ದುರ್ಯೋಧನ ಪಾತ್ರವೇ ದರ್ಶನ್ ಅಹಂಕಾರಕ್ಕೆ ಕಾರಣ ಎಂದ ಹಳ್ಳಿ ಜನ?; ಸರ್ಪ ತಿಲಕದಿಂದ ತಪ್ಪದ ಸಂಕಷ್ಟ!

By Suvarna News  |  First Published Aug 31, 2024, 1:19 PM IST

ಹಳ್ಳಿ ಕಡೆ ನಾಟಕ ಮಾಡುವ ಜನರು ದರ್ಶನ್ ಸಂಕಷ್ಟಕ್ಕೆ ಕಾರಣ ಏನೆಂದು ಹುಡುಕಿದರೆ? ದುರ್ಯೋಧನನ ಪಾತ್ರ ಮಾಡಿದವರಿಗೆ ಈ ಸಮಸ್ಯೆ?
 


ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟ ದರ್ಶನ್ ಸೇರಿದಂತೆ 17 ಮಂದಿ ಪರಪ್ಪನ ಅಗ್ರಹಾರ ಸೇರಿದರು. ಒಂದು ಕೈಯಲ್ಲಿ ಮಗ ಒಂದು ಕೈಯಲ್ಲಿ ಸಿಗರೇಟ್ ಹಿಡಿದು ಕುಳಿತಿರುವ ದರ್ಶನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಒತ್ತಾಯದಿಂದ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಇದೇ ಸಮಯದಲ್ಲಿ ದರ್ಶನ್ ನಟನೆಯ ಕರಿಯಾ ಮತ್ತು ಶಾಸ್ತ್ರಿ ಸಿನಿಮಾವನ್ನು ರೀ-ರಿಲೀಸ್ ಮಾಡುತ್ತಿದ್ದಾರೆ. ಅಭಿಮಾನಿಗಳ ಹುಚ್ಚಾಟದ್ದಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕಿರಿಕಿರಿಗಳು ಆಗಿ ಪೊಲೀಸರು ಎಂಟ್ರಿ ಕೊಡುವ ಪರಿಸ್ಥಿತಿ ಎದುರಾಗಿತ್ತು. ಈಗ ಯಾಕೆ ದರ್ಶನ್ ಪದೇ ಪದೇ ಟಾರ್ಗೆಟ್ ಆಗುತ್ತಿದ್ದಾರೆ ಎಂದು ಹಳ್ಳಿ ಕಡೆ ನಾಟಕ ಮಾಡುವ ಮಂದಿ ವಿವರಿಸಿದ್ದಾರೆ.

ಸಾಮಾನ್ಯವಾಗಿ ಪ್ರತಿಯೊಬ್ಬ ಕಲಾವಿದರಿಗೂ ಪೌರಾಣಿಕ ಕಥೆಗಳಲ್ಲಿ ನಟಿಸಬೇಕು ಅನ್ನೋ ಆಸೆ ಇರುತ್ತದೆ. ಈ ಪಾತ್ರದಲ್ಲಿ ಸಾಕಷ್ಟು ರೀತಿಯಲ್ಲಿ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ...ಪಾತ್ರಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಪುಸ್ತಕಗಳನ್ನು ಓದುತ್ತಾರೆ, ಧ್ಯಾನ ಮಾಡುತ್ತಾರೆ ಹಾಗೂ ಮಾಂಸಾ ಸೇವಿಸುವುದನ್ನು ಬಿಡುತ್ತಾರೆ. ಹಳ್ಳಿಗಳಲ್ಲಿ ಈ ಪಾತ್ರವನ್ನು ನಟಿಸಲು ರಂಗಭೂಮಿ ಕಲಾವಿದರನ್ನು ಕರೆಸುವುದಿಲ್ಲ ಹಳ್ಳಿಗಳಲ್ಲಿ ಇರುವ ಪ್ರತಿಭೆಗಳನ್ನು ಹುಡುಕಿ ಅವರಿಗೆ ಪಾತ್ರದ ತಯಾರಿ ನೀಡುತ್ತಾರೆ.ಕೆಲವೊಂದು ಪೌರಾಣಿಕ ಪಾತ್ರಗಳನ್ನು ಹಲವು ವರ್ಷಗಳ ಕಾಲ ಒಬ್ಬರೇ ಮಾಡಿಕೊಂಡು ಬಂದವರೂ ಇದ್ದಾರೆ. ಶಾಂತ ಸ್ವಭಾವದ ಪಾತ್ರಗಳಲ್ಲಿ ಮಾಡಿದ್ದರೆ ಒಂದು ರೀತಿ ರೌಧ್ರ ಪಾತ್ರಗಳನ್ನು ಮಾಡಿದವರ ಮನಸ್ಥಿತಿ ಕೆಲವು ದಿನ ಹಾಗೆ ಇರುತ್ತದೆ. ರಾವಣ ಮತ್ತು ದುರ್ಯೋಧನನ ಪಾತ್ರ ಈ ಲಿಸ್ಟ್‌ಗೆ ಸೇರುತ್ತದೆ. ಇದೇ ದರ್ಶನ್‌ಗೆ ಸಮಸ್ಯೆ ಆಗಿರಬಹುದು ಎನ್ನಲಾಗಿದೆ. 

Latest Videos

undefined

ರಸ್ತೆ ದಾಟಲು ಒದ್ದಾಡುತ್ತಿದ್ದ ಅನುಪಮಾ ಗೌಡರನ್ನು ಸೇವ್ ಮಾಡಿದ ನಟ ದರ್ಶನ್; ವಿಡಿಯೋ ವೈರಲ್!

ಹೌದು!ಮಂಡ್ಯ ತಾಲೂಕಿನ ಉಪ್ಪಾರಕನಹಳ್ಳಿ ಗ್ರಾಮದ ಹಾಗೂ ಸುತ್ತಮುತ್ತಿನ ಗ್ರಾಮಗಳಲ್ಲಿ ನಾಟಕ ಮಾಡುವ ಜನರ ಪ್ರಕಾರ ದರ್ಶನ್ ದುರ್ಯೋಧನನ ಪಾತ್ರ ಮಾಡಿದ್ದಕ್ಕೆ ಈ ರೀತಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಖಾಸಗಿ ಕನ್ನಡ ವೆಬ್‌ ಪೋರ್ಟಲ್‌ನಲ್ಲಿ ವರದಿ ಆಗಿತ್ತು. ನಾಟಕದಲ್ಲಿ ದುರ್ಯೋಧನನ ಪಾತ್ರ ಮಾಡಿದಾಗ ನಾನು, ನನ್ನದು ನನ್ನ ಮುಂದೆ ಯಾರೂ ಇಲ್ಲ ನಾನೇ ಎಲ್ಲಾ ಎಂಬ ದುರಹಂಕಾರದ ಮನೋಭಾವ ಮೂಡುತ್ತದೆ ಇದು ಪಾತ್ರದ ಮನೋಭಾವ ನಮಗೂ ಬಂದಿತ್ತು ಅನೇಕರು ಇದರಿಂದ ಸಂಕಷ್ಟಗಳನ್ನು ಎದುರಿಸಿದ್ದಾರೆ ಎಂದು ಅಲ್ಲಿನ ಜನರು ಹೇಳಿಕೊಂಡಿದ್ದಾರೆ. 

ಕೆಜಿಎಫ್‌ ಚಿತ್ರದ ಖಡಕ್ ವಿಲನ್ ಅವಿನಾಶ್‌ ಆಂಡ್ರ್ಯೂಸ್‌ ಆಫ್‌ ಸ್ಕ್ರೀನ್‌ ಪತ್ನಿ ಇವರೇ ನೋಡಿ!

ನಾಟಕ ಮಾಡುವವರು ಪಾತ್ರ ಮಾಡುವಾಗ ವಿಭೂತಿ ಧರಿಸುತ್ತಾರಂತೆ ಆದರೆ ದುರ್ಯೋಧನನ ಪಾತ್ರ ಮಾಡುವಾಗ ಹಣೆಗೆ ಸರ್ಪ ತಿಲಕ ಇಡುತ್ತಾರಂತೆ. ಆ ಸರ್ಪ ತಿಲಕವೇ ನಮ್ಮೊಳಗೆ ಅಹಂಕಾರ, ಅಸೂಯೆ ಉದ್ಭವವಾಗುವಂತೆ ಮಾಡುತ್ತದೆ. ಇದಕ್ಕೆಲ್ಲ ಪರಿಹಾರ ಏನೆಂದರೆ ಸೌಮ್ಯಗುಣದ ಪಾತ್ರಗಳಲ್ಲಿ ನಟಿಸುವುದು. ದುರ್ಯೋಧನನ ಪಾತ್ರ ಮಾಡುತ್ತಿದ್ದ ನಾನು ಆಮೇಲೆ ಸಂಕಷ್ಟ ಎದುರಿಸಲಾಗದೆ ಕಾಡಿಬೇಡಿ ಧರ್ಮರಾಯನ ಪಾತ್ರ ಮಾಡಿದೆ ಅದಾದ ಮೇಲೆ ಒಂದೊಂದೆ ಕಷ್ಟಗಳು ದೂರವಾಗಿದೆ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ಯಾವುದಾದರೂ ಪಾಂಡವರ ಅಥವಾ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಒಳ್ಳೆಯದಾಗುತ್ತದೆ ಎಂದಿದ್ದಾರೆ ಗ್ರಾಮೀಣ ಕಲಾವಿದರು. 

click me!