ಜೇಮ್ಸ್ ಹವಾ‌: ಮುಗ್ಧ ಮಕ್ಕಳ ಬಾಯಲ್ಲಿ ಅಪ್ಪು ಹಾಡು, ಕೈಯಲ್ಲಿ ಪೋಟೋ, ಕಣ್ಣೀರಿಟ್ಟ ಮಹಿಳೆಯರು

By Ramesh B  |  First Published Mar 17, 2022, 6:19 PM IST

* ಬಾಗಲಕೋಟೆಯಲ್ಲಿ ಜೇಮ್ಸ್ ಹವಾ
* ಗಭ೯ಗುಡಿಯ ಆಂಜನೇಯನ ಸನ್ನಿಧಾನದಲ್ಲಿ ಅಪ್ಪು ಪೋಟೋ ಇಟ್ಟು ಪೂಜೆ ಸಲ್ಲಿಸಿದ ಅಭಿಮಾನಿಗಳು
* ಅಪ್ಪು ಧ್ವನಿ ಇಲ್ಲದೆ ಇದ್ದ ಸಿನಿಮಾ ಅರಗಿಸಿಕೊಳ್ಳಲಾಗದೆ ಕಣ್ಣೀರು ಹಾಕುತ್ತಾ ಹೊರ ಬಂದ ಅಭಿಮಾನಿಗಳು


ವರದಿ: ಮಲ್ಲಿಕಾಜು೯ನ ಹೊಸಮನಿ, ಏಷ್ಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ.

ಬಾಗಲಕೋಟೆ, (ಮಾ.17): ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್  ಡಾಕ್ಟರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಮತ್ತೊಂದಡೆ ಪುನೀತ್ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್ ಸಹ ಬಿಡುಗಡೆಯಾಗಿದೆ.ಈ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳಿಗೆ ಇಂದು(ಗುರುವಾರ) ಡಬ್ಬಲ್ ಧಮಾಕ.

Tap to resize

Latest Videos

ಹೌದು...ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್, ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂಭ್ರಮ ಸಡಗರ ಹವಾ ಜೋರಾಗಿದೆ. ಇತ್ತ ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಒಂದೆಡೆ ಸಂತಸಕ್ಕೆ ಕಾರಣವಾದರೆ ಮತ್ತೊಂದೆಡೆ ಅಪ್ಪು ಅಭಿಮಾನಿಗಳು ತಮ್ಮ ಪ್ರೀತಿಯ ಅಪ್ಪು ಇಲ್ಲದ ಸಿನಿಮಾ ನೋಡಲಾಗದೆ ಕಣ್ಣೀರಿಟ್ಟ ಪ್ರಸಂಗವೂ ಸಹ ನಡೆದಿದೆ.

Puneeth Rajkumar: ಅಪ್ಪು ಹುಟ್ಟುಹಬ್ಬಕ್ಕೆ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ಹೌದು... ಪುನೀತರಾಜಕುಮಾರ ತಮ್ಮ ನಟನೆಯ ಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸಿದ ರೀತಿ ಇಂದು ಅವರನ್ನು ದೇವರ ಸ್ವರೂಪಿಯನ್ನಾಗಿಸೋ ಮಟ್ಟಕ್ಕೆ ತಂದು ನಿಲ್ಲಿಸಿದೆ. ಬಾಗಲಕೋಟೆ ನಗರದ ಶಕ್ತಿ ಚಿತ್ರಮಂದಿರ ಬಳಿ ಅಭಿಮಾನಿಗಳು ಬೃಹತ್ ಕಟೌಟ್ ನಿಲ್ಲಿಸಿ, ಹೂಗುಚ್ಚ ಹಾಕಿ, ಕೇಕ್ ಕಟ್ ಮಾಡಿ ಸಂಭ್ರಮಿಸಿದರು ಅಲ್ಲದೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಜೇಮ್ಸ್ ಚಿತ್ರಕ್ಕೆ ಶುಭ ಕೋರಿದರು.

ಅಪ್ಪು ಪೋಟೋಗೆ ವಿಶೇಷ ಪೂಜೆ..

ಬಾಗಲಕೋಟೆಯಲ್ಲಿ ಜೇಮ್ಸ್‌ ಚಿತ್ರ ಬಿಡುಗಡೆ ಮತ್ತು ಅಪ್ಪು ಹುಟ್ಟುಹಬ್ಬದ ನಿಮಿತ್ಯ ಅಭಿಮಾನಿಗಳು ಬೆಳ್ಳಂಬೆಳಿಗ್ಗೆ ಹೊಳೆ ಆಂಜನೇಯ ದೇಗುಲಕ್ಕೆ ಆಗಮಿಸಿದ್ರು. ಗಭ೯ಗುಡಿಯಲ್ಲಿ ಆಂಜನೇಯನ ಸನ್ನಿದಾನದಲ್ಲಿ ಅಪ್ಪು ಪೋಟೋ ಇರಿಸಿ ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. ಅತ್ತ ಅಚ೯ಕರು ಆರತಿ ಎತ್ತಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರೆ ಇತ್ತ ಅಭಿಮಾನಿಗಳು ಅಪ್ಪು ಅಮರ ರಹೇ, ಅಪ್ಪುಗೆ ಶುಭವಾಗಲಿ ಎಂದು ಘೋಷಗಳೊಂದಿಗೆ ಅಚ೯ನೆ ಸಲ್ಲಿಸಿದ್ದು ವಿಶೇವಾಗಿತ್ತು. ನಂತರ ಅಭಿಮಾನಿಗಳು ಪೋಟೋ ಹಿಡಿದು ದಾರಿಯುದ್ದಕ್ಕೂ ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಶಕ್ತಿ ಚಿತ್ರಮಂದಿರಕ್ಕೆ ಆಗಮಿಸಿದರು. ಅಲ್ಲಿ ಸಾವಿರಾರು ಜನ ಅಭಿಮಾನಿಗಳ ಕೇಕೆ ಮುಗಿಲು ಮುಟ್ಟಿತ್ತು.

ಮಕ್ಕಳ ಬಾಯಲ್ಲಿ ಅಪ್ಪು ಹಾಡು,  ಕೈಯಲ್ಲಿ ಅಪ್ಪು ಪೋಟೋ, ಕಣ್ಣೀರಿಟ್ಟ ಮಹಿಳೆಯರು

ಜೇಮ್ಸ್ ಚಿತ್ರದ ಮೊದಲ ಶೋ ಆರಂಭಕ್ಕೂ ಮುನ್ನ ಅಭಿಮಾನಿಗಳು ಅಪ್ಪು ಅವರ ಹುಟ್ಟು ಹಬ್ಬವನ್ನು ಅತ್ಯಂತ ಭಜ೯ರಿಯಾಗಿ ಆಚರಿಸಿದರು. ಇನ್ನು ವಿಶೇಷ ಅಂದ್ರೆ ಮಹಿಳೆಯರು ಮಕ್ಕಳಾದಿಯಾಗಿ ಎಲ್ಲರೂ ಚಿತ್ರಮಂದಿರಕ್ಕೆ ಮೊದಲ ಶೋ ನೋಡಲು ಕಾತರರಾಗಿದ್ದರು.‌ ಈ ಸಂದರ್ಭದಲ್ಲಿ ಮಕ್ಕಳು ಕೈಯಲ್ಲಿ ಅಪ್ಪು ಪೋಟೋ ಹಿಡಿದು, ಬೊಂಬೆ ಹೇಳುತೈತೆ ನೀನೆ ರಾಜಕುಮಾರ ಹಾಡುತ್ತಿದ್ದರೆ, ಇತ್ತ ಕೆಲವು ಮಹಿಳೆಯರು ಭಾವುಕರಾಗಿ ಕಣ್ಣೀರು ಹಾಕಿದರು. ಕೃಷ್ಣಾ ಎಂಬ ಪುಟ್ಟ ಬಾಲಕ ಹಾಡಿದ ಹಾಡು ಎಲ್ಲರನ್ನ ಮತ್ತಷ್ಟು ಭಾವುಕರನ್ನಾಗಿಸುವಂತೆ ಮಾಡಿತು. ಇನ್ನು ಪಲ್ಲವಿ ಪವಾರ್ ಅಪ್ಪು ಬಗ್ಗೆ ಹೇಳುತ್ತಲೇ ಕಣ್ಣೀರು ಹಾಕಿದರು. ಇನ್ನು  ಯುವಕರಂತೂ ಅಪ್ಪು ಧ್ವನಿ ಇಲ್ಲದ ಜೇಮ್ಸ್ ಚಿತ್ರ ನೋಡಲಾಗುತ್ತಿಲ್ಲ ಎಂದು ಕಣ್ಣೀರಾದರು. ಈ ಮದ್ಯೆ ದೇವರೇ ಇಲ್ಲ, ಈಗ ನಮ್ಮ ದೇವರು ಪುನೀತ್ ರಾಜಕುಮಾರ ಮಾತ್ರ ಅಂತ ಹೇಳಿದರು.

 ಅನ್ನಸಂತಪ೯ಣೆ,ಅಭಿಮಾನಿಗಳಿಂದ ರಕ್ತ ದಾನ...

ಇನ್ನು ಇಡೀ ದಿನ ಜೇಮ್ಸ್ ಚಿತ್ರ ನೋಡಲು ಬಂದವರಿಗೆ ಅನ್ನ ಸಂತಪ೯ಣೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಈ ಮಧ್ಯೆ ವಿದ್ಯಾಗಿರಿ, ನವನಗರ ಸೇರಿದಂತೆ ಪ್ರತಿಯೊಬ್ಬ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋನ ಹುಟ್ಟು ಹಬ್ಬಕ್ಕಾಗಿ ಒಂದಿಲ್ಲೊಂದು ವಿಶೇಷ ಕಾಯ೯ಕ್ರಮಗಳನ್ನು ಹಮ್ಮಿಕೊಂಡಿದ್ದು ಕಂಡು ಬಂತು.

click me!