2 ಸಿನಿಮಾ ಮಾಡಿದ ರನ್ಯಾ ಇಂಡಸ್ಟ್ರಿ ಬಿಟ್ಟು ಹೋಗೋಕೆ ಇದೇ ಕಾರಣ ಇರ್ಬೋದು ಅಂತಿದ್ದಾರೆ ರವಿ ಶ್ರೀವತ್ಸ

Published : Mar 15, 2025, 07:47 PM ISTUpdated : Mar 15, 2025, 07:50 PM IST
2 ಸಿನಿಮಾ ಮಾಡಿದ ರನ್ಯಾ ಇಂಡಸ್ಟ್ರಿ ಬಿಟ್ಟು ಹೋಗೋಕೆ ಇದೇ ಕಾರಣ ಇರ್ಬೋದು ಅಂತಿದ್ದಾರೆ ರವಿ ಶ್ರೀವತ್ಸ

ಸಾರಾಂಶ

ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿತ ರನ್ಯಾ ರಾವ್ ಕನ್ನಡದಲ್ಲಿ ಕಡಿಮೆ ಸಿನಿಮಾಗಳನ್ನು ಮಾಡಲು ಕಾರಣಗಳನ್ನು ನಿರ್ದೇಶಕ ರವಿ ಶ್ರೀವತ್ಸ ವಿವರಿಸಿದ್ದಾರೆ. ರನ್ಯಾ ಅವರ ಹೆಸರಿನ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ಅವರು ಬೇರೆ ಅವಕಾಶಗಳನ್ನು ಹುಡುಕಿರಬಹುದು. ಅಲ್ಲದೆ, ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆ ಇಡುವವರನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾರಾವ್‌ ಯಾಕೆ ಕೇವಲ ಕನ್ನಡದಲ್ಲಿ ಕೇವಲ ಎರಡೇ ಸಿನಿಮಾಗಳನ್ನು ಮಾಡಿದ್ದು? ಸೂಪರ್ ಹಿಟ್ ಸಿನಿಮಾ ನೀಡಿದರೂ ಸಹಾ ಯಾಕೆ ಬೇರೆ ಪ್ರಾಜೆಕ್ಟ್‌ ಒಪ್ಪಿಕೊಂಡಿಲ್ಲ ಅನ್ನೋದಕ್ಕೆ  ರವಿ ಶ್ರೀವತ್ಸ ಲೆಕ್ಕಾಚಾರ ಇಲ್ಲಿದೆ...

'ಅವರ ಹಿಂದಿನ ಹೆಸರು ಏನಿತ್ತು ಎಂದು ನನಗೆ ಗೊತ್ತಿಲ್ಲಆದರೆ ನನಗೆ ಹೇಳಿದ್ದು ರನ್ಯಾ ಅಂತಲೇ. ಇದೇನು ಹೆಸರು ಹಿಂಗಿದೆ ಅಂದುಕೊಂಡೆ, ರಮ್ಯಾ ರೀತಿಯಲ್ಲಿ ರನ್ಯಾ ಅಂತ. ಇರಲಿ ನಾನು ಅವರಿಗೆ ರನ್ಯಾ ಅಂತ ಹೆಸರಿಡುತ್ತೀನಿ ಅಂದ್ರು ನಾನು ಓಕೆ ಅಂದೆ. ಇಂಡಷ್ಟ್ರಿಯಲ್ಲಿ ಜನರಿಗೆ ಏನಾದರೂ ಕ್ಯಾಚಿ ಹೆಸರು ಬೇಕು ಅಲ್ವಾ ಅದಿಕ್ಕೆ ಇದನ್ನು ಅಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಮ್ಮನಾದೆ. ಮೊನ್ನೆ ಪಾರ್ಸ್‌ ಪೋರ್ಟ್‌ನಲ್ಲಿ ಆಕೆಯ ಮತ್ತೊಂದು ಹೆಸರ ಹಿಂದೆ ರನ್ಯಾ ಅಂತ ಬರುತ್ತಿದೆ ಅಂದ್ರು ನನಗೆ ಕ್ಲಾರಿಟಿ ಇಲ್ಲ. ಗೊತ್ತಿಲ್ಲದೆ ಸುದೀಪ್‌ ಸರ್ ಹಾಗೆ ಇಟ್ಟಿದ್ದಾರೋ ಏನೋ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ  ರವಿ ಶ್ರೀವತ್ಸ ಮಾತನಾಡಿದ್ದಾರೆ. 

ನನಗೆ ಮೂಡ್‌ ಸ್ವಿಂಗ್ಸ್‌ ಜಾಸ್ತಿನೇ ಇದೆ ಈ ಸತ್ಯ ಯಾರಿಗೂ ಗೊತ್ತಿಲ್ಲ: ರಚಿತಾ ರಾಮ್

'ಹಣೆ ಬರಹ ಅನ್ನೋದು ತುಂಬಾನೇ ಮುಖ್ಯ. ಎರಡು ಸಿನಿಮಾಗಳು ಆದ್ಮೇಲೆ ಯಾಕೆ ಕನ್ನಡ ಇಂಡಸ್ಟ್ರಿಯಲ್ಲಿ ಉಳಿಯಲಿಲ್ಲ ಅನ್ನೋದು ಗೊತ್ತಿಲ್ಲ. ರನ್ಯಾ ಏನನ್ನು ನಿರ್ಧಾರ ಮಾಡಿದ್ದು ಅನ್ನೋದು ಗೊತ್ತಿಲ್ಲ. ಸಿನಿಮಾವನ್ನು ಹವ್ಯಾಸವಾಗಿ ತೆಗೆದುಕೊಂಡು ಸಿನಿಮಾ ಮಾಡಿ ಕೆಲವರು ಹೋಗಿ ಬಿಡುತ್ತಾರೆ ಏಕೆಂದರೆ ವಿಸಿಟಿಂಗ್ ಕಾರ್ಡ್ ರೀತಿ ಇಟ್ಟಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಸುದೀಪ್ ಸರ್ ಜೊತೆ ಆಕ್ಟಿಂಗ್ ಮಾಡಿದ್ದೀನಿ ಅನ್ನೋ ಐಡೆಂಟಿಟಿ ಬೇಕು ಅಲ್ವಾ? ಮತ್ತೊಂದು ಹಿಟ್ ಸಿನಿಮಾ ನೀಡಿದ್ದು ಗಣೇಶ್ ಅವರ ಜೊತೆ. ಈ ಎರಡು ಹಿಟ್ ಸಿನಿಮಾ ಇಟ್ಕೊಂಡು ಕನ್ನಡ ಚಿತ್ರರಂಗ ಬಿಟ್ಟು ಹೊರಟಿರಬಹುದು' ಎಂದು  ರವಿ ಶ್ರೀವತ್ಸ ಹೇಳಿದ್ದಾರೆ.  

ಮೋರಿ ಪಕ್ಕದಲ್ಲಿ ಕುಳಿತು ವಡಾ ಪಾವ್‌ ತಿಂದ ದರ್ಶನ್- ಸೃಜನ್; ಗಾಬರಿಯಾದ ಅಭಿಮಾನಿ ಏನ್ ಮಾಡಿದ ನೋಡಿ!

'ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಗುತ್ತದೆ ಹಾಗಂತ ತುಂಬಾ ಕೇಳಿ ಕೊಟ್ಟು ಕೊಟ್ಟು ಪ್ಯಾಂಪರ್ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ. ಇಂಡಸ್ಟ್ರಿಗೆ ಬರಲು ತುಂಬಾ ಜನರು ಕಾಯುತ್ತಿದ್ದಾರೆ. ಆ ಸಮದಯಲ್ಲಿ ಸುದೀಪ್‌ ಸರ್ ಪಟ್ಟ ಕಷ್ಟ ಪ್ರಪಂಚಕ್ಕೆ ಗೊತ್ತಾಗಿತ್ತು. ನಾಲ್ಕೈದು ಸಲ ತಿದ್ದಿ ಇಲ್ಲಮಾ ಈ ರೀತಿನೇ ಬರಬೇಕು ಎಂದು ಹೇಳಿಕೊಟ್ಟಿದ್ದಾರೆ. ಅದು ಅವರ ತಾಳ್ಮೆ. ಇತ್ತೀಚಿನ ಇಂಡಸ್ಟ್ರಿಯಲ್ಲಿ ಸಿನಿಮಾ ಮಾಡುವ ಶೈಲಿ ಬದಲಾಗಿದೆ. ಹೈಗ್ರೇಡ್ ಸಿನಿಮಾಗಳು ಹೆಚ್ಚು ದಿನ ಶೂಟಿಂಗ್ ಮಾಡಲಾಗುತ್ತದೆ, ಮಾಣಿಕ್ಯ ಸಿನಿಮಾ ಸುಮಾರು 108 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು.  ಅಷ್ಟು ದಿನ ಚಿತ್ರೀಕರಣ ಮಾಡುವಾಗ ಪ್ಯಾಂಪರ್ ಮಾಡಿಕೊಟ್ಟು ಕೆಲಸ ಮಾಡಿಸಬಹುದು ಆದರೆ ಕಡಿಮೆ ದಿನಗಳಲ್ಲಿ ಚಿತ್ರೀಕರಣ ಮಾಡುವಾಗ ಇವರಿಗೆಲ್ಲಾ ಟ್ರೈನಿಂಗ್ ಮಾಡಿಕೊಂಡು ಕೂರಲು ಆಗುವುದಿಲ್ಲ' ಎಂದಿದ್ದಾರೆ  ರವಿ ಶ್ರೀವತ್ಸ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?