
ಕನ್ನಡದ ವರನಟ ಡಾ ರಾಜ್‌ಕುಮಾರ್ ಅವರು ಈ ಜಗತ್ತಿನಿಂದ ಮರೆಯಾದ ತಕ್ಷಣ ತಮ್ಮ ಕಣ್ಣುಗಳನ್ನು ದಾನ ಮಾಡಿರುವದು ಗೊತ್ತೇ ಇದೆ. ಅದಕ್ಕೂ ಮೊದಲು ಈ ಸಂಬಂಧ ಅವರು ನಾರಾಯಣ ನೇತ್ರಾಲಯದ ಸಂಸ್ಥಾಪಕರಾದ ಡಾ ಕೆ ಭುಜಂಗ ಶೆಟ್ಟಿ ಅವರ ಬಳಿ ನೇತ್ರದಾನದ ಒಪ್ಪೊಂದದ ವೇಳೆ ಆ ಬಗ್ಗೆ ಮಾತನ್ನಾಡಿದ್ದರು. ಆಗ ಭುಜಂಗ ಶೆಟ್ಟಿ ಬಳಿ ಅದೇನು ಹೇಳಿದ್ದರು ಎಂಬುದು ಈಗಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಿದ್ದರೆ ಅದೇನು ಅಂತ ಇಲ್ಲಿ ನೋಡಿ..
ನೇತ್ರದಾನ ಮಹಾದಾನ.. ನೇತ್ರದಾನ ಪವಿತ್ರವಾದ ದಾನ.. ನಮ್ಮ ಈ ಎರಡು ಕಣ್ಣುಗಳಿಂದ ಇಬ್ಬರು ಅಂಧರಿಗೆ ಕಣ್ಣು ಬರೋದಾದ್ರೆ ನಾನು ಮಾತ್ರವಲ್ಲ, ನನ್ನ ಮನೆಯವರು ಮಕ್ಕಳು ಹಾಗೂ ಮೊಮ್ಮಕ್ಕಳಾದಿಯಾಗಿ ನಮ್ಮ ಕಣ್ಣುಗಳನ್ನು ದಾನ ಮಾಡೋದಕ್ಕೆ ನಾವು ಸಿದ್ದರಾಗಿದ್ದೀವಿ.. ಅಮೂಲ್ಯವಾದ ಈ ಎರಡು ಕಣ್ಣುಗಳು ಮಣ್ಣುಪಾಲಾಗುವುದಕ್ಕಿಂತ ಕತ್ತಲಲ್ಲಿ ಕುಳಿತಿರುವ ಇಬ್ಬರು ಅಂಧರಿಗೆ ದಾರಿದೀಪವಾಗಲಿ.. ಎಲ್ಲರೂ ಮನಸ್ಸು ಮಾಡೋಣ..' ಎಂದಿದ್ದರಂತೆ.
ಪುನೀತ್ ರಾಜ್‌ಕುಮಾರ್ 'ಅಪ್ಪು' ರೀ-ರಿಲೀಸ್, ವೀರೇಶ್ ಚಿತ್ರಮಂದಿರಕ್ಕೆ ಆಗಮಿಸಿದ ನಟಿ ರಮ್ಯಾ!
ಅದಕ್ಕೆ ಡಾ ಕೆ ಭುಜಂಗ ಶೆಟ್ಟಿಯವರು ಡಾ ರಾಜ್‌ಕುಮಾರ್ ಅವರಿಗೆ 'ನಿಮ್ಮ ಈ ಒಂದು ಕರೆಯಿಂದ ಸಾವಿರಾರು ಜನ ಕಣ್ಣು ಕೊಡಲಿಕ್ಕೆ ಖಂಡಿತವಾಗಿ ಮುಂದೆ ಬರ್ತಾರೆ. ಅವರೆಲ್ಲರೂ ಸಾವಿರಾರು ಅಂಧರಿಗೆ ಬೆಳಕು ನೀಡುತ್ತಾರೆ ಅಂತ ನನಗೆ ದೃಢ ನಂಬಿಕೆ ಇದೆ...' ಎಂದಿದ್ದರಂತೆ. ಭುಜಂಗ ಶೆಟ್ಟಿಯವರ ಮಾತಿಗೆ ಡಾ ರಾಜ್‌ಕುಮಾರ್ ಅವರು ಪ್ರತ್ಯುತ್ತರ ಕೊಡುತ್ತ 'ತಮ್ಮ ಈ ಕಾರ್ಯ ಯಶಸ್ವಿಯಾಗಿ ಮುಂದುವರಿಯಲಿ ಅಂತ ಭಗವಂತನಲ್ಲಿ ಪ್ರಾರ್ಥನೆ..' ಎಂದು ಹೇಳಿದ್ದರಂತೆ ಅಣ್ಣಾವ್ರು. ಅಂದು ಈ ಸೋಷಿಯಲ್ ಮೀಡಿಯಾ ಇಷ್ಟೊಂದು ಪವರ್‌ಫುಲ್ ಆಗಿರ್ಲಿಲ್ಲ. ನಾಲ್ಕು ಗೋಡೆಯ ಮಧ್ಯೆ ನಡೆದ ಅಂದಿನ ಮಾತುಕತೆ ಅವರಿವರ ಬಾಯಿಯಿಂದ ಕಿವಿಗೆ ತಲುಪಿ ಇಂದು ಅದು ವೈರಲ್ ಆಗುತ್ತಿದೆ.
ಅಂದು 2006ರಲ್ಲಿ ಡಾ ರಾಜ್‌ಕುಮಾರ್ ಅವರು ನೇತ್ರದಾನ ಮಾಡಿದ್ದಾರೆ. ಬಳಿಕ ನಿಧನರಾದ ಅವರ ಕಿರಿಯ ಮಗ ಪುನೀತ್ ರಾಜ್‌ಕುಮಾರ್ ಕೂಡ 2021ರಲ್ಲಿ ನೇತ್ರದಾನ ಮಾಡಿದ್ದಾರೆ. ಅವರ ಕುಟುಂಬದವರೆಲ್ಲರೂ ಡಾ ರಾಜ್‌ಕುಮಾರ್ ಮಾತಿನಂತೆ, ತಮ್ಮ ಕಣ್ಣುಗಳ ದಾನದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಕುಟುಂಬ ಅಣ್ಣಾವ್ರಿಂದ ಪ್ರಾರಂಭಿಸಿ ಎಲ್ಲರೂ ಕೂಡ ಈ ನೇತ್ರದಾನದ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅದೀಗ ಅಭಿಯಾನದ ರೂಪ ಪಡೆದಿದೆ.
ಪಾರ್ವತಮ್ಮ ಅದೆಷ್ಟೇ ಕಾದರೂ ಶಿವರಾಜ್‌ಕುಮಾರ್ 'ಆ ಚಿತ್ರ'ಕ್ಕೆ ಈ ನಟಿಯ ಡೇಟ್ಸ್ ಸಿಗಲೇ ಇಲ್ಲ, ಕೊನೆಗೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.