ಡಾ. ವಿಷ್ಣುವರ್ಧನ್ ಮಾತಿನ ಪ್ರಕಾರ ನೀವು ಬದುಕಿದರೆ ಆರೋಗ್ಯ ಸೂಪರ್; ಹಳೆ ವಿಡಿಯೋ ವೈರಲ್!

By Vaishnavi Chandrashekar  |  First Published Jun 30, 2023, 3:09 PM IST

 ವೈರಲ್ ಆಯ್ತು ಡಾ. ವಿಷ್ಣುವರ್ಧನ್ ಹಳೆ ವಿಡಿಯೋ. ಆರೋಗ್ಯವಾಗಿರಲು ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯವೂ ಮುಖ್ಯ ಎಂದ ನಟ.... 


ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಅಗಲಿ 14 ವರ್ಷ ಕಳೆದಿದೆ. ತೆರೆ ಮೇಲೆ ಮಾತ್ರವಲ್ಲದೆ ರಿಯಲ್ ಲೈಫ್‌ನಲ್ಲೂ ದಾದಾ ರಿಯಲ್ ಹೀರೋ ಆಗಿದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಕನ್ನಡಿಗರ ಪ್ರೀತಿ ಗಳಿಸಿದ್ದರು. ಆರೋಗ್ಯ ವಿಚಾರದಲ್ಲಿ ಸಿಕ್ಕಾಪಟ್ಟೆ ಶಿಸ್ತಿತ್ತು. ಹಲವು ವರ್ಷಗಳ ಹಿಂದೆ ಸಂಜೀವಿನಿ ಕಾರ್ಯಕ್ರಮದಲ್ಲಿ ಆರೋಗ್ಯದ ಬಗ್ಗೆ ವಿಷ್ಣು ದಾದಾ ಮಾತನಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

'ಆರೋಗ್ಯ ತುಂಬಾನೇ ಮುಖ್ಯವಾಗುತ್ತದೆ. ನಮ್ಮ ನಡೆ ನುಡಿ ಪರಿಸರ ಆಹಾರ ಮೇಲೆ ನಮ್ಮ ಆರೋಗ್ಯ ಡಿಪೆಂಡ್ ಆಗುತ್ತದೆ. ನಾವು ಹೊರಗಡೆ ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತೀವಿ ಒಳಗಡೆನೂ ಅಷ್ಟೇ ಚೆನ್ನಾಗಿ ಇಟ್ಟುಕೊಳ್ಳಬೇಕು. ಅಜ್ಞಾನದಿಂದ ದುಖಃ, ದುಖಃದಿಂದ ರೋಗ, ರೋಗದಿಂದ ಭಯ. ಭಯ ಬಂದಾಗ ನಮ್ಮ ಇಡೀ ದೇಹದಲ್ಲಿ ವಿಷವಾಗುತ್ತದೆ ಅಂತಾರೆ. ಪ್ರತಿಯೊಬ್ಬರು ಮಾಡಬೇಕು ನಾನು ಕೂಡ ಮಾಡಲು ಶುರು ಮಾಡಿರುವೆ..ಕಣ್ಣು ಮುಚ್ಚಿಕೊಂಡು ನಮ್ಮೊಳಗೆ ಇರುವುದನ್ನು ನೋಡಬೇಕು ಆಗ ನಮ್ಮ ದೇಹ ಮಾಡುತ್ತಿರುವ ಕೆಲಸಕ್ಕೆ ಕೃತಜ್ಞತೆ ಹೇಳಬೇಕು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ನಮ್ಮ ದೇಹ ಚೆನ್ನಾಗಿ ಕೆಲಸ ಮಾಡುತ್ತದೆ ಪ್ರಪಂಚವನ್ನು ಕಾಣಿಸುತ್ತದೆ ನಮಗೆ ಬೇಕಿರುವ ರೀತಿಯಲ್ಲಿ ಕೆಲಸ ಮಾಡುತ್ತದೆ ಹೀಗಾಗಿ ಅರೋಗ್ಯದ ಬಗ್ಗೆ ಕಾಳಜಿ ಇರಬೇಕು ಹಾಗೂ ಕೊಂಚ ಅರಿವು ಇರಬೇಕು. ಆರೋಗ್ಯ ಅಂತ ಬಂದಾಗ ಮಾನಸಿಕ ಹಾಗೂ ದೈಹಿಕ ಎರಡಕ್ಕೂ ಪ್ರಮುಖ್ಯತೆ ನೀಡಬೇಕು ಆಗ ನಮ್ಮ ಅಭ್ಯಾಸ, ಹವ್ಯಾಸ, ತಿನ್ನುವ ಆಹಾರ ಹಾಗೂ ನಮ್ಮ ಮಾತು ಪ್ರತಿಯೊಂದು ಚೆನ್ನಾಗಿರುತ್ತದೆ' ಎಂದು ಡಾ. ವಿಷ್ಣುವರ್ಧನ್ ಮಾತನಾಡಿದ್ದಾರೆ.

Tap to resize

Latest Videos

ವಿಷ್ಣುವರ್ಧನ್ ಸಾವಿನ ಮುನ್ಸೂಚನೆ ಸಾಯಿ ಬಾಬ ನನಗೆ ಮೊದಲೇ ಕೊಟ್ಟಿದ್ದರು: ಎಸ್‌ ನಾರಾಯಣ್

'ಆಯುರ್ವೇದವನ್ನು ಯಾರು ಎಷ್ಟು ಸ್ವಾರ್ಥದಿಂದ ತುಳಿದರೂ ಅದರಲ್ಲಿರುವ ಒಳ್ಳೆ ತನ ಇನ್ನು ಹೆಚ್ಚು ಹೊರ ಬರುತ್ತಿದೆ. ವಿದೇಶದಲ್ಲಿರುವ ವೈದ್ಯರು ಆಯುರ್ವೇದವನ್ನು ರೆಫರ್ ಮಾಡುತ್ತಿದ್ದಾರೆ. ಮನಸ್ಸಿಗೆ ಕೆಲವೊಂದು ವ್ಯಾಯಾಮ ಇರುತ್ತದೆ ಹಾಗು ದೇಹಕ್ಕೂ ಕೆಲವೊಂದು ಎಕ್ಸರ್ಸೈಜ್ ಮಾಡಬೇಕು ಹಿಂದೆ ಪ್ರಾಣಾಯಾಮ ಯೋಗ ಮಾಡುವವರು ಸುಮ್ಮನೆ ಮಾಡುತ್ತಿರಲಿಲ್ಲ ಅದಕ್ಕೊಂದು ಉದ್ದೇಶವಿತ್ತು ಅದರಿಂದ ನಮ್ಮ ಶಕ್ತಿ ನಮ್ಮ ಮುಂದಿನ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿತ್ತು. ಅದೆಷ್ಟೋ ಜನರು ಇದನ್ನು ಮರೆಯುತ್ತಿದ್ದಾರೆ. ಒಳ್ಳೆ ಪರಿಸರದಲ್ಲಿ ಇದ್ದರೆ ಮಾತ್ರ ಒಳ್ಳೆ ವಿಚಾರದ ಕಡೆ ಗಮನ ಕೊಡಲು ಸಾಧ್ಯ. ಜನರು ಒತ್ತಡದಲ್ಲಿ ಬದುಕುತ್ತಿದ್ದಾರೆ, ಯಾರೊಬ್ಬರು ಪ್ರಯಾಣ ಮಾಡುವಾಗ ನೆಮ್ಮದಿಯಿಂದ ಪ್ರಯಾಣ ಮಾಡುವುದಿಲ್ಲ ಏನೋ ಒಂದು ಕೆಲಸ ಮಾಡುತ್ತಿರುತ್ತಾರೆ ಕಷ್ಟ ಪಡುತ್ತಿರುತ್ತಾರೆ ಯೋಚನೆ ಮಾಡುತ್ತಿರುತ್ತಾರೆ. ಜೀವನದಲ್ಲಿ ಗುರಿ ಇಲ್ಲ ಹಾಗೂ ಹಿಂದೆ ಗುರು ಇಲ್ಲ ಅಂದ್ರೆ ಜೀವನ ಕಷ್ಟ. ದಿನ ಬೆಳಗ್ಗೆ ಮಂತ್ರಗಳು ಶ್ಲೋಕಗಳನ್ನು ಹೇಳಬೇಕು ಏಕೆಂದರೆ ಪ್ರಪಂಚದಲ್ಲಿರುವ ಜ್ಞಾನದ ಬೆಳಕು  ಆಯುರ್ವೇದ ಮಾನಸಿಕ ನೆಮ್ಮದಿ ಪ್ರತಿಯೊಂದು ಇದರಲ್ಲಿ ಇರುತ್ತದೆ. ಸರಿಯಾಗಿ ಆಹಾರ ತಿನ್ನದೆ ದೇಹ ಕೆಡಸಿಕೊಳ್ಳುತ್ತೀವಿ, ವ್ಯಾಯಾಮ ಮಾಡದೆ ದೇಹ ಕೆಡಸಿಕೊಳ್ಳುತ್ತೀವಿ. ಜನರಿಗೆ ದೇಹದ ಬಗ್ಗೆ ಗೌರವ ಇಲ್ಲದೆ ಆರೋಗ್ಯ ಕೆಡಿಸಿಕೊಳ್ಳುತ್ತಿಲ್ಲ ಜ್ಞಾನ ಪರಿಜ್ಞಾನ ಇಲ್ಲದೆ ಕೆಡಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದನ್ನು ಇಹಿ ಮಿತಿಯಲ್ಲಿ ಸೇವಿಸಬೇಕು ಹಾಗೂ ಹಾಗೇ ಮಾತನಾಡಬೇಕು' ಎಂದು ದಾದಾ ಹೇಳಿದ್ದಾರೆ.

ಡಾ.ವಿಷ್ಣುವರ್ಧನ್ ಸಾಯುವ 15 ದಿನಗಳ ಮುನ್ನ ಏನಾಯ್ತು?; ಘಟನೆ ನೆನೆದು ಕಣ್ಣೀರಿಟ್ಟ ನಟ ಅಭಿಜಿತ್

ಪ್ರಾಣಿಗಳ ಆರೋಗ್ಯದಲ್ಲಿ ಸಮಸ್ಯೆ ಕಾಣಿಸುವುದಿಲ್ಲ ಕೆಲವು ವರ್ಷಗಳ ಹಿಂದೆ ನಡೆದ ಅಧ್ಯಾಯನದ ಪ್ರಕಾರ ಪ್ರಣಿಗಳಲ್ಲಿ ಹೊಸ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿಲ್ಲ. ಮನುಷ್ಯನಿಗೆ ಹೊಟ್ಟೆ ಹಸಿವು ಒಂದು ಸೈಕಾಲಾಜಿಕಲ್ ಕಾಲ್‌ ಟೈಂ ನೋಡಿ ಊಟ ಮಾಡಬೇಕು ಅನಿಸುತ್ತದೆ ಇದೆಲ್ಲಾ ಕೆಟ್ಟ ಅಭ್ಯಾಸಗಳು. ನಮಗೆ ಏನು ಬೇಕು ಬೇಡ ಎಂದು ಯೋಚನೆ ಮಾಡದೆ ತಿನ್ನುತ್ತಿದ್ದಾರೆ ಮನುಷ್ಯರು. ರಾಜಸ್ಥಾನದಲ್ಲಿರುವ ಆಹಾರ ಶೈಲಿಯನ್ನು ನಾವು ಫಾಲೋ ಮಾಡಿದರೆ ನಮ್ಮ ದೇಹ ಒಪ್ಪಿಕೊಳ್ಳುವುದಿಲ್ಲ. ದೊಡ್ಡವರು ಹೇಳುವುದನ್ನು ಕೇಳಿಸಿಕೊಳ್ಳಬೇಕು ಯಾವ ಕಾರಣ ಇಲ್ಲದೆ ರೀತಿ ನೀತಿ ಮಾಡುವುದಿಲ್ಲ ಎಂದಿದ್ದಾರೆ ದಾದಾ.  

click me!