
ದಕ್ಷಿಣ ಭಾರತ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿ ಮಾಡಿದ ಕನ್ನಡ ಸಿನಿಮಾ ಅಂದ್ರೆ ಪುಷ್ಪ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ಜಾಲಿ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ಸೌತ್ ಸಿನಿಮಾರಂಗದಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ಸ್ ಕೇಳಿ ಬಂದಿತ್ತು. ಅದರಲ್ಲೂ ಜಾಲಿ ರೆಡ್ಡಿ ಮಾಡೋ ಕೆಲಸಗಳನ್ನು ನೋಡಿ ಛೇ ನಮ್ಮ ಧನು ಈ ಪಾತ್ರ ಒಪ್ಪಿಕೊಳ್ಳಬಾರದಿತ್ತು ಅಂತ ಅದೆಷ್ಟೋ ಮಂದಿ ಕಾಮೆಂಟ್ ಮಾಡಿದ್ದಾರೆ. ಎರಡನೇ ಭಾಗದಲ್ಲಿ ಜಾಲಿ ರೆಡ್ಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಧನು ಯಾವ ರೀತಿ ಜನರಿಗೆ ಹತ್ತಿರವಾಗುತ್ತಾನೆಂದು ನೋಡಬೇಕಿದೆ. ಈ ಸಿನಿಮಾ ನೋಡಿ ಧನ ಆಪ್ತ ಸ್ನೇಹಿತರ ಲೂಸ್ ಮಾದಾ ಯೋಗಿ ಏನು ಹೇಳಿದ್ದಾರೆ ಗೊತ್ತಾ?
ನಂಗೆ ಅಂತ ಏನೂ ಮಾಡ್ಕೊಂಡಿಲ್ಲ, ಹೆಂಡ್ತಿ ಕೆಲಸಕ್ಕೆ ಹೋಗ್ತಾಳೆ: ಲೂಸ್ ಮಾದ ಯೋಗಿ
'ಧನಂಜಯ್ ಮತ್ತು ನನ್ನ ಸ್ನೇಹದಲ್ಲಿ ಯಾವ ಕ್ಯೂಟ್ ಕ್ಷಣವೂ ಇಲ್ಲ. ನಾವಿಬ್ಬರು ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ಆಗಿದ್ದರೆ ಒಳ್ಳೆ ಕ್ಯೂಟ್ ಕ್ಷಣಗಳು ಇರುತ್ತಿತ್ತು ಅಷ್ಟು ಕ್ಲೋಸ್ ಆಗಿದ್ದೀವಿ. ಒಂದು ವಿಚಾರ ಏನೆಂದರೆ ಧನುಗೆ ನಾನು ಆಗಾಗ ಫೂನ್ ಮಾಡಿ ಪೂನ್ ಮಾಡಿ ಬೈಯುತ್ತಲೇ ಇರುವೆ. ಟಿವಿಯಲ್ಲಿ ಏನಾದರೂ ವಿಚಾರ ನೋಡಿದಾಗ ಅಥವಾ ಕೆಲವೊಂದು ಮಾಡಬಾರದಂತೆ ವಿಚಾರಗಳನ್ನು ಮಾಡಿದಾಗ ನನಗೆ ಇಷ್ಟ ಆಗದ ರೀತಿಯಲ್ಲಿ ನಡೆದುಕೊಂಡಾಗ ಫೂನ್ ಮಾಡಿ ಹೇಳುವೆ. ನಮ್ಮ ಇಂಡಸ್ಟ್ರಿಗೆ ಧನಂಜಯ್ ದೊಡ್ಡ ಪಿಲ್ಲರ್ ರೀತಿ ಯಾವ ಯಾವ್ದೋ ಆಯ್ಕೆ ಮಾಡಿಕೊಂಡು ಕಾಂಟ್ರವರ್ಸಿ ಮಾಡಿಕೊಳ್ಳಬಾರದು ನಿಜ ಹೇಳಬೇಕು ಅಂದ್ರೆ ಪುಷ್ಪ ಸಿನಿಮಾ ಸಮಯದಲ್ಲಿ ಕರೆ ಮಾಡಿ ಬೈದೆ ಯಾಕೋ ಮಾಡಿದೆ ನೀನು ಈ ಸಿನಿಮಾನಾ? ಕಟ್ಟಾಕಿ ಮಲಗಿಸಿಬಿಟ್ಟಿದ್ದಾರೆ ಹೇಗೋ ನೆಮ್ಮದಿಯಾಗಿದ್ದೆ ಅಂತ. ಈ ರೀತಿ ವಿಚಾರಗಳಿಗೆ ಅಷ್ಟೆ ಕಾಲ್ ಮಾಡಿ ಮಾತನಾಡುವುದು. ಹೆಡ್‌ಬುಷ್ ಸಿನಿಮಾ ಶೂಟಿಂಗ್ ಆದ್ಮೇಲೆ ಟ್ರಿಪ್ ಕರೆದುಕೊಂಡು ಹೋಗ್ತೀನಿ ಎಂದು ಧನಂಜಯ್ ಹೇಳಿದ್ದ ಆದರೆ ಅಷ್ಟರಲ್ಲಿ ಶ್ರೀಲಂಕಾ ಡಮ್ ಅಂದುಬಿಟ್ಟಿದೆ. ಕೆಲವು ದಿನಗಳ ಹಿಂದೆ ಧನು ಎಲ್ಲೋ ಟ್ರಿಪ್ ಹೋಗಿದ್ದ ಕಾಲ್ ಮಾಡಿ ಯಾಕೋ ಬಿಟ್ಟು ಹೋದೆ ಎಂದು ಕೇಳಿದೆ ಇರು ಗುರು ನಾವು ಹೋಗೋಣ ಎಂದು ಹೇಳಿದ' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಲೂಸ್ ಮಾದಾ ಮಾತನಾಡಿದ್ದಾರೆ.
ಲೂಸ್ ಮಾದ ಯೋಗಿ ಪುತ್ರಿ ವಿಡಿಯೋ ವೈರಲ್; ಟ್ವಿಂಕಲ್ ಹಾಡು ಕೇಳಿದ್ದೀರಾ?
'ಹೆಡ್‌ಬುಷ್ ಸಿನಿಮಾದಲ್ಲಿ ಚಿತ್ರೀಕರಣದಲ್ಲಿ ಧನಂಜಯ್ ಮತ್ತು ಅವನ ನಿರ್ಮಾಣ ಸಂಸ್ಥೆ ಉಪಾಚಾರವನ್ನು ಸಖತ್ ಎಂಜಾಯ್ ಮಾಡಿರುವುದರ ಬಗ್ಗೆ ಲೂಸ್ ಖುಷಿಯಿಂದ ಹೇಳಿಕೊಂಡಿದ್ದರು. ದಿನವೂ ಸೆಟ್‌ನಲ್ಲಿ ವೆರೈಟಿ ಅಡುಗೆ ಮಾಡಿಸುತ್ತಿದ್ದ ಒಂದು ದಿನ ಚಿಕನ್ ಮತ್ತೊಂದು ದಿನ ಮಟನ್ ಫಿಶ್ ಪ್ರಾನ್ಸ್ ಎಲ್ಲಾ ಮಾಡಿಸುತ್ತಿದ್ದ ಇದು ಕಲಾವಿದರಿಗೆ ಮಾತ್ರವಲ್ಲ ಚಿತ್ರತಂಡದಲ್ಲಿ ಇರುವ ಪ್ರತಿಯೊಬ್ಬರಿಗೂ ಅದೇ ಊಟ ಇತ್ತು' ಈ ಮಾತುಗಳನ್ನು ಹೆಡ್‌ಬುಷ್ ಸಿನಿಮಾ ಪ್ರಚಾರದ ವೇಳೆ ಹೇಳಿರುವುದು ಆದರೆ ಪುಷ್ಪ 2 ಈಗ ಟ್ರೆಂಡ್ ಆಗುತ್ತಿರುವ ಕಾರಣ ಮತ್ತೊಮ್ಮೆ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.