ಸ್ಯಾಂಡಲ್‌ವುಡ್ (Sandalwood) ಪವರ್ ಸ್ಟಾರ್(Powerstar) ನಟ ಮಾತ್ರವಲ್ಲ, ಅದ್ಭುತ ಗಾಯಕರೂ ಆಗಿದ್ದರು. ಹಲವು ಸಿನಿಮಾಗಳಿಗೆ (Cinema)ಹಾಡಿದ್ದ ಅಪ್ಪು ನಟನೆಯ ಜೊತೆ ಹಾಡನ್ನೂ ಜನರು ಮೆಚ್ಚುತ್ತಿದ್ದರು. ಅದ್ಭುತ ಅರ್ಥಪೂರ್ಣ ಹಾಡುಗಳನ್ನು (Song)ಸ್ಯಾಂಡಲ್‌ವುಡ್‌ಗೆ ಕೊಟ್ಟ ಕೀರ್ತಿ ಪುನೀತ್‌ಗೆ ಸಲ್ಲುತ್ತದೆ. ತಂದೆಯಂತೆಯೇ ಸುಂದರವಾಗಿ ಹಾಡುತ್ತಿದ್ದರು ನಟ.
46 ವರ್ಷದಲ್ಲಿ ಹೃದಯಾಘಾತದಿಂದ(Heart attack) ಮೃತಪಟ್ಟ ನಟ ಪುನೀತ್ ರಾಜ್ ಕುಮಾರ್ ಬಾಲನಟನಾಗಿ(Child artist) ಚಿತ್ರರಂಗಕ್ಕೆ ಕಾಲಿಟ್ಟರು. ನಂತರದಲ್ಲಿ ಯುವನಟನಾಗಿ ಮಿಂಚಿ, ರೊಮ್ಯಾಂಟಿಕ್ ಹೀರೋ ಆಗಿ, ಆಕ್ಷನ್ ಹೀರೋ ಆಗಿ ಬೆಳ್ಳಿ ಪರದೆಯ ಮೇಲೆ ಕಮಾಲ್ ಮಾಡಿದ್ದರು.
undefined
Puneeth Rajkumar Death ನಮ್ಮನ್ನು ಅಗಲಿದ ಪ್ರೀತಿಯ ರಾಜಕುಮಾರ
ಹಲವು ಸಿನಿಮಾಗಳಲ್ಲಿ ಸುಂದರ ಹಾಡುಗಳಿಗೆ ಧ್ವನಿಯಾಗಿದ್ದ ಅಪ್ಪು ಅವರ ಹಾಡುಗಳು ಎಲ್ಲರಿಗೂ ಅಚ್ಚು ಮೆಚ್ಚು. ಅವರ ಧ್ವನಿಯೂ ರಾಜ್‌ಕುಮಾರ್ ಅವರಂತೆಯೇ ಅತ್ಯಂತ ಸುಂದರವಾಗಿತ್ತು. ಬಾಲ ಕಲಾವಿದನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟ ನಂತರ ಫೇಮಸ್ ನಟನಾಗಿ ಬೆಳೆದುಬಂದು, ಹಾಗೆಯೇ ಹಾಡುಗಾರನಾಗಿಯೂ ಗುರುತಿಸಿಕೊಂಡರು.
ಹಾಡುಗಾರನಾಗಿ ಪುನೀತ್:
ಪುನೀತ್, ಅವರ ತಂದೆಯಂತೆಯೇ, ವೃತ್ತಿಪರ ಗಾಯನದಲ್ಲಿಯೂ ಮಿಂಚಿದ ಕೆಲವೇ ಕೆಲವು ನಟರಲ್ಲಿ ಒಬ್ಬರು ಪುನೀತ್ ರಾಜ್ ಕುಮಾರ್. ಅವರು ಅಪ್ಪುವಿನಲ್ಲಿ ಒಬ್ಬರೇ ಹಾಡಿ ಸಿನಿಪ್ರಿಯರನ್ನು ನಿಬ್ಬೆರಗಾಗಿಸಿದ್ದರು. ವಂಶಿಯವರ 'ಜೊತೆ ಜೊತೆಯಲಿ' ಯುಗಳ ಗೀತೆಯನ್ನು ಹಾಡಿದರು. ಅವರು ಜಾಕಿಯಲ್ಲಿ ಸ್ಪೀಡ್ ಸಾಂಗ್ ಹಾಡಿದರು.
Puneeth Rajkumar death ಸ್ಯಾಂಡಲ್‌ವುಡ್ ಪವರ್ ಸ್ಟಾರ್ ನಿಧನಕ್ಕೆ ಗಣ್ಯರ ಸಂತಾಪ
ಶಿವರಾಜ್ ಕುಮಾರ್ ಅವರ ಲವ ಕುಶ ಮತ್ತು ಮೈಲಾರಿ ಚಿತ್ರಗಳಲ್ಲಿ ಹಾಡಿದ್ದರು. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಅಕಿರಾ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರು 'ಕಣ್ಣ ಸಣ್ಣೆ ಇಂದಲೇನೆ' ಹಾಡನ್ನು ಹಾಡಿದ್ದಾರೆ. ಅವರ ಹೋಮ್-ಪ್ರೊಡಕ್ಷನ್ಸ್ ಹೊರತುಪಡಿಸಿ ಇತರ ಹಾಡುಗಳಿಗೆ ಅವರ ಸಂಭಾವನೆಯನ್ನು ಚಾರಿಟಿಗೆ ನೀಡಲಾಗುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಸ್ಯಾಂಡಲ್‌ವುಡ್(Sandalwood) ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ(Death). 46 ವರ್ಷದ ನಟ ತಮ್ಮ ಮನೆಯಲ್ಲಿ ಜಿಮ್(Gym) ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲಿಸಿ ಚಿಕಿತ್ಸೆ(Treatment) ನೀಡಲಾಗುತ್ತಿತ್ತು.
ಮನೆಯಲ್ಲಿಯೇ ನಟ ಜಿಮ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ. ನಟನನ್ನು ಆಪ್ತರು ಬೆಂಗಳೂರಿನ(bengaluru) ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದರು. ನಟ ಶಿವರಾಜ್ ಕುಮಾರ್ ಅವರು ಭಜರಂಗಿ 2(Bhajarangi 2) ಸಿನಿಮಾ ರಿಲೀಸ್ ಹಿನ್ನೆಲೆ ಥಿಯೇಟರ್‌ನಲ್ಲಿದ್ದರು. ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಬಾಲನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಪುನೀತ್:
ಪುನೀತ್ ಅವರ ಮೂಲ ಹೆಸರು ಆಗ ಲೋಹಿತ್ ಎಂದಾಗಿತ್ತು. ಚೆನ್ನೈನಲ್ಲಿ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್‌ಗೆ ಜನಿಸಿದ ಪುನೀತ್ ಐದನೇ ಮಗು. ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಅವರ ತಂದೆ ನಟನನ್ನು ಮತ್ತು ಅವನ ಸಹೋದರಿ ಪೂರ್ಣಿಮಾ ಅವರನ್ನು ಹತ್ತು ವರ್ಷ ವಯಸ್ಸಿರುವಾಗಲೇ ಅವರ ಚಲನಚಿತ್ರ ಸೆಟ್‌ಗಳಿಗೆ ಕರೆತರುತ್ತಿದ್ದರು. ಅವರ ಹಿರಿಯ ಸಹೋದರ ಶಿವ ರಾಜ್‌ಕುಮಾರ್ ಜನಪ್ರಿಯ ನಟ.
ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಸೇರಿದಂತೆ ಬಹಳಷ್ಟು ಗಣ್ಯರು ಆಸ್ಪತ್ರೆಗೆ ಆಗಮಿಸಿದ್ದಾರೆ. ಬಹಳಷ್ಟು ಜನ ಅಭಿಮಾನಿಗಳು ನಟ ದಾಖಲಾಗಿದ್ದ ಆಸ್ಪತ್ರೆ ಬಳಿ ಸೇರಿದ್ದರು. ನಟನಿಗೆ ಗುರುವಾರ ರಾತ್ರಿಯೇ ಸುಸ್ತು ಇತ್ತು ಎನ್ನಲಾಗಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ನಟನನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ನಂತರ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.