
1971ರಲ್ಲಿ ದೊರೈ ಭಗವಾನ್ ನಿರ್ದೇಶನದ ಡಾ.ರಾಜ್‌ಕುಮಾರ್ ಅಭಿನಯದ 'ಕಸ್ತೂರಿ ನಿವಾಸ' ಸಿನಿಮಾ ಬಿಡುಗಡೆಯಾಗಿ ಐದು ದಶಕದ ಬಳಿಕ ಮತ್ತದೇ ಶೀರ್ಷಿಕೆ ಬಳಸಿ ಮತ್ತೊಂದು ಸಿನಿಮಾ ಮಾಡಲಾಗುತ್ತಿದೆ. ದಿನೇಶ್ ಬಾಬು ನಿರ್ದೇಶನದ ಚಿತ್ರಕ್ಕೆ ಈಗ ಸಂಕಷ್ಟ ಎದುರಾಗಿದೆ. ಪೋಸ್ಟರ್ ರಿಲೀಸ್ ಆದ ದಿನವೇ ಟೈಟಲ್ ಬದಲಾಯಿಸಬೇಕೆಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.
ರಚಿತಾ ರಾಮ್ ಡ್ರಗ್ಸ್ ಸೇವಿಸ್ತಾರಾ? ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ರಿಲೀಸ್ ದಿನವೇ ಟೈಟಲ್ ಬದಲು:
ದೊರೈ ಭಗವಾನ್ ನಿರ್ದೇಶನದಲ್ಲಿ ಮೂಡಿ ಬಂದ ಮಾಸ್ಟರ್ ಪೀಸ್ ಸಿನಿಮಾ 'ಕಸ್ತೂರಿ ನಿವಾಸ' ನಿರ್ಮಾಪಕರು ಕೆ.ಸಿ.ಎಸ್ ಚಂದ್ರು ಅವರು ಈ ಟೈಟಲ್ ಮತ್ತೆ ಬಳಸಬಹುದು ಎಂದು ಹೇಳಿದ್ದರಂತೆ. ಆದರೆ ಇದರ ಬಗ್ಗೆ ನಿರ್ದೇಶಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಡಾ.ರಾಜ್‌ಕುಮಾರ್ ಅಭಿಮಾನಿಗಳು ನಿರ್ದೇಶಕ ದಿನೇಶ್ ಬಾಬು ಅವರಿಗೆ ಟೈಟಲ್ ಬದಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಣ್ಣಾವ್ರ ಸಿನಿಮಾ ಆಗಿರುವ ಕಾರಣ ದಿನೇಶ್ ಕೆಲವು ದಿನಗಳಲ್ಲಿಯೇ ಟೈಟಲ್ ಬದಲಾಯಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.
ಆದರೆ ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ ರಾಜ್‌ಕುಮಾರ್, ಅವರ ಕಸ್ತೂರಿ ನಿವಾಸ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರಕಥೆ ಸಿದ್ಧವಾಗಿದ್ದು ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭಿಸಲು ತೀರ್ಮಾನಿಸಿದ್ದಾರೆ.
ದಿನೇಶ್ ಅವರಿಗೆ ಕಸ್ತೂರಿ ನಿವಾಸ ಶೀರ್ಷಿಕೆ ಬಳಸಿಕೊಳ್ಳಲು ಅನುಮತಿ ನೀಡಿದ್ದು ಯಾರು ಎಂದು ದೊರೈ ಭಗವಾನ್ ಪ್ರಶ್ನಿಸಿದ್ದಾರೆ. ಈ ವಿಚಾರದ ಬಗ್ಗೆ ಫಿಲಂ ಚೇಂಬರ್ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.