ಡಾಲಿ ಧನಂಜಯ್ ಮದುವೆಗೆ ಇವ್ರೆಲ್ಲಾ ಹೋಗಿಲ್ಲ, ಏನೇನು ಕಾರಣ ಅಂತ ಒಮ್ಮೆ ನೋಡ್ಬಿಡಿ..!

Published : Feb 19, 2025, 01:43 PM ISTUpdated : Feb 19, 2025, 01:54 PM IST
ಡಾಲಿ ಧನಂಜಯ್ ಮದುವೆಗೆ ಇವ್ರೆಲ್ಲಾ ಹೋಗಿಲ್ಲ, ಏನೇನು ಕಾರಣ ಅಂತ ಒಮ್ಮೆ ನೋಡ್ಬಿಡಿ..!

ಸಾರಾಂಶ

ಡಾಲಿ ಧನಂಜಯ್ ಅವರ ಅದ್ದೂರಿ ಮದುವೆಗೆ ಯಶ್, ಸುದೀಪ್, ರಿಷಬ್ ಶೆಟ್ಟಿ, ರಚಿತಾ ರಾಮ್ ಸೇರಿದಂತೆ ಹಲವು ನಟ-ನಟಿಯರು ಗೈರು ಹಾಜರಾಗಿದ್ದರು. ಚಿತ್ರೀಕರಣ, ಕ್ರಿಕೆಟ್, ವಿದೇಶ ಪ್ರವಾಸ, ಕೌಟುಂಬಿಕ ಕಾರ್ಯಕ್ರಮಗಳು ಗೈರುಹಾಜರಿಗೆ ಕಾರಣಗಳೆಂದು ತಿಳಿದುಬಂದಿದೆ. ದರ್ಶನ್‌ಗೆ ಆಮಂತ್ರಣವೇ ನೀಡಿರಲಿಲ್ಲ ಎಂಬ ಮಾತಿದೆ. ಒಟ್ಟಾರೆ, ಬರಲು ಸಾಧ್ಯವಾದವರು ಬಂದಿದ್ದರು.

ನಟ ಡಾಲಿ ಧನಂಜಯ್ (Dolly Dhananjay) ಮದುವೆ ಅತ್ಯಂತ ಅದ್ದೂರಿಯಾಗಿ ನಡೆದಿದ್ದು ಗೊತ್ತೇ ಇದೆ. ಈ ಮದುವೆಗೆ ಜರ್ಮನಿ ಡೈರೆಕ್ಟರ್, ಸ್ಯಾಂಡಲ್‌ವುಡ್ ಶಿವಣ್ಣ ಸೇರಿದಂತೆ ಗಣ್ಯಾತಿಗಣ್ಯರು ಹಾಜರಿ ಹಾಕಿದ್ದಾರೆ. ಆದರೆ, ಸಿನಿರಂಗದ ಕೆಲವು ಸ್ಟಾರ್‌ಗಳು ಮಾತ್ರ ಮದುವೆಗೆ ಬಂದಿಲ್ಲ. ಯಾಕೆ ಬಂದಿಲ್ಲ, ಅದಕ್ಕೆ ಕಾರಣವೇನಿರಬಹುದು ಎಂದು ಹಲವರು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಆದರೆ, ಕೆಲವರು ಯಾಕೆ ಬಂದಿಲ್ಲ ಅನ್ನೋದಕ್ಕೆ ಜೆನ್ಯೂನ್ ಕಾರಣವಿದೆ.. ಏನು ಅಂತ ನೋಡಿ.. 

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಧನಂಜಯ್ ಮದುವೆಗೆ ಬಂದಿಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಬಂದಿಲ್ಲ. ರಕ್ಷಿತ್ ಶೆಟ್ಟಿ ಬಂದಿಲ್ಲ, ಕಿಚ್ಚ ಸುದೀಪ್ ಬಂದಿಲ್ಲ, ವಿಜಯ್ ರಾಘವೇಂದ್ರ, ರಾಘವೇಂದ್ರ ರಾಜ್‌ಕುಮಾರ್, ಸುಮಲತಾ ಅಂಬರೀಷ್, ರಿಷಬ್ ಶೆಟ್ಟಿ, ಅಂಬರೀಷ್, ರಾಜ್‌ ಬಿ ಶೆಟ್ಟಿ, ರಶ್ಮಿಕಾ ಮಂದಣ್ಣ, ರಚಿತಾ ರಾಮ್, ಅಮೃತಾ ಅಯ್ಯಂಗಾರ್, ದಿನಕರ್ ತೂಗುದೀಪ ಹಾಗೂ ದರ್ಶನ್ ತೂಗುದೀಪ ನಟ ಧನಂಜಯ್ ಮದುವೆಗೆ ಹೋಗಿಲ್ಲ. ಇನ್ನೂ ಅನೇಕರು ಹೋಗಿಲ್ಲ..

ಕೆಲವರು ಮದುವೆಗೆ ಹೋಗದೇ ಇರೋದಕ್ಕೆ ಕಾರಣ ರಿವೀಲ್ ಆಗಿದೆ. ನಟ ಯಶ್ ಅವರು ಟಾಕ್ಸಿಕ್ ಚಿತ್ರೀಕರಣಕ್ಕೆ ಜಾರ್ಜಿಯಾ ದೇಶಕ್ಕೆ ಹೋಗಿದ್ದಾರೆ. ಹೀಗಾಗಿ ಅವರು ಮದುವೆಗೆ ಬಂದಿಲ್ಲ. ಕಿಚ್ಚ ಸುದೀಪ್ ಅವರು ಕೆಸಿಸಿ ಕ್ರಿಕೆಟ್‌ನಲ್ಲಿ ಬ್ಯುಸಿ ಆಗಿದ್ದಾರೆ. ರಿಷಬ್ ಶೆಟ್ಟಿ ವ್ಯಾಲೆಂಟೈನ್ ಡೇಗೆ ಅವರು ಕುಟುಂಬ ಸಮೇತ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ನಟಿ ರಚಿತಾ ರಾಮ್, ಮತ್ತೊಬ್ಬರು ಸಂಬಂಧಿಕರ ಮದುವೆ ಇದ್ದ ಕಾರಣ ರಚಿತಾ ರಾಮ್ ಧನಂಜಯ್ ಮದುವೆಗೆ ಹೋಗಿಲ್ಲ. 

ಹೆಚ್‌ಡಿ ಕುಮಾರಸ್ವಾಮಿ ಮಾತು ಭಾರೀ ವೈರಲ್, ಅಣ್ಣಾವ್ರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದೇನು?

ದಿನಕರ್ ತೂಗುದೀಪ ಅವರು ಬಂದಿಲ್ಲ, ನಟ ದರ್ಶನ್ ಅವರಿಗೆ ನಟ ಧನಂಜಯ್ ಮದುವೆ ಆಮಂತ್ರಣ ಪತ್ರ ಕೊಟ್ಟಿಲ್ಲ. ಇದೇ ಕಾರಣವೋ ಏನೋ ಗೊತ್ತಿಲ್ಲ, ಆದ್ರೆ ದಿನಕರ್ ಅವರು ಮದುವೆಗೆ ಹೋಗಿಲ್ಲ.. ನಟ ರಾಜ್‌ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿಗೆ ಆಮಂತ್ರಣ ಹೋಗಿದೆಯೋ ಗೊತ್ತಿಲ್ಲ. ನಟಿ ರಶ್ಮಿಕಾ ಮಂದಣ್ಣ ಅವ್ರಿಗೆ ಆಮಂತ್ರಣ ನೀಡಲಾಗಿತ್ತು, ಆದ್ರೆ ಅವರ ಕಾಲಿಗೆ ಏಟು ಆಗಿರುವ ಕಾರಣಕ್ಕೆ ಅವರು ಮದುವೆ ಅಟೆಂಡ್ ಮಾಡಿಲ್ಲ ಎನ್ನಲಾಗುತ್ತಿದೆ. 

ಇನ್ನು ನಟ ಧನಂಜಯ್ ಅವರ ಬೆಸ್ಟ್ ಫ್ರಂಡ್ಸ್‌ನಲ್ಲಿ ಒಬ್ಬರಾಗಿದ್ದ ನಟಿ ಅಮೃತಾ ಅಯ್ಯಂಗಾರ್ ನಟ ಧನಂಜಯ್-ಧನ್ಯತಾ ಮದುವೆಗೆ ಬಂದಿಲ್ಲ. ಸುಮಲತಾ ಅಂಬರೀಷ್ ಯಾಕೆ ಹೋಗಿಲ್ಲ ಅನ್ನೀ ಕಾರಣ ರಿವೀಲ್ ಆಗಿಲ್ಲ. ಇನ್ನು ನಟ ದರ್ಶನ್‌ಗೆ ಕೊನೆಗೂ ನಟ ಧನಂಜಯ್ ಅವರು ಮದುವೆ ಆಮಂತ್ರಣ ಕೊಟ್ಟಿಲ್ಲ ಎನ್ನಲಾಗಿದೆ. ಕರೆಯದೇ ದರ್ಶನ್ ಬರಲು ಸಾಧ್ಯವೇ ಇಲ್ಲ ಅನ್ನೋದು ಎಲ್ಲರಿಗೂ ಅರ್ಥವಾಗುತ್ತೆ. 

ಬಾಲ್ಯ ವಿವಾಹದಿಂದ ಹೊರಗೆ ಬಂದ ಸರಿತಾ, ಮತ್ತೆ ಸಮಸ್ಯೆ ಸುಳಿಯಲ್ಲಿ... ಯಾಕೆ ಹೀಗೆಲ್ಲಾ?

ನಿಜವಾಗಿ ಹೇಳಬೇಕು ಎಂದರೆ, ಮದುವೆಗೆ ಯಾರಿಗೆ ಸಾಧ್ಯವೋ ಅವರು ಹೋಗಿದ್ದಾರೆ, ಮಿಕ್ಕವರು ಹೋಗಿಲ್ಲ ಅಷ್ಟೇ ಅಂಥ ಅರ್ಥ ಮಾಡಿಕೊಂಡುಬಿಟ್ಟರೆ ಸಾಕು. ಏಕೆಂದರೆ, ಕರೆಯವುದು ಅವರ ಧರ್ಮ, ಹೋಗುವುದು ಬಿಡುವುದು ಅವರವರ ಸ್ವಾತಂತ್ರ್ಯ ಎನ್ನುವವರೂ ಇದ್ದಾರೆ. ಹೋಗಲಿ ಬಿಡಿ, ಹೋದವರು ಹೋದರು ಇಲ್ಲದವರು ಇಲ್ಲ, ಅಂತೂ ಮದುವೆ ಆಗಿದೆ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅರ್ಜುನ್ ಜನ್ಯಾ ನಿರ್ದೇಶನ, ಶಿವಣ್ಣ-ಉಪೇಂದ್ರ ಜೋಡಿಯ '45' ಟ್ರೈಲರ್ ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೇಳಿದ್ದೇನು?
BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ Top 5 ಸ್ಪರ್ಧಿಗಳಿವರು; ಗೆಲ್ಲೋರಾರು?