ಪಾರ್ವತಮ್ಮ ರಾಜ್‌ಕುಮಾರ್ ಕೊಡಿಸಿದ ಬೈಕ್-ಕಾರು ಮಾರಿ ಲಕ್ ಮತ್ತು ಮನೆ ಕಳೆದುಕೊಂಡೆ: ನಟ ಬಾಲರಾಜ್

Published : Mar 04, 2023, 04:17 PM IST
 ಪಾರ್ವತಮ್ಮ ರಾಜ್‌ಕುಮಾರ್ ಕೊಡಿಸಿದ ಬೈಕ್-ಕಾರು ಮಾರಿ ಲಕ್ ಮತ್ತು ಮನೆ ಕಳೆದುಕೊಂಡೆ: ನಟ ಬಾಲರಾಜ್

ಸಾರಾಂಶ

ಜೀವನದಲ್ಲಿ ಲಕ್ ತಂದುಕೊಟ್ಟ ಕಾರನ್ನು ಮಾರಿ ಏನೆಲ್ಲಾ ಸಮಸ್ಯೆ ಆಯ್ತು ಎಂದು ಹಂಚಿಕೊಂಡ ಹಿರಿಯ ನಟ ಬಾಲರಾಜ್. 

85-90ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ ಬಾಲರಾಜ್‌ಗೆ ಡಾ.ಪಾರ್ವತಮ್ಮ ರಾಜ್‌ಕುಮಾರ್ ಅವರು ಇಂಪೋರ್ಟ್‌ ಬೈಕ್‌ ಮತ್ತು ಹೊಸ ಕಾರನ್ನು ಕೊಡಿಸುತ್ತಾರೆ. ಸದಾ ಬೈಕ್‌ನಲ್ಲಿ ಓಡಾಡುತ್ತಿದ್ದ ಬಾಲರಾಜ್‌ ಜೀವನದಲ್ಲಿ ಲಕ್ ತಂದುಕೊಟ್ಟ ಮತ್ತು ಮರೆಯಲಾಗದ ಘಟನೆ ಬಗ್ಗೆ ಮಾತನಾಡಿದ್ದಾರೆ. 

'ಜೀವನದಲ್ಲಿ ಮರೆಯಲಾಗದ ಅನುಭವ ಅಂದ್ರೆ ಆರಂಭದಲ್ಲಿ ಪಾರ್ವತಮ್ಮ  ನನಗೆ ಬೈಕ್ ಕೊಡಿಸಿದ್ದರು. ಅದು imported Honda ಬೈಕ್ ಆಗಿದ್ದು ಆಗಿನ ಕಾಲದಲ್ಲಿ 20 ಸಾವಿರ ಹಣ ಕೊಟ್ಟು ಕೊಡಿಸಿದ್ದರು. ಮಹಾರಾಣಿ ಅಥವಾ ಯಾವುದಾದರೂ ಒಂದು ಕಾಲೇಜ್ ಮುಂದೆ ಓಡಿಸಿಕೊಂಡು ಹೋದರೆ ಹುಡುಗಿಯರು ಹಾಗೇ ನೋಡುತ್ತಿದ್ದರು.  ಅಷ್ಟು ಬ್ಯುಟಿಫುಲ್ ಆಗಿರುವ ಪರ್ಪಲ್‌ ಕಲರ್‌ ಬಣ್ಣದ ಬೈಕ್ ಅದು. ಮದ್ರಾಸ್‌ ಕಸ್ಟಮ್‌ನಲ್ಲಿ ಆ ಬೈಕ್‌ನ ಇಳಿಸಿಕೊಂಡು ಟ್ಯಾಕ್ಸ್‌ ಕಟ್ಟಿ ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದೆ. ಬೈಕ್‌ನ ಪೆಟ್ರೋಲ್ ಟ್ಯಾಂಕ್‌ ಅಷ್ಟು ಬ್ಯೂಟಿಫುಲ್ ಆಗಿತ್ತು. ಸುಮಾರು ಒಂದು ವರ್ಷಗಳ ಕಾಲ ಅದನ್ನು ಓಡಿಸಿದೆ ಆನಂತರ ಪೆಟ್ರೋಲ್ ಹೆಚ್ಚಿಗೆ ಕುಡಿಯುತ್ತಿದ್ದ ಕಾರಣ ಸೆಟ್ ಆಗುತ್ತಿರಲಿಲ್ಲ. ಆ ಗಾಡಿಗೆ ಹೈ ಸ್ಪೀಡ್‌ ಇಂಜಿನ್‌ ಇತ್ತು. ನನ್ನ ತಂದೆ ಪ್ರತಿಷ್ಠಿತ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು ಒಂದು ದಿನ ನನ್ನ ಬಳಿ ಬಂದು ನಮ್ಮದೊಂದು ಜಾಗವಿದೆ ಅದನ್ನು ಕಾಂಪ್ಲೆಕ್ಸ್‌ ಮಾಡೋಣ ನೀನು ಎಷ್ಟು ಹಣ ಕೊಡುತ್ತೀಯಾ ಎಂದು ಕೇಳಿದ್ದರು ನನ್ನ ಬಳಿ ಹಣವಿಲ್ಲ ಎಂದು ನಗುತ್ತಿದ್ದೆ ಆದ ಅಪ್ಪಾಜಿ ಬೈಕ್‌ನ ಮಾರು ಎಂದರು. ಆಗಿನ ಕಾಲದಲ್ಲಿ 20 ಸಾವಿರಕ್ಕೆ ಖರೀದಿ ಮಾಡಿದ ಬೈಕ್‌ನ ಒಬ್ಬ ಪುಣ್ಯಾತ್ಮ 10 ಸಾವಿರ ಹೆಚ್ಚಿಗೆ ಅಂದ್ರೆ 30 ಸಾವಿರ ಕೊಟ್ಟು ತೆಗೆದುಕೊಂಡು ಹೋದ. 20 ಸಾವಿರವನ್ನು ಅಪ್ಪಾಜಿಗೆ ಕೊಟ್ಟೆ. ಉಳಿದ 10 ಸಾವಿರದಲ್ಲಿ Suzuki ಬೈಕ್ ಖರೀದಿ ಮಾಡಿದೆ' ಖಾಸಗಿ ಸಂದರ್ಶನದಲ್ಲಿ ಬಾಲರಾಜ್ ಮಾತನಾಡಿದ್ದಾರೆ.

ಕೈಯಲ್ಲೇ ಗಂಡನ ಟಾಯ್ಲೆಟ್ ಎತ್ತಿ ಕಾಯಿಲೆ ಬಂದಿತ್ತು: ಹಿರಿಯ ನಟಿ ಪಂಕಜಾ ಕಣ್ಣೀರು

'ಹಲಸೂರು ವೆಂಕಟೇಶ್‌ ಅವರು ನನಗೆ ತುಂಬಾನೇ ಪರಿಚಯ ಹೀಗಾಗಿ ಒಂದು ದಿನ ಅಪ್ಪಾಜಿ ಅವರನ್ನು ನೋಡಬೇಕು ಎಂದು ಹೇಳಿ ಸಂಜೆ ಬೆಂಗಳೂರಿನಿಂದ ಹಲಸೂರಿನ ಕಡೆ ಹೊರಟೆವು. ಕನಕಪುರ ರೂಟ್‌ನಲ್ಲಿ ಬೈಕ್ ಓಡಿಸಿಕೊಂಡು ಬರುವಾಗ ಸ್ಪೀಡ್‌ನಲ್ಲಿ ಬರುತ್ತಿದ್ದೆ. ಸಂತೆಮಾರೇನ ಹಳ್ಳಿ ಸಮೀಪ ನನ್ನ ಬೈಕ್ ಪಂಚರ್ ಆಗಿಬಿಟ್ಟಿತ್ತು. ಆ ಕಾಲದಲ್ಲಿ ಪಂಚರ್‌ ಅಂಗಡಿಗಳು ನಗರದಲ್ಲಿ ಮಾತ್ರ ಇತ್ತು ಹೀಗಾಗಿ ಗಾಡಿ ತಳ್ಳಿಕೊಂಡ ಬೆಳಗ್ಗಿಜಾವ ಪಂಚರ್‌ ಅಂಗಡಿಗೆ ಬಂದು ರಿಪೇರಿ ಆದ್ಮೇಲೆ ಹೊರಟೆವು. ಅಪ್ಪಾಜಿ ಸಾಮಾನ್ಯವಾಗಿ ಬೆಳಗ್ಗೆ 4 ಗಂಟೆಗೆ ಎದ್ದು ವ್ಯಾಯಾಮ ಮಾಡುತ್ತಾರೆ. ನಮ್ಮನ್ನು ನೋಡಿ ಆಶ್ಚರ್ಯ ಪಟ್ಟರು. ಜೀವನದಲ್ಲಿ ಮರೆಯಲಾಗದ ಘಟನೆಗಳಲ್ಲಿ ಅದೂ ಒಂದು ಎಂದು ಬಾಲರಾಜ್ ಹೇಳಿದ್ದಾರೆ.  

ನಿನಗಿಂತ ರಮ್ಯಾಗೆ ಡಬಲ್ Age ಆಗಿದ್ರೂ ನೀನೇ ವಯಸ್ಸಾದವಳ ಹಾಗೆ ಕಾಣ್ತಿಯಲ್ಲಾ; ಸಾನ್ಯಾ ಕಾಲೆಳೆದ ನೆಟ್ಟಿಗರು

'ಬರೀ ಬೈಕ್‌ನಲ್ಲಿ ಓಡಾಡಿಕೊಂಡು ಸಿನಿಮಾ ಮಾಡಿಕೊಂಡು ಇದ್ದೆ ಹೀಗಾಗಿ ಪಾರ್ವತಮ್ಮನವರ ಬಳಿ ಹೋಗಿ ಕಾರು ಕೇಳಿದೆ ಆಗ ಮಾರುತಿ 800 ಕಾರು ಕೊಡಿಸಿದ್ದರು. ನನಗೆ ಮನೆ ಕೊಟ್ಟಿಸಿಕೊಡಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದರು. ನಾವು ಸಂಭಾವನೆ ಪಡೆಯುತ್ತಿರಲಿಲ್ಲ ಹೀಗಾಗಿ ಈ ರೀತಿ ಕೊಡಿಸುತ್ತಿದ್ದರು. ಮಾರುತಿ ಕಾರು ಬಂದ ನಂತರ ನನ್ನ ಜೀವನ ಬದಲಾಗಿತ್ತು. ಕೆಲವೊಂದು ಗಾಡಿಗಳು ನಮಗೆ ಲಕ್ ತಂದುಕೊಡುತ್ತದೆ. ಆ ಗಾಡಿ ಮಾರಿದ ಮೇಲೆ ನನಗೆ ಯಾವ ಲಕ್‌ ಕೂಡಿ ಬರಲಿಲ್ಲ. ಬಸವೇಶ್ವರ ನಗರದ ಮನೆಯಲ್ಲಿ ವಾಸ ಮಾಡುತ್ತಿದ್ದೆವು ಜಗಣ್ಣ ಬಂದು ವಾಸ್ತು ಸರಿ ಇಲ್ಲ ಅಂತ ಹೇಳಿದಕ್ಕೆ ಮಾರಾಟ ಮಾಡಿ ಕಷ್ಟ ಆಯ್ತು. ಅವತ್ತಿನಿಂದ ಇವತ್ತಿನವರೆಗೂ ಮನೆ ಖರೀದಿ ಮಾಡಲು ಆಗಲಿಲ್ಲ. ಆ ಮಾರುತಿ ಕಾರನ್ನು ತರುವ ಪ್ಲ್ಯಾನ್ ಮಾಡಿದೆ ಆದರೆ ನನ್ನ ಸ್ನೇಹಿತ ಮತ್ತೊಬ್ಬರಿಗೆ ಮಾರಾಟ ಮಾಡಿ ಬಿಟ್ಟರು ಎಂದಿದ್ದಾರೆ ಬಾಲರಾಜ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep