ಭಾರೀ ಮೊತ್ತಕ್ಕೆ ಸೇಲ್ ಆಯ್ತು ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಡಿಜಿಟಲ್ ರೈಟ್ಸ್!

By Shriram Bhat  |  First Published May 19, 2024, 6:46 PM IST

ಕಡಿಮೆ ಬಜೆಟ್ಟಿನ ಕನ್ನಡ ಚಿತ್ರವೊಂದು ಈ ಮಟ್ಟಕ್ಕೆ ಪ್ರಖ್ಯಾತಿ ಪಡೆದು, ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಮತ್ತೊಂದು ದಾಖಲೆ ಎನ್ನಬಹುದು. ಈ ಬಗ್ಗೆ ಇಡೀ ಕಾಂತಾರ ಟೀಮ್ ಖುಷಿಯನ್ನು ಹಂಚಿಕೊಳ್ಳುವ ಕ್ಷಣ..


ರಿಷಬ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ' ಚಿತ್ರವು ಮತ್ತೊಮ್ಮೆ ಸುದ್ದಿಯಾಗಲಿದೆ. ಕಾರಣ, ಕಾಂತಾರ ಚಿತ್ರದ ಡಿಜಿಟಲ್ ರೈಟ್ಸ್ 125 ಕೋಟಿ ರೂಪಾಯಿಗೆ ಅಮೆಜಾನ್ ಪ್ರೈಮ್ ವೀಡಿಯೋ ಕಂಪನಿಗೆ ಸೇಲ್‌ ಆಗಿದೆ. ಇದು ನಿಜವಾಗಿಯೂ ಎಲ್ಲರೂ ಖುಷಿ ಪಡಬೇಕಾದ ವಿಚಾರ. ಕಾರಣ, ಕೇವಲ 15-16 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಂತಾರ ಚಿತ್ರವು 125 ಕೋಟಿ ರೂ.ಗೆ ಸೇಲ್ ಆಗಿದ್ದು ಅಚ್ಚರಿ ಹುಟ್ಟಿಸುವ ಸಂಗತಿ. ಜತೆಗೆ, ಕಾಂತಾರ ಚಿತ್ರದ ಬಿಡುಗಡೆಯಿಂದ ಜಗತ್ತಿನಾದ್ಯಂತ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. 

ಇದೀಗ, ಅಚ್ಚರಿ ಹಾಗೂ ಖುಷಿ ಸಂಗತಿ ಎಂಬಂತೆ, ಕಾಂತಾರ ಚಿತ್ರದ ಡಿಜಿಟಲ್ ಹಕ್ಕು ಬರೋಬ್ಬರಿ 125 ಕೋಟಿಗೆ ಸೇಲ್ ಆಗಿದ್ದು, ಹೊಸ ದಾಖಲೆ ಬರೆದಿದೆ. ಕಡಿಮೆ ಬಜೆಟ್ಟಿನ ಕನ್ನಡ ಚಿತ್ರವೊಂದು ಈ ಮಟ್ಟಕ್ಕೆ ಪ್ರಖ್ಯಾತಿ ಪಡೆದು, ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಮತ್ತೊಂದು ದಾಖಲೆ ಎನ್ನಬಹುದು. ಈ ಬಗ್ಗೆ ಇಡೀ ಕಾಂತಾರ ಟೀಮ್ ಖುಷಿಯನ್ನು ಹಂಚಿಕೊಳ್ಳುವ ಕ್ಷಣ ಖಂಡಿತ ದೂರವಿಲ್ಲ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಜೋಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾಂತಾರ ಚಿತ್ರವು ಈ ಮೂಲಕ ಇದೀಗ ಮತ್ತೊಂದು ಮನ್ನಣೆಗೆ ಪಾತ್ರವಾಗಿದೆ. 

Tap to resize

Latest Videos

ನಮ್ಮಿಬ್ಬರಲ್ಲಿ ಹತ್ತು ವರ್ಷಗಳ ಅಂತರವಿದೆ; ಪ್ರಿಯಾಂಕಾ ಮಾತಿಗೆ ಗುಸುಗುಸು ಶುರುವಾಗಿದ್ದೇಕೆ?

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರವು 'ದೈವಾರಾಧನೆ'ಗೆ ಸಂಬಂಧಿಸಿದ ವಿಷಯವನ್ನು ಒಳಗೊಂಡಿದೆ. ಈ ಚಿತ್ರವು ತನ್ನ ವಿಭಿನ್ನತೆ ಹಾಗು ಘನತೆಯಿಂದ ಅಪಾರ ಜನಮನ್ನಣೆ ಪಡೆದಿದೆ. ಈ ಚಿತ್ರವು ಕಡಿಮೆ ಬಜೆಟ್ ಹಾಗೂ ಹೆಚ್ಚಿನ ಗಳಿಕ ಮೂಲಕ ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರು ಕಾಂತಾರ ಚಿತ್ರದ ಮೂಲಕ ಇಂಟರ್‌ನ್ಯಾಷನಲ್ ಖ್ಯಾತಿ ಪಡೆದುಕೊಂಡಿದ್ದಾರೆ. ಈಗ ಅವರಿಬ್ಬರನ್ನೂ ಪ್ಯಾನ್ ಇಂಡಿಯಾ ಸ್ಟಾರ್‌ಗಳೆಂದು ಕರೆಯುವುದರಲ್ಲಿ ಯಾವ ತಪ್ಪೂ ಇಲ್ಲ. 

ಪವಿತ್ರಾ ಜಯರಾಂಗೆ ನೀನು ಆರನೆಯವನು, ಹೀಗಂತ ಚಂದುಗೆ ಸತ್ಯ ಹೇಳಿದ್ದೆ; ಶಿಲ್ಪಾ ಪ್ರೇಮಾ

ಕನ್ನಡದಲ್ಲಿ ಕಡಿಮೆ ಬಜೆಟ್ಟಿನಲ್ಲಿ ನಿರ್ಮಾಣವಾಗಿ ದಾಖಲೆ ಗಳಿಕೆ ಕಂಡ ಈ ಕಾಂತಾರ ಚಿತ್ರದ ಕಥಾವಸ್ತು ಹಾಗೂ ಮೇಕಿಂಗ್ ಬಗ್ಗೆ ಇಡೀ ಜಗತ್ತು ಅಚ್ಚರಿಗೆ ಒಳಗಾಗಿದೆ. ಇಷ್ಟು ಕಡಿಮೆ ಬಜೆಟ್ಟಿನಲ್ಲಿ ಇಷ್ಟೊಂದು ಒಳ್ಳೆಯ ಸಿನಿಮಾ ಮಾಡಬಹುದೆಂದು ಕಾಂತಾರ ಹೆಸರಿನ ಕನ್ನಡ ಚಿತ್ರದ ಮೂಲಕ ಜಗತ್ತು ಕಂಡುಕೊಂಡಿದೆ ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಈಗ ಕಾಂತಾರ ಸೃಷ್ಟಿಕರ್ತ, ಅಂದರೆ ನಿರ್ದೇಶಕರಾದ ರಿಷಬ್ ಶೆಟ್ಟಿ ಈ ಚಿತ್ರದ 'ಪ್ರೀಕ್ವೆಲ್' ಅಂದರೆ ಮೊದಲ ಭಾಗದ ಸಿನಿಮಾ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. 

ನಟಿ ತನಿಷಾ ಕುಪ್ಪಂಡ ಭರ್ಜರಿ ಪ್ರೊಜೆಕ್ಟ್‌ಗೆ ಸದ್ಯದಲ್ಲೇ ಚಾಲನೆ; ಏನದು ಹೊಸ ಬಿಸಿನೆಸ್?

ಕಾಂತಾರ ಪ್ರೀಕ್ವೆಲ್ ಸಿನಿಮಾದಲ್ಲಿ ಸೀಕ್ವೆಲ್‌ನಲ್ಲಿ ಅಂದರೆ ಕಾಂತಾರದಲ್ಲಿ ನಟಿಸಿದ್ದ ಸಪ್ತಮಿ ಗೌಡ ನಟಿಸುತ್ತಿಲ್ಲ. ಈ ಬಗ್ಗೆ ಸ್ವತಃ ಸಪ್ತಮಿ ಗೌಡ ಸಾಕಷ್ಟು ಕಡೆ ಹೇಳಿಕೊಂಡಿದ್ದಾರೆ. 'ನನ್ನ ಪಾತ್ರ ಕಾಂತಾರದಲ್ಲೇ ಕೊನೆಗೊಂಡಿದೆ. ಹೀಗಾಗಿ ಕಾಂತಾರ ಪ್ರೀಕ್ವೆಲ್‌ನಲ್ಲಿ ಸಹಜವಾಗಿಯೇ ಬೇರೆ ನಟಿಯ ಅಗತ್ಯವಿದೆ. ಹೀಗಾಗಿ ನಾನು ಅದರಲ್ಲಿ ನಟಿಸುತ್ತಿಲ್ಲ' ಎಂದಿದ್ದಾರೆ. ಅದೇನೇ ಇರಲಿ, 15 ಕೋಟಿ ರೂಪಾಯಿಯಲ್ಲಿ ನಿರ್ಮಿಸಲಾದ ಕಾಂತಾರ ಚಿತ್ರವು ಈಗ ಬರೋಬ್ಬರಿ 125 ಕೋಟಿ ರೂಪಾಯಿಗೆ ಡಿಜಿಟಲ್ ಹಕ್ಕುಗಳನ್ನು ಪಡೆದು ಎಲ್ಲರ ಅಚ್ಚರಿ ಹಾಗೂ ಸಂತೋಷಕ್ಕೆ ಕಾರಣವಾಗಿದೆ. 

click me!