ಜಗತ್ತು ನಿಮ್ಮನ್ನು ನೆಲಕ್ಕೆ ಹಾಕಿ ನಗಬಹುದು, ಅದಕ್ಕೇನು ಮಾಡ್ಬೇಕು ಅಂತ ಗೊತ್ತಿರಲಿ; ಪ್ರಿಯಾಂಕಾ ಚೋಪ್ರಾ

By Shriram Bhat  |  First Published Feb 16, 2024, 2:49 PM IST

ಯಾವತ್ತೂ ಅಷ್ಟೇ, ನೀವು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಾಗ ಯಾವತ್ತೂ ಹಾಗೇ ಇರುತ್ತೀರಿ ಎಂದು ಭಾವಿಸಬೇಡಿ. ಆದಷ್ಟು ಬೇಗ ಹೊರಗೆ ಬರುವ ಬಗ್ಗೆ ನಿಮ್ಮ ಯೋಚನೆ, ಯೋಜನೆ ಇರಲಿ. ಯಾರೋ ಕಲ್ಲು ಎಸೆಯುತ್ತಿದ್ದರೆ ನೀವು ಸುಮ್ಮನೇ ನಿಂತು ನೋಡಲಾಗದು. 


ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಂದರ್ಶನಗಳಲ್ಲಿ ಬಹಳಷ್ಟು ಒಳ್ಳೊಳ್ಳೆಯ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಾರೆ. ಹಲವರ ಜೀವನಕ್ಕೆ, ಅದರಲ್ಲೂ ಮುಖ್ಯವಾಗಿ ನೊಂದವರು, ಡಿಪ್ರೆಶನ್‌ಗೆ ಒಳಗಾದವರು ನಟಿ ಪ್ರಿಯಾಂಕಾ ಚೋಪ್ರಾ (Priyanaka Chopra)ಮಾತುಗಳನ್ನು ಕೇಳಿದರೆ ಅವರಿಗೆಲ್ಲ ಸಾಕಷ್ಟು ಸಮಾಧಾನ ಸಿಗುವುದು ಖಂಡಿತ ಎನ್ನಬಹುದು. ಅಷ್ಟೇ ಅಲ್ಲ, ಹಲವರಿಗೆ ಸಮಸ್ಯೆಯಿಂದ ಹೊರಬರಲು ಪ್ರಿಯಾಂಕಾ ಮಾತುಗಳು ಪ್ರೇರಣೆಯೂ ಆಗಬಹುದು, ಕತ್ತಲೆಯಲ್ಲಿರುವವರ ಪಾಲಿಗೆ ಬೆಳಕೂ ಆಗಬಹುದು.

ಒಂದು ಇಂಟರ್‌ವ್ಯೂನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು 'ಜಗತ್ತಿನಲ್ಲಿ ನೀವು ಏನಾದರೂ ಸತ್ಯವನ್ನು ಹೇಳಿದಾಗ ನಿಮಗೆ ಹಲವಾರು ಸಮಸ್ಯೆಗಳು ಎದುರಾಗಬಹುದು. ಜನರು ನಿಮ್ಮನ್ನು ಕೆಳಕ್ಕೆ ನೂಕಬಹುದು. ಏಕೆಂದರೆ, ಅದು ಈ ಜಗತ್ತಿನಲ್ಲಿರುವ ಜನರ ನಿಯಮ. ಆದರೆ, ನೀವು ಕೆಳಕ್ಕೆ ತಳ್ಳಲ್ಪಟ್ಟಾಗ ನೀವು ನಿಮ್ಮನ್ನು ಹೇಗೆ ನೋಡಿಕೊಳ್ಳುತ್ತೀರಿ ಎಂಬುದು ನೀವು ಮುಂದೆ ಎಲ್ಲಿರುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ಜಗತ್ತು ನಿಮ್ಮನ್ನು ನೆಲಕ್ಕೆ ಹಾಕಿ ನಗುತ್ತಿದ್ದರೆ ನೀವು ಮತ್ತೆ ಎಷ್ಟು ಬೇಗ ಎದ್ದು ನಿಲ್ಲುತ್ತೀರಿ ಎಂಬುದು ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಬಿಟ್ಟ ಸಂಗತಿ. 

Tap to resize

Latest Videos

ಯಾವತ್ತೂ ಅಷ್ಟೇ, ನೀವು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಾಗ ಯಾವತ್ತೂ ಹಾಗೇ ಇರುತ್ತೀರಿ ಎಂದು ಭಾವಿಸಬೇಡಿ. ಆದಷ್ಟು ಬೇಗ ಹೊರಗೆ ಬರುವ ಬಗ್ಗೆ ನಿಮ್ಮ ಯೋಚನೆ, ಯೋಜನೆ ಇರಲಿ. ಯಾರೋ ಕಲ್ಲು ಎಸೆಯುತ್ತಿದ್ದರೆ ನೀವು ಸುಮ್ಮನೇ ನಿಂತು ನೋಡಲಾಗದು. ತಪ್ಪಿಸಿಕೊಳ್ಳಲು ಆಗದಿದ್ದರೆ ಆ ಕಲ್ಲುಗಳು ಬೀಳುವುದು ನಿಂತಮೇಲೆ ಕೂಲಾಗಿ ಯೋಚಿಸಿ ಮುಂದಿನ ಹೆಜ್ಜೆ ಇಡಿ. ಇಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲವೂ ನಿರೀಕ್ಷಿತವೂ ಅಲ್ಲ. ಕಷ್ಟದ ಸಮಯ ಪರೀಕ್ಷೆಯ ಸಮಯ. ಆದರೆ ಅದು ವೇಳಾಪಟ್ಟಿ ಕೊಟ್ಟು ಬರುವುದಿಲ್ಲ.

ನನಗೆ ನನ್ನ ಅಪ್ಪ-ಅಮ್ಮ ಕಲಿಸಿದ ಪಾಠವೇ ಅದು. ಚಿಕ್ಕಂದಿನಲ್ಲೇ ನನಗೆ ನನ್ನ ಪೋಷಕರು ಜೀವನದ ಮುಖ್ಯ ಪಾಠವನ್ನು ಬೋಧನೆ ಮಾಡಿದ್ದರು. ಹೀಗಾಗಿ ನಾನು ಸಾಕಷ್ಟು ಬಾರಿ ನೂಕಲ್ಪಟ್ಟು ಕೆಳಕ್ಕೆ ಬಿದ್ದಾಗ, ಸೋತು ಸುಣ್ಣವಾದಾಗ ಮತ್ತೆ ಮತ್ತೆ ಮೇಲೆದ್ದು ಬಂದಿದ್ದೇನೆ. 'ಕೆಳಕ್ಕೆ ಬಿದ್ದಾಗ ಬಿದ್ದುಕೊಂಡೇ ಇರಬೇಡ, ಮೇಲೆದ್ದು ಬರಲು ನಿನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸು' ಎಂಬ ನನ್ನ ಪೋಷಕರ ಮಾತನ್ನು ನಾನೆಂದೂ ಮರೆತಿಲ್ಲ. ಅದೇ ನನಗೆ ದಾರಿ ದೀಪ, ವೇದವಾಕ್ಯ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

click me!