ನನಗೆ ಮೂಡ್‌ ಸ್ವಿಂಗ್ಸ್‌ ಜಾಸ್ತಿನೇ ಇದೆ ಈ ಸತ್ಯ ಯಾರಿಗೂ ಗೊತ್ತಿಲ್ಲ: ರಚಿತಾ ರಾಮ್

Published : Mar 15, 2025, 06:43 PM ISTUpdated : Mar 15, 2025, 06:52 PM IST
ನನಗೆ ಮೂಡ್‌ ಸ್ವಿಂಗ್ಸ್‌ ಜಾಸ್ತಿನೇ ಇದೆ ಈ ಸತ್ಯ ಯಾರಿಗೂ ಗೊತ್ತಿಲ್ಲ: ರಚಿತಾ ರಾಮ್

ಸಾರಾಂಶ

ರಚಿತಾ ರಾಮ್ ಯಶಸ್ವಿ ನಟಿ, ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಭಿಮಾನಿಗಳು, ಕುಟುಂಬ, ಮತ್ತು ದೇವರ ಆಶೀರ್ವಾದವೇ ತನ್ನ ಯಶಸ್ಸಿಗೆ ಕಾರಣ ಎಂದು ಅವರು ಹೇಳಿದ್ದಾರೆ. ತನ್ನ ಸಿಬ್ಬಂದಿಯ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಚಿತಾ ಅವರಿಗೆ ಮೂಡ್ ಸ್ವಿಂಗ್ಸ್ ಜಾಸ್ತಿ ಇದೆಯಂತೆ. ಸದ್ಯಕ್ಕೆ ಅವರು 'ಸಂಜು ವೆಡ್ಸ್ ಗೀತಾ 2', 'ಶಬರಿ ಸರ್ಚಿಂಗ್ ಫಾರ್ ರಾವಣ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಮತ್ತು ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಟಿ.  ಹೀಗಾಗಿ ಲೇಡಿ ಸೂಪರ್ ಸ್ಟಾರ್, ಬಿಗ್ ಬಜೆಟ್ ನಟಿ ಎಂಬ ಪಟ್ಟ ಪಡೆದಿದ್ದಾರೆ. ರಚ್ಚು ಮಾಡಿದ ಸಿನಿಮಾ ಹಾಕಿದ ಬಂಡವಾಳ ಯಾವತ್ತೂ ಲಾಸ್ ಆಗುವುದಿಲ್ಲ. ಹೀಗಾಗಿ ನಿರ್ಮಾಪಕರು ಹಾಗೂ ನಿರ್ದೇಶಕರು ಕಥೆ ಬರೆಯುವಾಗಲೇ ರಚ್ಚು ಎಂದು ಫಿಕ್ಸ್ ಆಗಿ ಬಿಡುತ್ತಾರೆ. ಸೀರಿಯಲ್ ಮೂಲಕ ಜರ್ನಿ ಶುರು ಮಾಡಿ ಈಗ ಬೆಳ್ಳಿ ತೆರೆ ಮೇಲೆ ಮಿಂಚುತ್ತಿದ್ದಾರೆ. ಇದೇ ರಚ್ಚು ಈ ಹಿಂದೆ ತೆಲುಗು ಸಿನಿಮಾ ಮಾಡಿದರು, ಫ್ಲಾಪ್ ಆಗುತ್ತಿದ್ದಂತೆ ಮತ್ತೆ ಕನ್ನಡಕ್ಕೆ ಬಂದವರು ವಾಪಸ್ ಹೋಗಲೇ ಇಲ್ಲ. ಆದರೆ ಯಾರಿಗೆ ಗೊತ್ತು ರಚ್ಚು ಶಕ್ತಿ ಏನು? ರಚ್ಚುಗೆ ಮೂಡ್‌ ಸ್ವಿಂಗ್ಸ್‌ ಬರುತ್ತಾ ಅಂತ?

'ನನ್ನೊಟ್ಟಿಗೆ ಸದಾ ಇರುವುದು ಭಗವಂತನ ಆಶೀರ್ವಾದ ಜೊತೆಗೆ ಎಲ್ಲಾ ಅಭಿಮಾನಿಗಳ ಪ್ರೀತಿ. ನನ್ನ ಹಿತೈಷಿಗಳು ಹಾಗೂ ಫ್ಯಾಮಿಲಿಯವರ ಸಪೋರ್ಟ್. ಈ ಮೂರು ನನ್ನೊಟ್ಟಿಗೆ ಇರುವುದಕ್ಕೆ ನಾನು ಇಂಡಸ್ಟ್ರಿಯಲ್ಲಿ ಯಶಸ್ವಿಯಾಗಿ ಇರಲು ಸಾಧ್ಯವಾಗಿದ್ದು. ಈ ಮೂರರಲ್ಲಿ ಯಾವುದಾದರೂ ಒಂದು ವೀಕ್ ಆದರೂ ನನಗೆ ಕಷ್ಟವಾಗುತ್ತದೆ. ಆ ಕ್ಷಣ ನಾನು ಕೆಳಗೆ ಬೀಳುವುದು. ಈ ಮೂರು ನನ್ನೊಟ್ಟಿಗೆ ಇರುವುದು ತ್ರಿಷೂಲ ತರ ತುಂಬಾ ಸ್ಟ್ರಾಂಗ್ ಆಗಿದೆ. ನಾನು ಮುಖ್ಯವಾದ ಪಿಲ್ಲರ್ ಅಲ್ಲ ಭಗವಂತನೇ ಇಲ್ಲಿ ಪಿಲ್ಲರ್. ಅಭಿಮಾನಿಗಳು, ಭಗವಂತ, ಹಿತೈಷಿಗಳು ನನ್ನ ಸಿಬ್ಬಂದಿಗಳು ನನ್ನ ಜೀವನದ ಮುಖ್ಯ ಭಾಗವಾಗಿದ್ದಾರೆ' ಎಂದು ಗೋಲ್ಡ್‌ ಕ್ಲಾಸ್‌ ವಿತ್ ಆರ್‌ಜೆ ಮಯೂರ ಸಂದರ್ಶನದಲ್ಲಿ ರಚಿತಾ ರಾಮ್ ಮಾತನಾಡಿದ್ದಾರೆ. 

ಮೋರಿ ಪಕ್ಕದಲ್ಲಿ ಕುಳಿತು ವಡಾ ಪಾವ್‌ ತಿಂದ ದರ್ಶನ್- ಸೃಜನ್; ಗಾಬರಿಯಾದ ಅಭಿಮಾನಿ ಏನ್ ಮಾಡಿದ ನೋಡಿ!

'ನನ್ನ ಸಿಬ್ಬಂದಿಗಳ ಬಗ್ಗೆ ನಾನು ಯಾವುದೇ ಸಂದರ್ಶನದಲ್ಲೂ ಮಾತನಾಡುವುದಿಲ್ಲ. ಮೆಂಟಲಿ ತುಂಬಾ ಡಿಸ್ಟರ್ಬ್‌ ಆಗಿರುತ್ತೀವಿ. ನನಗೆ ಮೋಡ್‌ ಸ್ವಿಂಗ್ಸ್ ಜಾಸ್ತಿ ಇದೆ ಈ ಸತ್ಯ ಯಾರಿಗೂ ಗೊತ್ತಿಲ್ಲ. ನನ್ನ ಮೂಡ್‌ನ ಯಾರೂ ಕೆದಕುವ ಪ್ರಯತ್ನ ಮಾಡುವುದಿಲ್ಲ. ನನ್ನ ಮೋಡ್‌ನ ಖುಷಿ ಖುಷಿಯಾಗಿ ಇರಿಸುವುದು ನನ್ನ ಜೊತೆ ಕೆಲಸ ಮಾಡುವ ಸಿಬ್ಬಂದಿಗಳು' ಎಂದು ರಚಿತಾ ರಾಮ್ ಹೇಳಿದ್ದಾರೆ. ಸಂಜು ವೆಡ್ಸ್‌ ಗೀತಾ 2 ಸಿನಿಮಾ ನಂತರ ಶಬರಿ ಸರ್ಚಿಂಗ್ ಫಾರ ರಾವಣ, ಲವ್ ಮಿ ಆರ್‌ ಹೇಟ್‌ ಮೀ, ಅಯೋಗ್ಯ 2, ಕಲ್ಟ್‌ ಮತ್ತು ರಚ್ಚಾಯ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಇದರ ಜೊತೆ ಜೀ ಕನ್ನಡ ವಾಹಿಯಲ್ಲಿ ಭರ್ಜರಿ ಬ್ಯಾಚುಲರ್ಸ್‌ 2 ರಿಯಾಲಿಟ ಶೋ ತೀರ್ಪುಗಾರರಾಗಿ ಮಿಂಚುತ್ತಿದ್ದಾರೆ.  

ಕಾಲೇಜ್‌ನಲ್ಲಿ ಆ ಹುಡುಗಿಗೆ ಐ ಲವ್ ಯೂ ಹೇಳೋಕೆ 1 ವರ್ಷ ತೆಗೊಂಡೆ; ಕೊನೆಗೂ ಹಳೆ ಕಹಾನಿ ಬಿಚ್ಚಿಟ್ಟ ರವಿಚಂದ್ರನ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ