ಮಕ್ಕಳನ್ನು ಚಿತ್ರರಂಗಕ್ಕೆ ಕರೆತಂಡ ದುನಿಯಾ ವಿಜಯ್. ವಿಜಯ್ ಕೊಟ್ಟ ಸಲಹೆಯಿಂದ ಪ್ರತಿಯೊಬ್ಬರ ಜೀವನ ಬದಲಾಗುತ್ತದೆ ಎಂದು ಫ್ಯಾನ್ಸ್.
ಕನ್ನಡ ಚಿತ್ರರಂಗ ಸಿಂಗಲ್ ಸಿಂಹ ದುನಿಯಾ ವಿಜಯ್ ಇದೀಗ ತಮ್ಮ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನು ಬಣ್ಣದ ಪ್ರಪಂಚಕ್ಕೆ ಪರಿಚಯಿಸಿ ಕೊಡುತ್ತಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಜೇಷ್ಠ ಪುತ್ರಿ ಮೋನಿಕಾ ಉರ್ಫ್ ರಿತನ್ಯಾ ಮೊದಲ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನಡೆಯಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಕಿರುಪುತ್ರಿ ಮೋನಿಕಾ ಮೊದಲ ಚಿತ್ರ 'ಸಿಟಿ ಲೈಟ್ಸ್' ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಇಬ್ಬರ ಚಿತ್ರಕ್ಕೂ ದುನಿಯಾ ವಿಜಯ್ ಆಕ್ಷನ್ ಕಟ್ ಜೊತೆ ನಟನೆ ಮಾಡುತ್ತಿದ್ದಾರೆ ಅನ್ನೋದು ಸ್ಪೆಷಾಲಿಟಿ.
ಇಂಡಸ್ಟ್ರಿಗೆ ಕಾಲಿಡುತ್ತಿರುವ ಮಕ್ಕಳಿಗೆ ವಿಜಯ್ ಎರಡು ಸಲಹೆಗಳನ್ನು ನೀಡಿದ್ದಾರೆ.'ಮಕ್ಕಳಿಗೆ ನಾನು ಎರಡು ಸಲಹೆಗಳನ್ನು ನೀಡಿರುವೆ. ಒಂದು- ಈ ಪ್ರಪಂಚ ಫೇಕ್ ಹೀಗಾಗಿ ಇದೇ ಶಾಶ್ವತ ಅಂದುಕೊಳ್ಳಬೇಡಿ. ಎರಡು- ಶಿಸ್ತು ತುಂಬಾ ಮುಖ್ಯ. ಸಿನಿಮಾ ನಮಗೆ ಶಿಸ್ತು ಕಲಿಸುತ್ತದೆ ಆದರೆ ನೀವು ಶಿಸ್ತಿನಿಂದ ಬದುಕಲಿಲ್ಲ ಅಂದರೆ ಹಿಂದು ಉಳಿದು ಬಿಡುತ್ತೀರಿ. ಸಿನಿಮಾ ಸೆಟ್‌ನಲ್ಲಿ ಇದ್ದಾಗ ನಾನು ತುಂಬಾ ಸೀರಿಯಸ್ ತಂದೆ ಆಗಿರುತ್ತೀನಿ. ನನ್ನ ಮಕ್ಕಳಿಬ್ಬರು ಕೆಲಸವನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವುದನ್ನು ನೋಡಲು ಖುಷಿಯಾಗುತ್ತದೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ವಿಜಯ್ ಮಾತನಾಡಿದ್ದಾರೆ.
ಶೂ, ಚಪ್ಪಲಿಯಿಂದ ಪಾದ ವಾಸನೆ ಬರ್ತಿದ್ಯಾ? ಟೆನ್ಶನ್ ಕಮ್ಮಿ ಮಾಡುತ್ತೆ ಈ ಟ್ರಿಕ್
'ಸಿನಿಮಾ ಯಶಸ್ಸು ಕಾಣುವುದು ಒಳ್ಳೆ ವಿಭಿನ್ನ ಐಡಿಯಾಗಳನ್ನು ಬಳಸಿದರೆ ಮಾತ್ರ. ಮತ್ತೊಬ್ಬರನ್ನು ಕಾಪಿ ಮಾಡುವುದು ಒಳ್ಳೆಯದಲ್ಲ. ಇಲ್ಲಿ ಟೆಕ್ನಾಲಜಿ ನಮಗೆ ಒಳ್ಳೆಯ ಯಂತ್ರ. ಸಿನಿಮಾದ ಹೃದಯ ಭಾಗವೇ ಕಥೆ. ಟೆಕ್ನಾಲಜಿಗಿಂತ ಒಳ್ಳೆಯ ಕಥೆ ಬರೆಯುವವರು ಮತ್ತು ಕಥೆ ಹೇಳುವವರನ್ನು ನಿರ್ದೇಶಕರು ಉಳಿಸಿಕೊಳ್ಳಬೇಕು' ಎಂದು ವಿಜಯ್ ಹೇಳಿದ್ದಾರೆ.
ನಿಮ್ಮ ಕನಸಿನಲ್ಲಿ ಹಾವು ಬರ್ತಿದ್ಯಾ? ಹಾಗಿದ್ರೆ ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ
'ನಾವು ನ್ಯಾಷನಲ್ ಆಡಿಯನ್ಸ್ ಗೋಸ್ಕರ ಸಿನಿಮಾ ಮಾಡುತ್ತೀವಿ ಆದರೆ ಅದು ಹೆಚ್ಚಿನ ದಿನ ಉಳಿಯುವುದಿಲ್ಲ. ನಮ್ಮ ಜನರಿಗೆ ಏನು ಬೇಕು ಅನ್ನೋದರ ಬಗ್ಗೆ ಗಮನ ಹರಿಸಬೇಕು. ಸಿನಿಮಾ ಚೆನ್ನಾಗಿದ್ದರೆ ಮತ್ತೊಬ್ಬರಿಗೆ ನೋಡಲು ಹೇಳುತ್ತಾರೆ ಈ ಮೂಲಕ ತುಂಬಾ ಜನರಿಗೆ ನಾನು ತಲುಪಬೇಕು. ಆರಂಭದಿಂದಲೂ ಚಿತ್ರಕಥೆ ಡಿಮ್ಯಾಂಡ್ ಮಾಡಿದ್ದರೆ ನಾನು ಬದಲಾಗಲು ಹಿಂಜರಿಯುವುದಿಲ್ಲ. ಕಲಾವಿದರಾಗಿ ನಾವು ಸಂಪೂರ್ಣವಾಗಿ ಬದಲಾಗಬೇಕು ಆಗ ಮಾತ್ರ ಪಾತ್ರಕ್ಕೆ ಜೀವ ತುಂಬಲು ಸಾಧ್ಯ' ಎಂದಿದ್ದಾರೆ ದುನಿಯಾ ವಿಜಯ್.