ಅಣ್ಣಾವ್ರ 'ಶಬ್ಧವೇದಿ' ವಿವಾದ ಗೊತ್ತೇ ಇದೆ, ಗೊತ್ತಿಲ್ಲದ ಬೇರೆ ಕೆಲವು ರಹಸ್ಯಗಳು ಇಲ್ಲಿವೆ..!

Published : Feb 19, 2025, 03:33 PM ISTUpdated : Feb 19, 2025, 08:04 PM IST
ಅಣ್ಣಾವ್ರ 'ಶಬ್ಧವೇದಿ' ವಿವಾದ ಗೊತ್ತೇ ಇದೆ, ಗೊತ್ತಿಲ್ಲದ ಬೇರೆ ಕೆಲವು ರಹಸ್ಯಗಳು ಇಲ್ಲಿವೆ..!

ಸಾರಾಂಶ

ಡಾ. ರಾಜ್‌ಕುಮಾರ್ ಅವರ ಕೊನೆಯ ಚಿತ್ರ 'ಶಬ್ಧವೇದಿ'ಯನ್ನು ಎಸ್. ನಾರಾಯಣ್ ನಿರ್ದೇಶಿಸಿದ್ದರು. ಚಿತ್ರದಲ್ಲಿನ ರಾಜ್‌ ಅವರ ಪಾತ್ರದ ಬಗ್ಗೆ ವಿವಾದ ಎದ್ದರೂ, ೨೫ ವಾರಗಳ ಯಶಸ್ವಿ ಪ್ರದರ್ಶನ ಕಂಡಿತು. ೭೧ ವರ್ಷದ ರಾಜ್‌ ಐದು ಹಾಡುಗಳನ್ನು ಹಾಡಿದ್ದಾರೆ. 'ಭಕ್ತ ಅಂಬರೀಷ', 'ಅಮೋಘವರ್ಷ' ಚಿತ್ರಗಳ ಆಸೆ ಈಡೇರಲಿಲ್ಲ.

ಶಬ್ಧವೇದಿ (Shabdavedhi) ಸಿನಿಮಾ ಡಾ ರಾಜ್‌ಕುಮಾರ್ (Dr Rajkumar) ಅವರ ಕೊನೆಯ ಸಿನಿಮಾ. ಈ ಸಿನಿಮಾವನ್ನು ಎಸ್ ನಾರಾಯಣ್ (S Narayan) ಅವರು ಡಾ ರಾಜ್‌ಕುಮಾರ್ ಅವರಿಗೆ ಮೊಟ್ಟಮೊದಲ ಬಾರಿಗೆ ನಿರ್ದೇಶನ ಮಾಡಿದ್ದರು. ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಈ ಚಿತ್ರದ ಬಗ್ಗೆ ತುಂಬಾ ಪಬ್ಲಿಸಿಟಿ ಆಗಿಬಿಟ್ಟಿತ್ತು. ಆದರೆ, ಅಣ್ಣಾವ್ರಿಗೆ ಆಗ ಆರೋಗ್ಯ ಅಷ್ಟೊಂದು ಸರಿಯಾಗಿ ಇರ್ಲಿಲ್ಲ. ಕೊನೆಗೂ ಸಿನಿಮಾ ಬಿಡುಗಡೆ ಆಗಿ, ವಿವಾದ ಹಾಗೂ ಸಕ್ಸಸ್ ಎರಡನ್ನೂ ಕಂಡಿದೆ ಶಬ್ಧವೇದಿ. 

ಎಸ್‌ ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಬಗ್ಗೆ ಹಲವರು ಆಕ್ಷೇಪ ಎತ್ತಿದ್ದರು. ಡಾ ರಾಜ್‌ ಅವರನ್ನು ಆ ಚಿತ್ರದಲ್ಲಿ ಪಾತ್ರದ ಮೂಲಕ ತೋರಿಸಿರುವ ರೀತಿಗೆ ಕೆಲವರು ಕೋಪಗೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಅದೇ ಡಾ ರಾಜ್‌ ಅವರ ಕೊನೆಯ ಸಿನಿಮಾ ಆದಮೇಲಂತೂ ಹಲವರು ಕೆಂಗಣ್ಣು ಬೀರಿದ್ದರು. ಆದರೆ, ಆ ವಿವಾದ ಅಷ್ಟೇನೂ ಹೆಚ್ಚಾಗಲಿಲ್ಲ. ಈ ಸಿನಿಮಾ 25 ವಾರಗಳ ಯಶಸ್ವೀ ಪ್ರದರ್ಶನ ಕಂಡಿದೆ. 

ಡಾಲಿ ಧನಂಜಯ್ ಮದುವೆಗೆ ಇವ್ರೆಲ್ಲಾ ಹೋಗಿಲ್ಲ, ಏನೇನು ಕಾರಣ ಅಂತ ಒಮ್ಮೆ ನೋಡ್ಬಿಡಿ..!

ಈ ಚಿತ್ರದಲ್ಲಿ ಒಟ್ಟೂ 6 ಹಾಡುಗಳಿದ್ದು, ಅವುಗಳಲ್ಲಿ 5 ಹಾಡುಗಳನ್ನು ಡಾ ರಾಜ್‌ಕುಮಾರ್ ಅವರೇ ಹಾಡಿದ್ದಾರೆ. ಈ ಸಿನಿಮಾ ಮಾಡುವಾಗ ಡಾ ರಾಜ್‌ಕುಮಾರ್ ವಯಸ್ಸು 71. ಆದರೆ, ಅವರ ನಟನೆಯಲ್ಲಿ ಎಲ್ಲೂ ಅವರಿಗೆ ಅಷ್ಟು ವಯಸ್ಸಾಗಿದೆ ಅಂತ ಅನ್ನಿಸುವಂತೆ ಇಲ್ಲ. ಈ ಚಿತ್ರದ ಅಣ್ಣಾವ್ರು ಮಾಡಿದ ಪಾತ್ರದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು ಬಿಟ್ಟರೆ ಈ ಚಿತ್ರವು ಸೂಪರ್ ಹಿಟ್ ಆಗಿದೆ. 

ಒಟ್ಟಿನಲ್ಲಿ ಹೇಳಬೇಕು ಎಂದರೆ, ಡಾ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರವಾದ 'ಶಬ್ಧವೇದಿ' ಎಲ್ಲರ ಗಮನ ಸೆಳೆದಿದೆ. ಆದರೆ, ಆ ಚಿತ್ರವೇ ಅವರ ಅಂತಿಮ ಚಿತ್ರ ಆಗಬಹುದೆಂದು ಯಾರೂ ಎಣಿಸಿರಲಿಲ್ಲ. ಕಾರಣ, ಅಣ್ಣಾವ್ರಿಗೆ 'ಭಕ್ತ ಅಂಬರೀಷ' ಹಾಗೂ 'ಅಮೋಘವರ್ಷ ನೃಪತುಂಗ' ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಆದರೆ, ಮಾಡೋದೇನು. ಅವರಿಗೆ ಆರೋಗ್ಯ ಹಾಗೂ ಆಯುಷ್ಯ ಕೊನೆಯ ದಿನಗಳಲ್ಲಿ ಅಗತ್ಯವಿದ್ದ ಸಹಕಾರ ನೀಡಲಿಲ್ಲ. 

ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅರ್ಜುನ್ ಜನ್ಯಾ ನಿರ್ದೇಶನ, ಶಿವಣ್ಣ-ಉಪೇಂದ್ರ ಜೋಡಿಯ '45' ಟ್ರೈಲರ್ ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೇಳಿದ್ದೇನು?
BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ Top 5 ಸ್ಪರ್ಧಿಗಳಿವರು; ಗೆಲ್ಲೋರಾರು?