ಸಚಿವ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಚಿತ್ರದ ವಿರುದ್ಧ ಕೇಳಿಬಂದ ಆರೋಪ ಇದೀಗ ತಣ್ಣಗಾಗಿದೆ. ಡ್ರೋನ್ ಡ್ಯಾಮೇಜ್‌ಗೆ ಪರಿಹಾರ ನೀಡದ ಕಾರಣ ಬುದುಕು ಅಂತ್ಯಗೊಳಿಸಲು ಯತ್ನಿಸಿದ್ದ ಟೆಕ್ನೀಶಿಯನ್ ಸಂತೋಷ್ ಇದೀಗ ಚಿತ್ರತಂಡದ ವಿರುದ್ದ ದೂರು ವಾಪಸ್ ಪಡೆದಿದ್ದಾರೆ.
ಬೆಂಗಳೂರು(ಡಿ.07)ಸ್ಯಾಂಡಲ್‌ವುಡ್ ಚಿತ್ರ ರಂಗದಲ್ಲಿ ಇತ್ತೀಚಗೆ ಕಲ್ಟ್ ಸಿನಿಮಾ ನಿರ್ಮಾಣ ಕೆಲ ವಿವಾದಕ್ಕೆ ಕಾರಣವಾಗಿತ್ತು. ಪ್ರಮುಖವಾಗಿ ಈ ಚಿತ್ರದ ಶೂಟಿಂಗ್ ವೇಳೆ ಬಾಡಿಗೆ ಪಡೆದ ಡ್ರೋನ್ ಸಂಪೂರ್ಣ ಡ್ಯಾಮೇಜ್ ಆಗಿತ್ತು. ಈ ಕುರಿತು ಚಿತ್ರತಂಡ ಯಾವುದೇ ನಷ್ಟ ಪರಿಹಾರ ನೀಡದ ಕಾರಣ ಟೆಕ್ನಿಶಿಯನ್ ಸಂತೋಷ್ ಬದುಕು ಅಂತ್ಯಗೊಳಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿ ಕಲ್ಟ್ ಚಿತ್ರತಂಡ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೀಗ ಕಲ್ಟ್ ಚಿತ್ರತಂಡ ಟೆಕ್ನಿಶಿಯನ್‌ಗೆ ನಷ್ಟ ಪರಿಹಾರ ನೀಡಿದ ಕಾರಣ ಸಂತೋಷ್ ದೂರು ವಾಪಸ್ ಪೆಡೆದಿದ್ದಾನೆ. ಈ ಮೂಲಕ ಕಲ್ಟ್ ಚಿತ್ರತಂಡಕ್ಕೆ ಎದುರಾಗಿದ್ದ ಆತಂಕ ದೂರವಾಗಿದೆ.
ಕರ್ನಾಟಕ ಸಚಿವ ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ಸದ್ಯ ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲಾ ಬನಾರಸ್ ಚಿತ್ರದ ಮೂಲಕ ನಾಯಕ ನಟನಾಗಿಯೂ ಅಬ್ಬರಿಸಿದ್ದಾರೆ. ಇದೀಗ ಝೈದ್ ಖಾನ್ ಖಾನ್ ಕಲ್ಟ್ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಕರ್ನಾಟಕದ ಹಲವು ಭಾಗದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಹೀಗೆ ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಯುತ್ತಿರುವ ವೇಳೆ ಡ್ರೋನ್ ಡ್ಯಾಮೇಜ್ ಆಗಿದೆ.
ಚಿತ್ರದುರ್ಗದಲ್ಲಿನ ಭಾರಿ ಗಾಳಿ ನಡುವೆ ಡ್ರೋನ್ ಹಾರಿಸಲು ಚಿತ್ರತಂಡ ತಾಕೀತು ಮಾಡಿದೆ. ಬಾಡಿಗೆ ಪಡೆದು ಡ್ರೋನ್ ಪಡೆದಿದ್ದೇವೆ. ಇಲ್ಲಿ ಚಿತ್ರದ ಶೂಟಿಂಗ್ ಮಾಡಬೇಕಿದೆ. ಹೀಗಾಗಿ ಎತ್ತರಕ್ಕೆ ಡ್ರೋನ್ ಹಾರಿಸುವಂತೆ ಸಂತೋಷ್‌ಗೆ ಕಲ್ಟ್ ಚಿತ್ರತಂಡ ಎಚ್ಚರಿಸಿದೆ. ಅನಿವಾರ್ಯವಾಗಿ ಸಂತೋಷ್ ಭಾರಿ ಗಾಳಿ ನಡುವೆ ಡ್ರೋನ್ ಹಾರಿಸಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ಡ್ರೋನ್ ಡ್ಯಾಮೇಜ್ ಆಗಿದೆ. ಕಲ್ಲು ಬಂಡೆಗಳಿಗೆ ಬಡಿದು ಡ್ರೋನ್ ಸಂಪೂರ್ಣವಾಗಿ ಹಾಳಾಗಿದೆ.
ಬರೋಬ್ಬರಿ 25 ಲಕ್ಷ ರೂಪಾಯಿ ಮೌಲ್ಯದ ಡ್ರೋನ್ ಕೆಲವೇ ನಿಮಿಷಗಳಲ್ಲಿ ಹಾಳಗಿದೆ. ಶೂಟಿಂಗ್ ಸೆಟ್‌ನಲ್ಲಿ ಗಳಗಳನೇ ಅತ್ತ ಸಂತೋಷ್, ಇಷ್ಟು ದೊಡ್ಡ ಮೊತ್ತದ ಹಾನಿ ಭರಿಸಲು ತನ್ನಲ್ಲಿ ಶಕ್ತಿ ಇಲ್ಲ ಎಂದಿದ್ದಾನೆ. ಇಷ್ಟೇ ಅಲ್ಲ ಚಿತ್ರತಂಡ ನಷ್ಟ ಭರಿಸುವಂತೆ ಮನವಿ ಮಾಡಿದ್ದಾನೆ. ಆದರೆ ಕಲ್ಟ್ ಚಿತ್ರತಂಡ ಇದಕ್ಕೆ ಸೊಪ್ಪು ಹಾಕಿಲ್ಲ. ನಾವು ಡ್ರೋನ್ ಬಾಡಿಗೆ ಪಡೆದಿದ್ದೇನೆ. ಡ್ರೋನ್ ಆಪರೇಟ್ ಕೂಡ ಮಾಡಿಲ್ಲ. ಹೀಗಾಗಿ ನಷ್ಟ ಭರಿಸುವ ಪ್ರಮೇಯ ಕಲ್ಟ್ ಚಿತ್ರತಂಡದ ಮುಂದಿಲ್ಲ ಎಂದಿದ್ದಾರೆ.
25 ಲಕ್ಷ ರೂಪಾಯಿ ಬಂಡವಾಳದ ಡ್ರೋನ್ ಡ್ಯಾಮೇಜ್ ಆದ ಕಾರಣ ಸಂತೋಷ್ ಕಂಗಾಲಾಗಿದ್ದಾರೆ. ಹೀಗಾಗಿ ಸಂತೋಷ್ ಬದುಕು ಅಂತ್ಯಗೊಳಿಸಲು ಪ್ರಯತ್ನಿಸಿದ್ದ. ಆದರೆ ಅದೃಷ್ಠವಶಾತ್ ಬಚಾವ್ ಆಗಿದ್ದ. ಇತ್ತ ಘಟನೆ ಗಂಭೀರವಾಗುತ್ತಿದ್ದಂತೆ ಪೊಲೀಸರು ರಂಗ ಪ್ರವೇಶಿಸಿದ್ದಾರೆ. ಕಲ್ಟ್ ಚಿತ್ರ ನಿರ್ದೇಶಕನ ವಿರುದ್ದ ಹಾಗೂ ನಾಯಕ ನಟ ಝೈದ್ ಖಾನ್ ವಿರುದ್ದ ಪ್ರಕರಣ ದಾಖಲಾಗಿತ್ತು. ಈ ಘಟನೆ ಹೊರಬರುತ್ತಿದ್ದಂತೆ ಸಚಿವ ಜಮೀರ್ ಅಹಮ್ಮದ್ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದರು. ತಾನು ಹಾಗೂ ಪುತ್ರ ಝೈದ್ ಖಾನ್ ಸಂತೋಷ್‌ಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಇದರಿಂತ ಇದೀಗ ಪರಿಹಾರದ ಚೆಕ್‌ನ್ನು ಸಂತೋಷ್‌ಗೆ ಚಿತ್ರತಂಡ ಹಸ್ತಾಂತರಿಸಿದೆ. ಇದರ ಬೆನ್ನಲ್ಲೇ ಸಂತೋಷ್ ಕಲ್ಟ್ ವಿರುದ್ದ ದಾಖಲಿಸಿದ್ದ ದೂರನ್ನು ಹಿಂಪಡೆದಿದ್ದಾರೆ.
ಚಿತ್ರತಂಡ ಈ ಕುರಿತು ಸಂತಸ ಹಂಚಿಕೊಂಡಿದ್ದು, ಕೆಲ ಸಮಸ್ಯೆಗಳ ಕಾರಣ ಪರಿಹಾರ ಬಿಡುಗಡೆ ವಿಳಂಬವಾಗಿದೆ. ಝೈದ್ ಖಾನ್ ಹಾಗೂ ಜಮೀರ್ ಅಹಮ್ಮದ್ ಖಾನ್ ನೆರವಿನಿಂದ ಪರಿಹಾರ ನೀಡಲಾಗಿದೆ. ಇದೀಗ ಚಿತ್ರತಂದ ಶೂಟಿಂಗ್‌ನಲ್ಲಿ ತೊಡಗಿಸಿದೆ. ಶೀಘ್ರದಲ್ಲೇ ಚಿತ್ರದ ಶೂಟಿಂಗ್ ಪೂರ್ಣಗೊಳ್ಳಲಿದೆ. ಬಳಿಕ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯಲಿದೆ ಎಂದಿದೆ.