ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿದ್ದಂತೆ, ಕಿಚ್ಚ ಸುದೀಪ್ ಪ್ರೆಸ್ ಮೀಟ್, ಹೇಳಿದ್ದಿಷ್ಟು!

By Ravi Janekal  |  First Published Aug 31, 2024, 1:02 PM IST

ಈ ಬಾರಿ ಬರ್ತಡೇ ವೇಳೆ ಯಾರೂ ಮನೆ ಬಳಿ ಬರಬೇಡಿ, ಜಯನಗರದ\ ಗ್ರೌಂಡ್‌ ನಲ್ಲಿ ಸಿಗೋಣ... ಕಿಚ್ಚ ಸುದೀಪ್ ದಿಢೀರ್ ಸುದ್ದಿಗೋಷ್ಟಿ ಕರೆದು ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ದರ್ಶನ್ ಬಗ್ಗೆ ಏನು ಹೇಳಿದ್ರು? ಇಲ್ಲಿದೆ ನೋಡಿ


Kichcha Sudeep Press Conference: ಬರ್ತಡೇ ಬಂದ್ರೆ ಮನೆ ಹತ್ರ ಸಾವಿರಾರು ಅಭಿಮಾನಿಗಳು ಸೇರ್ತಾರೆ. ಪ್ರತಿವರ್ಷವು ಹೆಚ್ಚಾಗಿ ಅಭಿಮಾನಿಗಳು ಸೇರ್ತಾರೆ ಅದರ ಮೂಲಕ ಅಭಿಮಾನಿಗಳು ಪ್ರೀತಿ ತೋರಿಸ್ತಾರೆ. ಕಳೆದ ಬಾರಿ 34 ಸಾವಿರಕ್ಕೂ ಅಧಿಕ ಅಭಿಮಾನಿಗಳು ಸೇರಿದ್ರು ಇದರಿಂದ ಸಾರ್ವಜನಿಕರಿಗೂ ಬಹಳ ತೊಂದರೆಯಾಗಿತ್ತು. ಹೀಗಾಗಿ ಈ ಬಾರಿ ನಮ್ಮ ಪೊಲೀಸರು ಹಾಗೂ ನಮ್ಮ ಮನೆಯ ಅಕ್ಕಪಕ್ಕದವರು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ನನ್ನಿಂದ ಯಾರಿಗೂ ತೊಂದರೆ ಆಗಬಾರದು. ನನ್ನಿಂದ ಇತರರು ತೊಂದರೆ ಅನುಭವಿಸೋದು ನನಗೆ ಇಷ್ಟ ಇಲ್ಲ. ಹೀಗಾಗಿ ಬೇರೆ ಊರಿಂದ ಬರೋ ಸ್ನೇಹಿತರು ಮನೆ ಹತ್ರ ಬರಬೇಡಿ. ನೀವು ಇದ್ದ ಸ್ಥಳದಿಂದಲೇ ಹಾರೈಸಿ ಎಂದು ನಟ ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದಾರೆ. 

ಅತ್ತ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬೆನ್ನಲ್ಲೇ ಇತ್ತ ಸುದೀಪ್  ದಿಢೀರ್ ಸುದ್ದಿಗೋಷ್ಟಿ ಕರೆದು ಮಾತನಾಡಿದ್ದಾರೆ. ಈ ಬಾರಿ ಬರ್ತಡೇ ಶಾಂತವಾಗಿರಲಿ. ನಮ್ಮ ಶಾಸಕರು ಎಂಇಎಸ್ ಗ್ರೌಂಡ್‌ನಲ್ಲಿ ಮಾಡಿಕೊಟ್ಟಿದ್ದಾರೆ. ಜಯನಗರದ ಟೆಲಿಫೋನ್ ಎಕ್ಸ್‌ಚೇಂಜ್ ಆಫೀಸ್‌ ಬಳಿ ಇರುವ  ಎಂಇಎಸ್ ಗ್ರೌಂಡ್‌ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ.  ನಾವು ಅಲ್ಲಿ ಸಿಗೋಣ. ಆದರೆ ಅಲ್ಲಿ ಕೂಡ ಕೆಲವೊಂದಿಷ್ಟು ನಿರ್ಬಂಧಗಳಿವೆ. ಸೆಪ್ಟೆಂಬರ್ 2ನೇ ತಾರೀಕು ಬೆಳಗ್ಗೆ 10ರಿಂದ 12 ಗಂಟೆವರೆಗೆ ನಮಗೆ ಪೊಲೀಸರು ಸಮಯ ಕೊಟ್ಟಿದ್ದಾರೆ. ನಾನು ಜಯನಗರದಲ್ಲಿ ನಿಮ್ಮನ್ನು ಭೇಟಿ ಮಾಡಲಿದ್ದೇನೆ ದಯವಿಟ್ಟು ಯಾರೂ ಮನೆ ಬಳಿ ಬರಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.

Tap to resize

Latest Videos

ಇನ್ನು ಮುಂದೆ ಒಂದು ಬಾರಿ ಸಿನಿಮಾ ಮಾಡುವ ರೂಲ್ಸ್ ಬ್ರೇಕ್ ಮಾಡುತ್ತಿದ್ದೇನೆ. ಇನ್ನುಮುಂದೆ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುತ್ತೇನೆ. ಮ್ಯಾಕ್ಸ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ. ಸೆಪ್ಟೆಂಬರ್‌ 27 ಕ್ಕೆ ಆಗುವ ಸಾಧ್ಯತೆ ಇದೆ. ಆದ್ರೆ ಇದನ್ನು ಹೇಳುವವರು ಹೇಳಿದ್ರೆ ಒಳ್ಳೆಯದು. ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದೆ. ಇದೀಗ ಬಿಲ್ಲರಂಗ ಭಾಷಾ ಮಾಡಲು ಸಾಧ್ಯವಾಗುತ್ತ ಇಲ್ವ ನೋಡೋಣ. ಇದು ನನ್ನ ಕೆರಿಯರ್‌ನಲ್ಲೇ ಬಿಗ್ ಸಿನಿಮಾ ಆಗಿರಲಿದೆ. ತುಂಬಾ ರಿಸರ್ಚ್, ಸ್ಟಡಿ ನಡೆಯುತ್ತಿದೆ ಎಂದ ಕಿಚ್ಚ ಸುದೀಪ್.

ಹಲೋ, ನಿಮ್ಮ ಅಚ್ಚುಮೆಚ್ಚಿನ ಸ್ಯಾಂಡಲ್‌ವುಡ್ ತಾರೆಗಳ ಮನೆ ಹೆಸರುಗಳು ಹೀಗಿವೆ ನೋಡಿ..!

ಇನ್ನು ಈ ಬಾರಿ ಬಿಗ್ ಬಾಸ್ ನಿಂದ ಕಿಚ್ಚ ಸುದೀಪ್ ಹೊರಬರುತ್ತಾರೆ ಎಂಬ ಚರ್ಚೆ ಜೋರಾಗಿದೆ  ಈ ಬಗ್ಗೆ ಪ್ರಶ್ನೆಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರ ಕೊಟ್ಟ ಕಿಚ್ಚ ಸುದೀಪ್, ಬಿಗ್ ಬಾಸ್ ಮಾಡಲು ನಾನು ಎಷ್ಟು ಕಷ್ಟಪಡುತ್ತೇನೆ ಗೊತ್ತ? ಸಿನಿಮಾಗೆ ಅಂತ ಟೈಂ ಕೊಡ್ಲ?  ಬಿಗ್ಬಾಸ್ ಗೆ ಅಂತ ಟೈಂ ಕೊಡ್ಲ. ಅಥವಾ ನನಗೆ ಅಂತ ಟೈಂ ಕೊಡ್ಲ ಎಂದು ಪ್ರಶ್ನಿಸುವ ಮೂಲಕ ಮತ್ತಷ್ಟು ಗೊಂದಲಗೊಳಿಸಿದ ಕಿಚ್ಚ ಸುದೀಪ್.  

ಚಿತ್ರರಂಗದ ಬೆಳವಣಿಗೆಯಿಂದ ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಮಾಡ್ತೀರ?

ಇಲ್ಲ, ನಾನು ಯಾರ ವಿಚಾರವಾಗಿಯೂ compromise ಆಗಿಲ್ಲ. ನನ್ನ ಮನೆಯಲ್ಲೇ ನಾನು ಆಗಲ್ಲ. ಆದ್ರೆ ಕೆಲವೊಬ್ಬರಿಗೆ ಸಪೋರ್ಟ್ ಮಾಡಬೇಕಾಗುತ್ತೆ. ಕೆಲವರ ಸಿನಿಮಾ ಬರುತ್ತಿದೆ ಅಂದಾಗ ಅವರು ಬೆಳೆಯುತ್ತಾರೋ ಇಲ್ವೋ ಅದು ಅವರಿಗೆ ಬಿಟ್ಟಿದ್ದು ಆದರೆ ಸಪೋರ್ಟ್ ಮಾಡಬೇಕಾಗುತ್ತೆ. ಆದ್ರೆ ನನ್ನ ಸಿನಿಮಾದಿಂದ ಆಯ್ತು ಅಂತ ಅವರಿಗೆ ಫೀಲ್ ಆಗಬಾರದು. ಇದೊಂದು ರೀತಿ  ಸಪೋರ್ಟ್ ಸಿಸ್ಟಮ್ ಅಷ್ಟೇ ಎಂದರು.

ಡಾಕ್ಟರೇಟ್ ಪಡೆಯುತ್ತೀರ?

ಡಾಕ್ಟರೇಟ್ ತೆಗೆದುಕೊಳ್ಳುವಂತದ್ದು ನಾನು ಏನೂ ಮಾಡಿಲ್ಲ. ನಾನು ಸಿನಿಮಾ ಮಾಡಿದ್ದೇನೆ ಅಷ್ಟೆ. ನಾನೇನಾದರೂ ಸಾಧನೆ ಮಾಡಿದ್ದೇನೆ  ಅನಿಸಿದಾಗ ನಾನೇ ಪತ್ರ ಬರೆದು ಕೇಳಿಕೊಳ್ಳುತ್ತೇನೆ. ನಾನು ಮಾಡಬೇಕಿರುವುದು ಇನ್ನು ಬಾಕಿ ಇದೆ. ಆಮೇಲೆ ನೋಡೋಣ ಎಂದು ಡಾಕ್ಟರೇಟ್ ವಿಚಾರಕ್ಕೆ ತೆರೆ ಎಳೆದ ಕಿಚ್ಚ ಸುದೀಪ್. ಇದೇ ವೇಳೆ ಒಟಿಟಿ ಬಗ್ಗೆ ಪ್ರಸ್ತಾಪಿಸಿದ ಕಿಚ್ಚ, ಥಿಯೇಟರ್‌ನಲ್ಲಿ ಸಿನಿಮಾ ಬಂದಿಲ್ಲ ಅಂದ್ರೆ ಒಟಿಟಿಗೆ ಹೋಗೋಕೆ ಆಗೊಲ್ಲ. ಥಿಯೇಟರ್ ಅನುಭವ ಯಾರೂ ಮಿಸ್ ಮಾಡಿಕೊಳ್ಳೋಕೆ ರೆಡಿ ಇಲ್ಲ ಎಂದರು.

epe Movie: ಕಿಚ್ಚು ಸುದೀಪ್ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡಿದ ಆ ಹೀರೋಯಿನ್ ಯಾರು?

ದರ್ಶನ್ ಬಗ್ಗೆ ಸುದೀಪ್ ಹೇಳಿದ್ದೇನು?

ದರ್ಶನ್ ವಿಚಾರವಾಗಿ ಏನು ಹೇಳಬೇಕೋ ಅದೆಲ್ಲವನ್ನು ನಾನೀಗ ಹೇಳಿದ್ದೇನೆ. ಅವರಿಗೆ ಅಂತ ಒಂದು ಕುಟುಂಬ ಇದೆ. ಯಾರಿಗೂ ಬೇಜಾರಾಗಬಾರದು. ರಾಜಕೀಯವಾಗಿ ಮಾತಾಡ್ತಾ ಇದ್ದೀನಿ ಅಂತ ಅಲ್ಲ. ಕಾನೂನು, ಸರ್ಕಾರ ಪ್ರತಿಯೊಂದನ್ನು ನಾವು ನಂಬಬೇಕು, ಗೌರವಿಸಬೇಕಾಗುತ್ತೆ. ಈಗಿನ ಎಲ್ಲಾ ವಿಚಾರಗಳು ನಿಮ್ಮಿಂದ ಗೊತ್ತಾಗುತ್ತಿದೆ. ನಿಮ್ಮನ್ನ ನಂಬೇಕು ಅಂದ್ರೆ ನಾನೇನು ಮಾತಡಲ್ಲ. ನಿಮ್ಮನ್ನ ನಂಬಬಾರದು ಅಂದ್ರೆ ನಾನ್ ಮಾತಾಡ್ತೀನಿ. ನೀವೇ ಹೇಳಿ ಅಂತ ಮಾಧ್ಯಮದವರನ್ನ ಪ್ರಶ್ನಿಸಿದ ಕಿಚ್ಚ ಸುದೀಪ್. ವಿಲನ್ ಅನ್ನೋದು ಅವರ ಅವರ ಆಲೋಚನೆಗೆ ಬಿಟ್ಟಿದ್ದು. ಇಲ್ಲಿ ಒಬ್ರು ಒಂದು ವಿಚಾರವಾಗಿ ಧ್ವನಿ ಎತ್ತುತ್ತಾರೆ.. ಇನ್ನೊಂದು ವರ್ಗ ಬಂದು ಬೇರೆ ಯಾವುದಕ್ಕೋ ಲಿಂಕ್ ಮಾಡ್ತಾರೆ. ಹಾಗಾಗಿ ಇಲ್ಲಿ ಯಾರೂ ಇವಾಗ ಧ್ವನಿ ಎತ್ತುತ್ತಿಲ್ಲ. ಅದರ ಬದಲು ಸೈಲೆಂಟ್ ಆಗಿ ಇರೋದೆ ಒಳ್ಳೆದು ಅಂತ ಸುಮ್ಮನಿರ್ತಾರೆ. ದರ್ಶನ್ ವಿಚಾರ ಸದ್ಯ ಕೋರ್ಟ್ ಅಲ್ಲಿ ಇದೆ. ಇನ್ನೂ ಪ್ರೂವ್ ಆಗಿಲ್ಲ. ಕಾನೂನನ್ನ ನಂಬಿ. ಕಾನೂನಲ್ಲಿ ಏನು ಆಗ್ಬೇಕೋ‌ ಅದು ಆಗುತ್ತೆ..  ಯಾರ್ ಹತ್ರನೂ ಅಭಿಪ್ರಾಯಗಳನ್ನ ಕೇಳ್ಬೇಡಿ. ಅಭಿಪ್ರಾಯ ಕೇಳ್ದಾಗ ಏನೋ ಹೇಳೋದು. ಅದು ಮುಂದೆ ತಪ್ಪಿಲ್ಲ ಅಂತ ಪ್ರೂವ್ ಆಗೋದು ಎಲ್ಲಾ ಯಾಕೆ ಎಂದರು.

click me!