Gandhada Gudi Teaser: ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ 'ಆರ್‌ಆರ್‌ಆರ್' ನಿರ್ದೇಶಕ ರಾಜಮೌಳಿ

Suvarna News   | Asianet News
Published : Dec 09, 2021, 06:15 PM ISTUpdated : Dec 10, 2021, 02:43 PM IST
Gandhada Gudi Teaser: ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ 'ಆರ್‌ಆರ್‌ಆರ್' ನಿರ್ದೇಶಕ ರಾಜಮೌಳಿ

ಸಾರಾಂಶ

ಕನ್ನಡ ಚಿತ್ರರಂದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿ ಎಲ್ಲೆಡೆ ಮೆಚ್ಚುಗೆ ಗಳಿಸಿದೆ. 'ಆರ್‌ಆರ್‌ಆರ್' ಸಿನಿಮಾ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಅವರು ಕೂಡ 'ಗಂಧದ ಗುಡಿ' ಟೀಸರ್‌ಗೆ ಮನಸೋತಿದ್ದಾರೆ.   

ಕನ್ನಡ ಚಿತ್ರರಂದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' (Gandhada Gudi) ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಸೇರಿದಂತೆ 'ಗಂಧದ ಗುಡಿ'ಯ ಟೀಸರ್ ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೀಗ 'ಆರ್‌ಆರ್‌ಆರ್' ಸಿನಿಮಾ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ (SS Rajamouli) ಅವರು ಕೂಡ 'ಗಂಧದ ಗುಡಿ' ಟೀಸರ್‌ಗೆ ಮನಸೋತಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟರ್‌ (Twitter) ಖಾತೆಯಲ್ಲಿ 'ಗಂಧದ ಗುಡಿ' ಟೀಸರ್ ಶೇರ್ ಮಾಡಿಕೊಂಡು 'ಗಂಧದ ಗುಡಿ ಅಸಾಧಾರಣವಾಗಿ ಕಾಣುತ್ತದೆ ಮತ್ತು ಇದು ಖಂಡಿತವಾಗಿಯೂ ಪುನೀತ್ ಅವರಿಗೆ ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಗೌರವವಾಗಿದೆ. ಕರ್ನಾಟಕದ ಭವ್ಯತೆ ಸಂಭ್ರಮಿಸಲು ಸಾಕ್ಷ್ಯಚಿತ್ರ ನಿರ್ಮಿಸುವ ಅಪ್ಪು ಅವರ ಈ ಉದಾತ್ತ ಕನಸು ಗಮನಾರ್ಹವಾಗಿದೆ. ಇಡೀ ತಂಡಕ್ಕೆ ಶುಭ ಹಾರೈಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. 

ವಿಶೇಷವಾಗಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ರಾಜಮೌಳಿಗೆ ಮೊದಲಿನಿಂದಲೂ ರಾಜಮೌಳಿಗೆ ಉತ್ತಮ ಒಡನಾಟ ಇತ್ತು. ಇತ್ತೀಚೆಗೆ ರಾಜಮೌಳಿ 'ಆರ್‌ಆರ್‌ಆರ್' ಸಿನಿಮಾದ ಜನನಿ ಸಾಂಗ್ ರಿಲೀಸ್ ಮಾಡಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಬಳಿಕ 'ಏನು ಹೇಳಬೇಕೋ ನನಗೆ ಗೊತ್ತಾಗ್ತಿಲ್ಲ. ಅವರು ಇಲ್ಲ ಅನ್ನೋದನ್ನು ಊಹಿಸಿಕೊಳ್ಳೋಕೂ ಸಾಧ್ಯವಾಗ್ತಿಲ್ಲ. ಅವರನ್ನ ಭೇಟಿಯಾಗಿ ಮಾತನಾಡಿದಾಗ ಸ್ಟಾರ್ ಜೊತೆ ಮಾತನಾಡಿದ ಹಾಗೆ ಅನ್ನಿಸಿರಲಿಲ್ಲ. ಪಕ್ಕದ ಮನೆಯವರ ಜೊತೆ ಮಾತನಾಡಿದ ಹಾಗೆ ಅನಿಸ್ತಿತ್ತು. ಅವರ ಸಾಮಾಜಿಕ ಕಾರ್ಯಗಳು ಜಗತ್ತಿಗೆ ಗೊತ್ತಾಗಿದೆ. ಹೇಗೆ ಬದುಕಬೇಕು, ಹೇಗೆ ಸಾಮಾಜಿಕ ಕಾರ್ಯಗಳನ್ನ ಮಾಡಬೇಕೆಂದು ಮಾದರಿಯಾಗಿದ್ದಾರೆ ಎಂದು ರಾಜಮೌಳಿ ಭಾವುಕರಾದರು.

Gandhada Gudi Teaser: ಪುನೀತ್ ರಾಜ್‌ಕುಮಾರ್ ಕನಸು ನನಸಾಗಿಸಿದ ಪತ್ನಿ!

ಇನ್ನು   'ಗಂಧದ ಗುಡಿ' ಟೀಸರ್ ಬಿಡುಗಡೆಗೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಟ್ವೀಟ್ (Tweet) ಮಾಡಿದ್ದರು. ಈ ಟ್ವೀಟ್‌ಗೆ ಅಶ್ವಿನಿ ಅವರು ರಿಟ್ವೀಟ್ (Retweet) ಮಾಡುವ ಮೂಲಕ ಮಾಡಿ, ಈ 'ಗಂಧದ ಗುಡಿ'ಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ ಎಂದು ಕೃತಜ್ಞತೆಯನ್ನು ಸಲ್ಲಿಸಿದ್ದರು. ಪ್ರಾಕೃತಿಕ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಜನರಿಗೆ ಈ ಚಿತ್ರ ಪ್ರೇರಣೆಯಾಗಲಿ ಎಂದು ಬರೆದುಕೊಳ್ಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಗಂಧದ ಗುಡಿ' ಸಾಕ್ಷ್ಯಚಿತ್ರ ಚಿತ್ರಕ್ಕೆ ಶುಭಹಾರೈಸಿದ್ದರು. 



ಡಿಸೆಂಬರ್‌ 6ರಂದು ಪುನೀತ್ ಅವರ ತಾಯಿ ಪಾರ್ವತಮ್ಮ ರಾಜ್ ಕುಮಾರ್ (Parvathamma Rajkumar) ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಿಆರ್‌ಕೆ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ 'ಗಂಧದ ಗುಡಿ' ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ವೈಲ್ಡ್‌ಲೈಫ್ ಫೋಟೋಗ್ರಾಫರ್ ಅಮೋಘವರ್ಷ (Amoghavarsha) ಅವರು ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಅವರು ನಿರ್ಮಾಣ ಮಾಡಿರುವ ಈ ವಿಡಿಯೋವನ್ನು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ, ಅಜನೀಶ್ ಲೋಕನಾಥ್ (Ajaneesh Loknath ) ಸಂಗೀತವಿದೆ. 

Gandhada Gudi: ಸಿಎಂ ಬೊಮ್ಮಾಯಿ ಅವರಿಗೆ ನಾವು ಸದಾ ಆಭಾರಿ ಎಂದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಆನೆ, ಹುಲಿ, ಹಾವು ಸೇರಿದಂತೆ ಸುಂದರವಾದ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ವಿಶೇಷವೆಂದರೆ ಕೊನೆಯಲ್ಲಿ ಟೈಟಲ್ 'ಗಂಧದ ಗುಡಿ' ಎಂದು ರಿವೀಲ್ ಮಾಡಿದಾಗ ಡಾ.ರಾಜ್‌ಕುಮಾರ್ (Dr Rajkumar) ಅವರ ಧ್ವನಿ ನೀಡಲಾಗಿದೆ.. 'ನಿಮ್ಮ ಕೈ ಮುಗಿದು ಕೇಳ್ಕೊಳತ್ತೀನಿ ಅಭಯಾರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು, ಗಂಧದ ಗುಡಿಯನ್ನು ಉಳಿಸು,' ಎಂಬ ಸಂದೇಶ ಸಾರಲಾಗಿದೆ. ವಿಡಿಯೋ ಕೊನೆಯಲ್ಲಿ ಅಪ್ಪು ಆಕಾಶ ನೋಡುತ್ತಿರುವ ವಿಡಿಯೋ ತೋರಿಸಿ 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?
ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar