ಹೆಲೋ, ನಿಮ್ಮ ಅಚ್ಚುಮೆಚ್ಚಿನ ಸ್ಯಾಂಡಲ್‌ವುಡ್ ತಾರೆಗಳ ಮನೆ ಹೆಸರುಗಳು ಹೀಗಿವೆ ನೋಡಿ..!

By Shriram Bhat  |  First Published Aug 31, 2024, 12:39 PM IST

'ಅವರವರ ಭಾವಕ್ಕೆ ಅವರವರ ಭಕುತಿಗೆ' ಎಂಬ ಮಾತಿನಂತೆ, ತಮಗೆ ಸರಿ ಅನ್ನಿಸಿದಂತೆ, ಅವರವರ ಭಕ್ತಿ-ಭಾವಕ್ಕೆ, ಅನುಕೂಲತೆಗೆ ತಕ್ಕಂತೆ ಅವರುಗಳು ತಮ್ಮ ಮನೆಗೆ ಹೆಸರು ಇಟ್ಟುಕೊಂಡಿದ್ದಾರೆ ಎನ್ನಬಹುದು. ಸಿನಿಮಾ ಅಭಿಮಾನಿಗಳು..


ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ, ಈಗಿನ ಕನ್ನಡದ ಹಲವು ಸಿನಿತಾರೆಗಳ ಬಗ್ಗೆ ಎಲ್ಲರಿಗೂ ಗೊತ್ತು. ಸಿನಿಮಾ ನಟನಟಿಯರ ಜೀವನ ಶೈಲಿ, ಹವ್ಯಾಸಗಳು, ಡ್ರೆಸ್‌ ಕೋಡ್ ಹೀಗೆ ಹತ್ತುಹಲವು ಸಂಗತಿಗಳ ಬಗ್ಗೆ ಅವರವರ ಅಭಿಮಾನಿಗಳಿಗೆ  ಕುತೂಹಲ ಇರುತ್ತದೆ. ಅದರಂತೆ ಅವರ ಮನೆಗಳಿಗೆ ಏನೆಂದು ಹೆಸರು ಇಟ್ಟಿರಬಹುದು ಎಂಬ ಕುತೂಹಲ ಕೆಲವರಿಗೆ ಇರುತ್ತದೆ. ಅಂಥವರ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ ನೋಡಿ!

ನಟ ದರ್ಶನ್ ತಮ್ಮ ಮನೆಗೆ 'ತೂಗುದೀಪ ನಿಲಯ' ಎಂದು ಹೆಸರಿಟ್ಟಿದ್ದಾರೆ. ನಟ ಕಿಚ್ಚ ಸುದೀಪ್ ಅವರ ಮನೆಗೆ 'ಶ್ರೀನಿಧಿ' ಎಂಬ ನಾಮಕರಣ ಇದೆ. ನಟ ದುನಿಯಾ ವಿಜಯ್ ಮನೆಗೆ 'ದುನಿಯಾ ಋಣ' ಎಂದಿದ್ದರೆ ನಟ ಉಪೇಂದ್ರ ಮನೆಗೆ SUಮನೆ (ಸುಮನೆ) ಎಂಬ ಹೆಸರು ಇದೆ. ಡಾ ರಾಜ್‌ಕುಮಾರ್ ಹಿರಿಯ ಮಗನಾಗಿರುವ ನಟ ಶಿವರಾಜ್‌ಕುಮಾರ್ ಅವರು ತಮ್ಮ ಮನೆಗೆ 'ಶ್ರೀ ಮುತ್ತು' ಎಂಬ ಹೆಸರನ್ನು ಇಟ್ಟಿದ್ದಾರೆ. 

Latest Videos

undefined

ಪತ್ನಿ ವಿಜಯಲಕ್ಷ್ಮೀ ನೆನೆದು ದರ್ಶನ್ ಕಣ್ಣೀರು ಹಾಕಿದ್ರಾ? ಪಶ್ಚಾತ್ತಾಪದ ಮಾತುಗಳು ಬಂದಿವೆಯಾ?

ಇನ್ನು ನಟ ಗಣೇಶ್ ಅವರು 'ಗಣಪ' ಎಂದು ತಮ್ಮ ಮನೆಗೆ ನಾಮಕರಣ ಮಾಡಿಕೊಂಡಿದ್ದಾರೆ. ನಟ ರೆಬೆಲ್ ಸ್ಟಾರ್ ಅಂಬರೀಷ್ ತಮ್ಮ ಮನೆಗೆ 'ಅಂಬಿ ಮನೆ' ಎಮದು ಹೆಸರು ಇಟ್ಟುಕೊಂಡಿದ್ದಾರೆ. ನಟ ವಿಷ್ಣುವರ್ಧನ್ ಅವರು ತಮ್ಮ ಮನೆಗೆ 'ವಲ್ಮೀಕ ನಿಲಯ' ಎಂಬ ಹೆಸರನ್ನಿಟ್ಟಿದ್ದಾರೆ. ನಟ ಜಗ್ಗೇಶ್ ಅವರು ತಮ್ಮ ಮನೆಗೆ 'ಪರಿಮಳ ನಿಲಯ' ಎಂದು ಹೆಸರು ಇಟ್ಟಿದ್ದಾರೆ. ಹೀಗೆ ಪ್ರತಿಯೊಬ್ಬ ಕನ್ನಡದ ಸಿನಿಮಾ ತಾರೆಯರೂ ತಮ್ಮ ಮನಸ್ಸಿಗೆ ಒಪ್ಪುವಂತಹ ಹೆಸರುಗಳನ್ನು ಇಟ್ಟಿದ್ದಾರೆ. 

'ಅವರವರ ಭಾವಕ್ಕೆ ಅವರವರ ಭಕುತಿಗೆ' ಎಂಬ ಮಾತಿನಂತೆ, ತಮಗೆ ಸರಿ ಅನ್ನಿಸಿದಂತೆ, ಅವರವರ ಭಕ್ತಿ-ಭಾವಕ್ಕೆ, ಅನುಕೂಲತೆಗೆ ತಕ್ಕಂತೆ ಅವರುಗಳು ತಮ್ಮ ಮನೆಗೆ ಹೆಸರು ಇಟ್ಟುಕೊಂಡಿದ್ದಾರೆ ಎನ್ನಬಹುದು. ಸಿನಿಮಾ ಅಭಿಮಾನಿಗಳು ತಮ್ಮ ಕುತೂಹಲಕ್ಕೆ ತಕ್ಕಂತೆ, ತಮ್ಮ ಮೆಚ್ಚನ ತಾರೆಯ ಮನೆಯ ಹೆಸರನ್ನು ನೆನಪಿಟ್ಟುಕೊಳ್ಳಬಹುದು. ಇನ್ನೂ ಹಲವರ ಮನೆಯ  ಹೆಸರಿನ ಮಾಹಿತಿ ಮಿಸ್ ಆಗಿದೆ, ಅದನ್ನು ಇನ್ನೊಮ್ಮೆ ಸಿಗಲಿದೆ, ಕಾಯುತ್ತಿರಿ..

 ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಮಾತಾಡೋ ಭಾಷೆ ಯಾವುದು; ಸೃಷ್ಟಿಕರ್ತ ಯಾರು ಗೊತ್ತಾ?

ಒಟ್ಟಿನಲ್ಲಿ, ಬಣ್ಣದ ಲೋಕ ಎಂಬುದೊಂದು ಮಾಯಾ ಲೋಕ. ಇಲ್ಲಿ ಕಲಾವಿದರು ಎಂಬ ಹೆಸರಿನಿಂದ ನಮ್ಮನಿಮ್ಮೆಲ್ಲರ ಮಧ್ಯೆ ಇರುವ ಮನುಷ್ಯರೇ ಸಿನಿಮಾ ನಟನೆ ವೃತ್ತಿಯಲ್ಲಿದ್ದು, ಕಲಾವಿದರು, ತಾರೆಗಳು ಎನಿಸಿಕೊಂಡಿದ್ದಾರೆ.  ಆದರೆ ನಮ್ಮೆಲ್ಲರ ಮನೆಯ ಸದಸ್ಯರಂತೆ, ಸಾರ್ವಜನಿಕರಂತೆ ನೇರವಾಗಿ ನೋಡುವ ಬದಲು ಅವರನ್ನು ತೆರೆಯ ಮೇಲೆ ನೋಡುತ್ತೇವೆ. ಹಲವರಿಗೆ ಅದೇ ಒಂಥರಾ ಕ್ರೇಜ್ ಹುಟ್ಟಿಸಿ ಅವರಿಗೆ ಇವರು ಅಭಿಮಾನಿಗಳಾಗುತ್ತಾರೆ. ಅವರು ಇವರನ್ನು ಅಭಿಮಾನಿ ದೇವರುಗಳು ಎಂದು ಕರೆಯುತ್ತಾರೆ. ಅದರಲ್ಲೇನು ಸರಿ-ತಪ್ಪಿನ ಪ್ರಶ್ನೆ ಇಲ್ಲ, ಸತ್ಯ ಸಂಗತಿ ಅಷ್ಟೇ ಇರೋದು! 

click me!