ಡಾ ರಾಜ್ ಅಂತಿಮ ದರ್ಶನಕ್ಕೆ ಬಂದ ಅಂಬಿ-ವಿಷ್ಣು ಹಿಂಬಾಗಿಲಿನಿಂದ ಓಡಿದ್ದು ಯಾಕೆ?

By Shriram Bhat  |  First Published Nov 29, 2024, 5:31 PM IST

ಅಂಬರೀಷ್ ಜೊತೆ ವಿಷ್ಣು ಅವರನ್ನು ನೋಡಿದ್ದೇ ಪಾರ್ವತಮ್ಮನವರು ನಟ ವಿಷ್ಣು ನಾಗೂ ಅಂಬಿ ಅವರನ್ನು ತಮ್ಮ ಮನೆಯೊಳಕ್ಕೆ ಕರೆದುಕೊಂಡು ಹೋಗಿ ಬೈಯ್ಯಲು ಶುರು ಮಾಡಿಬಿಟ್ಟರು... 'ನೀನ್ಯಾಕೆ ಇವನನ್ನ ಈಗ ಇಲ್ಲಿಗೆ ಕರ್ಕೊಂಡು ಬಂದೆ? ನಿನಗೂ ಕೂಡ ಏನೂ ಗೊತ್ತಾಗೋದಿಲ್ಲ..


ವರನಟ ಡಾ ರಾಜ್‌ಕುಮಾರ್‌ (Dr Rajkumar) ಅವರು 2006ರ ಏಪ್ರಿಲ್ 12ರಂದು ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ನಮ್ಮನ್ನೆಲ್ಲ ಅಗಲಿ ದೂರ ಹೋಗಿಬಿಟ್ಟರು. ಈ ಸುದ್ದಿಯಿಂದ ವಿಚಲಿತರಾದ ಅನೇಕ ಜನರು, ಡಾ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಗಳು, ತಕ್ಷಣವೇ ದಾಂಧಲೆಯನ್ನು ಶುರು ಮಾಡಿಬಿಟ್ಟರು. ನೋಡನೋಡುತ್ತಿದ್ದಂತೆ ಮುಖ್ಯವಾಗಿ ಬೆಂಗಳೂರಿನಲ್ಲಿ ಹಲವು ಕಡೆಗಳಲ್ಲಿ ಗಲಾಟೆ, ದೋಂಬಿ ಶುರುವಾಯ್ತು. ಅಪಾರ ಅಭಿಮಾನಿಗಳು ರಸ್ತೆಗಿಳಿದು ಮನಸ್ಸಿಗೆ ಬಂದಂತೆ ಆಡತೊಡಗಿದರು. ಒಬ್ಬ ನಟ ಸತ್ತಾಗ ಯಾವಾತ್ತೂ ಆಗದಿದ್ದ ಸಮಸ್ಯೆ ಅಂದು ಆಗಿಬಿಟ್ಟಿತ್ತು. 

ಡಾ ರಾಜ್‌ಕುಮಾರ್ ತೀರಿಕೊಂಡ ಆ ದಿನ ಅಭಿಮಾನಿಗಳ ಅನಿರೀಕ್ಷಿತ ನಡೆಯಿಂದ ಪೊಲೀಸರು ದಿಕ್ಕು ತೋಚದಂತಾದರು. ಜನಸಾಮಾನ್ಯರು ರಸ್ತೆಯಲ್ಲಿ ಸಂಚಾರ ಮಾಡುವುದು ಕೂಡ ಅಸಾಧ್ಯವಾಗಿತ್ತು. ಇಡೀ ವಿಶ್ವದಲ್ಲಿ ಒಬ್ಬ ನಟ ಸತ್ತಾಗ ಈ ರೀತಿ ಗಲಾಟೆ-ದಾಂಧಲೆಗಳು ನಡೆದಿದ್ದು ಇದೇ ಮೊದಲು ಅಂತ ಎಲ್ಲ ಪತ್ರಿಕೆಗಳೂ ಅಂದು ವರದಿ ಮಾಡಿದ್ದವು. ಇದಕ್ಕೆಲ್ಲ ಮುಖ್ಯ ಕಾರಣ, ಅಂದು ಅಭಿಮಾನಿಗಳಿಗೆ ಡಾ ರಾಜ್‌ಕುಮಾರ್ ಅವರು ಇಲ್ಲ ಎಂಬುದನ್ನು ಅಭಿಮಾನಿಗಳಿಗೆ ಸಹಿಸಿಕೊಳ್ಳೋದಕ್ಕೇ ಆಗಲಿಲ್ಲ!

Tap to resize

Latest Videos

ಡಾ ರಾಜ್ ಅಂತಿಮ ದರ್ಶನಕ್ಕೆ ಬಂದ ವಿಷ್ಣುಗೆ ಬೈಯ್ದು ಕಳಿಸಿದ್ರು ಪಾರ್ವತಮ್ಮ; ಎಂಥಾ ಕರುಣಾಮಯಿ!

ಡಾ ರಾಜ್‌ಕುಮಾರ್ ಅವರು ತೀರಿಕೊಂಡ ದಿನ ಬೆಂಗಳೂರಿನ ಪರಿಸ್ಥಿತಿ ಅದೆಷ್ಟು ಹದಗೆಟ್ಟಿತ್ತು ಎಂದರೆ, ಅದನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ವ್ಯವಸ್ಥೆ ಹರಸಾಹಸ ಪಡುತ್ತಿತ್ತು. ಅದೇ ವೇಳೆಯಲ್ಲಿ ಕನ್ನಡದ ಮತ್ತೊಬ್ಬ ಮೇರುನಟ ಡಾ ವಿಷ್ಣುವರ್ಧನ್ (Dr Vishnuvardhan) ಅವರು ಸದಾಶಿವನಗರದ ಡಾ ರಾಜ್‌ಕುಮಾರ್ ಮನೆಗೆ ಅಣ್ಣಾವ್ರ ಅಂತಿಮ ದರ್ಶನ (Tribute) ಪಡೆಯಲು ತಮ್ಮ ಎಂದಿನ ಆಪ್ತಮಿತ್ರ ಅಂಬರೀಷ್ (Ambareesh) ಜೊತೆ ಹೋಗಿಬಿಟ್ಟರು. ತಮ್ಮ ಅಣ್ಣನಂತಿದ್ದ ಡಾ ರಾಜ್‌ ಅವರ ಅಂತಿಮ ದರ್ಶನ ಪಡೆಯಲೇಬೇಕು ಎಂಬುದು ನಟ ವಿಷ್ಣುವರ್ಧನ್ ಬಯಕೆಯಾಗಿತ್ತು.

ಅಂಬರೀಷ್ ಜೊತೆ ವಿಷ್ಣು ಅವರನ್ನು ನೋಡಿದ್ದೇ ತಾಯಿ ಅಣ್ಣಾವ್ರ ಮನೆಯ ಅನ್ನಪೂರ್ಣೇಶ್ವರಿ ಸ್ವರೂಪಿ ಆಗಿರುವ ಪಾರ್ವತಮ್ಮನವರು ನಟ ವಿಷ್ಣುವರ್ಧನ್ ಹಾಗೂ ಅಂಬರೀಷ್ ಇಬ್ಬರನ್ನೂ ಮನೆಯೊಳಕ್ಕೆ ಕರೆದುಕೊಂಡು ಹೋಗಿ ಬೈಯ್ಯಲು ಶುರು ಮಾಡಿಬಿಟ್ಟರು. ಯಾಕೆ ಗೊತ್ತಾ? ಬಹಳಷ್ಟು ಜನರು ಅಂದುಕೊಂಡಿರುವಂತೆ ಅದು ನಟ ವಿಷ್ಣುವರ್ಧನ್ ಮೇಲಿನ ಕೋಪಕ್ಕೂ ಅಥವಾ ಮನಸ್ತಾಪಕ್ಕೋ ಅಲ್ಲ. ಬದಲಿಗೆ ಅಷ್ಟರಲ್ಲಾಗಲೇ ಅಂದಿನ ಸೂಕ್ಷ್ಮ ಪರಿಸ್ಥಿತಿ ಹಾಗೂ ಕೆಲವು ಅಂಧ ಅಭಿಮಾನಿಗಳ ವಿಕೃತ ಮನಸ್ಥಿತಿಯ ಅರಿವು ಆಗಿಬಿಟ್ಟಿತ್ತು ಮಾತೃ ಸ್ವರೂಪಿ ಪಾರ್ವತಮ್ಮನವರಿಗೆ!

ಡಾ ರಾಜ್‌ ಜೊತೆ ಭವ್ಯಾ ಒಮ್ಮೆಯೂ ನಟಿಸಲಿಲ್ಲ; ಹೊರಬಿದ್ದಿರುವ ಆ ಗುಟ್ಟು ನಿಜವೇ?

ಪತಿ ಕಳೆದುಕೊಂಡ ದುಃಖದಲ್ಲಿದ್ದ ಪಾರ್ವತಮ್ಮನವರು ಅಂತಹ ನೋವಿನ ಕ್ಷಣದಲ್ಲೂ ನಟ ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರನ್ನು ತಕ್ಷಣವೇ ಒಳಗೆ ಕರೆದುಕೊಂಡು ಹೋದರು. ಪಾರ್ವತಮ್ಮನವರು ಯಾವತ್ತೂ ನಟ ವಿಷ್ಣು ಅವರನ್ನು ಏಕವಚನದಲ್ಲೇ ಕರೆಯುತ್ತಿದ್ದರು. ಕಾರಣ ವಯಸ್ಸಿನಲ್ಲಿ ಸಾಕಷ್ಟು ದೊಡ್ಡವರಾಗಿದ್ದ ಪಾರ್ವತಮ್ಮನವರು ನಟ ವಿಷ್ಣುವರ್ಧನ್ ಅವರನ್ನು ಸಹೋದರನಂತೆ ನೋಡುತ್ತಿದ್ದರು. ಆ ಸಲುಗೆಯಿಂದ ಯಾವತ್ತೂ ಏಕವಚನದಲ್ಲೇ ಮಾತನಾಡುತ್ತಿದ್ದರು. ಅಂದೂ ಕೂಡ ಏಕವಚನದಲ್ಲೇ ವಿಷ್ಣು ಅವರಿಗೆ ಬೈದರು. 

'ವಿಷ್ಣು, ನೀನು ಯಾಕೆ ಈಗ ಇಲ್ಲಿಗೆ ಬರೋಕೆ ಹೋದೆ? ಎಂತಹ ತಪ್ಪು ಮಾಡಿಬಿಟ್ಟೆ ನೀನು..! ನೀನಿಲ್ಲಿ ಈಗ ಬರಬಾರದಿತ್ತು..' ಎಂದಿದ್ದರು. ಜೊತೆಯಲ್ಲಿದ್ದ ಅಂಬರೀಷ್ ಅವರಿಗೂ ಬೈದ ಪಾರ್ವತಮ್ಮನವರು 'ನೀನ್ಯಾಕೆ ಇವನನ್ನ ಈಗ ಇಲ್ಲಿಗೆ ಕರ್ಕೊಂಡು ಬಂದೆ? ನಿನಗೂ ಕೂಡ ಏನೂ ಗೊತ್ತಾಗೋದಿಲ್ಲ!' ಎಂದಿದ್ದರು. ಜೊತೆಗೆ ನಟ ವಿಷ್ಣು ಕಡೆ ಪ್ರೀತಿಯಿಂದ ನೋಡಿದ ಪಾರ್ವತಮ್ಮನವರು 'ಈಗ ನೀನು ಬರದೇ ಹೋದ್ರೆ ಏನೂ ಆಗ್ತಾ ಇರ್ಲಿಲ್ಲ.. ನೀನು ಈಗ ಇಲ್ಲಿಗೆ ಬರಲೇಬಾರದಿತ್ತು..' ಎಂದು ಹೇಳಿ ಪಾರ್ವತಮ್ಮ ಒಂದು ಕ್ಷಣ ಕಣ್ಣೀರಾದರು. 

ದೊಡ್ಮನೆಯ ಮೊದಲ ಲವ್ ಸ್ಟೋರಿ ರಿವೀಲ್; ಶಿವಣ್ಣನ ಮದುವೆಯಲ್ಲೇ ನಡೆದಿತ್ತು ಕಣ್ಣಾಮುಚ್ಚಾಲೆ!

ಬಳಿಕ, ಪರಿಸ್ಥಿತಿ ಅರಿತ ದೊಡ್ಮನೆ ಅಮ್ಮ ನಟ ವಿಷ್ಣು ಮುಖ ನೋಡಲು ನಟ ವಿಷ್ಣುವರ್ಧನ್ ಅವರು 'ಇಲ್ಲ, ನನಗೆ ಅಣ್ಣನ ಅಂತಿಮ ದರ್ಶನ ಪಡೆಯದೇ ಇರಲು ಸಾಧ್ಯವೇ ಇಲ್ಲ. ಹೀಗಾಗಿ ನಾನು ನನ್ನ ಆರಾಧ್ಯ ದೈವ ಅಣ್ಣನವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದೀನಿ.. ನಾನೇ ಕೆಲವೇ ಹೊತ್ತು ಇದ್ದು, ಅಣ್ಣಾವ್ರ ಅಂತಿಮ ದರ್ಶನ ಪಡೆದು ಹೊರಟು ಹೋಗ್ಬಿಡ್ತೀನಿ' ಅಂದಿದ್ದಾರೆ ವಿಷ್ಣು. ಅದಕ್ಕೆ ಪಾರ್ವತಮ್ಮ 'ನೀನು ಇಲ್ಲಿ ಇರಕೂಡದು. ಈ ತಕ್ಷಣ ಯಾರಿಗೂ ಕಾಣದಂತೆ ಹಿಂಬಾಗಿಲಿನಿಂದ ಇಲ್ಲಿಂದ ಹೊರಟು ಹೋಗು.., ಅಂಬೀ, ಇವನನ್ನು ಕರೆದುಕೊಂಡು ಹೋಗು' ಎಂದು ಗದ್ಗದಿತರಾಗಿ ಆರ್ಡರ್ ಮಾಡಿಬಿಟ್ಟರು. 

ಹೌದು, ಪಾರ್ವತಮ್ಮನವರು ಅಣ್ಣಾವ್ರ  ಅಂತಿಮ ದರ್ಶನಕ್ಕೆ ಬಂದಿರುವ ನಟ ವಿಷ್ಣುವರ್ಧನ್ ಅವರಿಗೆ ಬೈದಿದ್ದಾರೆ. ಆದರೆ ಅದು ದ್ವೇಷದಿಂದ ಅಲ್ಲ, ಪ್ರೀತಿ ಹಾಗೂ ಕಾಳಜಿಯಿಂದ. 'ವಿಷ್ಣುವರ್ಧನ್ ಅವರಿಗೆ ಇನ್ನೇನು ಅನಾಹುತ ಆಗಿಬಿಡುತ್ತೋ, ಡಾ ರಾಜ್‌ ಅಭಿಮಾನಿಗಳು ವಿಷ್ಣು ಅವರನ್ನು ನೋಡಿದರೆ ಅದೇನು ಎಡವಟ್ಟು ಮಾಡಿಬಿಡುತ್ತಾರೋ ಎಂಬ ಕಾಳಜಿಯಿಂದ'. ಪಾರ್ವತಮ್ಮನವರು ತಮ್ಮ ಸರ್ವಸ್ವವೂ ಆಗಿದ್ದ ಪತಿಯನ್ನು ಕಳೆದುಕೊಂಡ ದುಃಖದಲ್ಲೂ ವಿಷ್ಣು ಅವರನ್ನು ಮನೆಯೊಳಕ್ಕೆ ಕರೆದುಕೊಂಡು ಹೋಗಿ ಬೈದಿದ್ದಾರೆ. ಅಂಬಿಗೂ ಕೂಡ ಬೈಯ್ದಿದ್ದಾರೆ. ಬಳಿಕ, 'ಇಬ್ಬರೂ ಯಾರಿಗೂ ಕಾಣಿಸಿಕೊಳ್ಳದೇ ಹಿಂಬಾಗಿಲಿನಿಂದ ಹೋಗಿ' ಎಂದಿದ್ದಾರೆ. 

'ಎಕ್ಕ'ಕ್ಕೆ ನಾಂದಿ ಪೂಜೆ, ಚಿಕ್ಕಮನ ಎದುರು ಅಪ್ಪು ಚಿಕ್ಕಪ್ಪನ ಆಶೀರ್ವಾದ ಎಂದ ಯುವ!

ಆದರೆ, ಅಂದಿನ ಪರಿಸ್ಥಿತಿಯ ಸಂಪೂರ್ಣ ಅರಿವು ಪಾರ್ವತಮ್ಮನವರಿಗೆ ಇತ್ತು. ಮೊದಲಿನಿಂದಲೂ ಡಾ ರಾಜ್ ಅಭಿಮಾನಿಗಳು ನಟ ವಿಷ್ಣುವರ್ಧನ್ ಅವರನ್ನು ದ್ವೇಷಿಸುತ್ತಿದ್ದರು. ವಿಷ್ಣು ಕಂಡಲ್ಲಿ ಹಲ್ಲೆಗೆ ಮುಂದಾಗುತ್ತಿದ್ದರು. ಅದೇ ರೀತಿ ನಟ ವಿಷ್ಣು ಅಭಿಮಾನಿಗಳೂ ಕೂಡ ಅಣ್ಣಾವ್ರನ್ನು ದ್ವೇಷಿಸುತ್ತಿದ್ದರು. ಆದರೆ, ಡಾ ರಾಜ್‌ ಕುಟುಂಬ ಹಾಗೂ ವಿಷ್ಣು ಕುಟುಂಬಗಳ ಮಧ್ಯೆ ಯಾವುದೇ ದ್ವೇಷ ಇರಲಿಲ್ಲ.

ಆದರೆ, ಅಭಿಮಾನಿಗಳು ಅತಿರೇಕ ಅಂದು ಮುಗಿಲು ಮುಟ್ಟಿದ್ದನ್ನು ಕಂಡಿದ್ದ ಪಾರ್ವತಮ್ಮನವರು ನಟ ವಿಷ್ಣು ಅವರನ್ನು ಪ್ರೀತಿಯಿಂದ, ಮಮತೆಯಿಂದ ಬೈದು 'ಹೋಗು ಈಗ' ಎಂದಿದ್ದರು. ಡಾ ರಾಜ್‌ ಹಾಗೂ ಡಾ ವಿಷ್ಣು ಅಭಿಮಾನಿಗಳ ಮಧ್ಯೆ ಮನಸ್ತಾಪಗಳು ಇರೋದು ಇಡೀ ಕರ್ನಾಟಕಕ್ಕೇ ಗೊತ್ತು. ಆದರೆ, ರಾಜ್-ವಿಷ್ಣು ಮಧ್ಯೆ ಅಗಾಧವಾದ ಬಾಂಧವ್ಯವಿತ್ತು. ಸಹೋದದರ ಸಾಮರಸ್ಯವಿತ್ತು.

ಅಪ್ಪು ಫ್ಯಾನ್ಸ್‌ಗೆ ಶಿವಣ್ಣ ಖಡಕ್ ಸಂದೇಶ; ಇವರೆಗೂ ಯಾರೂ ಹೀಗೆ ಮಾಡಿರಲಿಲ್ಲ ಯಾಕೆ?

ಆದರೆ, ಅವರಿಬ್ಬರ ಅಂಧ ಅಭಿಮಾನಿಗಳು ಅದನ್ನು ಅರ್ಥ ಮಾಡಿಕೊಳ್ಳದೇ ಅವರಿಬ್ಬರು ಒಂದಾದ ಎಲ್ಲ ಘಳಿಗೆಯಲ್ಲೂ ಅನರ್ಥವನ್ನೇ ಮಾಡಿಬಿಡುತ್ತಿದದರೂ. ಆ ಕಾರಣಕ್ಕೇ ಅಂದು ಪಾರ್ವತಮ್ಮನವರು ನಟ ವಿಷ್ಣುವರ್ಧನ್ ಜೀವಕ್ಕೆ ಯಾವುದೇ ಪಾಯ ಆಗದಿರಲಿ, ಒಬ್ಬರ ಬದಲು ಇಬ್ಬರ ಅಂತ್ಯ ಸಂಸ್ಕಾರ ಅಂದು ಆಗದಿರಲಿ ಎಂದು ವಿಷ್ಣುಗೆ ಬೈದಿದ್ದರು!

click me!