ಈ ವರ್ಷ ಥಿಯೇಟರ್‌ನಲ್ಲಿ ಹೊಸ ಸಿನಿಮಾ ನೋಡೋ ಭಾಗ್ಯ ಇಲ್ಲ..!

Suvarna News   | Asianet News
Published : Sep 30, 2020, 09:35 AM ISTUpdated : Sep 30, 2020, 02:37 PM IST
ಈ ವರ್ಷ ಥಿಯೇಟರ್‌ನಲ್ಲಿ ಹೊಸ ಸಿನಿಮಾ ನೋಡೋ ಭಾಗ್ಯ ಇಲ್ಲ..!

ಸಾರಾಂಶ

ಚಿತ್ರಮಂದಿರಗಳು ತೆರೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆಯಾದರೂ ಚಿತ್ರರಂಗ ಚೇತರಿಸಿಕೊಳ್ಳುವ ಸಾಧ್ಯತೆಯಂತೂ ಕಾಣುತ್ತಿಲ್ಲ. ಯಾಕೆಂದರೆ ಥೇಟರ್‌ ತೆರೆದರೂ ರಿಲೀಸ್‌ ಮಾಡುವುದಕ್ಕೆ ಸಿನಿಮಾಗಳು ರೆಡಿ ಇಲ್ಲ. ಥೇಟರಲ್ಲಿ ಕುಳಿತು ಹೊಸ ಸಿನಿಮಾ ನೋಡುವ ಹರ್ಷ ಈ ವರ್ಷವಂತೂ ಇಲ್ಲವೇ ಇಲ್ಲ.

ಹೆಂಗಿದೀರಿ ಸ್ವಾಮಿ ಎಂದು ಕೇಳಿದರೆ ನಿರ್ಮಾಪಕರು ಆಕಾಶದತ್ತ ಕೈ ತೋರಿಸುತ್ತಿದ್ದಾರೆ. ಪ್ರದರ್ಶಕರು, ವಿತರಕರು ದಾರಿ ಕಾಣದೆ ಆತಂಕಗೊಂಡಿದ್ದಾರೆ. ಅಕ್ಟೋಬರ್‌ ತಿಂಗಳಿಂದ ಅನ್‌ಲಾಕ್‌ 5.0 ನಡೆಯಲಿದೆ.

ಚಿತ್ರಮಂದಿರಗಳು ತೆರೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆಯಾದರೂ ಚಿತ್ರರಂಗ ಚೇತರಿಸಿಕೊಳ್ಳುವ ಸಾಧ್ಯತೆಯಂತೂ ಕಾಣುತ್ತಿಲ್ಲ. ಯಾಕೆಂದರೆ ಥೇಟರ್‌ ತೆರೆದರೂ ರಿಲೀಸ್‌ ಮಾಡುವುದಕ್ಕೆ ಸಿನಿಮಾಗಳು ರೆಡಿ ಇಲ್ಲ. ಥೇಟರಲ್ಲಿ ಕುಳಿತು ಹೊಸ ಸಿನಿಮಾ ನೋಡುವ ಹರ್ಷ ಈ ವರ್ಷವಂತೂ ಇಲ್ಲವೇ ಇಲ್ಲ.

ಪತ್ರಕರ್ತೆಯಾಗಿ ತೆರೆ ಮೇಲೆ ಬರ್ತಿದ್ದಾರೆ ಕೃಷಿ ತಾಪಂಡ..! ಕಿಶೋರ್‌ ಪೊಲೀಸ್‌ ಪಾತ್ರದಲ್ಲಿ

ಚಿತ್ರರಂಗದ ಘಟಾನುಘಟಿ ನಿರ್ಮಾಪಕರನ್ನು ಮಾತನಾಡಿಸಿದಾಗ ಸಿಕ್ಕ ವಿಚಾರಗಳನ್ನು ಹಂಗ್ಹಂಗೇ ಸಿನಿಮಾ ಪ್ರೇಮಿಗಳ ಮುಂದಿಡುತ್ತಿದ್ದೇವೆ. ಸಹೃದಯ ಕನ್ನಡ ಸಿನಿಮಾ ಪ್ರೇಕ್ಷಕರು ಇನ್ನೂ ಎರಡು ಮೂರು ತಿಂಗಳು ಓಟಿಟಿಗೆ ಶರಣಾಗದೆ ಬೇರೆ ದಾರಿಯಿಲ್ಲ.

ಸರ್ಕಾರ ಚಿತ್ರಮಂದಿರ ತೆರೆಯಲು ಅನುಮತಿ ಕೊಟ್ಟರೂ ಚಿತ್ರಮಂದಿರಗಳ ಬಾಗಿಲು ತೆರೆಯಲು ಕನಿಷ್ಟ25 ದಿನ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಹಾಗಾಗಿ ಅಕ್ಟೋಬರಲ್ಲಿ ಚಿತ್ರಮಂದಿರ ತೆರೆಯುವುದು ಕಷ್ಟವೇ.

ಒಂದು ವೇಳೆ ಸರ್ಕಾರ ಶೇ.50ರಷ್ಟುಮಂದಿ ಮಾತ್ರ ಚಿತ್ರಮಂದಿರಗಳಿಗೆ ಬರಬೇಕು ಎನ್ನುವ ಷರತ್ತು ವಿಧಿಸಿದರೆ ಯಾವ ನಿರ್ಮಾಪಕ ಕೂಡ ಚಿತ್ರ ಬಿಡುಗಡೆ ಮಾಡುವ ಧೈರ್ಯ ಮಾಡಲ್ಲ.

ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗದೇ ಇದ್ದರೆ ಚಿತ್ರಮಂದಿಗಳು ಉಳಿಯುವುದು, ಬೆಳೆಯುವುದು ಕಷ್ಟವಿದೆ. ಆದರೆ ದುರದೃಷ್ಟವಶಾತ್‌ ಸದ್ಯಕ್ಕಂತೂ ಯಾವ ಸ್ಟಾರ್‌ ಸಿನಿಮಾಗಳೂ ಬಿಡುಗಡೆಗೆ ರೆಡಿ ಇಲ್ಲ.

ಭೀಮಸೇನ ನಳಮಹಾರಾಜ ಓಟಿಟಿಯಲ್ಲಿ ರಿಲೀಸ್‌

ಕೆಜಿಎಫ್‌ 2, ಯುವರತ್ನ, ಪೊಗರು, ಗಾಳಿಪಟ-2, ಸಖತ್‌, ಅವತಾರಪುರುಷ ಚಿತ್ರಗಳು ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಭಜರಂಗಿ 2, ಕೋಟಿಗೊಬ್ಬ 3, ರಾಬರ್ಟ್‌, ಸಲಗ, ಇನ್ಸ್‌ಪೆಕ್ಟರ್‌ ವಿಕ್ರಮ್‌ ಚಿತ್ರಗಳೆಲ್ಲೂ ಚಿತ್ರೀಕರಣ ಮುಗಿಸಿದ್ದರೂ ತಕ್ಷಣ ಬಿಡುಗಡೆಯಾಗುವ ಸಾಧ್ಯವೇ ಇಲ್ಲವೇ ಇಲ್ಲ.

ಹಾಗೊಂದು ವೇಳೆ ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆಯುವುದೇ ಆದರೆ ಕನ್ನಡದ ಹಳೆಯ ಕ್ಲಾಸಿಕ್‌ ಚಿತ್ರಗಳ ಮರು ಬಿಡುಗಡೆ ಆಗಬಹುದು. ಬಂಗಾರದ ಮನುಷ್ಯ, ಕಸ್ತೂರಿ ನಿವಾಸ, ನಾಗರಹಾವು, ಓಂ ಮುಂತಾದ ಚಿತ್ರಗಳು ಮರುಬಿಡುಗಡೆ ಆಗಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!