ಕಣ್ಣು ಹಾಯಿಸಿದಲ್ಲೆಲ್ಲಾ ವೆರಾಯಿಟಿ ಗನ್ಗಳು.. ಆ ಗನ್ಗಳ ಮಧ್ಯೆ ನಟ ರಾಕ್ಷಸ ಅನ್ನೋ ಪಟ್ಟ ಪಡೆದಿರೋ ಮಾಸ್ ಹೀರೋ ಡಾಲಿ ಧನಂಜಯ್. ಹೀಗೆದ್ಮೇಲೆ ಡಾಲಿ ಗನ್ ಎತ್ತಿಕೊಂಡು ಬರಲೇ ಬೇಕಲ್ವಾ. ಆದ್ರೆ ಧನಂಜಯ್ ಗನ್ಗಳ ಮಧ್ಯೆ ಮೈಕ್ ಎತ್ತಿಕೊಂಡು ಬಂದಿದ್ದಾರೆ.
ಕಣ್ಣು ಹಾಯಿಸಿದಲ್ಲೆಲ್ಲಾ ವೆರಾಯಿಟಿ ಗನ್ಗಳು.. ಆ ಗನ್ಗಳ ಮಧ್ಯೆ ನಟ ರಾಕ್ಷಸ ಅನ್ನೋ ಪಟ್ಟ ಪಡೆದಿರೋ ಮಾಸ್ ಹೀರೋ ಡಾಲಿ ಧನಂಜಯ್. ಹೀಗೆದ್ಮೇಲೆ ಡಾಲಿ ಗನ್ ಎತ್ತಿಕೊಂಡು ಬರಲೇ ಬೇಕಲ್ವಾ. ಆದ್ರೆ ಧನಂಜಯ್ ಗನ್ಗಳ ಮಧ್ಯೆ ಮೈಕ್ ಎತ್ತಿಕೊಂಡು ಬಂದಿದ್ದಾರೆ. ಅಷ್ಟಕ್ಕೂ ಡಾಲಿಗು ಗನ್ಗಳಿಗೂ ಈ ಮೈಕ್ಗು ಏನು ಸಂಬಂಧ..? ಡಾಲಿಯ ಗನ್ ಮತ್ತು ಮೈಕ್ ಕಥೆ ಇವತ್ತೇ ಯಾಕೆ ರಿವೀಲ್ ಆಯ್ತು. ಆ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ ನೋಡಿ. ಡಾಲಿ ಧನಂಜಯ್.. ಸ್ಯಾಂಡಲ್ವುಡ್ನ ನಯಾ ಟ್ರೆಂಡು.. ತೆರೆ ಮೇಲೆ ಬಂದ್ರೆ ಇವರದ್ದೇ ಸೌಂಡು. ಅಭಿಮಾನಿಗಳಿಗೆ ಬೇಕೇ ಬೇಕು ಡಾಲಿಯ ವಿಭಿನ್ನ ಪಾತ್ರಗಳ ಬ್ಯಾಂಡು.
ಮಾಸ್ ಅವತಾರಕ್ಕು ಸೈ.. ಫ್ಯಾಮಿಲಿ ಮ್ಯಾನ್ ಆಗಿ ಮಿಂಚೋಕು ಜೈ.. ಸ್ಟೈಲೀಶ್ ಕ್ಯಾರೆಕ್ಟರ್ ಆದ್ರು ಪರವಾಗಿಲ್ಲ, ಲೋಕಲ್ ಬಾಯ್ ಆಗಿ ನಟಿಸೋಕೆ ಅಡ್ಡಿ ಇಲ್ಲ. ಇದು ಡಾಲಿ ಸಿನಿಮಾ ವರಸೆ. ಈಗ ಧನಂಯ್ ಮತ್ತೊಂದು ಅವತಾರ ಎತ್ತಿ ಬಂದಿದ್ದಾರೆ. ರಾಶಿ ಗನ್ಗಳ ಮಧ್ಯೆ ಡಾಲಿ ಮೈಕ್ ಹಿಡಿದು ಬಂದಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ಗೆ ಇಂದು ಜನ್ಮದಿನ. ಆದ್ರೆ ಡೈ ಹಾರ್ಡ್ ಫ್ಯಾನ್ಸ್ ಜೊತೆ ಧನಂಜಯ್ ಬರ್ತ್ಡೇ ಮಾಡಿಕೊಳ್ಳೋಲ್ಲಾ ಅಂತ ಹೇಳಿದ್ರು. ಭಟ್ ಹುಟ್ಟುಹಬ್ಬ ಅಂದ್ಮೇಲೆ ಸರ್ಪ್ರೈಸ್ ಬೇಕೇ ಬೇಕಲ್ವಾ.. ಈ ಖುಷಿಯನ್ನ ಡಬಲ್ ಮಾಡೋಕೆ ಡಾಲಿ ಬರ್ತ್ಡೇ ಬ್ಲಾಸ್ಟ್ ಆಗಿ ಸಿಕ್ಕಿದೆ ಈ ಜಿಂಗೋ ಟೀಸರ್.
ಡಾಲಿ ಹುಟ್ಟುಹಬ್ಬದ ಗಿಫ್ಟ್ ಆಗಿ ಬಂದಿರೋ ಈ ಜಿಂಗೋ ಟೀಸರ್ ನೋಡಿರೋ ಧನಂಜಯ್ ಫ್ಯಾನ್ಸ್ ನರ ನರ ಜಿಂಗೋ ನರನಾಡಿ ಜಿಂಗೋ ಎನ್ನುತ್ತಿದ್ದಾರೆ. ಡಾಲಿ ಇಲ್ಲಿ ಹೀರೋ ಕಮ್ ಆ್ಯಂಟಿ ಹೀರೋ ಆಗಿದ್ದಾರೆ. ಯಾವ್ದೇ ಪಾತ್ರ ಕೊಟ್ರು ಆ ಪಾತ್ರವೇ ತಾವಾಗಿ ನಟಿಸೋ ಧನಂಜಯ್ ಜಿಂಗೋ ಅವತಾರ ಸಿಕ್ಕಾಪಟ್ಟೆ ಕುತೂಹಲ ಮೂಡಿಸುತ್ತಿದೆ. ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಖ್ಯಾತಿಯ ನಿರ್ದೇಶಕ ಶಶಾಂಕ್ ಸೋಗಾಲ್ ಜಿಂಗೋಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಿಂಗೋ ಇನ್ವೆಸ್ಟಿಗೇಷನ್ ಡ್ರಾಮಾ. ಒಂದು ಕಾಲ್ಪನಿಕ ಹಳ್ಳಿಯ ಮುಖಂಡನೇ ಜಿಂಗೋ. ಆ ಹಳ್ಳಿಯಲ್ಲಿ ಮರ್ಡರ್ ಆಗುತ್ತೆ.
'ಇಷ್ಟರಲ್ಲೇ ಮದುವೆ ಆಗ್ತೀನಿ': ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಕೊಟ್ಟ ನಟ ಡಾಲಿ ಧನಂಜಯ್!
ಅದರ ಹಿನ್ನೆಲೆಯಲ್ಲಿ ಈ ಕಥೆ ಸಾಗುತ್ತೆ. ಈ ಹಿಂದೆ ಎಂದೂ ನಟಿಸಿರದ ವಿಭಿನ್ನ ಗೆಟಪ್ನಲ್ಲಿ ಧನಂಜಯ ವಿಜೃಂಭಿಸಿದ್ದಾರೆ. ಚಿತ್ರವನ್ನು ನರೇಂದ್ರ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಸ್ಕ್ರೀಪ್ಟ್ ಕೆಲಸ ಮುಗಿದಿದ್ದು, ಅಕ್ಟೋಬರ್ನಿಂದ ಶೂಟಿಂಗ್ ಶುರುವಾಗುತ್ತೆ. ಡಾಲಿ ಜನ್ಮದಿನದ ವಿಶೇಷವಾಗಿ ಇನ್ನೆರಡು ಸಿನಿಮಾಗಳ ಫಸ್ಟ್ ಲುಕ್ ರಿವಿಲ್ ಆಗಿದೆ. ಉತ್ತರ ಕಾಂಡ ಸಿನಿಮಾದಲ್ಲಿ ನಟಿಸುತ್ತಿರೋ ಡಾಲಿಯ ಗಬ್ರು ಸತ್ಯನ ಫಸ್ಟ್ ಲುಕ್ ಬಂದಿದೆ. ಬೀಯರ್ ಬಾಟೆಲ್ ಎತ್ತಿ ಖೇಲ್ ಶುರು ಪಾರ್ಟಿ ಚಾಲು ಎಂದಿದ್ದಾರೆ ಧನಂಜಯ್. ಇದರ ಜೊತೆ ಅಣ್ಣಾ ಫ್ರೆಮ್ ಮ್ಯಾಕ್ಸಿಕೋ ಸಿನಿಮಾದ ಫಸ್ಟ್ ಲುಕ್ ಕೂಡ ಹೊರ ಬಂದಿದೆ. ಒಟ್ನಲ್ಲಿ ಧನಂಜಯ್ ಹುಟ್ಟುಹಬ್ಬದ ದಿನ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.