ಇದೀಗ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಈ ಫೋಟೋ ನ್ಯೂಸ್ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ನಟ ವಿಷ್ಣುವರ್ಧನ್ ಅವರು ಬದುಕಿದ್ದಾಗಲೇ ಹಲವರಿಗೆ ಹೇಳಿದ್ದ ಈ ಮಾತುಗಳು ಇಂದು ಭಾರೀ ವೈರಲ್ ಆಗುತ್ತಿವೆ. ಈ ಸುದ್ದಿಗೆ ಸಾಕಷ್ಟು ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. 'ಅವರಿಬ್ಬರೂ ಬದುಕಿದ್ದಾಗಲೇ..
ಕನ್ನಡದ ಮೇರು ನಟರಾದ ಡಾ ರಾಜ್‌ಕುಮಾರ್ (Dr Rajkumar) ಹಾಗು ಡಾ ವಿಷ್ಣುವರ್ಧನ್ (Dr Vishnuvardhan) ಅವರಿಬ್ಬರ ಮಧ್ಯೆ ಹೇಗಿತ್ತು? ಹಾಗಿತ್ತು ಹೀಗಿತ್ತು, ಎಲ್ಲವೂ ಸರಿಯಿರಲಿಲ್ಲ ಮನಸ್ತಾಪವಿತ್ತು ಎಂಬ ಚರ್ಚೆ ಅಂದಿಗೂ ಇಂದಿಗೂ ಮುಗಿಲಲಾರದ ಚರ್ಚೆಯಾಗಿಯೇ ಉಳಿದಿದೆ. ಆದರೆ ಇದೀಗ ಅಂಥಹ ಎಲ್ಲಾ ಹಳೆಯ ಚರ್ಚೆಗೆ ಫುಲ್‌ಸ್ಟಾಪ್ ಇಡುವ ಕಾಲ ಬಂದಿದೆ ಎನ್ನಬಹುದು. ಅದು ಹೇಗೆ ಎಂಬ ಕುತೂಹಲ ನಿಮಗಿದ್ದರೆ, ಈ ಸ್ಟೋರಿಯನ್ನು ತಪ್ಪದೇ ನೋಡಿ, ಜೊತೆಗೆ ಕೊನೆಯವರೆಗೂ ಓದಿ..
ಮೈಸೂರಿನಲ್ಲಿ ಕೋಟಿಗೊಬ್ಬ ಶೂಟಿಂಗ್‌ನಲ್ಲಿದ್ದೆ. ಡಾ ರಾಜ್‌ಕುಮಾರ್ ಫೋನ್ ಕಾಲ್ ಮಾಡಿದ್ರು. 'ಯಜಮಾನ' ಚಿತ್ರವನ್ನು ನೋಡಿದ ಬಳಿಕ ನನಗೆ ಕಾಲ್ ಮಾಡಿದ್ದರು. ನನಗೆ ಶಾಕ್ ಆಯ್ತು.., ನಂಬಲು ಸಾಧ್ಯವೇ ಆಗಲಿಲ್ಲ. ಮೊದಲ ಬಾರಿಗೆ ಫೋನ್‌ನಲ್ಲಿ ಅವರೊಂದಿಗೆ ಮಾತನಾಡಿದ್ದು. ಅವರೇ ಮಾತನಾಡಿ 'ವಿಷ್ಣು, ನಾನು ಯಜಮಾನ (Yajamana) ಸಿನಿಮಾ ನೋಡಿದೆ. ಈ ಸಿನಿಮಾ ತುಂಬಾ ಚೆನ್ನಾಗಿದೆ. ಅದೇ ಗುಂಗಿನಲ್ಲಿದ್ದೀನಿ.. ನಾನು ನಿನ್ನನ್ನು ನೋಡಬೇಕು, ಎಲ್ಲಿದ್ದೀಯಾ?' ಅಂದ್ರು.
ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!
ನಾನು 'ಸರ್, ನಾನು ಮೈಸೂರಿನಲ್ಲಿದ್ದೇನೆ..' ಅಂದೆ. ಅದಕ್ಕವರು 'ನಾನು ನಿನ್ನನ್ನು ನೋಡಬೇಕು. ನಾನು ಬರ್ತೀನಿ, ಬಂದು ನಿನ್ನ ನೋಡ್ತೀನಿ.. 'ಅಂದ್ರು. ನಾನು ಹೇಳಿದೆ, 'ಸರ್ ದಯವಿಟ್ಟು ನೀವು ಹಾಗೆ ಮಾಡಬೇಡಿ. ನನ್ನನ್ನು ಮುಜುಗರಕ್ಕೀಡು ಮಾಡಬೇಡಿ. ನಾನು ಅಂಥದ್ದೇನೂ ಸಾಧನೆ ಸೃಷ್ಟಿಸಿಲ್ಲ. ನಿಮ್ಮ ಮುಂದೆ ನಮ್ಮ ಸಾಧನೆ ಯಾವುದು?..' ಎಂದೆ. ಅದಕ್ಕೆ ಅವರು 'ಇಲ್ಲ ಇಲ್ಲ, ನನಗೆ ನಿಜಕ್ಕೂ ನಿನ್ನನ್ನು ನೋಡಬೇಕು ಎನ್ನಿಸಿದೆ..' ಎಂದರು.
ಅಂದು 'ಯಜಮಾನ' ಸಿನಿಮಾ ನೋಡಿದ್ದ ಡಾ ರಾಜ್ ಅವರು ಟಾಕೀಸ್‌ನಿಂದ ಎಲ್ಲರೂ ಹೊದರೂ ಅವರು ಮಾತ್ರ 15 ನಿಮಿಷ ಸೈಲೆಂಟ್ ಆಗಿ ಕುಳಿತಿದ್ದರು ಎಂದು ಆ ಬಳಿಕ ನನಗೆ ನಿರ್ಮಾಪಕರು ತಿಳಿಸಿದರು. ಅವರ ಮನಸ್ಸಿನಲ್ಲಿ ಅದೇನು ಅನ್ನಿಸಿತೋ ಏನೋ, ಹೊಗಳುತ್ತಲೇ ನಾನು ನಿನ್ನನ್ನು ನೋಡಲು ಬರ್ತೀನಿ ಅಂದಿದ್ದರು. ಹಾಗೆಲ್ಲ ಮಾಡಬೇಡಿ ಎಂದು ನಾನು ಅವರಿಗೆ ಮತ್ತೆ ವಿನಂತಿ ಮಾಡಿದೆ. ಜೊತೆಗೆ, ಬೆಂಗಳೂರಿಗೆ ಬಂದವನೇ ನಾನೇ ನಿಮ್ಮನ್ನು ಭೇಟಿಯಾಗುತ್ತೇನೆ' ಎಂದೂ ಹೇಳಿದೆ' ಎಂದಿದ್ದಾರೆ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್.
ಮುಚ್ಚುಮರೆ ಇಲ್ಲದೇ ನಟ ದರ್ಶನ್ ಕೇಸ್ ಬಗ್ಗೆ ಮುಕ್ತವಾಗಿ ಮಾತಾಡಿದ ಹಿರಿಯಣ್ಣ ಶಿವಣ್ಣ!
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಈ ಫೋಟೋ ನ್ಯೂಸ್ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ನಟ ವಿಷ್ಣುವರ್ಧನ್ ಅವರು ಬದುಕಿದ್ದಾಗಲೇ ಹಲವರಿಗೆ ಹೇಳಿದ್ದ ಈ ಮಾತುಗಳು ಇಂದು ಭಾರೀ ವೈರಲ್ ಆಗುತ್ತಿವೆ. ಈ ಸುದ್ದಿಗೆ ಸಾಕಷ್ಟು ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. 'ಅವರಿಬ್ಬರೂ ಬದುಕಿದ್ದಾಗಲೇ ಇವೆಲ್ಲಾ ಆಚೆ ಬಂದಿದ್ದರೆ, ಅವರಬ್ಬರೂ ಚೆನ್ನಾಗಿದ್ದರು, ಆದರೆ ಅವರಿಬ್ಬರ ಕಡೆಯವರಷ್ಟೇ ಪರಸ್ಪರ ಚೆನ್ನಾಗಿರಲಿಲ್ಲ ಎಂಬುದು ಮನದಟ್ಟಾಗುತ್ತದೆ' ಎಂಬ ಅರ್ಥದಲ್ಲಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಿನಲ್ಲಿ, ಸತ್ಯ ಸಾಯೋದಿಲ್ಲ, ಒಂದಲ್ಲ ಒಂದಿನ ಹೊರಗೆ ಬಂದೇ ಬರುತ್ತದೆ ಎಂಬಂತೆ, ನಟ ಡಾ ರಾಜ್‌ಕುಮಾರ್ ಹಾಗೂ ನಟ ವಿಷ್ಣುವರ್ಧನ್ ಅವರಿಬ್ಬರೂ ಅನ್ಯೋನ್ಯವಾಗಿಯೇ ಇದ್ದರು ಎಂಬುದಕ್ಕೆ ಈ ಸುದ್ದಿ ಪುರಾವೆಯಾಗಿ ನಿಲ್ಲುತ್ತದೆ. ಕೆಲವರು ಇದನ್ನು 'ಆಗ ಅವರು ಹೇಗಿದ್ದರೋ, ಆದರೆ ಈಗ ಅಂದು ಅವರಿಬ್ಬರೂ ಆಪ್ತರಾಗಿದ್ದರು ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ' ಎನ್ನುತ್ತಿದ್ದಾರೆ. ಸತ್ಯ ಸಂಗತಿ ಏನೇ ಆಗಿರಲಿ, ಆದರೆ ಇಂದು ನಡೆಯುತ್ತಿರುವ ಈ ಪ್ರಯತ್ನ ನಿಜವಾಗಿಯೂ ಒಳ್ಳೆಯದು. ಇದಕ್ಕೊಂದು 'ಸೆಲ್ಯೂಟ್' ಎನ್ನೋಣವೇ?
ಶತ್ರುವಿನ ಗುಟ್ಟು ಬಾಯ್ಬಿಟ್ಟ ಕಿಚ್ಚ ಸುದೀಪ್, ಈಗ ಅದು ಜಗತ್ತಿನೆಲ್ಲೆಡೆ ಟಾಂ ಟಾಂ ಆಗ್ತಿದೆ!