ಗಾಯಕ ಎಸ್‌ಪಿಬಿಗೆ ಶ್ವಾಸಕೋಶದ ಕಸಿ ಇಲ್ಲ: ಆಸ್ಪತ್ರೆ ಸ್ಪಷ್ಟನೆ

Suvarna News   | Asianet News
Published : Sep 11, 2020, 03:53 PM IST
ಗಾಯಕ ಎಸ್‌ಪಿಬಿಗೆ ಶ್ವಾಸಕೋಶದ ಕಸಿ ಇಲ್ಲ: ಆಸ್ಪತ್ರೆ ಸ್ಪಷ್ಟನೆ

ಸಾರಾಂಶ

ಕೊರೋನಾ ಸೋಂಕಿಗೆ ಗುರಿಯಾಗಿದ್ದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಆರೋಗ್ಯ ಗಂಭೀರವಾಗಿತ್ತು. ಅಪಾರ ಅಭಿಮಾನಿಗಳ ಪ್ರಾರ್ಥನೆಯಿಂದ ಅವರು ಸುಧಾರಿಸಿಕೊಂಡಿದ್ದರೂ, ಇನ್ನೂ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇವೆ. 

ಚೆನ್ನೈ (ಸೆ.11): ಅನಾರೋಗ್ಯಕ್ಕೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಶ್ವಾಸಕೋಶದ ಕಸಿ ಮಾಡಲಾಗುತ್ತದೆ ಎಂಬ ವರದಿಗಳನ್ನು ಇಲ್ಲಿನ ಎಂಜಿಎಂ ಆಸ್ಪತ್ರೆ ತಳ್ಳಿಹಾಕಿದೆ. 

ಎಸ್‌ಪಿಬಿ ಚೇತರಿಕೆಗೆ ಚಿತ್ರರಂಗದ ಪ್ರಾರ್ಥನೆ; ಕಲಾವಿದರಿಂದ ಮೃತ್ಯುಂಜಯ ಮಂತ್ರ ಪಠಣ! 

ಕೋವಿಡ್‌ನಿಂದ ಗುಣಮುಖರಾಗಿರುವ ಎಸ್‌ಪಿಬಿ ಅವರ ಆರೋಗ್ಯ ಚೇತರಿಕೆಗೆ ಶ್ವಾಸಕೋಶ ಕಸಿ ಮಾಡಲಾಗುತ್ತದೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ವೈದ್ಯರು ಹಾಗೂ ಎಸ್‌ಪಿಬಿ ಪುತ್ರ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಎಸ್‌ಪಿಬಿ  ಅವರ ಆರೋಗ್ಯ ಇನ್ನೂ ಗಂಭೀರವಾಗಿಯೇ ಇದೆ. ಆದರೆ ಅವರಿಗೆ ಶ್ವಾಸಕೋಶದ ಕಸಿ ಮಾಡಲಾಗುತ್ತದೆ ಎಂದು ಹರಿದಾಡುತ್ತಿರುವುದು ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿಗೆ ಪುತ್ರ ಚರಣ್‌ ವಿಡಿಯೋ ಮಾಡಿ ಮಾತನಾಡಿದ್ದು, 'ತಂದೆ ಆರೋಗ್ಯದಲ್ಲಿ ಸ್ಪಲ್ಪ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ಹಾಡು ಕೇಳಿಸಿಕೊಳ್ಳುತ್ತಾರೆ. ಅಲ್ಲದೇ ಅವರ ವಿವಾಹ ವಾರ್ಷಿಕೋತ್ಸವನ್ನು ಆಸ್ಪತ್ರೆಯಲ್ಲಿಯೇ ಆಚರಿಸಿಕೊಂಡಿದ್ದಾರೆ. ಟೆನ್ನಿಸ್ ಹಾಗೂ ಕ್ರಿಕೆಟ್ ಮ್ಯಾಚ್ ನೋಡುತ್ತಾ ಸಮಯ ಕಳೆಯುತ್ತಿದ್ದಾರೆ,' ಎಂದು ಎಸ್ಪಿಬಿ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ವರದಿ ನೀಡಿದ್ದರು.

ಒಂದೇ ದಿನ 14 ಗಂಟೆಯಲ್ಲಿ ಎಸ್‌ಪಿಬಿ ಹಾಡಿದ್ದು 24 ಹಾಡು..!

ಒಂದು ವಾರದ ಹಿಂದೆ ಎಸ್‌ಪಿಬಿ ಚೇತರಿಸಿಕೊಳ್ಳುತ್ತಿದ್ದಾರೆ  ಎಂದು ಪುತ್ರ ಹೇಳಿದರೆ, ವೈದ್ಯರು ಆರೋಗ್ಯ ಇನ್ನೂ ಗಂಭೀರವಾಗಿದೆ ಎಂದು ಹೇಳುತ್ತಿದ್ದಾರೆ. ಸ್ಪಷ್ಟವಾದ ಮಾಹಿತಿ ಸಿಗದೆ ಅಭಿಮಾನಿಗಳು ಗೊಂದಲದಲ್ಲಿದ್ದಾರೆ. ನೆಚ್ಚಿನ ನಾಯಕ ಗುಣಮುಖರಾಗಿ ಮತ್ತೆ ಗಾಯನಕ್ಕೆ ಮರುಳಲ್ಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?