ರೀಲೊಳಗಿನ ರಿಯಲ್ ನಾಯಕಿ, ಪ್ರಾಣಿ ಪ್ರೀಯೆ 'ಸಂಯುಕ್ತ ಹೊರನಾಡ್!

By Web DeskFirst Published Oct 28, 2019, 1:44 PM IST
Highlights

ಜೂನಿಯರ್‌ ದೇವ ದಾಸ ಅಂದ್ರೆ ಹೂಂ ಅಂತೀಯ ನಿಂಗೆ ಡೈಲಿ ಒಂದು ಹೆಸರಿಡ್ತೀನಿ ಏನ್‌ಅಂತೀಯಾ? ಅನ್ನೋ ಲೈಫ್ ಇಷ್ಟೇನೆ ಸಿನೆಮಾ ಹಾಡಿನ ಮೂಲಕ ಚಂದನವನಕ್ಕೆ ಕಾಲಿಟ್ಟ ಬೆಡಗಿ ಹೊರನಾಡಿನ ಮುದ್ದು ಮುಖದ ಸುಂದರಿ ಸಂಯುಕ್ತಾ ಹೊರನಾಡು.

ರಕ್ತಗತವಾಗಿ ಬಂದ ಕಲೆ:

ನಟನಾ ಕಲೆ ಇವರಿಗೆ ರಕ್ತ ಗತವಾಗಿಯೇ ಬಂದಿದೆ. ಯಾಕಂದ್ರೆ ಇವರ ಪೂರ್ತಿ ಕುಟುಂಬವೇ ರಂಗಭೂಮಿ ಕಲಾವಿದರು. ತಾಯಿ ಸುಧಾ ಬೆಳವಾಡಿ ಮತ್ತುಅಂಕಲ್ ಪ್ರಕಾಶ್ ಬೆಳವಾಡಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಇವರ ಅಜ್ಜಿ ನಿರ್ದೇಶನ ಮಾಡಿದ 'ಉಂಡಾಡಿ ಗುಂಡ' ನಾಟಕದಲ್ಲಿ 6 ವರ್ಷದ ಬಾಲಾ ಕಲಾವಿದೆಯಾಗಿ ಮೊದಲು ಬಾರಿಗೆ ವೇದಿಕೆ ಹತ್ತಿದ್ದರು.

'ಆಮ್ಲೆಟ್‌' ಹಾಕೋದ್ರಲ್ಲಿ ಸಂಯುಕ್ತ ಹೊರನಾಡು ಎತ್ತಿದ ಕೈ!

ಪೇಪರ್‌ನಲ್ಲಿ ಫೋಟೋ ಬರಬೇಕೆಂದು ಸಿನೆಮಾ ಪ್ರವೇಶ:

ರಂಗಭೂಮಿ ಕಲಾವಿದೆಯಾಗಿದ್ದರೂ ಪೇಪರ್‌ನಲ್ಲಿ ಫೋಟೋ ಬರಬೇಕೆಂಬ ಕಾರಣಕ್ಕೆ ಸಿನೆಮಾ ಪ್ರವೇಶ ಮಾಡಿದರು. ಮೊದಲೇ ರಂಗಭೂಮಿ ಕಲಾವಿದೆಯಾಗಿದ್ದರಿಂದ ನಟನೆಇವರಿಗೆ ಸಲೀಸಾಗಿತ್ತು. ಆಗ ದೊರೆತ ಸಿನೆಮಾವೇ ಲೈಫು ಇಷ್ಟೇನೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆ ಸಿನೆಮಾಗಳಲ್ಲೂ ನಟಿಸಿದ್ದಾರೆ.

ಪ್ರಾಣಿ ಪ್ರೇಮಿ ಈ ನಾಯಕಿ:

ಸಿನೆಮಾಕ್ಕಿಂತಲೂ ಪ್ರಾಣಿಗಳನ್ನೂ ಹೆಚ್ಚಾಗಿ ಇಷ್ಟ ಪಡುತ್ತಾರೆ ಸಂಯುಕ್ತಾ. ತನ್ನ ಪ್ರೀತಿ ಪಾತ್ರವಾದ ಶ್ವಾನಗುಂಡನ ಹೆಸರಿನಲ್ಲಿ ಟ್ರಸ್ಟಿವೊಂದನ್ನು ಸ್ಥಾಪಿಸಿ ಆ ಮೂಲಕ ಬೀದಿನಾಯಿಗಳ ಪಾಲನೆ, ಪೋಷಣೆಯನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ  'ನಾನು ಮತ್ತುಗುಂಡ' ಎಂಬ ಸಿನಿಮಾವು ತೆರೆ ಕಾಣಲಿದ್ದು, ಇದು ಪ್ರಾಣಿ ಪ್ರೇಮಿಗಳ ಕುರಿತಾದ ಸಿನೆಮವಾಗಿದೆ.

ತ್ರಿಮೂರ್ತಿಗಳ ಮಧುರ ತಾಪ‘ತ್ರಯ’!

ಸರ್ಕಾರಿ ಕನ್ನಡ ಶಾಲೆ ಆಂದೋಲನ: 

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತಿವೆ. ಆದರೆ ಸಂಯುಕ್ತಾ ಹೊರನಾಡು ಕನ್ನಡ ಶಾಲೆಯ ಉಳಿವಿಕೆಗಾಗಿ ಶ್ರಮಿಸುತ್ತಿದ್ದಾರೆ. ಹಳ್ಳಿಗಳಿಗೆ ಹೋಗಿ ಅಲ್ಲಿನ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಕನ್ನಡ ಶಾಲೆಗಳ ಪರ ನಿಂತಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಅಮೃತಹಳ್ಳಿ ಸಾರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಲ್ಲಿಗೆ ಬೇಕಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಮೂಲಕ ಸೇವ್‌ ಗಾರ್ವರ‌್ಮೆಂಟ್‌ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಅನಿಲ್ ಶೆಟ್ಟಿಇವರಿಗೆ ಸಾಥ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕನಕಪುರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳುವ ಆಲೋಚನೆ ಕೂಡ ನಡೆಯುತ್ತಿದೆ.

ಕಲೆಯ ಹಸಿವಿಗಾಗಿ ಆರ್ಟ್ಸ್‌ ಟ್ರಸ್ಟ್:

ಜೀವನದ ಭಾಗವಾದ ಕಲೆಯ ಸ್ವಾರಸ್ಯವನ್ನುಇತರರಿಗೂ ಉಣ ಬಡಿಸಬೇಕೆಂಬುದು ಇವರ ಉದ್ದೇಶ. ಅದಕ್ಕಾ ಗಿಟ್ರಸ್ಟ್‌ ಒಂದನ್ನು ಸ್ಥಾಪಸಿ ಆ ಮೂಲಕ ನೃತ್ಯ, ಚಿತ್ರಕಲೆ, ನಟನೆ ಮುಂತಾದ ಕಲಾ ಪ್ರಕಾರಗಳ ತರಭೇತಿಯನ್ನೂ ನೀಡುತ್ತಿದ್ದಾರೆ.

ಸುಷ್ಮಾ ಸದಾಶಿವ್,ವಿವೇಕಾನಂದ ಕಾಲೇಜು, ಪುತ್ತೂರು
 

click me!