ಹಿರಿಯ ನಟಿ ಲೀಲಾವತಿ ಪುತ್ರನಿಗೆ ಮದುವೆಯಾಗಿ ಎಂಜಿನಿಯರ್ ಓದುತ್ತಿರುವ ಮಗನಿದ್ದಾನೆ!?, ನಿರ್ದೇಶಕನ ಪೋಸ್ಟ್ ವೈರಲ್

Published : Apr 08, 2023, 08:43 PM ISTUpdated : Apr 08, 2023, 09:02 PM IST
ಹಿರಿಯ ನಟಿ ಲೀಲಾವತಿ ಪುತ್ರನಿಗೆ ಮದುವೆಯಾಗಿ ಎಂಜಿನಿಯರ್ ಓದುತ್ತಿರುವ ಮಗನಿದ್ದಾನೆ!?, ನಿರ್ದೇಶಕನ ಪೋಸ್ಟ್ ವೈರಲ್

ಸಾರಾಂಶ

ಕನ್ನಡದಹಿರಿಯ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಗೆ ಸಂಬಂಧಿಸಿದಂತೆ  ಸ್ಫೋಟಕ ಸುದ್ದಿಯೊಂದನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಎಂಬುವವರು ಬಹಿರಂಗಪಡಿಸಿದ್ದು, ವಿನೋದ್ ರಾಜ್ ಗೆ ಮದುವೆಯಾಗಿ ಮಗನಿದ್ದಾನೆ ಎಂದಿದ್ದಾರೆ.

ಬೆಂಗಳೂರು (ಏ.8): ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ಗೆ ಸಂಬಂಧಿಸಿದಂತೆ  ಸ್ಫೋಟಕ ಸುದ್ದಿಯೊಂದನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ಇದರ ಸತ್ಯಾಸತ್ಯತೆ ಬಗ್ಗೆ ಸ್ವತಃ ನಟಿ ಲೀಲಾವತಿಯವರು ಮತ್ತು ಅವರ ಪುತ್ರ ವಿನೋದ್ ರಾಜ್ ಅವರೇ ಬಹಿರಂಗಪಡಿಸಬೇಕಿದೆ. ಸದ್ಯ ವಯೋಸಹಜ ಅನಾರೋಗ್ಯದಿಂದ ಇರುವ ಲೀಲಾವತಿ ಅವರನ್ನು ಅವರ ಪುತ್ರ ವಿನೋದ್ ರಾಜ್ ನೋಡಿಕೊಳ್ಳುತ್ತಿದ್ದು, ಇದರ ಜೊತೆಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ನೆಲಮಂಗಲ ಹತ್ತಿರ ನೆಲೆಸಿದ್ದಾರೆ. ವಿನೋದ್ ರಾಜ್ ಅವರಿಗೆ ಈವರೆಗೆ ಮದುವೆಯಾಗಿಲ್ಲ ಎಂದೇ ಹೇಳಲಾಗಿತ್ತು. ಅವರೇಕೆ ಇನ್ನೂ ಮದುವೆಯಾಗಿಲ್ಲ ಎಂಬ  ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ನಿರ್ದೇಶಕ ಪ್ರಕಾಶ್ ರಾಜ್ ಮೆಹು ತಮ್ಮ ಫೇಸ್ ಬುಕ್ ಪುಟದಲ್ಲಿ ವಿನೋದ್ ರಾಜ್‌ ಗೆ ಮದುವೆಯಾಗಿ ಓರ್ವ ಮಗನಿದ್ದಾನೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

Salman Khan: ಕೊನೆಗೂ ಮದ್ವೆಯಾಗ್ತಿದ್ದಾರೆ ಸಲ್ಲು ಭಾಯ್​! ಹೀಗೆ ನೀಡಿದ್ರು ಮದುವೆ ಹಿಂಟ್!​

ವಿನೋದ್ ರಾಜ್ ಅವರಿಗೆ ಹೆಗಲೆತ್ತರಕ್ಕೆ ಬೆಳೆದ ಪುತ್ರನಿದ್ದು,  ಚೆನ್ನೈಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಿನೋದ್ ಪತ್ನಿ ಮತ್ತು ಮಗ ಚೆನ್ನೈಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದು, ಲೀಲಾವತಿಯವರ ಜೊತೆಗೆ ಕುಳಿತಿರುವ ಫೋಟೋವನ್ನು ಫೇಸ್‌ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಮಹಾಲಿಂಗ ಭಾಗವತರ್ ಎಂಬವರ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಸ್ಪಷ್ಟವಾಗಿದೆ ಬರೆದುಕೊಂಡಿದ್ದಾರೆ. ವಿನೋದ್ ಪುತ್ರನ ಹೆಸರು ಯುವರಾಜ್ ಎಂದು ಇದ್ದು ಈ ಸಂಬಂಧ ಆತನ ಅಂಕಪಟ್ಟಿಯ ಪೋಟೋವನ್ನು ಕೂಡ ಹಾಕಿದ್ದಾರೆ. ಅದರಲ್ಲಿ ತಾಯಿ ಹೆಸರು ಅನು ಬಿ ಎಂದಿದೆ. ತಂದೆ/ಗಾರ್ಡಿಯನ್ ಜಾಗದಲ್ಲಿ ವಿನೋದ್ ರಾಜ್ ಎಂದಿದೆ.

'ಹಸುವಿನ ಕೆಚ್ಚಲಿನಿಂದ..ಕಾಫಿ ಲೋಟದವರೆಗೆ.. ' ಕೆಎಂಎಫ್‌ ಅಮೃತದ ಪ್ರಕ್ರಿಯೆ ಬಗ್ಗೆ ತಿಳಿಸಿದ ಮಾಜಿ ಎಂಡಿ!

ನಿರ್ದೇಶಕ ಪ್ರಕಾಶ್ ರಾಜ್ ಮೆಹು ಫೇಸ್ ಬುಕ್ ಬರೆದುಕೊಂಡಿರುವ ಸಾಲುಗಳು ಇಲ್ಲಿದೆ:
"ಸ್ಪೋಟಕ ಮಾಹಿತಿ"
ಇದುವರೆಗಿನ ವಿವಾದಕ್ಕೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿರಲಿಲ್ಲ ಅಂತವರಿಗೆ ಇದು ಸತ್ಯ ಸಾಕ್ಷಿ!
ಮೊದಲನೆಯ ವಿಷಯ: ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು.ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ!!
ಎರಡನೆಯ ವಿಷಯ: ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ!!!
ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ "ಅವರು ಯಾರೋ ಅಭಿಮಾನಿಗಳು" ಅಂದು ಬಿಡುತ್ತಿದ್ದರು ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇವನ್ನು ಬಹಿರಂಗ ಪಡಿಸಿದ್ದೇನೆ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?