
ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಅಂಗವಾಗಿ ಆಯೋಜಿಸಿರುವ ಅಮೃತ ಮಹೋತ್ಸವ ಕಾರ್ಯಕ್ರಮವು ನಾಳೆ, ಅಂದರೆ 27 ಸೆಪ್ಟೆಂಬರ್ 2026 ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ನಡೆಯಲಿದೆ. ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಯಾರೆಲ್ಲಾ ಬರಲಿದ್ದಾರೆ, ಏನೆಲ್ಲಾ ಕಾರ್ಯಕ್ರಮಗಳಿವೆ? ಮುಂದೆ ನೋಡಿ..
ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಕಾರ್ಯಕ್ರಮ ಆಯೋಜನೆಯಾಗಿದ್ದು, ಬೆಳಗ್ಗೆ 9.30 ಕ್ಕೆ ಕನ್ನಡದ ಕಲಾವಿದರು ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ನಟ ಶ್ರೀನಾಥ್, ಶೃತಿ, ರಮೇಶ್ ಅರವಿಂದ್, ಜಯಮಾಲಾ, ಅವಿನಾಶ್, ಮಾಳವಿಕಾ ಅವಿನಾಶ್, ಎಸ್. ನಾರಾಯಣ್ ಸೇರಿದಂತೆ ಹಲವು ಕಲಾವಿದರಿಂದ ಉದ್ಘಾಟನೆ ಆಗಲಿದೆ.
ಬಳಿಕ ವಿಷ್ಣುವರ್ಧನ್ ಆಪ್ತರಿಂದ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಕನ್ನಡದ ಪ್ರಸಿದ್ಧ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಒಂದು ಗಂಟೆ 'ಸಂಗೀತ ರಸ ಮಂಜರಿ' ಕಾರ್ಯಕ್ರಮ ನಡೆಯಲಿದೆ. ಕನ್ನಡದ ಹಲವು ಕಲಾವಿದರು ಡಾ ವಿಷ್ಣುವರ್ಧನ್ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡಲಿದ್ದು, ಪ್ರೇಕ್ಷಕರನ್ನು ಆ ಕಾಲಕ್ಕೆ, ನೃತ್ಯಲೋಕದ ಮನಮೋಹಕ ಲೋಕಕ್ಕೆ ಕರೆದೊಯ್ಯಲಿದ್ದಾರೆ.
ಬಳಿಕ- ಗಾಯಕ ವಿಜಯ್ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮವಿದೆ.
ಸಂಜೆ 5 ಗಂಟೆಗೆ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ ನಟರಾದ ಶಿವರಾಜ್‌ಕುಮಾರ್, ರವಿಚಂದ್ರನ್, ಕಿಚ್ಚ ಸುದೀಪ್, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 7:00 ಗಂಟೆಯಿಂದ ವಸಿಷ್ಠ ಸಿಂಹ, ನವೀನ್ ಕೃಷ್ಣ, ಕಾರುಣ್ಯ ರಾಮ್ ಸೇರಿದಂತೆ ಹಲವಾರು ಕಲಾವಿದರಿಂದ ಸಾಂಸ್ಕೃತಿಕ ಹಾಗೂ ಕಲಾ ಪ್ರದರ್ಶನ, ಲೇಸರ್ ಶೋ ಮತ್ತು ಡಿಜೆ ಕಾರ್ಯಕ್ರಮ ಇರಲಿದೆ.
ನಾಳಿನ ಈ ಕಾರ್ಯಕ್ರಮಕ್ಕೆ ಸುಮಾರು 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ.
ಬೆಳಗ್ಗೆ 6.30 ಕ್ಕೆ ವಿಷ್ಣುವರ್ಧನ್ ಹೆಸರಿನಲ್ಲಿ 500 ಮೀಟರ್ ಉದ್ಧದ ಕನ್ನಡ ಧ್ವಜವನ್ನು ಅನಾವರ ಮಾಡಲಿದ್ದಾರೆ. ಸುಮಾರು 2 ಸಾವಿರ ಅಭಿಮಾನಿಗಳು ಆ ಧ್ವಜವನ್ನ ಹೊತ್ತು ಮೆರವಣಿಗೆ ಮಾಡಲಿದ್ದಾರೆ.
ದಿನಾಂಕ: ಸೆಪ್ಟೆಂಬರ್ 27, 2026
ಸಮಯ: ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 12:00 ಗಂಟೆಯವರೆಗೆ (18 ಗಂಟೆಗಳ ಕಾಲ)
ಸ್ಥಳ: ನಂದಿ ಲಿಂಕ್ ಗ್ರೌಂಡ್, ಬೆಂಗಳೂರು
ವಿಶೇಷತೆ: ಕನ್ನಡ ಚಿತ್ರರಂಗದ ಗಣ್ಯರು, ಬಹುಭಾಷಾ ನಟರು ಹಾಗೂ ಅಭಿಮಾನಿಗಳು ಒಂದೇ ವೇದಿಕೆಯಲ್ಲಿ ಮೇಳೈಸಿ, ನಟ, ‘ಸಾಹಸಸಿಂಹ’ ಖ್ಯಾತಿಯ ಡಾ. ವಿಷ್ಣುವರ್ಧನ್ ಅವರ ನೆನಪುಗಳನ್ನು ಹಾಗೂ ಸಾಧನೆಯನ್ನು ಕೊಂಡಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.