ಸಿಎಂ ಭೇಟಿಯಾದ ರಾಜ್ ಕುಟುಂಬ; 'ಗಂಧದ ಗುಡಿ' ಪ್ರೀ ರಿಲೀಸ್ ಈವೆಂಟ್‌ಗೆ ಆಹ್ವಾನ

Published : Oct 11, 2022, 10:30 AM IST
ಸಿಎಂ ಭೇಟಿಯಾದ ರಾಜ್ ಕುಟುಂಬ; 'ಗಂಧದ ಗುಡಿ' ಪ್ರೀ ರಿಲೀಸ್ ಈವೆಂಟ್‌ಗೆ ಆಹ್ವಾನ

ಸಾರಾಂಶ

ಡಾ.ರಾಜ್‌ಕುಮಾರ್ ಕುಟುಂಬ ಇಂದು (ಅಕ್ಟೋಬರ್ 11) ಬೆಳಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದರು.

ಡಾ.ರಾಜ್‌ಕುಮಾರ್ ಕುಟುಂಬ ಇಂದು (ಅಕ್ಟೋಬರ್ 11) ಬೆಳಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದರು. ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಯುವರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬ ಕೆಲ ಸದಸ್ಯರು ಸಿಎಂ ಭೇಟಿಯಾಗಿದ್ದಾರೆ. ಅಂದಹಾಗೆ ರಾಜ್ ಕುಟುಂಬ ದಿಢೀರ್ ಸಿಎಂ ನಿವಾಸಕ್ಕೆ ತೆರಳಿದ್ದು ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್‌ಗೆ ಆಹ್ವಾನ ಮಾಡಲು. ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಸಿನಿಮಾತಂಡ ಹಾಗೂ ಕುಟುಂಬ ನಿರ್ಧರಿಸಿದೆ. ಹಾಗಾಗಿ ಇಡೀ ಕುಟುಂಬ ತೆರಳಿ ಸಿಎಂ ಅವರಿಗೆ ಆಹ್ವಾನ ನೀಡಲಾಗಿದೆ. 

ಇದೇ ತಿಂಗಳು ಅಕ್ಟೋಬರ್ 21ರಂದು ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯುತ್ತಿದೆ. ಪುನೀತ್ ಪರ್ವ ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಅಪ್ಪು ಇಲ್ಲದೇ ಅವರ ನೆನಪಿನಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಕೊನೆಯ ಬಾರಿಗೆ ಪುನೀತ್ ರಾಜ್ ಕುಮಾರ್ ಅವರನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರೀ ರಿಲೀಸ್ ಈವೆಂಟ್‌ಗೆ ಸಿಎಂ ಸೇರಿದಂತೆ ಅನೇಕ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ರಾಜಕೀಯ ಜೊತೆಗೆ ಅನೇಕ ಸಿನಿ ಗಣ್ಯರು ಸಹ ಅಪ್ಪು ಕೊನೆಯ ಸಿನಿಮಾದ ಈವೆಂಟ್ ನಲ್ಲಿ ಭಾಗಿಯಾಗಲಿದ್ದಾರೆ. 

ಪ್ರಕೃತಿಯ 'ಅಪ್ಪು'ಗೆಯಲಿ ಪವರ್ ಸ್ಟಾರ್: ಇದು ಗಂಧದ ಗುಡಿ..!

ಇನ್ನು ಕನ್ನಡ ಸಿನಿಮಾ ಗಣ್ಯರು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಗಣ್ಯರು ಪ್ರೀ ರಿಲೀಸ್ ಈವೆಂಟ್‌ನಲ್ಲಿ ಇರಲಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು ಸಿಎಂ ಭೇಟಿಯ ಬಳಿಕ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, 'ಅಕ್ಟೋಬರ್ 21 ಗಂಧದ ಗುಡಿ  ಪ್ರೀ ರೀಲೀಸ್ ಈವೆಂಟ್ ಇದೆ. ಈ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ಕೊಡಲು ಬಂದಿದ್ದೇವೆ. ಸೌತ್ ಇಂಡಿಯನ್ ಸ್ಟಾರ್ಸ್ ಗಳನ್ನ ಅಹ್ವಾನ ನೀಡಿದ್ದೇವೆ. ಅವರಿನ್ನೂ ಕನ್ಫರ್ಮೆಂಷನ್ ಕೊಟ್ಟಿಲ್ಲ. ಇನ್ನೂ ಕಾರ್ಯಕ್ರಮದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡಯಲಿದೆ.  ಇದಕ್ಕೆ ಪುನಿತ್ ಪರ್ವ ಎಂದು ಹೆಸರಿಡಲಾಗಿದೆ. ಅಕ್ಟೋಬರ್ 28 ಕ್ಕೆ ಗಂಧದ ಗುಡಿ ಸಿನಿಮಾ ರಿಲೀಸ್ ಆಗಲಿದೆ. ಪುನಿತ್ ಸಾಕಷ್ಟು ಇಷ್ಟ ಪಟ್ಟು ಮಾಡಿದ ಕೊನೆ ಸಿನಿಮಾ ಇದು' ಎಂದು ಹೇಳಿದರು. 

Gandhada gudi ಟ್ರೈಲರ್ ನೋಡಿ ಮೆಚ್ಚಿದ ಸುದೀಪ್-ಯಶ್; ಸೆಲೆಬ್ರಿಟಿಗಳ ಟ್ವೀಟ್ ಸುರಿಮಳೆ

ಗಂಧದ ಗುಡಿ, ಇತ್ತೀಚಿಗಷ್ಟೆ ಟ್ರೈಲರ್ ರಿಲೀಸ್ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಚ್ಚಿನ ಅಪ್ಪು ಅವರನ್ನು ಮತ್ತೊಮ್ಮೆ ಕಣ್ತುಂಬಿಕೊಂಡು ಅಭಿಮಾನಿಗಳು ಭಾವುಕರಾಗಿದ್ದರು. ಇದೀಗ ತೆರೆಮೇಲೆ ನೋಡಲು ಕಾತರರಾಗಿದ್ದಾರೆ.    

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!