ಪತ್ನಿ ಆಶ್ವಿನಿ ಅವರನ್ನು ಭೇಟಿಯಾದ ಕ್ಷಣದ ಬಗ್ಗೆ ಹಂಚಿಕೊಂಡ Puneeth Rajkumar!

Suvarna News   | Asianet News
Published : Oct 29, 2021, 04:08 PM ISTUpdated : Oct 31, 2021, 08:40 AM IST
ಪತ್ನಿ ಆಶ್ವಿನಿ ಅವರನ್ನು ಭೇಟಿಯಾದ ಕ್ಷಣದ ಬಗ್ಗೆ ಹಂಚಿಕೊಂಡ Puneeth Rajkumar!

ಸಾರಾಂಶ

ನಟಸಾರ್ವಭೌಮ ಸಿನಿಮಾ ಯಶಸ್ಸಿನ ಸಮಯದಲ್ಲಿ ಅಪ್ಪು ತಮ್ಮ ಬಾಳ ಸಂಗಾತಿಯನ್ನು ಭೇಟಿ ಮಾಡಿದ ಕ್ಷಣದ ಬಗ್ಗೆ ಹಂಚಿಕೊಂಡಿದ್ದರು. 

ಕನ್ನಡ ಚಿತ್ರರಂಗದ ಜಾಕಿ, ಹುಡುಗಿಯರ ಮನಸ್ಸು ಕದ್ದ ರಾಮ್ ಇನ್ನಿಲ್ಲ ಎಂದು ಈಗಲೂ ಅಭಿಮಾನಿಗಳಿಗೆ, ಕನ್ನಡ ಚಿತ್ರರಂಗದ ಆಪ್ತರಿಗೆ ಮತ್ತು ಕುಟುಂಬಸ್ತರಿಗೆ ಸಿಹಿಸಿಕೊಳ್ಳಲಾಗುತ್ತಿಲ್ಲ. ವೃತ್ತಿ ಜೀವನದಲ್ಲಿ ಎಷ್ಟೇ ಬ್ಯುಸಿಯಾಗಿರಲಿ, ಫ್ಯಾಮಿಲಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಫ್ಯಾಮಿಲಿ ಮುಖ್ಯ ಎಂದು ಸದಾ ಹೇಳುತ್ತಿದ್ದ ಪುನೀತ್ ರಾಜ್‌ಕುಮಾರ್ 2019ರಲ್ಲಿ ತಮ್ಮ ನಟಸಾರ್ವಭೌಮ ಸಿನಿಮಾ ಯಶಸ್ಸಿನ ಕಾರ್ಯಕ್ರಮದಲ್ಲಿ ಸಹೋದರರ ಬಗ್ಗೆ ಮತ್ತು ಪತ್ನಿ ಬಗ್ಗೆ ಮಾತನಾಡಿದ್ದರು.  

"

ಬಾಲ ಕಲಾವಿದನಾಗಿ ವೃತ್ತಿ ಆರಂಭಿಸಿದ ಪುನೀತ್ ತಂದೆ ಡಾ.ರಾಜ್‌ಕುಮಾರ್ ಅವರ ಜೊತೆ ಸಿನಿಮಾ ಚಿತ್ರೀಕರಣಕ್ಕೆ ಹೋಗುತ್ತಿದ್ದರು. ಅವರ ಜೊತೆಯೇ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರಿಗೂ ಮುನ್ನವೇ ಚಿತ್ರರಂಗಕ್ಕೆ ಕಾಲಿಟ್ಟ ಅಪ್ಪು ಈಗಲೂ ಸಿನಿಮಾ ವಿಚಾರದಲ್ಲಿ ಸಹೋದರರ ಸಲಹೆ ತೆಗೆದುಕೊಳ್ಳುತ್ತಿದ್ದರು. 'Dont try to live in your charater,enact it' ಎಂದು ಅಮೆರಿಕನ್ ಸಿನಿಮಾ ನಿರ್ದೇಶಕ ರಾಬರ್ಟ್‌ ಡಿ ನೋರ್ ಹೇಳುವ ಮಾತುಗಳನ್ನು ಪುನೀತ್ ಆಗಾಗ ಹೇಳುತ್ತಲೇ ಇದ್ದರು. 'ಕೆಲವೊಂದು ದೃಶ್ಯಗಳಲ್ಲಿ ನಾವು ಒಬ್ಬರನ್ನು ಕೊಲೆ ಮಾಡಬೇಕಾಗುತ್ತದೆ. ಅದಕ್ಕೆಲ್ಲಾ ನಾವು ಅಭ್ಯಾಸ ಮಾಡಲಾಗುವುದಿಲ್ಲ. ಬದಲಿಗೆ ಆ ಸ್ಥಾನದಲ್ಲಿದ್ದು ಆ ಪಾತ್ರಕ್ಕೆ ಜೀವ ತುಂಬಬೇಕು,' ಎನ್ನುವುದು ಅಪ್ಪುವಿನ ಅಭಿಪ್ರಾಯವಾಗಿತ್ತು.

ಇನ್ನೂ ಕಾರ್ಯಕ್ರಮದ ಕೊನೆಯಲ್ಲಿ ಪುನೀತ್ ಲವ್‌ ಸ್ಟೋರಿ ಬಗ್ಗೆ ಕೇಳಿದಾಗ 'ನಮ್ಮದೊಂದು ಕೂಲ್ ಫ್ಯಾಮಿಲಿ, ನಾವೆಲ್ಲರೂ ಕಾಮನ್ ಮ್ಯಾನ್ ಲೈಫ್ ಲೀಡ್‌ ಮಾಡ್ತೀವಿ. ಬಾಲ್ಯದಿಂದಲೂ ನಾನು ಸೆಟ್‌‌ಗೆ ಹೋಗುತ್ತಿದ್ದೆ. ಜನರ ಜೊತೆ ಹೆಚ್ಚಾಗಿ ಬೆರೆಯುತ್ತಿದ್ದೆ. ಒಬ್ಬ ಕಾಮನ್ ಸ್ನೇಹಿತನಿಂದ ನನಗೆ 1996ರಲ್ಲಿ ಅಶ್ವಿನಿ ಪರಿಚಯವಾಗಿತ್ತು. 8 ತಿಂಗಳ ಸ್ನೇಹದ ನಂತರ ನಾನು ಮೊದಲು ಪ್ರಪೋಸ್ ಮಾಡಿದೆ. ತಕ್ಷಣವೇ ಅವರು ಒಪ್ಪಿಕೊಂಡರು. ಅಲ್ಲಿಂದ ನಮ್ಮ ಪ್ರೀತಿ ಶುರುವಾಯಿತು,' ಎಂದಿದ್ದಾರೆ.

Puneeth Rajkumar Death:ಪುನೀತ್ ರಾಜ್‌ಕುಮಾರ್ ಬೆಸ್ಟ್‌ ನಟ ಪ್ರಶಸ್ತಿ ಪಡೆದ ಚಿತ್ರಗಳಿವು!

ಪುನೀತ್ ರಾಜ್‌ಕುಮಾರ್ ಅಪ್ಪು ಸಿನಿಮಾ ನಂತರ ಅಶ್ವಿನಿ ಅವರನ್ನು ಭೇಟಿ ಮಾಡಿದ್ದು. ಅಪ್ಪು ಸದಾ ಫೋನಿನಲ್ಲಿ ಇರುವುದನ್ನು ನೋಡಿ ಡಾ.ರಾಜ್‌ಕುಮಾರ್ ಅವರು ಪಾರ್ವತಮ್ಮ ಅವರನ್ನು ಕರೆದು, ನೋಡು ನಿನ್ನ ಮಗ ಹೆಚ್ಚಿನ ಸಮಯ ಪೋನಿನಲ್ಲಿಯೇ ಕಳೆಯುತ್ತಿದ್ದಾನೆ ಎಂದರಂತೆ. ಶಿವರಾಜ್‌ಕುಮಾರ್ ಕೂಡ ಅಪ್ಪು ಪ್ರೀತಿ ಬಗ್ಗೆ ಪೋಷಕರ ಜೊತೆ ಮಾತನಾಡಿದ್ದರಂತೆ. ಹಾಗೂ ಮದುವೆ ಮಾಡಲು ಶಿಫಾರಸು ಮಾಡಿದ್ದರಂತೆ. ಹೀಗಾಗಿ ಒಂದು ದಿನ ಪುನೀತ್ ಫೋನ್ಿನಲ್ಲಿ ಅಶ್ವಿನಿ ಜೊತೆ ಮಾತನಾಡಿಕೊಳ್ಳುತ್ತಲೇ ಎದುರು ಕುಳಿತಿದ್ದ ಅಣ್ಣಾವ್ರಿಗೆ ಪೋನ್ ಕೊಡುತ್ತಾರಂತೆ. 'ಅಪ್ಪಾಜಿ ಫೋನ್‌ನಲ್ಲಿರುವುದು ನನ್ನ ಸ್ನೇಹಿತೆ ಅಶ್ವಿನಿ ಅಂತ. ನಾನು ಆಕೆಯನ್ನು ಪ್ರೀತಿಸುತ್ತಿರುವೆ. ಆಕೆಯನ್ನೇ ಮದುವೆ ಆಗುತ್ತೀನಿ. ನಿಮಗೆ ವಿಶ್ ಮಾಡಬೇಕಂತೆ,' ಅಂತ ಹೇಳಿ ಅಣ್ಣಾವ್ರ ಕೈಗೆ ಪೋನ್ ಕೊಟ್ಟರಂತೆ. ಪೋನ್‌ನಲ್ಲಿ ಸಹಜವಾಗಿಯೇ ಮಾತನಾಡುವ ರಾಜ್‌, ಇವರಿಬ್ಬರ ಮದುವೆಗೆ ಒಪ್ಪಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಸಿದರಂತೆ. ಸ್ವತಃ ಪುನೀತ್ ಅವರೇ ಈ ವಿಚಾರವನ್ನು ಹಂಚಿಕೊಂಡಿದ್ದರು.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?