ಡಾಲಿ ಧನಂಜಯ್‌ಗೆ ಹೊಸ ಅವತಾರ ಕೊಟ್ಟ ಸುನಿಯಾ ಸೂರಿ...ಮಂಕಿ ಟೈಗರ್!

By Suvarna News  |  First Published Jan 7, 2020, 11:39 PM IST

ಟೀಸರ್‌ನೊಂದಿಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’| ಡಾಲಿ ಅವತಾರಕ್ಕೆ ಪ್ರೇಕ್ಷಕ ಫಿದಾ!|  ಸುಕ್ಕಾ ಸೂರಿಯ ಪಕ್ಕಾ ಮಾಸ್ ಸಿನಿಮಾ ಟೀಸರ್ ಔಟ್| ಪಾಪ್​ ಕಾರ್ನ್ ಮಂಕೀ ಟೈಗರ್ ಟೀಸರ್ ನಲ್ಲಿ ಡಾಲಿ ಅವತಾರ


ಬೆಂಗಳೂರು(ಜ. 07)  ದುನಿಯಾ ಸೂರಿ ಪಾಪ್​ ಕಾರ್ನ್ ಮಂಕೀ ಟೈಗರ್ ಟೀಸರ್ ರಿಲೀಸ್ ಆಗಿದೆ. ಟಗರು ಸಿನಿಮಾದಿಂದ ಬ್ರೇಕ್ ಪಡೆದ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಇನ್ನೂ ಒಂದು ಲೆವೆಲ್ ಮೇಲೆ ಹೋಗಿದ್ದಾರೆ. ಡಾಲಿಯ ಖರಾಬ್ ಲುಕ್​ಗೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ದುನಿಯಾ ಸೂರಿ ಕಲ್ಪನೆಯ ಒಂದೊಂದು ಶಾಟ್​ಗೂ ಮೆಚ್ಚುಗೆ ವ್ಯಕ್ತವಾಗಿದೆ. ಚರಣ್ ರಾಜ್ ಬ್ಯಾಗರೌಂಡ್ ಸ್ಕೋರ್​ಗೆ ಫುಲ್ ಮಾರ್ಕ್ಸ್​ ಸಿಕ್ಕಿದೆ. ಸೂರಿ ಸಿನಿಮಾ ನೋಡೋಕೆ  ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಡಾಲಿಯ ಇನ್ನೊಂದು ಮುಖ ತೋರಿಸೋ ಪ್ರಯತ್ನ ಇಲ್ಲಾಗಿದೆ.

Tap to resize

Latest Videos

ಡಾಲಿ ಧನಂಜಯ್ ಹವಾ ಹೇಗಿದೆ? ಇಲ್ಲಿ ನೋಡಿ ಗೊತ್ತಾಗುತ್ತೆ!

ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ನಾನಾ ಅವತಾರಗಳಲ್ಲಿ ಮಾಸ್ ಲುಕ್ ನಲ್ಲಿ ಕಾಣಸಿಕೊಂಡಿದ್ದಾರೆ. 

ಪಿಆರ್ ಕೆ ಯುಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಕಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಚರಣ್ ರಾಜ್ ಬ್ಯಾಗ್ರೌಂಡ್ ಸ್ಕೋರ್  ಮತ್ತೊಂದು ಹೈಲೈಟ್. ಟಗರು ಚಿತ್ರದಲ್ಲಿ ಸೂರಿ ಮತ್ತು ಚರಣ್ ರಾಜ್ ಕಾಂಬಿನೇಷನ್ ಇತ್ತು.

ಸುಧೀರ್.ಕೆ.ಎಂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ನಿರ್ಮಾಪಕರು. ಧನಂಜಯ್ ಗೆ  ಜತೆಯಾಗಿ ನಿವೇದಿತಾ ಕಾಣಿಸಿಕೊಂಡಿದ್ದು ಅಮೃತ ಅಯ್ಯಂಗಾರ್, ಸುಧಿ, ಸಪ್ತಮಿ ತಾರಾಬಳಗ ಸೇರಿಕೊಂಡಿದ್ದಾರೆ.

click me!