Bigg Bossಗೆ ಕರೆದ್ರೂ ಹೋಗಲ್ಲಪ್ಪಾ: 'ಪ್ರೇಮದ ಊರಲಿ' ನಟಿ ರಾಮಿಕಾ ಶಿವು ಏನ್​ ಕಾರಣ ಕೊಟ್ರು ಕೇಳಿ

Published : Oct 06, 2026, 05:03 PM IST
Ramika Shivu

ಸಾರಾಂಶ

ರಕ್ತಪಾತವಿಲ್ಲದೆ ಯಶಸ್ಸು ಕಂಡ 'ಪ್ರೇಮದ ಊರಲಿ' ಸಿನಿಮಾದ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ವೇಳೆ ಚಿತ್ರದ ನಟಿ ರಾಮಿಕಾ ಶಿವು ತಮಗೆ ಬಿಗ್‌ಬಾಸ್ ಆಫರ್ ಬಂದರೆ ಖಂಡಿತಾ ಹೋಗುವುದಿಲ್ಲ ಎಂದು ಹೇಳಿದ್ದಾರೆ. ತಮ್ಮ ಕೋಪದ ಸ್ವಭಾವದಿಂದಾಗಿ ಅಲ್ಲಿನ ಕಿರಿಕಿರಿ ಸಹಿಸಿಕೊಳ್ಳಲಾಗದೆ ಹೊರಬರಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: 'ಪ್ರೇಮದ ಊರಲಿ' ಸಿನಿಮಾ ಸಕತ್​ ಹವಾ ಸೃಷ್ಟಿಸುತ್ತಿದೆ. ಅತ್ಯಂತ ಕಡಿಮೆ ಬಜೆಟ್​ನ ಚಿತ್ರವೊಂದು ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಹೇಗೆ ಜನರ ಮನಸ್ಸನ್ನು ಕದಿಯಬಹುದು, ಹೇಗೆ ನವೀರಾದ ಕಥೆಯೊಂದು, ರಕ್ತಪಾತ, ಲಾಂಗು, ಮಚ್ಚು ಇಲ್ಲದೇ ಥಿಯೇಟರ್​ನಲ್ಲಿ ಅಬ್ಬರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಪ್ರೇಮದ ಊರಲಿ. ಈಗಿನ ಯುವ ಪೀಳಿಗೆ ಬಯಸೋದು ಅಶ್ಲೀಲತೆ, ಲಾಂಗು, ಮಚ್ಚು, ಹೀರೋ ಕೈಯಲ್ಲಿ ರಕ್ತಪಾತ, ನಿಮಿಷಕ್ಕೊಂದು ಕೊಲೆ... ಎನ್ನುತ್ತಲೇ ಅದೇ ರೀತಿ ನಾಯಕನ ಕೈಯಲ್ಲಿ ಕೊಲೆ ಮಾಡಿಸುವುದು ಕೆಲ ವರ್ಷಗಳ ಟ್ರೆಂಡ್​ ಆಗಿದೆ. ಆದರೆ, ಅಂಥ ಕೆಲವು ಸಿನಿಮಾಗಳು ತೋಪೆದ್ದು ಹೋಗಿದ್ದು, ಯಾವ ರೀತಿಯ ಸಿನಿಮಾಗಳನ್ನು ಜನರು ಇಷ್ಟಪಡುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ ಪ್ರೇಮದ ಊರಲಿ, ಹನುಮಾನ್​ ಅಂಶ್​ನಂಥ ಕಡಿಮೆ ಬಜೆಟ್​ ಚಿತ್ರಗಳು.

ಸಿನಿಮಾ ತಾರೆಯರಿಗೆ ಬೇಡಿಕೆ

ಇದೀಗ ಪ್ರೇಮದ ಊರಲಿ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ ಇದರ ಕಲಾವಿದರು. ವಿವಿಧ ಮಾಧ್ಯಮಗಳಲ್ಲಿ ಇವರಿಗೆ ಸಕತ್​ ಬೇಡಿಕೆ ಬರುತ್ತಿದೆ. ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿ ಸಿಕ್ಕರೂ ಬಿಗ್​ಬಾಸ್​​ಗೆ ಕರೆ ಬಂದರೆ ಹೋಗುತ್ತೀರಾ ಎನ್ನುವ ಪ್ರಶ್ನೆ ಎದುರಾಗುವುದು ಇದೆ. ಅಷ್ಟಕ್ಕೂ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತ ಸೆಲೆಬ್ರಿಟಿಗಳು ಬಿಗ್​ಬಾಸ್​ ಒಪ್ಪಿಕೊಳ್ಳುತ್ತಿಲ್ಲ ಎನ್ನುವುದು ವಿವಿಧ ಭಾಷೆಗಳ ಬಿಗ್​ಬಾಸ್​ ಸೀಸನ್​ ಆರಂಭವಾದಾಗಲೆಲ್ಲ ಅವರೇ ಹೇಳುವುದು ಇದೆ. ಬಿಗ್​ಬಾಸ್​ಗೆ ಹೋದರೆ ತಮ್ಮ ಲೈಫ್​ ಏನಾಗಬಲ್ಲುದು ಎನ್ನುವ ಬಗ್ಗೆ ಮಾತನಾಡುವ ಅವರು, ಇರುವ ಮರ್ಯಾದೆ, ಗೌರವ ಕಳೆದುಕೊಳ್ಳಲು ತಾವು ಈ ಷೋಗೆ ಹೋಗುವುದಿಲ್ಲ ಎಂದು ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಸೆಲೆಬ್ರಿಟಿಗಳು ಹೇಳಿದ್ದಿದೆ.

ಪ್ರೇಮದ ಊರಲಿ ವಸಂತಾ ಹೇಳಿದ್ದೇನು?

ಇದೀಗ ಇದೇ ಪ್ರಶ್ನೆ ಪ್ರೇಮದ ಊರಲಿ ಸಿನಿಮಾದ ವಸಂತಾ ಪಾತ್ರಧಾರಿ ರಾಮಿಕಾ ಶಿವು ಅವರಿಗೂ ಎದುರಾಗಿದೆ. ಅದಕ್ಕೆ ಅವರು ಕೊಟ್ಟಿರುವ ಉತ್ತರ ಸ್ವಲ್ಪ ಡಿಫರೆಂಟ್​ ಆಗಿದೆ. ನಾನು ಖಂಡಿತ ಬಿಗ್​ಬಾಸ್​ಗೆ ಹೋಗುವುದಿಲ್ಲ. ಆಫರ್​ ಕೊಟ್ಟರೂ ಹೋಗುವುದಿಲ್ಲ. ಹಾಗೊಂದು ವೇಳೆ ನಾನು ಹೋದರೂ ಅವರೇ ಹೊರಗೆ ಹಾಕುತ್ತಾರೆ ಎನ್ನುವ ಮೂಲಕ, ತಾವು ಏಕೆ ಬಿಗ್​ಬಾಸ್​ಗೆ ಹೋಗುವುದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ.

ನನಗೆ ಸಿಟ್ಟು ಸ್ವಲ್ಪ ಹೆಚ್ಚು. ಅಲ್ಲಿರುವ ವಿಭಿನ್ನ ಕ್ಯಾರೆಕ್ಟರ್​ ಜನರ ಜೊತೆಗೆ ದಿನಪೂರ್ತಿ ಗಲಾಟೆ, ಕಿರುಚಾಟ ಮಾಡುತ್ತಾ ಇರುವುದು ನನಗೆ ಕಿರಿಕಿರಿಯಾಗುತ್ತದೆ. ಸಹಿಸಿಕೊಳ್ಳುವಷ್ಟು ಸಹಿಸಿಕೊಳ್ತೇನೆ. ಆಮೇಲೆ ಅಲ್ಲಿ ಕ್ಯಾಮೆರಾ ಇದೆ ಎನ್ನೋದನ್ನೂ ಮರೆತು ರೇಗಾಡುತ್ತೇನೆ. ಅದಕ್ಕಾಗಿ ಅಂಥ ಷೋ ನನಗೆ ಆಗಿ ಬರುವುದಿಲ್ಲ. ಒಂದು ವೇಳೆ ಹೋದರೂ ಹೊರಕ್ಕೆ ಹಾಕ್ತಾರೆ ಎಂದು ರಮಿಕಾ ಹೇಳಿದ್ದಾರೆ. ಅದಕ್ಕೆ ಹಲವರು ಈ ಷೋಗೆ ಬೇಕಿರುವುದು ನಿಮ್ಮಂಥವರೇ, ಸೈಲೆಂಟ್​ ಆಗಿರೋರು ಅಲ್ಲ. ಕಿರುಚಾಡಿದ್ರೆ ಕೊನೆತನಕ ಉಳಿಯುತ್ತೀರಿ ಎಂದು ತಮಾಷೆಯಾಗಿ ನಟಿಯ ಕಾಲೆಳೆಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರೆಬೆಲ್ ಸ್ಟಾರ್ ಅಂಬರೀಶ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಕೊಡಿ: ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಪತ್ರ!
3.5 ಕೋಟಿ ಬಜೆಟ್‌ನಿಂದ 13 ಕೋಟಿ+: ‘ಪ್ರೇಮದ ಊರಲಿ’ ಸಕ್ಸಸ್ ನೋಡಿ ರಿಷಬ್ ಶೆಟ್ಟಿ ಹೇಳಿದ್ದೇನು?