
ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದ್ದಾರೆ.
ಜಗ್ಗೇಶ್ ಸಿನಿಮಾಗಳಲ್ಲಿ ಹೆಸರು ಮಾಡಿದರೆ ಪತ್ನಿ ಪರಿಮಳ ಸಾಮಾಜಿಕ ಕೆಲಸಗಳಲ್ಲಿ ಸದಾ ಮುಂದು. ಆದರ್ಶ ದಂಪತಿಗಳ ಸಾಲಿಗೆ ಇವರನ್ನೂ ಸೇರಿಸಬಹುದು.
ಪರಿಮಳ ಜಗ್ಗೇಶ್ ಶಾಲಾ ದಿನಗಳಿಂದಲೂ ಎಲ್ಲಾ ಚಟುವಟಿಕೆಗಳಲ್ಲಿ ಸದಾ ಮುಂದು. ಕಾಲೇಜು ದಿನಗಳಲ್ಲಿ ಸ್ಪೋರ್ಟ್ಸ್ ನಲ್ಲಿ ತುಂಬಾ ಆfಯಕ್ಟೀವ್ ಆಗಿದ್ದವರು. ಆರೋಗ್ಯದ ಬಗ್ಗೆ ಬಹಳ ಕಾಳಜಿ ಇರುವವರಾಗಿದ್ದರು. ಎಲ್ಲವೂ ಚೆನ್ನಾಗಿದೆ, ಬದುಕು ಹಾಯಾಗಿದೆ ಎನಿಸುವಾಗ ಆಘಾತವೊಂದು ಎದುರಾಗುತ್ತದೆ. 24 ವರ್ಷಕ್ಕೆ ಸ್ಟ್ರೆಸ್ ಇಂಡ್ಯೂಸ್ಡ್ ಡಯಾಬಿಟೀಸ್ ಇದೆ ಎನ್ನುವುದು ಗೊತ್ತಾಗುತ್ತದೆ. ಆಗ ಶಾಕ್! ಮುಂದೇನು ಮಾಡಬೇಕು ಎಂದು ಗೊತ್ತಾಗುವುದಿಲ್ಲ.
BB7 ನಲ್ಲಿ ಚಂದನ್ ಆಚಾರ್ ಶೋ ಆಫ್ ಮಾಡ್ತಾ ಇದ್ದಾರಾ?
ಆಗ ಪರಿಮಳ ಜಗ್ಗೇಶ್ ತಮ್ಮೊಳಗೊಂದು ಧೈರ್ಯ ತೆಗೆದುಕೊಳ್ಳುತ್ತಾರೆ. ಚಾಲೆಂಜ್ ಆಗಿ ತೆಗೆದುಕೊಳ್ಳುತ್ತಾರೆ. ಏನಾದರೂ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ರೀಸರ್ಚ್ ಮಾಡ ತೊಡಗುತ್ತಾರೆ.
ಅಮೆರಿನ್ ಡಯಾಬಿಟಿಕ್ ಅಸೋಸಿಯೇಶ್ ಗೆ ಒಂದು ಸ್ಟಡಿ ಮಾಡುತ್ತಾರೆ. 50 ಜನಕ್ಕೆ ಪ್ರೀ ಹಾಗೂ ಪೋಸ್ಟ್ ಸೆನ್ಸಾರ್ಸ್ ಹಾಕುವುದು. ಅವರ ಆಹಾರದಲ್ಲಿ ಊಟದಲ್ಲಿ ಬದಲಾವಣೆ ಮಾಡುವುದು. ನಮ್ಮ ರೈತರು ಬೆಳೆದ ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಬಳಸುವುದು. ನಮ್ಮ ಅಡುಗೆ ಮನೆಯಲ್ಲಿ ಸಿಗುವ ಇಂಗ್ರೀಡಿಯಂಟ್ಸ್ ಬಳಸಿ ನಮ್ಮ ಆರೋಗ್ಯ ಹೆಚ್ಚಿಸಿಕೊಳ್ಳುವುದ ಬಗ್ಗೆ ಸ್ಟಡಿ ಮಾಡುತ್ತಾರೆ. ಇವರ ಈ ಅಧ್ಯಯನಕ್ಕೆ ಗೌರವ ಡಾಕ್ಟರೇಟ್ ಕೂಡಾ ಸಿಗುತ್ತದೆ. ಪರಿಮಳಾ ಸಾಧನೆಗೆ ಶಹಬ್ಭಾಸ್ ಎನ್ನಲೇಬೇಕು!
ದುನಿಯಾ ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?
ಡಯಾಬಿಟಿಕ್ ಪೇಶಂಟ್ ಗಳಿಗೆ ಪರಿಮಳಾ ಒಂದು ಕಂಪನಿ ಸ್ಥಾಪಿಸಿದ್ದಾರೆ. ಅವರ ಕಂಪನಿ ಹೆಸರು ಅಲಾ ಮಿರಾ. ಕಳೆದು ಹೋಗಿರುವ ಆರೋಗ್ಯವನ್ನು ವಾಪಸ್ ಹುಡುಕುವುದು, ಆರೋಗ್ಯಯುತವಾಗಿ ಬಾಳುವುದು ಈ ಕಂಪನಿಯ ಧ್ಯೇಯ. ಬರುವ ಡಯಾಬಿಟಿಕ್ ಪೇಶಂಟ್ ಗಳ ಕೈಗೆ ಸೆನ್ಸಾರ್ ಹಾಕಲಾಗುತ್ತದೆ. ಕೌನ್ಸಲಿಂಗ್ ಮಾಡಲಾಗುತ್ತದೆ. ಇದಕ್ಕೆ 15 ಸಾವಿರ ಫೀ ಆಗುತ್ತೆ. ಎಲ್ಲರೂ ಆರೋಗ್ಯವಾಗಿರಬೇಕು. ಖುಷಿಖುಷಿಯಾಗಿರಬೇಕು ಎನ್ನುವುದು ಇವರ ಅಭಿಲಾಷೆ.
ಪರಿಮಳಾ ಜಗ್ಗೇಶ್ ಈ ಸಾಮಾಜಿಕ ಕಾರ್ಯಕ್ಕೆ ಸುವರ್ಣ ನ್ಯೂಸ್ ಕಡೆಯಿಂದ ಆಲ್ ದಿ ಬೆಸ್ಟ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.