
ಸ್ಯಾಂಡಲ್‌ವುಡ್‌ನ ಯುವ ರೈಟರ್, ಕಾಂತಾರ ಚಿತ್ರದ ಖ್ಯಾತಿಯ ಲಿರಿಕ್ ರೈಟರ್ ಪ್ರಮೋದ್ ಮರವಂತೆಗೆ (Pramod Maravanthe) ಸಿಂಗರ್ ಸುಚೇತಾ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆ. ಡಿ.5ರಂದು ಕುಂದಾಪುರದಲ್ಲಿ ಇವರಿಬ್ಬರ ವಿವಾಹ ನೆರವೇರಿದೆ.
ಸದ್ಯ ಅವರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಕಳೆದ ಸೆಪ್ಟೆಂಬರ್ ನಲ್ಲಿ ನಿಶ್ಚಿತಾರ್ಥದ ಫೋಟೋ ಹಾಕಿದ್ದ ಪ್ರಮೋದ್ "ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ" ಎಂದು ಸಾಲು ಬರೆದು ಅಭಿಮಾನಿಗಳಿಗೆ ತನ್ನ ಭಾವೀ ಪತ್ನಿಯನ್ನು ಪರಿಚಯಿಸಿಕೊಟ್ಟಿದ್ದರು.
ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಸೇರಿದಂತೆ ಹಲವು ಮನಮುಟ್ಟುವ ಹಾಡುಗಳಿಗೆ ತಮ್ಮ ಸಾಹಿತ್ಯ ನೀಡಿರುವ ಪ್ರಮೋದ್ ಮರವಂತೆ ಮತ್ತು ಸುಚೇತಾ ಮದುವೆಯ ಶುಭ ಸಮಾರಂಭಕ್ಕೆ ರಿಷಬ್ ಶೆಟ್ಟಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ನಟ, ನಟಿಯರು, ನಿರ್ದೇಶಕರು ಹಾಜರಾಗಿದ್ದರು.
ಸಲೂನ್‌ನಿಂದ ಹೊರಬರುವಾಗ ಶರ್ಟ್ ಬಟನ್ ಬಿಚ್ಚಿ ಬಂದ ಮಲೈಕಾ ಪುಲ್ ಟ್ರೋಲ್!
ಸುಚೇತ ಬಸ್ರೂರು. ಹಾಡುಗಾರ್ತಿ ಬಸ್ರೂರು ಗರಡಿಯಲ್ಲಿ ಬೆಳೆದಾಕೆ. ಕೆಜಿಎಫ್ 2 ಚಿತ್ರದ ಗಗನ ನೀ ಭುವನ ನೀ.. ಶಿಖರ..ನೀ..ಧಣಿದರೆ ಧರಣಿಗೆ ಉದಯ ನೀ ಹಾಡಿಗೆ ಧ್ವನಿಯಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದು, ಅವರ ಅಕ್ಕನ ಮಗಳಾಗಿದ್ದಾರೆ. ಇವರ ಸಹೋದರ ಸಚಿನ್ ಅಲ್ಬಂ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಗಲಿದ ಅಕ್ಕನ ಹುಟ್ಟುಹಬ್ಬ ನೆನೆದು ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರಾದ ಭವ್ಯಾ ಗೌಡ
ಕನ್ನಡದ ಕಾಂತಾರದ ಸುಮಧುರ ಹಾಡುಗಳಲ್ಲಿ ಒಂದು ಸಿಂಗಾರ ಸಿರಿಯೆ ಹಾಡು ಸೇರಿದಂತೆ ಹಲವು ಸೂಪರ್ ಹಿಟ್ ಹಾಡುಗಳನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ಮಾತ್ರವಲ್ಲ ಕಿರುತೆರೆಯ ಫೇಮಸ್ ಧಾರವಾಹಿ ಸೀತಾರಾಮ ಗೂ ಇವರೇ ಟೈಟಲ್ ಟ್ರ್ಯಾಕ್ ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.