ತರುಣ್ - ಸೋನಲ್ ಫಸ್ಟ್‌ ನೈಟ್ ಆಯ್ತಾ?; ಹನಿಮೂನ್ ಕೇಳಿದ್ರೆ ಬಜೆಟ್ ಲೆಕ್ಕಾಚಾರವಿದೆ ಅಂದಿದ್ಯಾಕೆ?

By Vaishnavi Chandrashekar  |  First Published Aug 28, 2024, 10:24 AM IST

ಅನುಶ್ರೀ ಯೂಟ್ಯೂಬ್‌ ಚಾನೆಲ್‌ನಲ್ಲಿ ನವವಿವಾಹಿತರಾದ ತರುಣ್- ಸೋನಲ್. ನಿಶ್ವಿಕಾ ನಾಯ್ಡು ಪ್ರಶ್ನೆ ನೋಡಿ ನಿರ್ದೇಶಕರು ಶಾಕ್......
 


ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ಆಗಸ್ಟ್‌ 10 ಮತ್ತು 11ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಿರುತೆರೆ ಕಲಾವಿದರು, ಸಿನಿಮಾ ತಾರೆಯರು, ತಂತ್ರಜ್ಞರು ಪ್ರತಿಯೊಬ್ಬರು ಮದುವೆಯಲ್ಲಿ ಭಾಗಿಯಾಗಿದ್ದರು. ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಅನೇಕರಿಗೆ ಕ್ಯೂರಿಯಾಸಿಟಿ ಇದೆ...ಅಭಿಮಾನಿಗಳ ಪ್ರಶ್ನೆಗಳಿಗೆ ಆಂಕರ್ ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಉತ್ತರ ಕೊಡಿಸಿದ್ದಾರೆ. 

'ಮುದ್ದಾದ ಪ್ರೇಮ, ಬ್ಲಾಕ್‌ಬಸ್ಟರ್ ಸಿನಿಮಾ, ಸೋನಲ್ ಜೊತೆ ನಮ್ಮ ತರುಣ' ಎಂದು ಸಂದರ್ಶನದ ಪ್ರೋಮೋ ವಿಡಿಯೋವನ್ನು ಆಂಕರ್ ಅನುಶ್ರೀ ಹಂಚಿಕೊಂಡಿದ್ದಾರೆ. ಪ್ರೋಮೋ ವಿಡಿಯೋದಲ್ಲಿ ಸಾಕಷ್ಟು ತರಲೆ, ತಮಾಷೆ ಮತ್ತು ಇಂಟ್ರೆಸ್ಟಿಂಗ್ ವಿಚಾರಗಳನ್ನು ನೋಡಬಹುದು. 'ಮದುವೆ ನಂತರ ಎಲ್ಲಾ ಶಾಸ್ತ್ರಗಳು ಮುಗೀತಾ?' ಎಂದು ಅನುಶ್ರೀ ಮೊದಲ ಪ್ರಶ್ನೆ ಇಟ್ಟಿದ್ದಾರೆ. ಇದನ್ನು ಕೇಳಿ ನವಜೋಡಿಗಳು ನಕ್ಕಿದ್ದಾರೆ. 'ಅವತ್ತೊಂದಿನ ದರ್ಶನ್ ಅರ್ಧ ಗಂಟೆ ಬೇಗ ಬಂದ್ರು..ಅದೇನು ಇವಳಿಗೆ ಮಾತ್ರ ಚೆನ್ನಾಗಿ ಫ್ರೇಮ್ ಇಡ್ತಿದ್ಯಾ ನೀನು ಎಂದು ಕೇಳಿಬಿಟ್ಟರು' ಎಂದು ತುರಣ್ ಹೇಳಿದ್ದಾರೆ.

Tap to resize

Latest Videos

ಬಿಗ್ ಬಾಸ್ ಸೀಸನ್ 11ರ ಪಟ್ಟಿಯಲ್ಲಿ ವರ್ಷ ಕಾವೇರಿ ಫಿಕ್ಸ್‌; ಹೊಟ್ಟೆ ಉರ್ಕೊಳ್ಳಿ ಫ್ರೆಂಡ್ಸ್‌ ಎಂದ ನೆಟ್ಟಿಗರು!

ತರುಣ್‌ಗೆ ಆತ್ಮೀಯ ಸಿನಿಮಾ ಸ್ನೇಹಿತರು ವಿಡಿಯೋ ಕಾಲ್ ಮೂಲಕ ತಮ್ಮ ಪ್ರಶ್ನೆಗಳನ್ನು ಇಟ್ಟಿದ್ದಾರೆ. ಆಗ ನಟಿ ನಿಶ್ವಿಕಾ ನಾಯ್ಡು 'ನನ್ನ ಎರಡನೇ ಪ್ರಶ್ನೆ, ಹನಿಮೂನ್‌ಗೆ ಎಲ್ಲಿಗೆ ಹೋಗ್ತೀರಾ ಸರ್' ಎಂದು ಪ್ರಶ್ನಿಸಿದ್ದಾರೆ. ಆಗ ತರುಣ್ 'ಕ್ಲೈಮೇಟು ಮತ್ತು ಬಜೆಟು ಮ್ಯಾಟರ್‌ ಆಗುತ್ತೆ' ಎಂದು ಹೇಳಿದ ತರುಣ್ ಜಾಗವನ್ನು ರಿವೀಲ್ ಮಾಡಿಲ್ಲ. ಇಲ್ಲಿಗೆ ನಿಲ್ಲಿಸದ ಆಂಕರ್ ಅನುಶ್ರೀ 'ನಿಮ್ಮಿಬ್ಬರ ಯಾರು ಜಾಸ್ತಿ ರೊಮ್ಯಾಂಟಿಕ್‌' ಎಂದು ಕೇಳಿದ್ದಾರೆ. ಆಗ ನೆಲದ ಮೇಲಿದ್ದ ಬಲೂನ್‌ಗಳನ್ನು ತೆಗೆದುಕೊಂಡು ಸೋನಲ್‌ ಮುಖ ಹತ್ತಿರ ಹೋಗಿ 'ನಾನು ರವಿಚಂದ್ರನ್ ಫ್ಯಾನ್‌ ಅವರ ಪಿಕ್ಚರ್‌ ತರಹ' ಎಂದು ಕಿಸ್ ಮಾಡಲು ಮುಂದಾಗುತ್ತಾರೆ. 

ಲಕ್ಷ್ಮಿ ನಿವಾಸ ಜಾನವಿ ಸಹೋದರಿ ಜೊತೆಗಿರುವ ಫೋಟೋ ವೈರಲ್; ಇಬ್ರು ಮೂಗು ಸೇಮ್ ಟು ಸೇಮ್ ಎಂದ ನೆಟ್ಟಿಗರು!

ಮದುವೆ ದಿನ ಹೇಗಿತ್ತು:

'ಎಲ್ಲಾ ಪುರೋಹಿತರು ಮತ್ತು ಹಿರಿಯರ ಸಮ್ಮುಖದಲ್ಲಿ ಗಂಡ ಹೆಂಡತಿ ಹೇಳುವ ಮೊದಲ ಸುಳ್ಳು...'ಎಂದು ನಿರ್ದೇಶಕರು ಹೇಳುವಾಗ ತರುಣ್ ಮತ್ತು ಸೋನಲ್ ಅರುಂಧತಿ ನಕ್ಷತ್ರ ತೋರಿಸುವ ವಿಡಿಯೋ ಹಾಕಿದ್ದಾರೆ. ಮದುವೆ ಮನೆಯ ಎಂಟ್ರೆನ್ಸ್‌ನಲ್ಲಿ ಹಿರಿಯ ನಟ ಸುಧೀರ್ ಫೋಟೋ ಹಾಕಲಾಗಿತ್ತು. ನನ್ನ ಮದುವೆಯಲ್ಲಿ ತಂದೆ ಇರಬೇಕು ಅನ್ನೋ ಆಸೆ ಇತ್ತು, ಇಲ್ಲದ ಕಾರಣ ಅವರ ಫೋಟೋ ಹಾಕಿಸಿದೆ....ಆ ಫೋಟೋವನ್ನು ನೋಡಿದರೆ ನನ್ನ ತಂದೆ ನಿಂತು ಇಡೀ ಮದುವೆಯನ್ನು ನೋಡುತ್ತಿದ್ದಾರೆ ಅನಿಸುತ್ತಿತ್ತು' ಎಂದು ತರುಣ್ ಭಾವುಕರಾಗಿದ್ದಾರೆ. 

 

 

click me!