ಮಗನಿಗೂ 'ಹುಲಿ ವೇಷ' ಕುಣಿಯಲು ಬಿಟ್ಟು ತುಳುನಾಡು ಸಂಸ್ಕೃತಿ ಮೆರೆಸುತ್ತಿರುವ ರಿಷಬ್ ಶೆಟ್ಟಿ!

By Shriram Bhat  |  First Published Nov 10, 2024, 7:55 PM IST

ಸದ್ಯ ರಿಷಬ್ ಶೆಟ್ಟಿಯವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಹುಲಿ ವೇಷಧಾರಿಗಳು ಹಿನ್ನೆಲೆ ವಾದ್ಯಮೇಳಗಳೊಂದಿಗೆ 'ಥಕಧಿಮಿತ' ಎಂದು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅದನ್ನು ಪತ್ನಿ ..


ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು (Rishab Shetty) ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಹುಲಿವೇಷ ಕುಣಿತದ ಈ ವಿಡಿಯೋ ಈಗಾಗಲೇ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ನೋಡಿದ ರಿಷಬ್ ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರು 'ಮಾರ್ನೆಮಿಯ ಪಿಲಿನಲಿಕೆಯ ಗಮ್ಮತ್ತು..' ಎಂದು ಕಾಮೆಂಟ್ ಮಾಡಿ ಹುಲಿ ಇಮೋಜಿ ಹಾಕಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಈಗ ಕಾಂತಾರ ಪ್ರೀಕ್ವೆಲ್ (Kantara Prequel) ಸಿನಿಮಾವನ್ನು ತಳುಕು ಹಾಕಲಾಗುತ್ತಿದೆ. 

ಹೌದು, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಯವರು ಸದ್ಯ ಎರಡು ವಿಭಿನ್ನ ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ಅವರದೇ ನಟನೆ-ನಿರ್ದೇಶನದ 'ಕಾಂತಾರ- ಪ್ರೀಕ್ವೆಲ್' ಹಾಗೂ ಇನ್ನೊಂದು ಪ್ರಶಾಂತ್ ವರ್ಮಾ ನಿರ್ದೇಶನದ ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾ 'ಜೈ ಹನುಮಾನ್-2. ಈ ಮೊದಲು ತೇಜಾ ಸಜ್ಜಾ ನಟನೆಯಲ್ಲಿ 'ಜೈ ಹನುಮಾನ-1' ತೆರೆಗೆ (Jai Hanuman Part 2) ಬಂದು ಸೂಪರ್ ಹಿಟ್ ದಾಖಲಿಸಿತ್ತು. ಆದರೆ ಈಗ ತೇಜಾ (Theja Sajja) ಬದಲು ರಿಷಬ್ ಪಾರ್ಟ್-2ದಲ್ಲಿ ಹನುಮಾನ್ ಪಾತ್ರ ಮಾಡುತ್ತಿದ್ದಾರೆ. 

Tap to resize

Latest Videos

undefined

ದರ್ಶನ್ ಪರ ಸುಮಲತಾ ಅಂಬರೀಷ್ ಯುದ್ಧ; ಡಿ ಬಾಸ್ ಫ್ಯಾನ್ಸ್‌ ಬಿಡ್ತಿದಾರೆ ಕೆಂಗಣ್ಣು!

ಅದಿರಲಿ, ಸದ್ಯ ರಿಷಬ್ ಶೆಟ್ಟಿಯವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಹುಲಿ ವೇಷಧಾರಿಗಳು ಹಿನ್ನೆಲೆ ವಾದ್ಯಮೇಳಗಳೊಂದಿಗೆ 'ಥಕಧಿಮಿತ' ಎಂದು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅದನ್ನು ಪತ್ನಿ ಹಾಗೂ ಪುತ್ರನ ಸಮೇತ ರಿಷಬ್ ಶೆಟ್ಟಿ ಎಂಜಾಯ್ ಮಾಡುತ್ತಿದ್ದಾರೆ. ಇದು ಕಾಂತಾರ ಶೂಟಿಂಗ್‌ ಬದಲು ಸಹಜವಾಗಿ ಹುಲಿವೇಷದ ಕುಣಿತದ ದೃಶ್ಯ. ಆ ವಿಡಿಯೋವನ್ನು ರಿಷಬ್ ಅವರು ಶೇರ್ ಮಾಡಿದ್ದಾರೆ. 

ತುಳುನಾಡಿದ ಹುಲಿವೇಷಕ್ಕೆ ತನ್ನದೇ ಆದ ಗತ್ತು-ಗಮ್ಮತ್ತು ಇದೆ. ಅಲ್ಲಿನ ಪರಿಸರ, ಸಂಸ್ಕೃತಿಯಲ್ಲಿ ಹುಲಿವೇಷವು ಒಂದು ಸಾಂಸ್ಕೃತಿಕ ಪರಂಪರೆಯಾಗಿ ಇಂದಿಗೂ ಬೆಳೆದುಕೊಂಡು ಬರುತ್ತಿದೆ. ಅದನ್ನು ನಟ ರಿಷಬ್ ಶೆಟ್ಟಿಯವರು ಇಷ್ಟಪಟ್ಟು ಪೋಷಿಸುತ್ತಾರೆ. ತಮ್ಮ ಸಿನಿಮಾಗಳಲ್ಲಿ ಅದನ್ನು ಪ್ರದರ್ಶಿಸುತ್ತಾರೆ, ತಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಳಿಸಿಕೊಂಡು ಅದನ್ನು ಜಗತ್ತಿನೆಲ್ಲೆಡೆ ಪಸರಿಸಿ ಇನ್ನಷ್ಟು ಫೇಮಸ್ ಆಗುವಂತೆ ಮಾಡುತ್ತಾರೆ. 

ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!

ಒಟ್ಟಿನಲ್ಲಿ, ಸಹಜವಾಗಿ ಈ ಹುಲಿವೇ‍ಷದ ಕುಣಿತ 'ನ್ಯಾಷನಲ್ ಅವಾರ್ಡ್ ವಿನ್ನರ್' ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ಶೇರ್ ಆಗಿದೆ. ಈ ಕಾರಣಕ್ಕೆ ಅದು ಭಾರೀ ಶೇರ್ ಆಗುವುದು ಖಂಡಿತ. ಜೊತೆಗೆ, ಬಹಳಷ್ಟು ಕಾಮೆಂಟ್‌ ಬರಲಿದ್ದು, ಅದು ಸಾಕಷ್ಟು ವಿಭಿನ್ನವಾಗಿರಲಿದೆ. 

click me!