
ಮಲ್ಲೇಶ್ವರ ನಿವಾಸಿ ಎ.ದೀಪಕ್ ಎಂಬುವರು ಕೊಟ್ಟದೂರಿನ ಮೇರೆಗೆ ನಿವೇದಿತಾ ವಿರುದ್ಧ ಪ್ರಕರಣ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಇದು ಮಾದಕ ವಸ್ತು ಸೇವನೆಗೆ ಉತ್ತೇಜನ ನೀಡಿದಂತಾಗುತ್ತದೆ. ಇದರಿಂದ ಯುವ ಪೀಳಿಗೆ ದಾರಿ ತಪ್ಪುತ್ತದೆ. ಹಿಂದುಗಳಿಗೆ ಪವಿತ್ರ ಸಸ್ಯವಾಗಿರುವ ತುಳಸಿಯನ್ನು ಗಾಂಜಾಗೆ ಹೋಲಿಸಿ, ಅವಹೇಳನಕಾರಿ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೀಪಕ್ ದೂರಿದರ್ದಾರೆ.
ಡ್ರಗ್ಸ್ ಮಾಫಿಯಾ ಬಗ್ಗೆ ನಟಿ ನಿವೇದಿತಾ ಕೊಟ್ರು ಶಾಂಕಿಗ್ ಸ್ಟೇಟ್‌ಮೆಂಟ್
ನಟ, ನಟಿಯರಿಗೆ ಮಾದಕ ವಸ್ತು ನಂಟು ಆರೋಪ ಕೇಳಿ ಬಂದ ವಿಚಾರವಾಗಿ ಸೆ.1ರಂದು ನಿವೇದಿತಾ ಮಾಧ್ಯಮಗಳ ಜತೆ ಮಾತನಾಡಿದ್ದರು. ‘ಗಾಂಜಾ ತುಳಸಿಯಷ್ಟೇ ಶ್ರೇಷ್ಠ ಗಿಡ. ಆಯುರ್ವೇದದಲ್ಲಿ ಗಾಂಜಾ ಗಿಡಕ್ಕೆ ಒಳ್ಳೆಯ ಮೌಲ್ಯವಿದೆ. ಬೇರೆ ದೇಶಗಳಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ಕಾನೂನು ಬದ್ಧಗೊಳಿಸಲಾಗಿದೆ. ನಮ್ಮ ದೇಶದಲ್ಲೂ ಕಾನೂನು ಬದ್ಧಗೊಳಿಸಬೇಕು ಎಂದು ಗಾಂಜಾ ಸೇವನೆಯನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ, ಗಾಂಜಾ ಸೇವನೆಯಿಂದ ಯಾವುದೇ ವ್ಯಕ್ತಿ ಸಾವನ್ನಪ್ಪಿಲ್ಲ’ ಎಂದು ಹೇಳಿಕೆ ನೀಡಿದ್ದರು.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.