ಒಂದೂವರೆ ಗಂಟೆ ಕಿಕ್ ಬಾಕ್ಸಿಂಗ್, ಪುನೀತ್ ರಾಜ್‌ಕುಮಾರ್ ಅಂತಿಮ ಕ್ಷಣ ನೆನೆದು ಭಾವುಕರಾದ ಡಾಕ್ಟರ್

Published : Oct 15, 2026, 05:18 PM IST
puneeth rajkumar death anniversary

ಸಾರಾಂಶ

ಪುನೀತ್ ರಾಜ್‌ಕಮಾರ್ ನಿಧನರಾಗಿ 5 ವರ್ಷಗಳೇ ಉರುಳಿದೆ. ಆದರೆ ನೋವು ಮಾತ್ರ ಹಾಗೇ ಇದೆ. ಇದೀಗ ಪುನೀತ್ ಅಂತಿಮ ಕ್ಷಣ, ಇಸಿಜಿಯಲ್ಲಿ ಪತ್ತೆಯಾದ ಕೆಲ ವಿಚಾರವನ್ನು ವೈದ್ಯ ರಮಣ್ ರಾವ್ ಹೇಳಿದ್ದಾರೆ. ಪುನೀತ್ ನೆನೆದು ಭಾವುಕರಾಗಿದ್ದಾರೆ.

ಬೆಂಗಳೂರು (ಅ.15) ಕನ್ನಡದ ಮೇರು ನಟ, ಹೃದಯ ಶ್ರೀಮಂತಿಕೆಯ ಪುನೀತ್ ರಾಜ್‌ಕುಮಾರ್ ನಿಧನರಾಗಿ ಸರಿಸುಮಾರು 5 ವರ್ಷಗಳು ಉರುಳಿದೆ. ಪುನೀತ್ ರಾಜ್‌ಕುಮಾರ್ ನೆನಪು ಹಚ್ಚಹಸುರಾಗಿದೆ. ಅಕ್ಟೋಬರ್ 29, 2021ರಂದು ಪುನೀತ್ ನಿಧನ ಅನ್ನೋ ಸುದ್ದಿ ಹರಡಿದಾಗ ಕರ್ನಾಟಕ ಮಾತ್ರವಲ್ಲ ದೇಶವೇ ಆಘಾತಕ್ಕೊಳಗಾಗಿತ್ತು. 46ರ ಹರೆಯದ ನಟ ಹೃದಯಾಘಾತದಿಂದ ನಿಧನರಾಗಿದ್ದರು. ಇದೀಗ ಪುನೀತ್ ರಾಜ್‌ಕುಮಾರ್ ವೈದ್ಯರಾದ ಡಾ.ರಮಣ್ ರಾವ್ ಪುನೀತ್ ರಾಜ್‌ಕುಮಾರ್ ಕೊನೆಯ ಕ್ಷಣಗಳು, ಜಿಮ್ ವರ್ಕೌಟ್ ಹಾಗೂ ಇಸಿಜಿಯಲ್ಲಿ ಪತ್ತೆಯಾದ ಅಂಶದ ಕುರಿತು ಮಾತನಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ನೆನೆದು ಭಾವುಕರಾಗಿದ್ದಾರೆ.

ಪುನೀತ್ ಅಂತಿಮ ಕ್ಷಣಗಳ ನೆನೆದ ವೈದ್ಯ

ಪುನೀತ್ ರಾಜ್‌ಕುಮಾರ್ ಒಂದೂವರೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದರು. ಕಿಕ್ ಬಾಕ್ಸಿಂಗ್ ಮೂಲಕ ಅಭ್ಯಾಸ ಮಾಡಿದ್ದರು. ಅಸ್ವಸ್ಥಗೊಂಡ ಕಾರಣ ಕ್ಲಿನಿಕ್‌ಗೆ ಆಗಮಿಸಿದ್ದರು. ಪುನೀತ್ ರಾಜ್‌ಕುಮಾರ್ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಫಿಟ್ನೆಸ್ ವಿಚಾರದಲ್ಲಿ ಮುತುವರ್ಜಿ ವಹಿಸಿದ್ದರು. ಪುನೀತ್ ಅಸ್ವಸ್ಥರಾಗಿದ್ದರು, ಆದರೆ ಅವರ ಮಾತುಗಳಲ್ಲಿ ಇರಲಿಲ್ಲ. ಪುನೀತ್ ವಿಪರೀತ ಬೆವರುತ್ತಿದ್ದರು. ಅವರ ಬೆವರು, ಆಸ್ವಸ್ಥತೆಗೆ ನೋಡಿದ ತಕ್ಷಣವೇ ಇಸಿಜಿ ಮಾಡಲು ಸೂಚಿಸಿದೆ. ಹೀಗಾಗಿ ನಮ್ಮ ಕ್ಲೀನಿಕ್‌ನಲ್ಲಿ ಇಸಿಜಿ ಮಾಡಲಾಯಿತು.

ಇಸಿಜಿ ವರದಿಯಲ್ಲಿ ಆತಂಕ

ಇಸಿಜಿ ವರದಿ ನೋಡಿದಾಗ ನನ್ನ ಆತಂಕ ಹೆಚ್ಚಾಗಿತ್ತು. ಹೃದಯ ಮೇಲೆ ಒತ್ತಡ ಬಿದ್ದಿರುವುದು ಗಮನಿಸಿದೆ. ತಕ್ಷಣದ ಔಷಧಿಗಳನ್ನು ನೀಡಿದ್ದೆ. ಬಳಿಕ ತಕ್ಷಣವೇ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದೆ. ಪುನೀತ್ ಆಗಮಿಸಿದ ಕಾರಿನಲ್ಲೇ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಜೊತೆ ವಿಕ್ರಮ ಆಸ್ಪತ್ರೆಗೆ ತೆರಳು ಸೂಚಿಸಿದೆ. ಕಾರಿನ ಡ್ರೈವರ್‌ಗೆ ತಡ ಮಾಡಬೇಡ ಎಂದು ಸೂಚಿಸಿದ್ದೆ. ವಿಕ್ರಮ್ ಆಸ್ಪತ್ರೆಯ ಡಾ.ರಂಗ ನಾಯಕ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದೆ. ರಂಗ ನಾಯಕ್ ಎಲ್ಲಾ ವ್ಯವಸ್ಥೆ ಮಾಡಿದ್ದರು.

ನನ್ನ ಮಗನನ್ನೆ ಕಳೆದುಕೊಂಡ ನೋವು

ಡಾ.ರಂಗ ನಾಯಕ್ ಪುನೀತ್ ಕುಟುಂಬಸ್ಥರ ವೈದ್ಯರು ಕೂಡ ಹೌದು. ಕಾರು ವೇಗವಾಗಿ ವಿಕ್ರಮ್ ಆಸ್ಪತ್ರೆಯತ್ತ ಸಾಗಿತ್ತು. ಆದರೆ ಆಸ್ಪತ್ರೆ ಸಾಗಿಸುವ ಕೆಲ ನಿಮಿಷಗಳ ಮೊದಲು ಪುನೀತ್ ಎದೆಬಡಿತ ನಿಂತಿತ್ತು. ಆಸ್ಪತ್ರೆ ಒಳಗೆ ಹೋಗುವಾಗ ಪುನೀತ್ ಎದಬಡಿತ ಇರಲಿಲ್ಲ. ರಂಗ ನಾಯಕ್ ಸೇರಿದಂತೆ ವೈದ್ಯರ ತಂಡ ಎಲ್ಲಾ ಪ್ರಯತ್ನ ಮಾಡಿದ್ದರು. ಆದರೆ ಪುನೀತ್ ಬದುಕುಳಿಯಲಿಲ್ಲ. ಪುನೀತ್ ರಾಜ್‌ಕುಮಾರ್ ವೈದ್ಯ ಡಾ.ರಮಣ್ ರಾವ್ ಈ ಘಟನೆ ನೆನೆದು ಭಾವುಕರಾಗಿದ್ದಾರೆ. ನನ್ನ ಎರಡನೇ ಮಗನ ಕಳೆದುಕೊಂಡ ನೋವು ನನಗಿದೆ ಎಂದಿದ್ದಾರೆ.

ವೈದ್ಯರು ಸಾವು ನೋವು ನೋಡುವುದು ಹೊಸದೇನಲ್ಲ. ನನ್ನ ಸೇವೆಯಲ್ಲಿ ಕೆಲ ಸಾವುಗಳು ತೀವ್ರ ನೋವು ತಂದಿದೆ. ಆದರೆ ಪುನೀತ್ ರಾಜ್‌ಕುಮಾರ್ ಸಾವು ಮಾತ್ರ ನನ್ನ ಜೀವನದಲ್ಲಿ ಅತ್ಯಂತ ನೋವಿನ ಘಟನೆ. ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ, ನೋವು ಮಾಸುವುದಿಲ್ಲ ಎಂದು ರಮಣ್ ರಾವ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ʻಜೈಲರ್‌ 2’ ಎಂಟ್ರಿ ನಡುವೆಯೂ ₹100 ಕೋಟಿ ಮುಟ್ಟುತ್ತಾ ‘ಪ್ರೇಮದ ಊರಲಿ’? ಬಾಕ್ಸಾಫೀಸ್‌ನಲ್ಲಿ ಏನಾಗ್ತಿದೆ!
ಕನ್ನಡದಲ್ಲೇ ‘ಪ್ರೇಮದ ಊರಲಿ’ ನೋಡ್ತೀನಿ ಎಂದ ವಿಜಯ್: ತಪಸ್ವಿನಿಗೆ ರಶ್ಮಿಕಾ ಕೊಟ್ಟ ಮಾತು ವೈರಲ್!