
ಸ್ಯಾಂಡಲ್ ವುಡ್ ನಲ್ಲಿ ಯಶ್, ಪುನೀತ್ ರಾಜ್ ಕುಮಾರ್ ಅವರಂತಹ ಸ್ಟಾರ್ ನಟರಿಗೆ ಸಿನಿಮಾ ಮಾಡಿ ಸೈ ಎನಿಸಿಕೊಂಡವರು ಪವನ್ ಒಡೆಯರ್. ನಿರ್ದೇಶನದಲ್ಲಿ ಗೆದ್ದಿರುವ ಪವನ್ ನಿರ್ಮಾಪಕರಾಗಿಯೂ ಮೊದಲ ಹೆಜ್ಜೆಯಲ್ಲಿ ಶಹಬಾಸ್ ಗಿರಿ ಪಡೆದುಕೊಂಡಿದ್ದಾರೆ. ಡೊಳ್ಳು ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್ ಒಡೆಯರ್ ಮತ್ತೊಮ್ಮೆ ಸಾಗರ್ ಪುರಾಣಿಕ್ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ.
ಡೊಳ್ಳು ಸಾರಥಿ ಸಾಗರ್ ಪುರಾಣಿಕ್ ಹಾಗೂ ಪವನ್ ಒಡೆಯರ್ ಮತ್ತೊಂದು ಸಂಗಮದ ಸಿನಿಮಾ ಸೆಟ್ಟೇರಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ವೆಂಕ್ಯಾ ಎಂಬ ಟೈಟಲ್ ಇಡಲಾಗಿದೆ. ವೆಂಕ್ಯಾನಿಗೆ ಸಾಗರ್ ಪುರಾಣಿಕ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಸಾಗರ್ ನಟನೆ ಜವಾಬ್ದಾರಿನ್ನು ಹೊತ್ತುಕೊಂಡಿದ್ದಾರೆ.
ಎಲ್ಲೋ ಜೋಗಪ್ಪ ನಿನ್ನರಮನೆ ಎಂದ 'ಜವಾನ್' ಗಾಯಕಿ, ಕನ್ನಡದ ಹಾಡಿಗೆ ಧ್ವನಿಯಾದ ರಕ್ಷಿತಾ ಸುರೇಶ್
ವೆಂಕ್ಯಾ ಶೂಟಿಂಗ್ ಈಗಾಗಲೇ ಚಾಲುವಾಗಿದೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ. ಉತ್ತರ ಕರ್ನಾಟಕದ ಕಥೆಯಾದ್ರೂ ಅದು ದೇಶ ಎಲ್ಲಾ ಸುತ್ತಲಿದೆ. ಇದೊಂದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ ಅಂತಿದೆ ಚಿತ್ರತಂಡ. ಶೀಘ್ರದಲ್ಲೇ ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ಹಣ ಹಾಕುತ್ತಿರುವ ವೆಂಕ್ಯಾ ಚಿತ್ರಕ್ಕೆ ಸ್ನೇಹಿತರಾದ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹ ನಿರ್ಮಾಣವಿರಲಿದೆ.
ದಿವಂಗತ ಶಂಕರ್ ನಾಗ್ ಬಗ್ಗೆ ಸಿಂಪಲ್ ಸ್ಟಾರ್ ಹೇಳಿದ್ದೇನು; ಯಾಕೆ ಶಾಕ್ ಆಗಿದ್ದಾರೆ ರಕ್ಷಿತ್ ಶೆಟ್ಟಿ?
ಅಂದಹಾಗೆ, ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಸಿನಿಮಾ ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಗಿ ಬಹಳಷ್ಟು ಪ್ರಶಸ್ತಿಗಳನ್ನು ಗಳಿಸಿದೆ. ಡೊಳ್ಳು ಚಿತ್ರದಲ್ಲಿ ನಟಿಸಿದ್ದ ನಟ ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕೂಡ ಹೌದು. ಒಟ್ಟಿನಲ್ಲಿ, ಇದೀಗ ನಿರ್ದೇಶಕ ಸುನಿಲ್ ಪುರಾಣಿಕ್, ನಿರ್ದೇಶನದ ಜತೆಗೆ 'ವೆಂಕ್ಯಾದಲ್ಲಿ ನಾಯಕರಾಗಿ ಕೂಡ ಕಾಣಿಸಿಕೊಂಡಿದ್ದಾರೆ.
ತಮಿಳು ಸಿನಿಮಾದಲ್ಲಿ ಕನ್ನಡದ ಬಿಗ್ ಬಾಸ್ ವಿನ್ನರ್ ರೂಪೇಶ್ ಎಂಟ್ರಿ; ಯಾವ ಸಿನಿಮಾಗೆ ಫಿಕ್ಸ್ ಆದ್ರು ನೋಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.