ಸಲಗ ಯಶಸ್ಸನ್ನು ಸಂಭ್ರಮಿಸಿ ದುನಿಯಾ ವಿಜಯ್ ಟ್ವೀಟ್‌!

Suvarna News   | Asianet News
Published : Oct 18, 2021, 03:35 PM ISTUpdated : Oct 18, 2021, 03:46 PM IST
ಸಲಗ ಯಶಸ್ಸನ್ನು ಸಂಭ್ರಮಿಸಿ ದುನಿಯಾ ವಿಜಯ್ ಟ್ವೀಟ್‌!

ಸಾರಾಂಶ

-ಟಿಣಿಂಗ ಮಿಣಿಂಗ ಟಿಷ್ಯ ಟ್ವೀಟ್ -ನೆಟ್ಟಿಗರಿಂದ ತರೇಹವಾರಿ ಕಾಮೆಂಟ್ -ನನ್ನ ಲೈಫ್‌ನ ಡ್ರೈವ್‌ ಮಾಡೋ ಸಿನಿಮಾ

ಕೋವಿಡ್ ವೈರಸ್ ಎರಡನೇ ಅಲೆ ಬಳಿಕ ಬಿಡುಗಡೆಯಾದ ಕನ್ನಡದ ಮೊದಲ ಸ್ಟಾರ್​ ಸಿನಿಮಾ 'ಸಲಗ' (Salaga) ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಬಹುತೇಕ ಎಲ್ಲ ಕಡೆಗಳಲ್ಲಿ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ಮೊದಲ ಬಾರಿಗೆ ನಟ ದುನಿಯಾ ವಿಜಯ್ (Duniya Vijay) ನಿರ್ದೇಶನ (Direction) ಮಾಡಿ ಅಭಿನಯಿಸಿರುವ 'ಸಲಗ' ಚಿತ್ರಕ್ಕೆ ವಿಜಯ್‌ ಅಭಿಮಾನಿಗಳು (Fans) ಮತ್ತು ಮಾಸ್‌ (Mass) ಚಿತ್ರಕ್ಕಾಗಿಯೇ ಕಾಯುತ್ತಿದ್ದ ಸಿನಿರಸಿಕರು ಇನ್ನಿಲ್ಲದಂತೆ ಮುಗಿಬಿದ್ದರಲ್ಲದೇ ಭರ್ಜರಿ ಹೌಸ್‌ಫುಲ್ ಪ್ರದರ್ಶನ (Housefull Show) ಕಂಡಿದೆ.  ಬಿಡುಗಡೆಯಾದ 200 ಚಿತ್ರಮಂದಿರಗಳ ಪೈಕಿ 1200 ಪ್ರದರ್ಶನಗಳೂ ಮೊದಲ ದಿನ ತೆರೆ ಮೇಲೆ ರಾರಾಜಿಸಿವೆ.

ಸಲಗ ಕಲೆಕ್ಷನ್ ಎಷ್ಟಾಯ್ತು?

ಈ ಖುಷಿಯಲ್ಲಿ 'ಟಿಣಿಂಗ ಮಿಣಿಂಗ ಟಿಷ್ಯ 'ಸಲಗ' ಸೂಪರ್ ಹಿಟ್ ಆಯ್ತೋ ಶಿಷ್ಯ' ಎಂದು ಚಿತ್ರದ ನಾಯಕ ದುನಿಯಾ ವಿಜಯ್ ಟ್ವೀಟ್‌ವೊಂದನ್ನು (Tweet) ಹಂಚಿಕೊಂಡಿದ್ದಾರೆ. ಜೊತೆಗೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್, (K.P.Srikanth) ಡಾಲಿ ಧನಂಜಯ್ (Dolly Dhananjay) ಸೇರಿದಂತೆ  ಚಿತ್ರತಂಡದ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್‌ಗೆ 'ಚಿತ್ರ ನೋಡಿದೆ ಇಷ್ಟ ಆಯ್ತು ಸೂರಿ ಅಣ್ಣ, ಸಾವಿತ್ರಿ ಆಕ್ಟಿಂಗ್ ಸೂಪರ್ ಮತ್ತು 'ಸರ್... ಏಕ ವಚನದ ಡೈಲಾಗ್ಸ್  ಬಹಳ ಇದಾವೆ ಆದ್ರೂ ಸಲಗ  ಮೂವಿ ನೋಡೋಕ್ಕೆ ಸ್ವಲ್ಪ  ಇಂಟೆರೆಸ್ಟಿಂಗ್ ಆಗಿದೆ. rotin Revenge story. ಆದ್ರೂ ನಿಮ್ಮ ಡೈರೆಕ್ಷನ್ screenplay ನಿಮ್ಮ ಮಾಸ್ ಆಕ್ಟಿಂಗ್ ಬಹಳ ಚೆನ್ನಾಗಿದೆ ಮತ್ತು ಧನಂಜಯ ಅವರ ನಟನೆ ದಕ್ಷ  ಪೊಲೀಸ್ ಅಧಿಕಾರಿ roll ಬಹಳ ಚೆನ್ನಾಗಿದೆ. Good' ಹಾಗೂ  'ಟಿಣಿಂಗ ಮಿಣಿಂಗ ಟಿಷ್ಯ ಸಲಗ ಸೂಪರ್ ಹಿಟ್ ಆಯ್ತೋ ಶಿಷ್ಯ'  ಕ್ಯಾಪ್ಷನ್ ಚಿಂದಿ ಎಂದು ಹಲವಾರು ನೆಟ್ಟಿಗರು ಪೋಸ್ಟ್‌ಗೆ ತರೇಹವಾರಿ ಕಾಮೆಂಟ್ಸ್ (Comments) ಮಾಡುತ್ತಿದ್ದಾರೆ.
 

 

 'ಸಲಗ' ಬಿಡುಗಡೆಗೂ ಮುನ್ನ ಚಿತ್ರತಂಡ ಅದ್ಧೂರಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar), ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivarajkumar), ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajakumar) ಹಾಗೂ ರಿಯಲ್ ಸ್ಟಾರ್ ಉಪೇಂದ್ರ (Upendra) ಸೇರಿದಂತೆ  ಘಟಾನುಘಟಿ ನಾಯಕರು ಹಾಗೂ ಚಿತ್ರರಂಗದ ಗಣ್ಯರು ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದರು.

ಸಲಗ' ಪ್ರಸಾರ ನಿಲ್ಲಿಸುವಂತೆ ಪ್ರತಿಭಟನೆ

ದುನಿಯಾ ವಿಜಯ್ 'ನಿರ್ದೇಶನ ನನಗೆ ಸಿಕ್ಕಿರುವ ಒಳ್ಳೆಯ ಅವಕಾಶ. ಅದನ್ನು ತುಂಬಾ ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಅನುಭವ ಮಾತಿನಲ್ಲಿ ಹೇಳುವುದಕ್ಕೆ ಆಗಲ್ಲ. ಆದರೆ, ಪ್ರೇಕ್ಷಕರು ನೋಡಿ ಗುಡ್‌, ಚೆನ್ನಾಗಿದೆ ಎಂದಾಗ ಅದೇ ನಮ್ಮ ಅನುಭವ ಆಗುತ್ತದೆ. ಸುಲಭ ಅಂತ ಯಾವುದೂ ಇಲ್ಲ. ಎರಡೂ ಸವಾಲು. ಅದರಲ್ಲೂ ನನ್ನ ಲೈಫ್‌ನ ಡ್ರೈವ್‌ ಮಾಡೋ ಸಿನಿಮಾ ಇದು. ಹೀಗಾಗಿ ಹೆಚ್ಚಿನ ಸವಾಲುಗಳನ್ನೇ ಎದುರಿಸುತ್ತಾ ಈ 'ಸಲಗ' ಮಾಡಿದ್ದೇನೆ' ಎಂದು ಇತ್ತಿಚೆಗಷ್ಟೇ ದುನಿಯಾ ವಿಜಯ್ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ತಿಳಿಸಿದ್ದರು.

ಸಲಗ' ಸಿನಿಮಾ ಹೇಗಿದೆ?

ಇನ್ನು 'ಸಲಗ' ಚಿತ್ರದಲ್ಲಿ ದುನಿಯಾ ವಿಜಯ್​ಗೆ ಜೋಡಿಯಾಗಿ ಸಂಜನಾ ಆನಂದ್ (Sanjana Anand)​ ಕಾಣಿಸಿಕೊಂಡರೆ, ಡಾಲಿ ಧನಂಜಯ್ ಎಸಿಪಿ ಸಾಮ್ರಾಟ್ ಆಗಿ ಮಿಂಚಿದ್ದಾರೆ. ಸಾವಿತ್ರಿ ಪಾತ್ರದಲ್ಲಿ ಕಾಕ್ರೋಚ್ ಸುಧಿ, ಯಶ್ ಶೆಟ್ಟಿ ಅಬ್ಬರಿಸಿದ್ದಾರೆ.  ಮಾಸ್ತಿ ಸಂಭಾಷಣೆ ಮತ್ತು 'ಟಗರು' ಚರಣ್​ ರಾಜ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಮಾಸ್​ ಹಿಟ್​ ಆಗಿದ್ದು,  ಕೆ.ಪಿ ಶ್ರೀಕಾಂತ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು, 'ಇಕ್ಕಟ್' ನಟ ನಾಗಭೂಷಣ, ಬಿವಿ ಭಾಸ್ಕರ್ ಬಹುತೇಕ ಮಂದಿ ಚಿತ್ರದ ತಾರಗಣದಲ್ಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್