ನಟಿ ಶುಭಾ ಪೂಂಜಾ ಬ್ಯಾಗ್​ನಲ್ಲಿ ಇವೆಲ್ಲಾ ಇವೆಯಾ? ಸೀಕ್ರೇಟ್​ ರಿವೀಲ್​ ಮಾಡಿದ ಸ್ಯಾಂಡಲ್​ವುಡ್​ ಸ್ಟಾರ್​

Published : Feb 16, 2024, 03:48 PM IST
ನಟಿ ಶುಭಾ ಪೂಂಜಾ ಬ್ಯಾಗ್​ನಲ್ಲಿ ಇವೆಲ್ಲಾ ಇವೆಯಾ? ಸೀಕ್ರೇಟ್​ ರಿವೀಲ್​ ಮಾಡಿದ ಸ್ಯಾಂಡಲ್​ವುಡ್​ ಸ್ಟಾರ್​

ಸಾರಾಂಶ

 ನಟಿ ಶುಭಾ ಪೂಂಜಾ ಬ್ಯಾಗ್​ನಲ್ಲಿ ಏನೆಲ್ಲಾ ಇರುತ್ತೆ ಎಂದು ತಿಳಿದುಕೊಳ್ಳುವ ಕುತೂಹಲವೆ? ಖುದ್ದು ನಟಿನೇ ಸೀಕ್ರೇಟ್​ ರಿವೀಲ್​ ಮಾಡಿದ್ದಾರೆ ನೋಡಿ...  

ಸ್ಯಾಂಡಲ್‌ವುಡ್‌ನ  ನಟಿ ಶುಭಾ ಪೂಂಜಾ ಮದುವೆಯಾಗಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದು, ಸದ್ಯ  ವೈವಾಹಿಕ ಜೀವನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿಯೂ ಬಿಜಿ ಆಗಿದ್ದಾರೆ. 2020ರಲ್ಲಿ  ಲಾಕ್‌ಡೌನ್‌ನಲ್ಲಿ ಇವರ ಮದುವೆ ದಿಢೀರ್​ ನಡೆದಿತ್ತು. ಕೊನೆಗೆ ಈ ವಿಷಯವನ್ನು ರಿವೀಲ್​ ಮಾಡಿದ್ದ ನಟಿ ಎಲ್ಲರಿಗೂ ಶಾಕ್​ ಕೊಟ್ಟಿದ್ದರು. ಅಂದಹಾಗೆ ಇವರ ಮದುವೆ  ಸುಮಂತ್ (Sumanth) ಎನ್ನುವವರ ಜೊತೆ ನಡೆದಿದೆ.  ಮಂಗಳೂರಿನಲ್ಲಿ ಲಾಕ್​ಡೌನ್​ ಸಮಯದಲ್ಲಿ ಸರಳವಾಗಿ ನಡೆದಿದೆ. ಈ ಹಿಂದೆ  ಪ್ರೇಮಿಗಳ ದಿನದಂದು ತಮ್ಮ ಮದುವೆಯ ಬಗ್ಗೆ ಅಪ್​ಡೇಟ್​ ನೀಡಿದ್ದರು ಶುಭಾ.  ಅದಾಗಲೇ ಬಿಗ್​ಬಾಸ್​ ಮನೆಗೂ ಹೋಗಿದ್ದ ನಟಿ, ಅಲ್ಲಿಂದ ಬಂದ ಬಳಿಕ ಮದುವೆಗೆ ಮನೆಯವರು ತುಂಬಾ ಒತ್ತಾಯ ಮಾಡುತ್ತಿದ್ದರು.  ಎರಡು ದಿನಗಳ ಮುನ್ನ ಮದುವೆ ಪ್ಲ್ಯಾನ್ ಮಾಡಲಾಗಿತ್ತು. ಅದಕ್ಕೇ ತುಂಬಾ ಜನರಿಗೆ ಕರೆಯದೇ ಮದ್ವೆ ಮಾಡಿಕೊಂಡ್ವಿ ಎಂದಿದ್ದರು.
 
ಇಂತಿಪ್ಪ ನಟಿ ಇದೀಗ ತಮ್ಮ ಬ್ಯಾಗ್​ನಲ್ಲಿ ಏನೇನಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. ಅಂದದ ಬ್ಯಾಗ್​ನಲ್ಲಿ ಇರುವ ರಹಸ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಎಲ್ಲರಿಗೂ ಅಗತ್ಯವಾಗಿ ಬೇಕಾಗಿರುವ ಫೋನ್​ ಮತ್ತು ವಾಲೆಟ್​ ಕಾರ್ಡ್​ ಇದ್ದೇ ಇರುತ್ತದೆ ಎಂದ ನಟಿ, ಡಿಜಿಟಲ್​ ಪೇಮೆಂಟ್​ ಇದ್ರೂ ತಮ್ಮ ಬಳಿ  ಕ್ಯಾಷ್  ಇದ್ದೇ ಇರುತ್ತದೆ. ಇದರ ಫೋಬಿಯಾ ನನಗೆ ಇದೆ. ಕ್ಯಾಷ್​ ಇಲ್ಲದಿದ್ದರೆ ಏನೋ ಆಗುತ್ತದೆ ಎಂದಿದ್ದಾರೆ.  ಕ್ಯಾಷ್​ ತೆಗೆದುಕೊಂಡು ಹೋಗೋದ್ಯಾಕೆ ಅಂತ ಯಜಮಾನ್ರು ಕೇಳ್ತಾನೇ ಇರ್ತಾರೆ, ಯಾವ ಜಮಾನಾದಲ್ಲಿ ಇದ್ದಿ ಎಂದು ಹೇಳ್ತಾರೆ. ಆದರೆ ನನಗೆ ಕ್ಯಾಷ್​ ಬೇಕೇ ಬೇಕು ಎಂದಿದ್ದಾರೆ.

ಪ್ರೀತಿ, ಕಾಮದ ಟಿಪ್ಸ್​ ನೀಡುತ್ತಲೇ 72ನೇ ವಯಸ್ಸಿನಲ್ಲಿ ತಮ್ಮ ಡೇಟಿಂಗ್​ ವಿಷ್ಯ ಹೇಳಿದ ನಟಿ ಜೀನತ್​ ಅಮಾನ್​!

ಇನ್ನು ಹಲವು ಮಹಿಳೆಯರ ಹಾಗೆ ಅದರಲ್ಲಿಯೂ ನಟಿಯರಿಗೆ ಅಗತ್ಯವಾಗಿ ಬೇಕಾಗಿರುವ ಲಿಪ್​ಸ್ಟಿಕ್​, ಮಸ್ಕಾರಾ, ಫೌಂಡೇಷನ್​, ಐಲೈನರ್​ ಸೇರಿದಂತೆ ಮೇಕಪ್​ ಸಾಮಗ್ರಿ ಇವರ ಬ್ಯಾಗ್​ನಲ್ಲಿ ಸದಾ ಇರುತ್ತದೆಯಂತೆ. ಅದರಲ್ಲಿಯೂ ಬೇರೆ ಏನೂ ಮೇಕಪ್​ ಇಲ್ಲದಿದ್ದರೂ ಮಸ್ಕಾರಾ ಮತ್ತು ಎರಡು ಶೇಡ್​ಗಳ ಲಿಪ್​ಸ್ಟಿಕ್​ ಅಂತೂ ಎಲ್ಲಾ ಬ್ಯಾಗ್​ಗಳಲ್ಲಿಯೂ ಒಂದೊಂದು ಇಟ್ಟುಕೊಂಡಿರುತ್ತೇನೆ. ಅರ್ಜೆಂಟ್​ ಆಗಿ ಮೀಟಿಂಗ್​ಗೆ ಕರೆ ಬಂದರೆ, ಮಸ್ಕಾರಾ ಮತ್ತು ಲಿಪ್​ಸ್ಟಿಕ್​ ಹಚ್ಚಿಕೊಂಡು ಹೋಗುತ್ತೇನೆ ಎಂದಿದ್ದಾರೆ. ಅದರ ಜೊತೆ ಎರಡು ಕಲರ್​ ಸನ್​ಗ್ಲಾಸ್​ ಬ್ಯಾಗ್​ನಲ್ಲಿ ಸದಾ ಇರುತ್ತದೆ ಎಂದಿದ್ದಾರೆ. ಇನ್ನು ಹಲವರು ಇಟ್ಟುಕೊಳ್ಳದ ಕ್ಲಿಪ್​, ಹೇರ್​ಪಿನ್​, ರಬ್ಬರ್​, ಬಿಂದಿ, ಬಳೆ ಕೂಡ ಸದಾ ಇವರ ಬ್ಯಾಗ್​ನಲ್ಲಿ ಇರುತ್ತದೆಯಂತೆ.

ಇನ್ನು  ಮದುವೆಯ ಕುರಿತು ಇಂಟರೆಸ್ಟಿಂಗ್​ ವಿಷ್ಯ ರಿವೀಲ್​ ಮಾಡಿದ್ದ ನಟಿ, ರಾತ್ರಿ 8 ಗಂಟೆಗೆ ಹೂ ತರಲು ಮಾರ್ಕೆಟ್‌ಗೆ ಹೋಗಲಾಗಿತ್ತು. ಆಗ ಬಾಡಿದ ಹೂವುಗಳು ಸಿಕ್ಕಿದ್ದವು. ಅದನ್ನೇ ತಂದು ಮದುವೆಯ ಮನೆಗೆ ಹಾಕಲಾಯಿತು.  ನಮ್ಮ ಮದುವೆ ಹಾರ ಕೂಡ ಬಾಡಿ ಹೋಗಿತ್ತು. ಹಾಗೂ ಹೀಗೂ ಮದುವೆ ಚಕಾಚಕ್​ ನಡೆದು ಹೋಯಿತು. ಮದ್ವೆತಯಾರಿಯಲ್ಲಿದ್ದ ಸುಮಂತ್ ಪಂಚೆ ಬಿಚ್ಚಿ ಶಾರ್ಟ್ & ಬನಿಯನ್ ಹಾಕೊಂಡು ಬಂದಿದ್ದಾನೆ. ಹೀಗಾಗಿ ನನ್ನ ಮದುವೆ ಫೋಟೋ ಅಂತ ಇರುವುದು ಕೇವಲ ನಾಲ್ಕು  ಅಷ್ಟೆ ಎಂದು ನಕ್ಕಿದ್ದಾರೆ ನಟಿ. ಮೀಡಿಯಾದವರು ಕೂಡ ಫೋಟೋ ಕೇಳಿದ್ರೆ ಕೊಡಲು ಚೆನ್ನಾಗಿರೋದು ಯಾವುದೂ ಸಿಕ್ಕಿರಲಿಲ್ಲ. ಫೋಟೋ ಇದ್ದರೆ ತಾನೇ ಕೊಡುವುದು ಎಂದಿದ್ದರು.

ಶಿಲ್ಪಾ ಶೆಟ್ಟಿ ಎರಡನೆಯ ಮಗಳಿಗೆ 4ನೇ ಹುಟ್ಟುಹಬ್ಬದ ಸಂಭ್ರಮ: ನಟಿ ಬಾಡಿಗೆ ತಾಯ್ತನ ಆಯ್ದುಕೊಂಡದ್ದೇಕೆ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ