ಪಿಯುಸಿ ಪರೀಕ್ಷೆಯ ಸಮಯದಲ್ಲಿ ಪಾಸಾದರೆ ಸಾಕು ಎಂದುಕೊಂಡಿದ್ದ ಕಿಚ್ಚ ಸುದೀಪ್, ಸ್ನೇಹಿತನಿಗೆ ಉತ್ತರ ಕೇಳಿದಾಗ ಆತ ಹೇಳಲಿಲ್ಲ ಎಂದು ಮಾಡಿದ್ದ ಕಿತಾಪತಿ ಏನು ನೋಡಿ...
ಇಂದು ಪರೀಕ್ಷೆಗಳಲ್ಲಿ ಬರುವ ಅಂಕಗಳೇ ಸರ್ವಸ್ವ. ಅಂಕಗಳು ಹೆಚ್ಚಿಗೆ ತೆಗೆದರೆ ಮಾತ್ರ ಜೀವನದಲ್ಲಿ ಉದ್ಧಾರ ಆಗುವುದು, ಅಂಕವೇ ಎಲ್ಲ, ಅಂಕಗಳೇ ಜೀವ... ಎಂದೆಲ್ಲಾ ಅಂದುಕೊಳ್ಳುವುದು ಉಂಟು. ಇದನ್ನೇ ಮಕ್ಕಳ ತಲೆಗೆ ಅಂದಿನಿಂದ ಇಂದಿನವರೆಗೂ ತುಂಬುತ್ತಲೇ ಬರಲಾಗಿದೆ. ಇದೇ ಕಾರಣಕ್ಕೆ ಕಡಿಮೆ ಅಂಕ ಬಂತು ಎಂದು ಅದೆಷ್ಟೋ ಮಕ್ಕಳು ಸಾವಿನ ಹಾದಿ ತುಳಿದಿದ್ದಾರೆ! ಅದಕ್ಕೆ ತಕ್ಕನಾಗಿ ನಮ್ಮ ಇಂದಿನ ಶಿಕ್ಷಣ ಪದ್ಧತಿಯೂ ಹಾಗೆಯೇ ಇದೆ ಅನ್ನಿ. ಬಾಯಿಪಾಠ ಮಾಡಿಸಿ ಮಾಡಿಸಿ ಪುಸ್ತಕದಲ್ಲಿ ಇದ್ದುದನ್ನು ಪರೀಕ್ಷೆಯಲ್ಲಿ ಬರೆದು ರ್‍ಯಾಂಕ್ ಗಳಿಸುವ ಗುರಿಯನ್ನೇ ಶಿಕ್ಷಣ ಸಂಸ್ಥೆಗಳೂ ಮಾಡಿಕೊಂಡು ಬರುತ್ತಲೇ ಇವೆ. ಒಟ್ಟಿನಲ್ಲಿ ರ್‍ಯಾಂಕ್ ಬೇಕು ಅಷ್ಟೇ. ಸಾಮಾನ್ಯ ಜ್ಞಾನ ಎನ್ನುವುದೇ ಇಲ್ಲದ ಮಕ್ಕಳು ಪುಸ್ತಕದ ಹುಳುಗಳಾಗುತ್ತಿದ್ದಾರೆ.
ಆದರೆ ಇಂದು ಹಲವು ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿರುವವರ ಅಂಕಗಗಳನ್ನು ಕೇಳಿದರೆ, ಅವರ ಅಂಕಪಟ್ಟಿಗಳನ್ನು ನೋಡಿದರೆ ನಿಜಕ್ಕೂ ಶಾಕ್ ಆಗುವುದು ಇದೆ. ಅದರಲ್ಲಿಯೂ ಕೆಲವು ಸಿನಿಮಾ ನಟ-ನಟಿಯರ ಅಂಕಗಳನ್ನು ಕೇಳಿದರೆ ಅಬ್ಬಬ್ಬಾ ಎನ್ನುವುದು ಉಂಟು. ಪಾಸಾದರೆ ಸಾಕಪ್ಪಾ ಎನ್ನುವ ಮನಸ್ಥಿತಿ ಹಲವರದ್ದು ಇತ್ತು. ಸಿನಿ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಹೆಸರು ಮಾಡಿ, ಖ್ಯಾತಿ ಗಳಿಸಿ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿರುವ ಕಿಚ್ಚ ಸುದೀಪ್ ಅವರೂ ಇಂಥವರಲ್ಲಿ ಒಬ್ಬರು. ಪರೀಕ್ಷೆಯ ಸಮಯದಲ್ಲಿ ಕಾಪಿ ಮಾಡಲು ಅವರು ಪಟ್ಟ ಹರಸಾಹಸದ ಕಥೆ ಅವರೇ ಹೇಳಿದ್ದಾರೆ ಕೇಳಿ.
ತಮ್ಮದೇ ಫಸ್ಟ್ ನೈಟ್ ವಿಡಿಯೋ ನೋಡಿ ನಾಚಿ ನೀರಾದ ಕಿಚ್ಚ ಸುದೀಪ್! ತುಂಟತನಕ್ಕೆ ಫ್ಯಾನ್ಸ್ ಫಿದಾ
ವೀಕೆಂಡ್ ವಿಥ್ ರಮೇಶ್ ಷೋನಲ್ಲಿ ಸುದೀಪ್ ಅವರು ಹೇಳಿದ್ದ ಈ ಕ್ಲಿಪ್ಪಿಂಗ್ ಇದೀಗ ಮತ್ತೊಮ್ಮೆ ವೈರಲ್ ಆಗಿದೆ. ಇದರಲ್ಲಿ ತಮ್ಮ ಸ್ನೇಹಿತ ಕಾಪಿ ಮಾಡಲು ಕೊಟ್ಟಿಲ್ಲ, ಪಾಸಾದರೆ ಸಾಕು ಎಂದುಕೊಂಡಿದ್ದ ಸುದೀಪ್ ಅವರು ಮಾಡಿದ್ದ ಕಿತಾಪತಿಯನ್ನು ಹೇಳಿದ್ದಾರೆ. ’ಪಿಯುಸಿ ಪರೀಕ್ಷೆಯ ಸಮಯದಲ್ಲಿ, ಹಿಂದೆ ಒಬ್ಬ ಬುದ್ಧಿವಂತ ಹುಡುಗ ಇದ್ದ. ಅವನ ಪಕ್ಕ ನನ್ನ ಸ್ನೇಹಿತ ಇದ್ದ. ಆಗ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಅದಲು ಬದಲು ಆಗಬಾರದು ಎನ್ನುವ ಕಾರಣಕ್ಕೆ ಪ್ರಶ್ನೆ ಪತ್ರಿಕೆಗಳ ಮೇಲೆಯೂ ಹೆಸರು ಬರೆಯಬೇಕಿತ್ತು ನನಗೆ ಪಾಸಾದರೆ ಸಾಕಿತ್ತು. ಏನೂ ಬರುತ್ತಿರಲಿಲ್ಲ. ಹಿಂದೆ ಇದ್ದವನನ್ನು ಕೇಳಿದರೆ, ಅವನು ಹೇಳೇ ಇರಲಿಲ್ಲ’ ಎನ್ನುತ್ತಲೇ ತಾವು ಮಾಡಿದ ಕಿತಾಪತಿಯನ್ನು ಹೇಳಿದ್ದಾರೆ.
ನನ್ನ ಸ್ನೇಹಿತ ಮತ್ತು ಆ ಬುದ್ಧಿವಂತ ಹುಡುಗನ ನಡುವೆ ಪ್ರಶ್ನೆ ಪತ್ರಿಕೆ ಎಕ್ಸ್‌ಚೇಂಜ್ ಆಗುತ್ತಿತ್ತು. ಅದರಲ್ಲಿ ಉತ್ತರ ಇತ್ತು. ನನ್ನ ಸ್ನೇಹಿತರಿಗೆ ಕೊಡೋ ಮಾರಾಯ ಎಂದರೂ ಅವನ ಸ್ಥಿತಿ ಅವನಿಗೆ ಆಗಿತ್ತು, ಅವನಿಗೂ ಪಾಸಾದರೆ ಸಾಕಿತ್ತು. ಇನ್ನು ನನ್ನ ಕಡೆ ಅವನು ಯಾಕೆ ನೋಡುತ್ತಿದ್ದ. ಆದರೆ ಆ ಎಕ್ಸ್‌ಚೇಂಜ್ ಮಾಡುವಾಗ ಅವನ ಪ್ರಶ್ನೆ ಪತ್ರಿಕೆ ಕೆಳಗೆ ಬಿತ್ತು. ನಾನು ಕಾಲಿನಲ್ಲಿ ನಿಧಾನಕ್ಕೆ ಸರಿಸಿದೆ. ಅವನು ಕಾಲಿನಲ್ಲಿಯೇ ಹುಡುಕಿ ಹುಡುಕಿ ಇಟ್ಟರೂ ಅವನಿಗೆ ಸಿಗಲಿಲ್ಲ. ಅಷ್ಟು ಹೊತ್ತಿಗಾಗಲೇ ಇನ್‌ವಿಜಿಲೇಟರ್ ಬಂದರು. ನಾನು ನಿಧಾನಕ್ಕೆ ಅವರು ನೋಡಬಾರದು ಎನ್ನುವ ಕಾರಣಕ್ಕೆ ಉತ್ತರ ಪತ್ರಿಕೆಯ ಮೇಲೆ ಮಲಗಿ ಬಿಟ್ಟೆ. ಅವರು ಅತ್ತ ಹೋದ ಮೇಲೆ ಮತ್ತೆ ಪ್ರಶ್ನೆ ಪತ್ರಿಕೆಯನ್ನು ಹಿಡಿದುಕೊಂಡೆ. ಅವನಿಗೂ ಆ ಪತ್ರಿಕೆ ಸಿಗಲಿಲ್ಲ’ ಎಂದಿದ್ದಾರೆ. ಮುಂದೇನಾಯಿತು ಎಂದು ಈ ವಿಡಿಯೋದಲ್ಲಿ ತೋರಿಸಿಲ್ಲ!
ಸುದೀಪ್ ಕೊನೆಯ ಬಿಗ್ಬಾಸ್ನಲ್ಲಿ ಕಣ್ಣೀರ ಕೋಡಿ! ಆ ದನಿ ಕೇಳಿ ಕಣ್ಣೀರಾದ ಕಿಚ್ಚನ ಅಪ್ಪ-ಮಗಳು