ನಟ ಚಿಕ್ಕಣ್ಣ ಕಾಟೇರ ಸಿನಿಮಾ ಸಕ್ಸಸ್ ಈವೆಂಟ್ ವೇದಿಕೆಯಲ್ಲಿ ಮಾತನಾಡುತ್ತಿದ್ದರು. ಬಹುತೇಕ ಎಲ್ಲರಿಗೂ ಗೊತ್ತಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಜಮೀನು ಹಾಗೂ ಜಮೀನ್ದಾರಿ ಪದ್ಧತಿ ಬಗ್ಗೆ ಕಥಾವಸ್ತು ಒಳಗೊಂಡ ಸಿನಿಮಾ.
ಸ್ಯಾಂಡಲ್‌ವುಡ್ ಕಾಮಿಡಿ ಕಿಂಗ್ ನಟ ಚಿಕ್ಕಣ್ಣ (Actor Chikkanna)ಅವರು ಒಂದು ಚಿನ್ನದಂತ ಮಾತನ್ನು ಹೇಳಿದ್ದಾರೆ. ಕಾಟೇರ ಸಕ್ಸಸ್ ಮೀಟ್‌ನಲ್ಲಿ (Kaatera Success Meet)ಭಾಗವಹಿಸಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ನಟ ಚಿಕ್ಕಣ್ಣ ಅವರು ಹೇಳಿದ ಮಾತಿಗೆ ಜೋರಾದ ಚಪ್ಪಾಳೆ ಮಾತ್ರವಲ್ಲ, 'ಹೊಡಿರಲೇ ಚಪ್ಪಾಳೆ' ಎಂಬ ಘೋಷಣೆ ಕೂಡ ಕೇಳಿ ಬಂತು. ವೇದಿಕೆಯ ಮೇಲಿದ್ದ ನಟ ಚಿಕ್ಕಣ್ಣ ಹೇಳಿದ ಆ ಒಂದು ಮಾತಿಗೆ ವೇದಿಕೆ ಮುಂದೆ ಸೇರಿದ್ದ ಸಾವಿರಾರು ಮಂದಿ ಚಪ್ಪಾಳೆ ಮೂಲಕ ಅನುಮೋದನೆ ನೀಡಿದ್ದಾರೆ. ಹಾಗಿದ್ದರೆ ನಟ ಚಿಕ್ಕಣ್ಣ ಹೇಳಿದ ಅಂಥ ಮಾತಾದ್ರೂ ಏನು ಅಂತ ನೋಡೋಣ.
ಹೌದು, ನಟ ಚಿಕ್ಕಣ್ಣ ಕಾಟೇರ ಸಿನಿಮಾ ಸಕ್ಸಸ್ ಈವೆಂಟ್ ವೇದಿಕೆಯಲ್ಲಿ ಮಾತನಾಡುತ್ತಿದ್ದರು. ಬಹುತೇಕ ಎಲ್ಲರಿಗೂ ಗೊತ್ತಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan)ನಟನೆಯ ಕಾಟೇರ ಸಿನಿಮಾ (Kaatera Movie)ಜಮೀನು ಹಾಗೂ ಜಮೀನ್ದಾರಿ ಪದ್ಧತಿ ಬಗ್ಗೆ ಕಥಾವಸ್ತು ಒಳಗೊಂಡ ಸಿನಿಮಾ. ಅದಕ್ಕೆ ಪೂರಕವಾಗಿಯೇ ನಟ ಚಿಕ್ಕಣ್ಣ ಮಾತನಾಡಿದ್ದಾರೆ. 'ದಯವಿಟ್ಟು ಯಾರೋ ಹೇಳ್ತಾರೆ ಅಂತಾನೋ ಅವರಿವರು ಶೋಕಿ ಮಾಡ್ತಾರೆ ಅಂತಾನೋ ಯಾರೂ ಕೂಡ ಇರೋ ಜಮೀನನ್ನು ಮಾರೋಕೆ ಹೋಗ್ಬೇಡಿ. ಮುಂದೆ 20-30 ವರ್ಷಗಳ ಬಳಿಕ ಜಮೀನು ಇರೋನೆ ಶ್ರೀಮಂತ ಅನ್ನೋ ಕಾಲ ಬರುತ್ತೆ.
ಬಜೆಟ್‌ನಲ್ಲಿ ನಟ ಧನಂಜಯ್; ಡಾಲಿ ಬರೆದ ಸಾಲುಗಳನ್ನ ಮಂಡಿಸಿದ ಮುಖ್ಯಮಂತ್ರಿಗಳು
ಈಗ ಸದ್ಯ ಕಾರು, ಬಂಗ್ಲೆ ಇರೋನು ಶ್ರೀಮಂತ ಅನ್ನೋ ಮಾತುಕತೆ ಇರಬಹುದು. ಆದರೆ, ನಿಜ ಹೇಳ್ತೀನಿ ಕೇಳಿ, ಮುಂದಿನ 20 ರಿಂದ 30 ವರ್ಷಗಳಲ್ಲಿ ಭಾರೀ ಬದಲಾವಣೆ ಆಗಲಿದೆ. ಆಗ ಎರಡು (2) ಎಕರೆ ಜಮೀನು ಇರೋನೇ ಭಾರೀ ಶ್ರೀಮಂತ ಎಂಬ ಕಾಲ ಬರುತ್ತೆ. ಅದಕ್ಕೇ ಯಾರೂ ಜಮೀನು ಮಾರೋಕೆ ಹೋಗ್ಬಾಡ್ರೀ' ಎಂದು ವಿನಂತಿ ಮಾಡಿದ್ದಾರೆ. ನಟ ಚಿಕ್ಕಣ್ಣರ ಮಾತಿಗೆ ಅದೆಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಎಂದರೆ ಚಪ್ಪಾಳೆಯ ಸೌಂಡ್ ಕೇಳಿಯೇ ಹೇಳಬಹುದು. ರೈತರಿಗೆ ಸಂಬಂಧಪಟ್ಟ ಸಿನಿಮಾದಲ್ಲಿ ನಟಿಸಿ, ಅದರ ಮಹತ್ವವನ್ನು ಅರಿತೆ ಎಂಬಂತೆ ನಟ ಚಿಕ್ಕಣ್ಣ ಕಾಟೇರ ಸಿನಿಮಾ ವೇದಿಕೆಯಲ್ಲಿ ಮಾತನಾಡಿದ್ದಾರೆ.
ಜಗತ್ತು ನಿಮ್ಮನ್ನು ನೆಲಕ್ಕೆ ಹಾಕಿ ನಗಬಹುದು, ಅದಕ್ಕೇನು ಮಾಡ್ಬೇಕು ಅಂತ ಗೊತ್ತಿರಲಿ; ಪ್ರಿಯಾಂಕಾ ಚೋಪ್ರಾ
ಅಂದಹಾಗೆ, ದರ್ಶನ್ ನಾಯಕತ್ವದ ಕಾಟೇರ ಸಿನಿಮಾದಲ್ಲಿ ಕನ್ನಡದ ಕನಸಿನ ರಾಣಿ ಖ್ಯಾತಿಯ ಮಾಲಾಶ್ರೀ ಮಗಳು ಆರಾಧನಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ನಟ ಚಿಕ್ಕಣ್ಣ ಸೇರಿದಂತೆ ಹಲವಾರು ಹಿರಿಕಿರಿಯ ನಟನಟಿಯರ ಬಳಗವೇ ಕಾಟೇರ ಚಿತ್ರದಲ್ಲಿದೆ. ಈ ಚಿತ್ರವು ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ 50 ದಿನ ಹೌಸ್‌ಫುಲ್ ಪ್ರದರ್ಶನ ಕಂಡು ಈದೀಗ ಒಟಿಟಿಯಲ್ಲಿ ಕೂಡ ಮೆಚ್ಚಗೆ ಪಡೆದು ಮುನ್ನುಗ್ಗುತ್ತಿದೆ. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಕಾಟೇರ ಹೊಸ ದಾಖಲೆ ಬರೆದಿದೆ.
ಜಗ್ಗೇಶ್-ಪುನೀತ್ ಮೊದಲ ಭೇಟಿ ಎಲ್ಲಿ, ಯಾವಾಗ ಆಯ್ತು; ಅಂದು ಡಾ ರಾಜ್‌ಕುಮಾರ್ ಹೇಳಿದ್ದೇನು?