್, ಯದುವೀರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ನಾಯಕನಾಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಹೀರೋ ಆಗಿ ಧರ್ಮಣ್ಣ ಅವರನ್ನು ಕನ್ನಡ ಚಿತ್ರಪ್ರೇಕ್ಷಕರು ಇಷ್ಟಪಡುತ್ತಾರಾ, ನಿಜಕ್ಕೂ ರಾಜಯೋಗ ಬರುತ್ತಾ ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.