Aghora Movie: 'ಅಘೋರಿ' ಪಾತ್ರದಲ್ಲಿ ಇನ್ಮುಂದೆ ಹಿರಿಯ ನಟ ಅವಿನಾಶ್ ನಟಿಸಲ್ಲ: ನಿರ್ದೇಶಕ ಪ್ರಮೋದ್

By Suvarna News  |  First Published Feb 26, 2022, 9:41 PM IST

ಸಾಮಾನ್ಯವಾಗಿ 'ಅಘೋರ' ಎಂಬ ಪದವನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಈ 'ಅಘೋರ' ಎಂಬುದಕ್ಕೆ ಹತ್ತಾರು ವ್ಯಾಖ್ಯಾನಗಳಿವೆ. ವೇದ, ಪುರಾಣಗಳಿಂದ ಹಿಡಿದು ಇಂದಿನ ಕಾದಂಬರಿಗಳವರೆಗೆ ಇದರ ಬಗ್ಗೆ ನೂರಾರು ಕಥೆ-ಕಲ್ಪನೆಗಳಿವೆ. ಇದೀಗ 'ಅಘೋರ' ಎಂಬ ಹೆಸರಿನ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. 


ಸಾಮಾನ್ಯವಾಗಿ 'ಅಘೋರ' (Aghora) ಎಂಬ ಪದವನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಈ 'ಅಘೋರ' ಎಂಬುದಕ್ಕೆ ಹತ್ತಾರು ವ್ಯಾಖ್ಯಾನಗಳಿವೆ. ವೇದ, ಪುರಾಣಗಳಿಂದ ಹಿಡಿದು ಇಂದಿನ ಕಾದಂಬರಿಗಳವರೆಗೆ ಇದರ ಬಗ್ಗೆ ನೂರಾರು ಕಥೆ-ಕಲ್ಪನೆಗಳಿವೆ. ಇದೀಗ 'ಅಘೋರ' ಎಂಬ ಹೆಸರಿನ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ವಿಶೇಷವಾಗಿ ಈ ಚಿತ್ರದಲ್ಲಿ ಹಿರಿಯ ನಟ ಅವಿನಾಶ್ (Avinash) ಇದೇ ಮೊದಲ ಬಾರಿಗೆ ಅಘೋರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಅಘೋರಿ ಪಾತ್ರಕ್ಕೆ ಬಣ್ಣ ಹಚ್ಚುವುದು ಅಷ್ಟು ಸುಲಭವಲ್ಲ. ಈ ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಮಾತ್ರವಲ್ಲದೇ, ಅಘೋರಿ ವೇಷಕ್ಕಾಗಿ ಮೇಕಪ್​ ಮಾಡಿಕೊಳ್ಳುವುದು ಕಷ್ಟದ ಕೆಲಸವಾದರೂ ಹಿರಿಯ ನಟ ಅವಿನಾಶ್ ಅಘೋರಿ ಪಾತ್ರದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಮುಗಿದು ಡಬ್ಬಿಂಗ್ (Dubbing) ಮಾಡುವಾಗ ಇನ್ಮುಂದೆ ಈ ಪಾತ್ರದಲ್ಲಿ ನಟಿಸುವುದಿಲ್ಲವೆಂದು ನಿರ್ದೇಶಕ ಪ್ರಮೋದ್ ಅವರ ಬಳಿ ಅವಿನಾಶ್ ತಿಳಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಪ್ರಮೋದ್ (Pramod) ಖಾಸಗಿ ವೆಬ್‌ಸೈಟ್‌ವೊಂದರ ಸಂದರ್ಶನದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Latest Videos

undefined

ಅಘೋರಿ ಪಾತ್ರ ಪ್ರತಿಯೊಬ್ಬ ನಟನಿಗೂ ಸವಾಲಾಗಿದ್ದು, ಇಂತಹ ಪಾತ್ರ ಮಾಡುವಾಗ ಕೆಲವರಿಗೆ ವಿಶಿಷ್ಟ ಅನುಭವ ಆಗುತ್ತೆ. ಆದರೆ, ಅವಿನಾಶ್ ಅಘೋರಿಯಾಗಿ ಮತ್ತೆ ನಟಿಸುವುದಿಲ್ಲ ಎಂದಿದ್ದಕ್ಕೆ ಬೇರೆಯದ್ದೇ ಕಾರಣವಿದೆ. ಅವಿನಾಶ್ ಅವರು ಅಘೋರಿ ವೇಷ ಧರಿಸಿಕೊಂಡೆ ಈ ಪಾತ್ರ ಮಾಡಬೇಕಿತ್ತು. ಗಡ್ಡ, ಗೆಟಪ್ ಎಲ್ಲವೂ ಪ್ರತಿ ಬಾರಿ ಹಾಕಬೇಕಿತ್ತು. ಆಗ ಅವಿನಾಶ್ ಅವರು ಹೇಳಿದ್ದರು. ಇನ್ಮುಂದೆ ಈ ಪಾತ್ರವನ್ನು ಮತ್ತೆಂದು ಮಾಡುವುದಿಲ್ಲ. ಮಾತ್ರವಲ್ಲದೇ ಇಂತಹ ಪಾತ್ರ ಮುಂದೆ ಮಾಡಲು ಸಾಧ್ಯವೂ ಇಲ್ಲ. ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ. ಈ ಪಾತ್ರ ಅವರಿಗೆ ತುಂಬಾನೇ ಇಷ್ಟ ಆಗಿತ್ತು. ಹಾಗಾಗಿ ಇದನ್ನು ಯಾವತ್ತೂ ಕಳೆದುಕೊಳ್ಳಲು ಇಷ್ಟವಿಲ್ಲವೆಂದು ಡಬ್ಬಿಂಗ್ ಮಾಡುವಾಗ ಅವಿನಾಶ್ ಅವರು ಹೇಳಿದ್ದರು ಎಂದು ನಿರ್ದೇಶಕ ಪ್ರಮೋದ್ ತಿಳಿಸಿದರು.

Duniya Vijay: ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾದ 'ಸಲಗ'

ಅಘೋರಿ ಪಾತ್ರ ನೋಡಿದಷ್ಟು ಸುಲಭವಲ್ಲ. ಅಘೋರಿಗಳ ಹಾವ-ಭಾವವನ್ನೇ ಅನುಸರಿಬೇಕು. ಅವರನ್ನು ಅನುಸರಿಸಿ, ತೆರೆಮೇಲೆ ನಟಿಸಬೇಕು. ಇಂತಹ ಪಾತ್ರಕ್ಕೆ ಅವಿನಾಶ್ ಅವರೇ ಸೂಕ್ತ. ಅಘೋರಿ ಪಾತ್ರಕ್ಕೆ ಅವಿನಾಶ್ ಅವರನ್ನೇ ಆಯ್ಕೆ ಮಾಡಿದ್ದಕ್ಕೆ ಒಂದು ಕಾರಣವಿದೆ. ಈ ಪಾತ್ರಕ್ಕೆ ಶೇ.100ರಷ್ಟು ನ್ಯಾಯ ಕೊಡಲು ಅವರಿಂದ ಮಾತ್ರ ಸಾಧ್ಯ. ಮನಪೂರ್ವಕವಾಗಿ ಈ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವು ಪ್ರಕೃತಿಯ ಬಗ್ಗೆ ವಿವರಣೆ ನೀಡುವಾಗ, ಅದನ್ನು ಒಬ್ಬ ದೊಡ್ಡ ನಟನಿಂದಲೇ ಹೇಳಿಸಬೇಕಿತ್ತು. ಹೀಗಾಗಿ 600ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿರುವ ನಟನಿಂದ ಈ ಮಾತು ಬಂದಾಗ, ಅದು ಅರ್ಥ ಪೂರ್ವಕವಾಗಿ ಇರುತ್ತದೆ ಎಂದು ನಿರ್ದೇಶಕ ಪ್ರಮೋದ್ ಹೇಳಿದರು.



'ಅಘೋರ' ಚಿತ್ರವನ್ನು ನಾವು ಕೋವಿಡ್‌ಗೂ ಮುನ್ನವೇ ಚಿತ್ರೀಕರಿಸಿದ್ದೇವು. ಸಣ್ಣ-ಪುಟ್ಟ ಪ್ಯಾಚ್ ವರ್ಕ್ ಉಳಿದುಕೊಂಡಿಂತು. ಇನ್ನೇನು ಶುರು ಮಾಡಬೇಕು ಅನ್ನುವಷ್ಟರಲ್ಲಿ ಕೋವಿಡ್ ಬಂದುಬಿಟ್ಟಿತ್ತು. ಅನಂತರ ಮತ್ತೆ ಶೂಟಿಂಗ್ ಕಂಪ್ಲಿಟ್ ಮಾಡಿದೇವು. ಎರಡನೇ ಲಾಕ್‌ಡೌನ್ ವೇಳೆ ಸುಮ್ಮನೆ ಕೂರುವುದು ಬೇಡಾ ಅಂತ ಸುಮಾರು 16 ರಾಷ್ಟ್ರಗಳಿಗೆ 'ಅಘೋರ' ಚಿತ್ರವನ್ನು ಕಳುಹಿಸಿದ್ದೇವು. ಎಲ್ಲಾ ಚಲನಚಿತ್ರೋತ್ಸವದಲ್ಲಿ 35 ಪ್ರಶಸ್ತಿಗಳನ್ನು ಗೆದ್ದಿತ್ತು. ಮೇಕಪ್‌ನಿಂದ ಹಿಡಿದು ಪ್ರತಿಯೊಂದು ಕ್ಯಾಟಗರಿಯಲ್ಲೂ ಗೆದ್ದಿದ್ದೇವೆ ಎಂಬ ಮಾಹಿತಿಯನ್ನು ಪ್ರಮೋದ್ ಹಂಚಿಕೊಂಡರು.

Radhe Shyam: ಪ್ರಭಾಸ್-ಪೂಜಾ ಹೆಗ್ಡೆ ಕಾಂಬಿನೇಷನ್‌ನ ಚಿತ್ರಕ್ಕೆ ಅಮಿತಾಭ್ ಬಚ್ಚನ್ ಧ್ವನಿ!

'ಕೆಲವರನ್ನ ನಾವು ಮೊದಲ ಬಾರಿಗೆ ನೋಡಿದರೂ ಅವರು ನಮಗೆ ಮೊದಲೇ ತುಂಬ ಪರಿಚಿತರು ಅನಿಸುತ್ತದೆ. ಅವರೊಂದಿಗೆ ಆತ್ಮೀಯತೆ ಭಾವ ಮೂಡುತ್ತದೆ. ಅವರಿಗೆ ಸ್ಪಂದಿಸಬೇಕು ಅನಿಸುತ್ತದೆ. ಅದೇ ಇನ್ನು ಕೆಲವರನ್ನ ನೋಡಿದರೆ, ಅವರು ನಮಗೇನೂ ಮಾಡದಿದ್ದರೂ, ನಮಗೇ ಗೊತ್ತಿಲ್ಲದಂತೆ ಅವರ ಮೇಲೆ ನಮಗೆ ಕೋಪ ಬರುತ್ತದೆ. ಅವರು ನಮಗೆ ಎಷ್ಟೇ ಹತ್ತಿರವಿದ್ರೂ, ನಾವೇ ದೂರ ಹೋಗಬೇಕು ಅನಿಸುತ್ತದೆ. ನಮಗೆ ಸಹಾಯ ಮಾಡುವ ಮನೋಭಾವವಿದ್ದರೂ, ಅಂಥವರನ್ನು ನೋಡಿದರೆ ನಾವು ಸಹಾಯ ಮಾಡಲ್ಲ. ಎಲ್ಲರಿಗೂ ಇಂಥದ್ದೊಂದು ಅನುಭವವಾಗಿರುತ್ತದೆ. ಯಾಕೆ ಹೇಗೆ? ಅಂದ್ರೆ, ಅದೆಲ್ಲದಕ್ಕೂ ಕಾರಣ ಕರ್ಮಫ‌ಲ. ಈ ಪೂರ್ವ ಜನ್ಮದ ನಂಟು ಪ್ರೀತಿ, ಮೋಸ ಎಲ್ಲವನ್ನೂ ಮಾಡುತ್ತದೆ' ಎಂದು ನಿರ್ದೇಶಕ ಪ್ರಮೋದ್ ಹೇಳಿದರು. ಇನ್ನು 'ಅಘೋರ' ಸಿನಿಮಾ ಮಾರ್ಚ್ 4ರಂದು ತೆರೆಕಾಣಲಿದೆ.
 

click me!