Puneeth Rajkumar: ಅಪ್ಪು ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ ನಿರ್ದೇಶಕ ಪವನ್ ಒಡೆಯರ್!

By Suvarna NewsFirst Published Mar 13, 2022, 1:16 PM IST
Highlights

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಈ ನಡುವೆ ನಿರ್ದೇಶಕ ಪವನ್ ಒಡೆಯರ್ ಅಪ್ಪು ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಕೊಡಲು ರೆಡಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪುನೀತ್ ಅವರ ಹುಟ್ಟುಹಬ್ಬದಂದೇ ಅವರ ಕೊನೆಯ 'ಜೇಮ್ಸ್' (James) ಸಿನಿಮಾ ತೆರೆ ಕಾಣಲಿದೆ. ಅಪ್ಪು ಇಲ್ಲವಾದರು, ಅವರು ನಮ್ಮೊಂದಿಗೆ ಇದ್ದಾರೆ ಎನ್ನುವ ಭಾವದಿಂದ ಅಭಿಮಾನಿಗಳು (Fans) ಜಾತ್ರೆ ಮಾಡಲು ಶುರು ಮಾಡಿದ್ದಾರೆ. ಅಪ್ಪು ನೆನಪಿಗಾಗಿ ಸಾಹಿತ್ಯ ಬರೆದು ಹಾಡುವ ಮೂಲಕ ತಮ್ಮ ಅಭಿಮಾನವನ್ನು ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಹಿಂದೊಮ್ಮೆ ಪುನೀತ್ ಬೇಡ ಎಂದಿದ್ದ ಸಾಂಗ್ ಈಗ ಮತ್ತೆ ರಿಲೀಸ್ ಆಗುತ್ತಿದೆ. ಹೌದು! ಅಪ್ಪು ಅಭಿಮಾನಿಗಳಿಗೆ ನಿರ್ದೇಶಕ ಪವನ್ ಒಡೆಯರ್ (Pavan Wadeyar) ಬಿಗ್ ಸರ್‌ಪ್ರೈಸ್ ಕೊಡಲು ರೆಡಿಯಾಗಿದ್ದಾರೆ.

ಪುನೀತ್ ರಾಜ್‌ಕುಮಾರ್‌ ಅವರ ಎರಡು ಸಿನಿಮಾಗಳಿಗೆ ನಿರ್ದೇಶಕ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿದ್ದರು. ಇವರಿಬ್ಬರ ಕಾಂಬಿನೇಶನ್‌ನಲ್ಲಿ 2015ರಲ್ಲಿ 'ರಣವಿಕ್ರಮ' (RanaVikrama) ಮತ್ತು 2019ರಲ್ಲಿ 'ನಟ ಸಾರ್ವಭೌಮ' (Natasaarvabhowma) ಚಿತ್ರಗಳು ತೆರೆಗೆ ಬಂದಿತ್ತು. 'ನಟ ಸಾರ್ವಭೌಮ' ಚಿತ್ರದ 'ಓಪನ್ ದಿ ಬಾಟಲ್', 'ಡ್ಯಾನ್ಸ್ ವಿತ್ ಅಪ್ಪು', 'ತಾಜಾ ಸಮಾಚಾರ' ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇದೇ ಸಿನಿಮಾಗಾಗಿ ಮತ್ತೊಂದು ಹಾಡನ್ನು ಪವನ್ ಒಡೆಯರ್ ರಚಿಸಿದ್ದರು. ಪುನೀತ್ ರಾಜ್‌ಕುಮಾರ್ ನಟಿಸಿರುವ ಎಲ್ಲಾ ಚಿತ್ರಗಳ ಹೆಸರುಗಳನ್ನು ಇಟ್ಟುಕೊಂಡು ಸೂಪರ್ ಸಾಂಗ್‌ವೊಂದನ್ನು ಪವನ್ ಒಡೆಯರ್ ಬರೆದಿದ್ದರು. ಆದರೆ, ಆ ಸಾಂಗ್ ಬೇಡ ಅಂತ ಪುನೀತ್ ರಾಜ್‌ಕುಮಾರ್ ಹೇಳಿದ್ದರು. ಹೀಗಾಗಿ, 'ನಟ ಸಾರ್ವಭೌಮ' ಚಿತ್ರದಲ್ಲಿ ಆ ಹಾಡನ್ನ ಬಳಸಲಾಗಿರಲಿಲ್ಲ.

James 2022: ಮಾರ್ಚ್​​ 13ರಂದು ಅರಮನೆ ಮೈದಾನದಲ್ಲಿ ಅಪ್ಪು ಕೊನೆ ಚಿತ್ರದ ಪ್ರೀ-ರಿಲೀಸ್​ ಇವೆಂಟ್!

'ನಟಸಾರ್ವಭೌಮ' ಟೈಟಲ್‌ ಟ್ರ್ಯಾಕ್‌ಗೆ (Title Track) ಪವನ್ ಒಡೆಯರ್ ಪುನೀತ್ ಅಭಿನಯಿಸಿದ 42 ಸಿನಿಮಾಗಳ ಟೈಟಲ್ ಅನ್ನು ಬಳಸಿದ್ದರು. 'ಪ್ರೇಮದ ಕಾಣಿಕೆ' ಚಿತ್ರದಿಂದ 'ಅಂಜನಿಪುತ್ರ' ಚಿತ್ರದ ಟೈಟಲ್‌ಗಳನ್ನೇ ಬಳಸಿ ಸಾಹಿತ್ಯ ರಚಿಸಿದ್ದರು. 'ಪ್ರೇಮದ ಕಾಣಿಕೆಯಿಂದ ಭಾಗ್ಯವಂತನಾದ, ಬೆಟ್ಟದ ಹೂವು ಪಡೆದ ಭಕ್ತಪ್ರಹ್ಲಾದ' ಅಲ್ಲದೆ 'ಆಕಾಶದಿ ಅಭಿಯಾಗಿ, ಕನ್ನಡ ಪೃಥ್ವಿಗೆ ನೀ ಅರಸು, ಅಣ್ಣಾ ಬಾಂಡ್ ದೊಡ್ಮನೆ ಹುಡುಗನ ನಾನ್ ಸ್ಟಾಟ್ ಸ್ಟೆಪ್ಪು ಡ್ಯಾನ್ಸ್ ವಿಥ್ ಅಪ್ಪು' ಹೀಗೆ ಅಪ್ಪು ಸಿನಿಮಾ ಟೈಟಲ್ ಬಳಸಿ ಸಾಂಗ್ ರೆಡಿ ಮಾಡಿದ್ದರು. ಆದರೆ, ಹಾಡು ಕೇಳಿದ ಬಳಿಕ ಪುನೀತ್ ಸಾಹಿತ್ಯವನ್ನು ಬದಲಾಯಿಸುವಂತೆ ಮನವಿ ಮಾಡಿಕೊಂಡಿದ್ದರು. ಮತ್ತೆ ಇದೇ ಟ್ಯೂನ್‌ಗೆ ಹೊಸದಾಗಿ ಸಾಹಿತ್ಯ ರಚಿಸಲಾಗಿತ್ತು.



41 ಸಿನಿಮಾದ ಹೆಸರುಗಳನ್ನು ಇಟ್ಟುಕೊಂಡು ಬರೆದ ಸಾಂಗ್ ಕೇಳಿದ ಕೂಡಲೇ ಪುನೀತ್ ಬೇಡ ಅಂದಿದ್ದರು. ನನ್ನ ಬಗ್ಗೆನೇ ಹೊಗಳಿದರೆ ಚೆನ್ನಾಗಿ ಕಾಣುವುದಿಲ್ಲ. ಅದು ಅಭಾಸ ಅನಿಸಬಹುದು. ದಯವಿಟ್ಟು ಈ ಹಾಡಿನ ಸಾಹಿತ್ಯವನ್ನು ಬದಲಾಯಿಸಿ ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದರಂ‍ತೆ. ನಿರ್ದೇಶಕ ಪವನ್ ಒಡೆಯರ್‌ಗೆ ಈ ಹಾಡು ಚೆನ್ನಾಗಿದೆ ಅಂತ ಅನಿಸಿದ್ದರೂ, ಅಪ್ಪು ಒತ್ತಾಯಕ್ಕೆ ಅದೇ ಟ್ಯೂನ್‌ಗೆ ಹೊಸದಾಗಿ ಸಾಹಿತ್ಯ ರಚಿಸಿ, ಸಂಜಿತ್ ಹೆಗ್ಡೆ (Sanjith Hegde) ಹಾಗೂ ಅಂಟೋನಿ ದಾಸನ್ (Anthony Dasan) ಅವರಿಂದ ಹಾಡಿಸಲಾಗಿತ್ತು. ಈಗ ಅಪ್ಪು ನೆನಪಿಗಾಗಿ ಆ ಒರಿಜಿನಲ್ ಸಾಂಗ್ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

Puneeth Rajkumar: ಅಪ್ಪು ಹುಟ್ಟುಹಬ್ಬಕ್ಕೆ ಸಂತೋಷ್ ಆನಂದ್‌ರಾಮ್ ಕಡೆಯಿಂದ ಸ್ಪೆಷಲ್ ಗಿಫ್ಟ್!

ಇನ್ನು 'ಪ್ರೇಮದ ಕಾಣಿಕೆ'ಯಿಂದ 'ಅಂಜನಿಪುತ್ರ'ದವರೆಗೂ 41 ಸಿನಿಮಾಗಳಲ್ಲಿ ಪುನೀತ್ ನಟಿಸಿದ್ದರು. 'ನಟಸಾರ್ವಭೌಮ' ಸಿನಿಮಾನೂ ಸೇರಿದರೆ 42 ಸಿನಿಮಾ ಆಗುತ್ತೆ. ಇಷ್ಟೂ ಟೈಟಲ್‌ಗಳು ಒಂದೇ ಹಾಡಿನಲ್ಲಿ ಇರುವ 'ಪವರಿಸಂ' (Powerism) ಹಾಡು ಇದೀಗ ಮಾರ್ಚ್ 15 ಬೆಳಗ್ಗೆ 11.07ನಿಮಿಷಕ್ಕೆ ಬಿಡುಗಡೆಯಾಗುತ್ತಿದ್ದು, ಡಿ.ಇಮ್ಮಾನ್ (D Imman) ಸಂಗೀತ ಸಂಯೋಜನೆ ಹಾಡಿಗಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (Rockline Venkatesh) ಕೂಡ ಈ ಹಾಡನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಪವನ್ ಒಡೆಯರ್ ಹಾಗೂ ತಂಡ ಈ ಹಾಡನ್ನು ಅರ್ಪಿಸಲಿದ್ದಾರೆ. 'ನಟಸಾರ್ವಭೌಮ' ಚಿತ್ರದಲ್ಲಿ ರಚಿತಾ ರಾಮ್, ಅನುಪಮಾ ಪರಮೇಶ್ವರನ್, ರವಿಶಂಕರ್ ಮತ್ತು ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿತ್ತು.
 

on 15 March at 11.07am ✨️✨️✨️ pic.twitter.com/e69Z5VQo1p

— Pavan Wadeyar (@PavanWadeyar)
click me!