
ನಿರ್ದೇಶಕ ಆರ್ ಚಂದ್ರು ತಮ್ಮ ಆರ್.ಸಿ ಸ್ಟುಡಿಯೋಸ್ ಬ್ಯಾನರ್‌ನ ಅಡಿಯಲ್ಲಿ ಫಾದರ್ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಚಿತ್ರದಲ್ಲಿ ತಂದೆ- ಮಗನ ಭಾಂದವ್ಯವನ್ನು ಅದ್ಭುತವಾಗಿ ತೋರಿಸಲಾಗುತ್ತದೆ, ತಂದೆ ಪಾತ್ರದಲ್ಲಿ ಪ್ರಕಾಶ್ ರಾಜ್ ಮತ್ತು ಮಗನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸುತ್ತಿದ್ದಾರೆ. ಇತ್ತೀಚಿಗೆ ಫಾದರ್ ಚಿತ್ರದ ಪೋಸ್ಟರ್ ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿಯಾಗಿ ನಡೆಯಿತ್ತು, ವಿಶೇಷ ಅತಿಥಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಮಿಸಿದ್ದರು. ಸುದೀಪ್ ಮತ್ತು ಆರ್ ಚಂದ್ರು ಈ ಹಿಂದೆ ಕಬ್ಜ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಸುದೀಪ್ ಮಾತು:
'ಕಾಲು ಎಳೆಯುವವರು ಇದ್ದಾಗಲೇ ಬೆಳೆಯೋದು. ಆರ್ ಚಂದ್ರು ಆರು ಸಿನಿಮಾಗಳನ್ನು ಫೋಷಣೆ ಮಾಡಿದ್ದರು. ಬಳಿಕ ಅವರನ್ನು ಐದು ಚಂದ್ರು ಎಂದು ಕರೆಯಲು ಆರಂಭಿಸಿದರು. ಎಲ್ಲಾ ಒಳ್ಳೆಯದ್ದಕ್ಕೆ ಚಂದ್ರು. ಯಾಕಂದ್ರೆ ಕಾಲು ಎಳೆಯುವವರು ಇದ್ದಾಗಲೇ ಬೆಳೆಯೋದು. ಯಾಕೆಂದ್ರೆ ಕಬ್ಜ ಸಿನಿಮಾ ಮಾಡಿದ್ರು ಆದರೆ ಅದಕ್ಕೆ ಒಂದಷ್ಟು ಕಾಮೆಂಟ್ಸ್ ಬಂದಿರಬಹುದು. ಹಾಗಂತ ಬಂದಿರೋ ಎಲ್ಲಾ ಸಿನಿಮಾ ಅದ್ಭುತ ಎನ್ನುವುದಕ್ಕೆ ಆಗಲ್ಲ ಎಲ್ಲವನ್ನು ಬೆಂಬಲಿಸಬೇಕು. ಕಾಮೆಂಟ್ ಮಾಡುವುದು ಬಿಟ್ಟು ಪ್ರೋತ್ಸಾಹಿಸಬೇಕು' ಎಂದು ಸುದೀಪ್ ವೇದಿಕೆ ಮೇಲೆ ಮಾತನಾಡಿದ್ದಾರೆ.
ಮುಖ ಮೂತಿ ಹೊಡೆದಾಕಿನೇ ಆಚೆ ಹೋಗೋದು; ಧನರಾಜ್ ಮೇಲೆ ಹಲ್ಲೆ ಮಾಡಿದ ರಜತ್ ಕಿಶನ್
'ಚಂದ್ರು ನೀವು 5 ಸಿನಿಮಾ ಅಲ್ಲ 500 ಸಿನಿಮಾಗಳನ್ನು ಮಾಡಿ. ಕನ್ನಡಕ್ಕೆ ಮಾಡ್ತಿದ್ದೀರಾ ಅಲ್ವಾ ಮಾಡಿ ಒಳ್ಳೆಯವರು ಜೊತೆಗಿರುವವರೆಗೆ ನಿಮಗೆ ಒಳ್ಳಯದೇ ಆಗುತ್ತದೆ. ಚಂದ್ರು ನನ್ನ ಒಳ್ಳೆಯ ಗೆಳೆಯ ಸಹೋದರ ಅವನು ಎಷ್ಟು ಕೆಟ್ಟ ಸಿನಿಮಾ ಮಾಡಿದರೂ ನನ್ನ ಸಹೋದರ ಯಾವಾಗಲೂ ನನ್ನ ಬೆಂಬಲ ಇದ್ದೇ ಇರುತ್ತದೆ' ಎಂದು ಸುದೀಪ್ ಹೇಳಿದ್ದಾರೆ.
ಪತ್ನಿ ಪ್ರಿಯಾಂಕಾಗೆ ಪ್ರಪೋಸ್ ಮಾಡಿದ್ದರೂ ಆಂಕರ್ ಅನುಶ್ರೀ ಮನಸ್ಸಿನಲ್ಲಿದ್ದಾಳೆ ಎಂದ ಉಪ್ಪಿ; ಹಳೆ ವಿಡಿಯೋ ಸಖತ್ ವೈರಲ್
ಫಾದರ್ ಚಿತ್ರದ ಜೊತೆ ಪಿಓಕೆ, ಕಬ್ಜ-2, ಶ್ರೀರಾಮಬಾಣ ಹಾಗೂ DOG ಸಿನಿಮಾಗಳನ್ನು ಆರ್‌ಚಂದ್ರು ಘೋಷಣೆ ಮಾಡಿದ್ದಾರೆ. ಈ ಒಂದು ಚಿತ್ರದಲ್ಲಿ ಸುದೀಪ್ ಕೂಡ ನಟಿಸುವ ಸಾಧ್ಯತೆ ಇರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.